Home News ಕುರಿಗಳ ಮೇಲೆ ಬೀದಿ ನಾಯಿಗಳ ದಾಳಿ, 7 ಕುರಿಗಳ ಸಾವು

ಕುರಿಗಳ ಮೇಲೆ ಬೀದಿ ನಾಯಿಗಳ ದಾಳಿ, 7 ಕುರಿಗಳ ಸಾವು

0
Sidlaghatta Dadamghatta Stray Dogs Attack Sheep Herd Kills 7 Sheep

Dadamghatta, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದಡಂಘಟ್ಟ ಗ್ರಾಮದಲ್ಲಿಕುರಿಗಳ ಹಿಂಡಿನ ಮೇಲೆ ಸೋಮವಾರ ಮುಂಜಾನೆ ಹತ್ತಾರು ಬೀದಿ ನಾಯಿಗಳ ಗುಂಪು ದಾಳಿ ನಡೆಸಿ ಕುರಿಗಳ ಕತ್ತುಗಳನ್ನು ಕಚ್ಚಿ ಹಲ್ಲೆ ನಡೆಸಿದ ಪರಿಣಾಮ ಸುಮಾರು 7 ಕುರಿಗಳು ಸಾವನ್ನಪ್ಪಿದ್ದು, 13 ಕುರಿಗಳು ಗಂಭೀರ ಗಾಯಗೊಂಡಿವೆ.

ದಡಂಘಟ್ಟ ಗ್ರಾಮದ ಶ್ರೀನಿವಾಸ್ ಎಂಬುವರಿಗೆ ಸೇರಿದ ಕುರಿಗಳು ಕುರಿ ದೊಡ್ಡಿಯಲ್ಲಿದ್ದಾಗ, ದೊಡ್ಡಿಗೆ ನುಗ್ಗಿದ ಬೀದಿ ನಾಯಿಗಳು ಕುರಿಗಳ ಮೇಲೆ ದಾಳಿ ನಡೆಸಿವೆ. ಅನೇಕ ಕುರಿಗಳ ಹೊಟ್ಟೆ, ಕತ್ತುಗಳನ್ನು ಕಚ್ಚಿ ಸಾಯಿಸಿವೆ. ಸುಮಾರು 20 ಕುರಿಗಳಲ್ಲಿ 13 ಕುರಿಗಳು ಗಾಯಗೊಂಡಿದ್ದು 7 ಕುರಿಗಳು ಸಾವನ್ನಪ್ಪಿವೆ. ಗಾಯಗೊಂಡ 13 ಕುರಿಗಳಿಗೆ ಪಶು ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಕುರಿಗಳ ಮೇಲೆ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು ಗುಂಪು ಗುಂಪಾಗಿ ಬರುವ ನಾಯಿಗಳು ಕುರಿಗಳ ಮೇಲೆ ದಾಳಿ ನಡೆಸುತ್ತಿವೆ, ಸುಮಾರು 2 ಲಕ್ಷ ಮೌಲ್ಯದ ಕುರಿಗಳು ಮೃತಪಟ್ಟಿವೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version