Home News ಆಹಾರ ಸಂಸ್ಕರಣೆಯ ಮುಖಾಂತರ ಮಹಿಳೆಯರ ಸಬಲೀಕರಣ

ಆಹಾರ ಸಂಸ್ಕರಣೆಯ ಮುಖಾಂತರ ಮಹಿಳೆಯರ ಸಬಲೀಕರಣ

0
Women Empowerment GKVK Food Processing Training

Bodaguru, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಮಂಗಳವಾರ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಕೃಷಿ ನಿರತ ಮಹಿಳೆಯರು ವಿಭಾಗ ಹಾಗೂ ಇನ್ನರ್ ವೀಲ್‌ ಕ್ಲಬ್‌ ಆಫ್ ಬೆಂಗಳೂರು, ಎಚ್.ಬಿ.ಆರ್‌ಇವರಿಂದ ಆಹಾರ ಸಂಸ್ಕರಣೆಯ ಮುಖಾಂತರ ಮಹಿಳೆಯರ ಸಬಲೀಕರಣ ಎಂಬ ಧ್ಯೇಯದೊಂದಿಗೆ ಮಹಿಳಾ ದಿನಾಚರಣೆ ಆಚರಿಸಲಾಯಿತು.

ಅಖಿಲ ಭಾರತ ಸುಸಂಘಟಿತ ಸಂಶೋಧನಾ ಯೋಜನೆ-ಕೃಷಿ ನಿರತ ಮಹಿಳೆಯರು, ಕೃಷಿ ವಿಶ್ವವಿದ್ಯಾನಿಲಯ, ಇವರು ರೈತ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿಕಾರ್ಯ ನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ತಾಲ್ಲೂಕಿನ ಆಯ್ದ ಗ್ರಾಮಗಳಲ್ಲಿ ರೈತ ಮಹಿಳೆಯರ ಪೋಷಣಾ ಮಟ್ಟ ಸುಧಾರಣೆ, ಆರ್ಥಿಕ ಸಬಲೀಕರಣ ಮತ್ತು, ಸಾಮಾಜಿಕ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ, ಹಲವಾರು ಕಾರ್ಯಕ್ರಮಗಳನ್ನು ಯೋಜಿಸುತ್ತ ಬಂದಿದೆ.

ಮಂಗಳವಾರ ಬೋದಗೂರು ಗ್ರಾಮದಲ್ಲಿ ಮಹಿಳೆಯರಿಗೆ ಆಹಾರ ಉತ್ಪನ್ನ ತಯಾರಿಕ ಘಟಕ ಸ್ಥಾಪಿಸುವುದರ ಮೂಲಕ ಆದಾಯ ಹೆಚ್ಚಿಸುವ ತರಬೇತಿ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಡಾ.ಉಷಾರವೀಂದ್ರ, ಅವರು ಆಹಾರ ಉತ್ಪನ್ನ ಘಟಕ ಸ್ಥಾಪನೆಗೆ ಅವಶ್ಯವಿರುವ ತಂತ್ರಜ್ಞಾನಗಳ ಪರಿಚಯ ಮತ್ತು ಕಾರ್ಯಕ್ರಮದ ಉದ್ದೇಶ ಕುರಿತು ವಿವರಿಸಿದರು. ವಿಜ್ಞಾನಿ ಡಾ.ಗೀತಾ ಎಂ ಯಂಕಂಚಿ ಅವರು ಸ್ಥಳೀಯವಾಗಿ ಲಭ್ಯವಿರುವ ಆಹಾರಗಳನ್ನು ಬಳಸಿ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ವಿಧಾನವನ್ನು ತೋರಿಸಿಕೊಟ್ಟು, ಆಹಾರ ಉತ್ಪನ್ನಗಳ ಮಾರಾಟ ಮಾಡುವಲ್ಲಿಆಹಾರ ಪದಾರ್ಥಗಳ ಪ್ಯಾಕಿಂಗ್ ಮತ್ತು ಲೇಬಲಿಂಗ್‌ ಅವಶ್ಯಕತೆ ಕುರಿತು ವಿವರಿಸಿದರು.

ಇನ್ನರ್ ವೀಲ್‌ಕ್ಲಬ್ ಜಿಲ್ಲಾಐ.ಎಸ್.ಒ ಮತ್ತು ಪಾಕ ತಜ್ಞೆ ವೀಣಾ ಪ್ರಮೋದ್ ಅವರು ಮಹಿಳೆಯರಿಗೆ ಆಹಾರ ಉದ್ಯಮ ಸ್ಥಾಪಿಸಲು ಪೂರಕವಾದ ದಿಡೀರ್‌ ಆಹಾರ ಮಿಶ್ರಣಗಳ ತಯಾರಿಕೆ ವಿಧಾನವನ್ನು ತೋರಿಸಿ ಕೊಟ್ಟರು.

ಈ ಕಾರ್ಯಕ್ರಮದಲ್ಲಿ ಘಟಕ ಸ್ಥಾಪನೆಗೆ ಉಪಯೋಗವಾಗುವ ಪರಿಕರಗಳನ್ನು ಎಚ್.ಬಿ.ಆರ್, ಇನ್ನರ್ ವೀಲ್‌ಕ್ಲಬ್‌ ಅಧ್ಯಕ್ಷೆ ಎಸ್.ರಸಿಕ ಹಾಗೂ ಖಜಾಂಚಿಯಾದ ವಸುಧಾ ಮಹೇಶ್‌ರವರು ವಿವರಿಸಿದರು.

ಸಹಜ ಕೃಷಿಕ ಬೋದಗೂರು ವೆಂಕಟಸ್ವಾಮಿರೆಡ್ಡಿ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version