ತಾಲ್ಲೂಕಿನ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಶುಲ್ಕವು ಸರ್ಕಾರಿ ಸುತ್ತೋಲೆಗಿಂತಲೂ ಹಲವು ಪಟ್ಟು ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಆಗುವ ವಂಚನೆಯನ್ನು ತಡೆಗಟ್ಟಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೆಲವರು ಪೋಷಕರು ಮನವಿ ಮಾಡಿದ್ದಾರೆ.
ರೇಷ್ಮೆ ಗುಡಿಕೈಗಾರಿಕೆಯನ್ನು ನಂಬಿರುವವರು ರೇಷ್ಮೆ ಬೆಲೆಯ ಏರುಪೇರಿನಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಯಾವುದೇ ವ್ಯಾಪಾರ ವ್ಯವಹಾರ ಸುಸೂತ್ರವಾಗಿ ನಡೆಯುತ್ತಿಲ್ಲ. ರೈತರೂ ಆರ್ಥಿಕವಾಗಿ ಕಷ್ಟದಲ್ಲಿದ್ದಾರೆ. ಇಂಥಹ ಸಮಯದಲ್ಲಿ ಮಕ್ಕಳನ್ನು ಶಾಲೆಗೆ ದಾಖಲು ಮಾಡುವಾಗ ಖಾಸಗಿ ಶಾಲೆಗಳವರು ಕೇಳುವ ಹಣ ಕೊಡಲಾಗದೆ ಸಾಲಕ್ಕೆ ತುತ್ತಾಗುವಂತಾಗಿದೆ. ಪ್ರತಿಬಾರಿಯೂ ಶುಲ್ಕವನ್ನು ಹೆಚ್ಚಿಸುವ ಶಿಕ್ಷಣ ಸಂಸ್ಥೆಗಳು ಈ ಬಾರಿ ಮಾತ್ರ ಊಹಿಸಲೂ ಆಗದಂತೆ ಶುಲ್ಕವನ್ನು ಏರಿಸಿಟ್ಟಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಖಾಸಗಿ ಶಾಲೆಗಳ ಮೋಸಕ್ಕೆ ಕಡಿವಾಣ ಹಾಕಿ ನಾಗರಿಕರಿಗೆ ಸಹಾಯ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಬಿ.ಅಮ್ಜದ್‌ಪಾಷ, ನಫೀಜ್, ಮಕ್ಸೂದ್, ಅಬ್ದುಲ್ ಅಲಿ, ಜಾಬೀರ್, ಜಬಿ ಮತ್ತಿತರರು ಸಹಿ ಮಾಡಿ ಮನವಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಿದ್ದಾರೆ.
- Advertisement -
- Advertisement -
- Advertisement -