
ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ರೀಡಾ ಸಾಮಗ್ರಿಗಳು, ಸ್ವಚ್ಛತಾ ಸಾಮಗ್ರಿಗಳು ಮತ್ತು 8 ಗ್ರೀನ್ ಬೋರ್ಡ್ ಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಎಚ್.ಪಿ – ಎಸ್.ಆರ್.ಎಫ್ ಫೌಂಡೇಷನ್ ಕಾರ್ಯಕ್ರಮಾಧಿಕಾರಿ ಲೋಹಿತ್ ಪೂಜಾರ್ ಮಾತನಾಡಿದರು.
“ಎಚ್.ಪಿ – ಎಸ್.ಆರ್.ಎಫ್ ಮುಸ್ಕಾನ್ ಸ್ಮಾರ್ಟ್ ಸ್ಕೂಲ್ ಪ್ರಾಜೆಕ್ಟ್” ನ ಅಡಿಯಲ್ಲಿ ಸರ್ಕಾರಿ ಶಾಲೆಯ ಮೂರು ಕೊಠಡಿಗಳನ್ನು ಸ್ಮಾರ್ಟ್ ಕ್ಲಾಸ್ ಗಳನ್ನಾಗಿ ರೂಪಿಸುವುದಲ್ಲದೆ, ಶಾಲಾ ಕೊಠಡಿಗಳಿಗೆ ಬಣ್ಣ, ಬಾಲಾ ಪೈಂಟಿಂಗ್, ಶಾಲಾ ಮೈದಾನದಲ್ಲಿ ಆಟಿಕಾ ಕ್ರೀಡಾ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಅವುಗಳನ್ನು ಮಕ್ಕಳ ಕಲಿಕೆಗೆ ಮತ್ತು ಪ್ರಗತಿಗೆ ಸದುಪಯೋಗಪಡಿಸಿಕೊಳ್ಳಿ ಎಂದು ಅವರು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ರುಕ್ಮಿಣಿಯಮ್ಮ ಮಾತನಾಡಿ, ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಅನುಕೂಲವಾಗಲು ತಾಂತ್ರಿಕ ನಿರ್ವಹಣೆಯನ್ನು ಲೋಹಿತ್ ಪೂಜಾರ್ ಅವರು, ಪಾಠಗಳನ್ನು ಸಿ.ಆರ್.ಪಿ ವೀಣಾ ಮತ್ತು ವಿಜ್ಞಾನ ಶಿಕ್ಷಕ ಜಿ.ಟಿ.ಮಂಜುನಾಥ್ ಮಾಡಿದರು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರೇಮಾ ರಮೇಶ್ ಹಾಗೂ ಟಿ.ಮಂಜುನಾಥ್ ಅವರು ಗ್ರಾಮ ಪಂಚಾಯಿತಿಯಿಂದ ಶಾಲೆಗೆ ಸಂಪೂರ್ಣ ಸಹಕಾರ ಮತ್ತು ನೆರವನ್ನು ನೀಡುವುದಾಗಿ ಹೇಳಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಟಿ.ಎನ್.ಶ್ರೀನಿವಾಸ್, ಉಪಾಧ್ಯಕ್ಷೆ ಅಂಜಲಿ, ಶಿಕ್ಷಕರಾದ ಆನಂದಕುಮಾರ್, ಪ್ರಕಾಶಮೂರ್ತಿ, ಅಕ್ಕಯ್ಯಮ್ಮ, ಮಂಜುಳಾದೇವಿ, ನಾಗರತ್ನ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi