Sidlaghatta : ಅಯ್ಯೋಧ್ಯೆಯಲ್ಲಿ ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಶಿಡ್ಲಘಟ್ಟದ ಕೋಟೆಯಲ್ಲಿನ ಶ್ರೀರಾಮ ದೇವರ ದೇವಾಲಯದ ಆವರಣದಲ್ಲಿ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು.
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮರ್ಯಾದ ಪುರುಷೋತ್ತಮ ಶ್ರೀರಾಮನ ಆಡಳಿತದ ರಾಜಧರ್ಮದ ಪರಿಪಾಲನೆಯಲ್ಲಿನ ಆದರ್ಶಗಳು, ಸಮಾನತೆ ನ್ಯಾಯ ಪರಿಪಾಲನೆ, ಪಿತೃಪರಿಪಾಲಕತನವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಕೆಲಸವನ್ನು ಮಾಡಬೇಕಿದೆ. ಅದಕ್ಕೆ ನಾವು ಸನ್ನದ್ಧರಾಗಬೇಕಿದೆ ಎಂದರು.
ಶ್ರೀಸೀತಾರಾಮ ಕಲ್ಯಾಣೋತ್ಸವದಲ್ಲಿ ಹದಿನೆಂಟು ಮಂದಿ ಜೋಡಿ ದಂಪತಿಗಳು ಭಾಗವಹಿಸಿದ್ದರು.
ದೇವಾಲಯದ ಮುಖ್ಯಸ್ಥರಾದ ಎ.ಆರ್.ಮುನಿರತ್ನಂ, ವೇಣು, ಬಾಬು, ಬಾಸ್ಕರ್, ದೇವರಾಜ್, ಮೂರ್ತಿ, ಮಂಜುನಾಥ್, ಕುಮಾರ್, ಹರೀಶ್, ರವಿ, ರಘು, ನಂದು, ಮಹೇಶ್, ಶಂಕರಣ್ಣ, ಚಂದ್ರು, ರಾಜಗೋಪಾಲ್ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.
For Daily Updates WhatsApp ‘HI’ to 7406303366
