ಮುತ್ತೂರು ಶಾಲೆಗೆ ಪ್ರಶಸ್ತಿಯ ಗರಿ

- Advertisement -
- Advertisement -

ತಾಲ್ಲೂಕಿನ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪರಿಸರ ಸಮತೋಲನ ಕಾಪಾಡುವಲ್ಲಿನ ಶಾಲೆಯೆಂದು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತೃತೀಯ ಪ್ರಶಸ್ತಿ ಮತ್ತು 12 ಸಾವಿರ ರೂಗಳು ಲಭಿಸಿದೆ.
ರೀಪ್‌ ಬೆನಿಫಿಟ್‌ ಹಾಗೂ ಗ್ರೀನ್‌ ಹೆಕ್ತಾನ್‌ ಸಹಯೋಗದಲ್ಲಿ ಬೆಂಗಳೂರಿನಲ್ಲಿ ನಡೆದ ಪರಿಸರ ಸಮತೋಲನ ಕಾಪಾಡುವಲ್ಲಿ ಶಾಲೆಯ ಪಾತ್ರ ಎಂಬ ಸ್ಪರ್ಧಾ ಕಾರ್ಯಕ್ರಮದಲ್ಲಿ ರಾಜ್ಯದ 60 ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಶಾಲೆಗಳು ಭಾಗವಹಿಸಿದ್ದರು. ಪ್ರತಿ ಶಾಲೆಯಲ್ಲಿ ಪ್ರದರ್ಶಿಸಿದ ಪ್ರಾಯೋಗಿಲ ಹಾಗೂ ಶಾಲೆಗಳಲ್ಲಿ ನಿತ್ಯ ಬಳಕೆಯಲ್ಲಿರುವ ಯೋಜನೆಗಳನ್ನು ಅಲ್ಲಿ ಮಂಡಿಸಲಾಯಿತು. ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಮಂಡಿಸಿ ಪ್ರದರ್ಶಿಸಿದ ನೀರಿನ ಪುನರ್‌ಬಳಕೆಯ ಘಟಕಕ್ಕೆ ತೃತೀಯ ಬಹುಮಾನದೊಂದಿಗೆ 12 ಸಾವಿರ ರೂಗಳ ಚೆಕ್‌ ನೀಡಲಾಯಿತು.
ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೆಯ ತರಗತಿಯ ವಿದ್ಯಾರ್ಥಿಗಳಾದ ವಿ.ತೇಜಸ್ವಿನಿ, ಜೆ.ಲಾಂಛನ ಮತ್ತು ಎಚ್‌.ವಿ.ಶಶಾಂಕ್‌, ಶಿಕ್ಷಕ ವಿ.ಪ್ರಭಾಕರ್‌ ಶಾಲೆಯನ್ನು ಪ್ರತಿನಿಧಿಸಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!