ತಾಲ್ಲೂಕಿನ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯ ಬಾಳೇಗೌಡನಹಳ್ಳಿಯಲ್ಲಿ ಅಕ್ರಮವಾಗಿ ನಕ್ಷತ್ರದ ಆಮೆಗಳನ್ನಿರಿಸಿಕೊಂಡಿದ್ದ ವಿಜಯ್(25) ಎಂಬುವನನ್ನು ಪೊಲೀಸರು ಮತ್ತು ಅರಣ್ಯ ಇಲಾಖೆಯ ಸಿಐಡಿ ತಂಡ ಭಾನುವಾರ ಬಂಧಿಸಿ, 280 ನಕ್ಷತ್ರದಾಮೆಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರದ ಕಡೆಯಿಂದ ಆಮೆಗಳನ್ನು ತರಿಸಿ ದೆಹಲಿಗೆ ಸಾಗಿಸಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅರಣ್ಯ ಇಲಾಖೆಯ ಸಿಪಿಐ ಪುರುಷೋತ್ತಮ್, ದಿಬ್ಬೂರಹಳ್ಳಿ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ವಿಜಯ್‌ರೆಡ್ಡಿ ಮತ್ತು ತಂಡ ಧಾಳಿಯಲ್ಲಿ ಭಾಗವಹಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
- Advertisement -
- Advertisement -
- Advertisement -
Hats off vijayreddy sir… gud job
Keep it up