Home News ಬೀದಿನಾಯಿಗಳ‌ ದಾಳಿಗೆ 8 ಕುರಿಗಳು ಬಲಿ

ಬೀದಿನಾಯಿಗಳ‌ ದಾಳಿಗೆ 8 ಕುರಿಗಳು ಬಲಿ

0
Sidlaghatta Melur Stray Dogs Attack Sheep

Melur, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದಲ್ಲಿ, ಸುಬ್ರಮಣಿ ಎಂಬುವವರಿಗೆ ಸೇರಿದ 8 ಕುರಿಗಳನ್ನು‌, ಬೀದಿನಾಯಿಗಳು ಕಚ್ಚಿ ಸಾಯಿಸಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ.

ಸುಭ್ರಮಣಿ ಅವರ ಮನೆಯ ಮುಂಭಾಗದಲ್ಲಿನ ಶೆಡ್ ನಲ್ಲಿ ಕಟ್ಟಿದ್ದ ಕುರಿಗಳ ಮೇಲೆ ದಾಳಿ ನಡೆಸಿರುವ ಬೀದಿ ನಾಯಿಗಳು, ಎಲ್ಲಾ ಕುರಿಗಳನ್ನು ಕಚ್ಚಿ ಸಾಯಿಸಿ, ಎರಡು ಕುರಿಗಳನ್ನು ಅರ್ಧಭಾಗದಷ್ಟು ತಿಂದು ಹಾಕಿವೆ.

ಮಾಲೀಕ ಸುಭ್ರಮಣಿ ಬೆಳಿಗ್ಗೆ ಎದ್ದು, ಕುರಿಗಳಿಗೆ ಮೇವು ಹಾಕುವುದಕ್ಕೆ ಹೋದಾಗ ಕುರಿಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು‌ ಕಂಡು ಬಂದಿದೆ.

ಈ ಕುರಿತು ಮಾತನಾಡಿದ ಕುರಿಗಳ ಮಾಲೀಕ ಸುಭ್ರಮಣಿ, 8 ಕುರಿಗಳನ್ನು ಶೆಡ್ ನಲ್ಲಿ ಕಟ್ಟಿ ಮೇವು ಹಾಕಿ ಹೋಗಿ ಮಲಗಿದ್ದೆ, ಬೆಳಿಗ್ಗೆ ಎದ್ದು ಬಂದು ನೋಡುವಷ್ಟರಲ್ಲಿ 6 ಕುರಿಗಳು 2 ಮರಿಗಳನ್ನು ನಾಯಿಗಳು ಕಚ್ಚಿ ಸಾಯಿಸಿವೆ. ಇದರಿಂದ ಸುಮಾರು 80 ಸಾವಿರ ರೂಪಾಯಿಗಳು ನಷ್ಟವಾಗಿದೆ ಎಂದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version