Home News ಪತ್ರಕರ್ತ ದಿವಂಗತ ರಮೇಶ್ ಅವರಿಗೆ ಶ್ರದ್ಧಾಂಜಲಿ

ಪತ್ರಕರ್ತ ದಿವಂಗತ ರಮೇಶ್ ಅವರಿಗೆ ಶ್ರದ್ಧಾಂಜಲಿ

0
Tribute to late journalist Ramesh

Sidlaghatta : ಶಿಡ್ಲಘಟ್ಟ ತಾಲ್ಲೂಕು ಪತ್ರಕರ್ತರ ಸಂಘದ ಸದಸ್ಯ ಕೆ.ಎಸ್.ರಮೇಶ್ (K S Ramesh) ಇತ್ತೀಚಿಗೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಶಿಡ್ಲಘಟ್ಟ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ಶಿಡ್ಲಘಟ್ಟದ ಪತ್ರಕರ್ತರ ಭವನದಲ್ಲಿ ದಿವಂಗತ ರಮೇಶ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮೌನಾಚರಣೆ ಮೂಲಕ ರಮೇಶ್ ಆತ್ಮಕ್ಕೆ ಶಾಂತಿ ಸಿಗಲಿ, ಆತನ ಸಾವಿನ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು.

ಹಿರಿಯ ಪತ್ರಕರ್ತ ರೂಪಸಿ ರಮೇಶ್, ನಾಗರಾಜ್, ಅಧ್ಯಕ್ಷ ಮುನೇಗೌಡ, ಕಾರ್ಯದರ್ಶಿ ತಮೀಮ್ ಪಾಷ, ಖಜಾಂಚಿ ಛಾಯಾ ರಮೇಶ್, ಜಿಲ್ಲಾ ಉಪಾಧ್ಯಕ್ಷ ಜಗದೀಶ್‌ಬಾಬು ಸೇರಿದಂತೆ ಸಂಘದ ಎಲ್ಲ ಸದಸ್ಯರು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version