News

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪೂರ್ವಸಿದ್ಧತೆ

SSLC Examination Preparation Sidlaghatta Taluk

ಶಿಡ್ಲಘಟ್ಟದ ತಹಶೀಲ್ದಾರ್ ಅವರ ಕಚೇರಿಯಲ್ಲಿ ಜುಲೈ 19 ಮತ್ತು 22 ರಂದು ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿದ್ಧತೆಗಳ ಕುರಿತಾದ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ತಹಶೀಲ್ದಾರ್ ರಾಜೀವ್ ಅವರು ಮಾತನಾಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿದ್ಧತೆಗಳು ಸಮರ್ಪಕವಾಗಿ ನಡೆಸಬೇಕು. ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಪರೀಕ್ಷೆಗೆ ಮುಂಚೆ ಮತ್ತು ಪರೀಕ್ಷೆಯ ನಂತರ ಕೊಠಡಿಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕು. ನಗರಸಭೆ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

 ಪರೀಕ್ಷೆಗಾಗಿ ಕೈಗೊಂಡಿರುವ ಪೂರ್ವಸಿದ್ಧತೆಗಳ ಬಗ್ಗೆ ಪ್ರಭಾರಿ ಬಿಇಒ ಆಂಜನೇಯ ಅವರು ಸಭೆಗೆ ಮಾಹಿತಿ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯ ತಾಲ್ಲೂಕು ನೋಡಲ್ ಅಧಿಕಾರಿ, ಬಿಇಒ ಕಚೇರಿಯ ಇಸಿಒ ಭಾಸ್ಕರ ಗೌಡ ಅವರು ಪರೀಕ್ಷಾ ಕೇಂದ್ರಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಮುಂತಾದ ಮಾಹಿತಿಯನ್ನು ಸಭೆಯಲ್ಲಿ ವಿವರಿಸಿದರು.

  ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಪ್ರತಿ ಕೇಂದ್ರದಲ್ಲಿ ಇಬ್ಬರು ಆಶಾ ಕಾರ್ಯಕರ್ತೆಯರು ಮತ್ತು ಒಬ್ಬರು ಏ.ಎನ್.ಎಂ ಗಳನ್ನು ನಿಯೋಜಿಸಿರುವುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ ಸಭೆಗೆ ಮಾಹಿತಿ ನೀಡಿದರು. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಶಿಸ್ತು ಮತ್ತು ಸಾಮಾಜಿಕ ಅಂತರವನ್ನು ನಿರ್ವಹಿಸಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ತಲಾ ಇಬ್ಬರು ಸ್ವಯಂ ಸ್ವಯಂಸೇವಕರನ್ನು ನಿಯೋಜಿಸಿರುವುದಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಸಿ.ಬಿ ಪ್ರಕಾಶ್ ರವರು ಹೇಳಿದರು.

 ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚಂದ್ರಪ್ಪ ಮಾತನಾಡಿ, ಪರೀಕ್ಷಾ ಕೇಂದ್ರಗಳಿರುವ ಆಯಾ ಪಂಚಾಯಿತಿ ಪಿಡಿಒಗಳ ನೇತೃತ್ವದಲ್ಲಿ ಸ್ವಚ್ಚತೆ ಮತ್ತು ಸ್ಯಾನಿಟೇಷನ್ ಮಾಡಿಸುವುದಾಗಿ ಹೇಳಿದರು. ಪರೀಕ್ಷೆ ಬೇಕಾಗಿರುವ ಅಗತ್ಯ ಸಿಬ್ಬಂದಿ ಮತ್ತು ಎಸ್ಕಾರ್ಟ್ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಯಿಂದ ಸರ್ಕಾರದ ನಿರ್ದೇಶನದಂತೆ ಒದಗಿಸಲಾಗುವುದೆಂದು ಪೋಲಿಸ್ ಇಲಾಖೆ ಅಧಿಕಾರಿಗಳು ನುಡಿದರು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Sidlaghatta Taluk SSLC 2026 Result Toppers

News

SSLC ಫಲಿತಾಂಶ ಪ್ರಕಟ – ರಾಜಿ ಕಲಂದರಿ ತಾಲ್ಲೂಕಿಗೆ ಪ್ರಥಮ

Sidlaghatta : 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಶಿಡ್ಲಘಟ್ಟಕ್ಕೆ ಶೇ 92.39ರಷ್ಟು ಫಲಿತಾಂಶ ಬಂದಿದ್ದು ಕಳೆದ ವರ್ಷಕ್ಕಿಂತಲೂ ಶೇ 23ರಷ್ಟು ಫಲಿತಾಂಶ…

Share
Sidlaghatta SSLC Exam 2026 Tehsildar Gagana Sindhu

News

ವಿದ್ಯಾರ್ಥಿಗಳು ಶಾಂತ ಚಿತ್ತದಿಂದ SSLC ಪರೀಕ್ಷೆಯನ್ನು ಎದುರಿಸಿ – ತಹಶೀಲ್ದಾರ್ ಎನ್.ಗಗನಸಿಂಧು

Sidlaghatta : ವಿದ್ಯಾರ್ಥಿಗಳು ಯಾವುದೆ ಕಾರಣಕ್ಕೂ ಒತ್ತಡಕ್ಕೆ ಒಳಗಾಗದೆ ಶಾಂತ ಚಿತ್ತದಿಂದ ಪರೀಕ್ಷೆಯನ್ನು ಎದುರಿಸಿ. ಮನೆಗಳಲ್ಲೂ ಸಹ ಪೋಷಕರು ಮಕ್ಕಳ ಮೇಲೆ ವಿನಾಕಾರಣ ಒತ್ತಡ…

Share
SSLC Exam Higher Ranks Target MLA B N Ravikumar

News

ಮಾರ್ಚ್ 18ರಿಂದ SSLC ಪರೀಕ್ಷೆ: ಮೊದಲ ಸ್ಥಾನ ಗುರಿ-ಶಾಸಕ ಬಿ.ಎನ್. ರವಿಕುಮಾರ್

Melur, sidlaghatta : ಮಾರ್ಚ್ 18ರಿಂದ ಆರಂಭವಾಗಲಿರುವ SSLC ಪರೀಕ್ಷೆಯ ಪೂರ್ವಭಾವಿ ಸಿದ್ಧತೆಗಳು ಪೂರ್ಣಗೊಂಡಿವೆ. ಜಿಲ್ಲೆಯಲ್ಲಿ ಶಿಡ್ಲಘಟ್ಟ ತಾಲ್ಲೂಕು ಪ್ರಥಮ ಸ್ಥಾನ ಪಡೆಯುವ ಗುರಿಯನ್ನು…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Share
error: Content is protected !!