ತಾಲ್ಲೂಕಿನ ಹನುಮಂತಪುರ ಗೇಟ್ ಬಳಿಯ ಬಿಜಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕೆ.ಎನ್.ಅರ್ಚನಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಮೂರು ಅಂಕಗಳನ್ನು ಹೆಚ್ಚಿಗೆ ಪಡೆಯುವ ಮೂಲಕ ತಾಲ್ಲೂಕಿಗೆ ಪ್ರಥಮಳಾಗಿ ಹೊರಹೊಮ್ಮಿದ್ದಾಳೆ.
ಕೊತ್ತನೂರಿನ ನಂಜುಂಡಮೂರ್ತಿ ಎಂಬ ರೈತರ ಮಗಳಾದ ಕೆ.ಎನ್.ಅರ್ಚನಾ 616(98.6%) ಪಡೆದಿದ್ದಳು. ಮರುಮೌಲ್ಯಮಾಪನದ ನಂತರ ಈಗ 619(99.04%) ಪಡೆದಿದ್ದಾಳೆ. ಗಣಿತ ಮತ್ತು ಹಿಂದಿ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾಳೆ.
ಬಿಜಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಎಚ್.ಎನ್.ಧನುಶ್ರೀ 617(98.7%) ಪಡೆದಿದ್ದು ಮರುಮೌಲ್ಯಮಾಪನದ ನಂತರ 618(98.88%) ಪಡೆದು ತಾಲ್ಲೂಕಿಗೆ ದ್ವಿತೀಯಳಾಗಿದ್ದಾಳೆ.
- Advertisement -
- Advertisement -
- Advertisement -