ನಗರದ ಕಾಮಾಟಿಗರ ಪೇಟೆಯಲ್ಲಿರುವ ಗ್ರಾಮದೇವತೆಯೆಂದೇ ಹೆಸರಾದ ಗಂಗಮ್ಮದೇವಿಯ ಜಯಂತ್ಯುತ್ಸವವನ್ನು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಜ್ಯೇಷ್ಠ ಶುಕ್ಲಪಕ್ಷ ದಶಮಿಯಂದು ಭಗೀರಥ ಮಹರ್ಷಿಯು ಜೀವದಾಯಿನಿಯಾದ ಗಂಗಾಮಾತೆಯನ್ನು ಭೂಮಿಗೆ ಕರೆತಂದ ದಿನವಾಗಿ ಆಚರಿಸುವ ವಾಡಿಕೆಯಿದ್ದು, ಈ ದಿನವನ್ನು ಗಂಗಮ್ಮದೇವಿಯ ಜಯಂತ್ಯುತ್ಸವವನ್ನಾಗಿ ಆಚರಿಸುವ ಸಂಪ್ರದಾಯವಿದೆ.
ಈ ದಿನದ ವಿಶೇಷವಾಗಿ ಸುಮಾರು 120 ವರ್ಷಗಳ ಹಿಂದೆ ಗಂಗಮ್ಮದೇವಿಯ ಗುಡಿಯ ಮುಖ್ಯದ್ವಾರಕ್ಕೆ ಹಾಕಿರುವ ಹಿತ್ತಾಳೆಯ ಕಲಾಕೃತಿಯನ್ನು ದೇವಿಯ ಆಲಯದಲ್ಲಿ ಅಳವಡಿಸಿದ್ದು, ಅದನ್ನು ಭಾನುವಾರ ವಿಶೇಷ ಪೂಜೆಯ ಸಂದರ್ಭದಲ್ಲಿ ಬೆಸ್ತ ಜನಾಂಗದ ಮುಖ್ಯಸ್ಥ ಬಿ.ಎನ್.ನ್ಯಾತಪ್ಪ ಉದ್ಘಾಟಿಸಿದರು.
ಬೆಳಿಗ್ಗೆಯಿಂದ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ದೇವಿಯನ್ನು ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ಮಹಾಮಂಗಳಾರತಿಯ ನಂತರ ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು. ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ಗಂಗಾದೇವಿ ಉತ್ಸವವನ್ನು ಆಯೋಜಿಸಲಾಗಿತ್ತು.
ನಿವೃತ್ತ ರೈಲ್ವೆ ಇಲಾಖೆ ಅಧಿಕಾರಿ ಅಶ್ವತ್‌ನಾರಾಯಣ, ಎಸ್.ಸುರೇಂದ್ರ, ಶ್ರೀ ಗಂಗಾದೇವಿ ಸೇವಾಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರಾದ ಶ್ರೀರಾಮ, ಲಕ್ಷ್ಮೀನಾರಾಯಣ, ಸಂಜೀವಪ್ಪ, ಮೋಹನ್, ಜಗದೀಶ್, ಶ್ರೀದರ್, ವೆಂಕಟೇಶ್, ಅಪ್ಪಿ, ಗಣೇಶ್, ಜಯರಾಮ್, ಶಿವಣ್ಣ ಹಾಜರಿದ್ದರು.
- Advertisement -
- Advertisement -
- Advertisement -







