Home News ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮ

ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮ

0
Sidlaghatta GKVK World Food Day

Bodaguru, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಅಖಿಲ ಭಾರತ ಸುಸಂಘಟಿತ ಸಂಶೋಧನಾ ಯೋಜನೆ ಹಾಗು ಕೃಷಿ ವಿಶ್ವ ವಿದ್ಯಾನಿಲಯ (GKVK) ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಆಹಾರ ದಿನಾಚರಣೆ (World Food Day) ಕಾರ್ಯಕ್ರಮದಲ್ಲಿ ಭಾಗವಹಿಸಿ ಅಖಿಲ ಭಾರತ ಸುಸಂಘಟಿತ ಸಂಶೋಧನಾ ಯೋಜನೆಯ ಮುಖ್ಯಸ್ಥೆ ಡಾ.ಕೆ.ಗೀತಾ ಅವರು ಮಾತನಾಡಿದರು.

ವಿಜ್ಞಾನದ ಪ್ರಕಾರ, ದೇಹದಲ್ಲಿ ಪೌಷ್ಠಿಕಾಂಶದ ಕೊರತೆ ಮತ್ತು ಮನಸ್ಸಿನ ನಡುವೆ ಬಲವಾದ ಸಂಬಂಧ ಇದೆ. ನಾವು ಪ್ರತಿನಿತ್ಯ ತಿನ್ನುವ ಕೆಲವು ಆಹಾರಗಳು ನಮಗೆ ಒಳ್ಳೆಯ ಆರೋಗ್ಯ ನೀಡುವುದಲ್ಲದೇ ನಮ್ಮ ದೈಹಿಕ ಶಕ್ತಿ ಹೆಚ್ಚಿಸುವ ಮತ್ತು ರೋಗಗಳನ್ನು ತಡೆಗಟ್ಟುವ ಗುಣ ಕೂಡ ಹೊಂದಿರುತ್ತದೆ. ಅದಕ್ಕಾಗಿ ನಾವು ಈ ಪೌಷ್ಟಿಕಾಂಶಗಳು ಇರುವ ಆಹಾರವನ್ನು ಸೇವಿಸಬೇಕು. ರಾಸಾಯನಿಕ ಮುಕ್ತ ಆಹಾರ ನಮ್ಮದಾಗಲಿ. ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಆಹಾರ ಮತ್ತು ಪೋಷಕಾಂಶಗಳ ಬಗ್ಗೆ ಆಯೋಜಿಸಲಾಗಿದ್ದ ರಸಪ್ರಶ್ನೆ, ಚರ್ಚಾಸ್ಪರ್ಧೆ, ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಿರಿಯ ವಿಜ್ಞಾನಿ ಡಾ.ಕೆ.ಗೀತಾ ಯಂಕಂಚಿ, ಪ್ರಗತಿಪರ ರೈತ ವೆಂಕಟಸ್ವಾಮಿರೆಡ್ಡಿ, ಗ್ರಾ.ಪಂ ಸದಸ್ಯೆ ಅರುಣಾ ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version