ದಿ ರಿಚ್‌ಮಂಡ್ ಫೆಲೋಷಿಪ್ ಸೊಸೈಟಿ ಪ್ರಗತಿ ಗ್ರಾಮೀಣ ಶಾಖೆ ಮತ್ತು ಅಸೋಸಿಯೇಷನ್ ಆಫ್ ಆಕ್ಯುಪೇಷನಲ್ ಹೆಲ್ತ್ ಸಹಯೋಗದಲ್ಲಿ ಭಾನುವಾರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶ್ವಾಸಕೋಶ ತೊಂದರೆಗೆ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಸುಮಾರು 90 ಮಂದಿ ಉಚಿತ ಚಿಕಿತ್ಸೆ ಮತ್ತು ಔಷಧಿಗಳನ್ನು ಪಡೆದರು. ಈ ಸಂದರ್ಭದಲ್ಲಿ ದಿ ರಿಚ್‌ಮಂಡ್ ಫೆಲೋಷಿಪ್ ಸೊಸೈಟಿ ಪ್ರಗತಿ ಗ್ರಾಮೀಣ ಶಾಖೆ ವತಿಯಿಂದ 215 ಮಂದಿ ಮೂರ್ಚೆ ಮತ್ತು ಮಾನಸಿಕ ರೋಗಿಗಳಿಗೆ ಔಷಧಿಗಳನ್ನು ವಿತರಿಸಲಾಯಿತು.
ಶ್ವಾಸಕೋಶ ತಜ್ಞೆ ಡಾ.ಶಶಿಕಲಾ, ಪ್ರೇಮ್‌ಕುಮಾರ್, ಶರಣ್, ಡಾ.ಜಿ.ಎಸ್.ಪಾಲಾಕ್ಷ, ಡಾ.ಮಲ್ಲಿಕಾರ್ಜುನಯ್ಯ, ದಿ ರಿಚ್‌ಮಂಡ್ ಫೆಲೋಷಿಪ್ ಸೊಸೈಟಿ ಪ್ರಗತಿ ಗ್ರಾಮೀಣ ಶಾಖೆ ಅಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ, ಉಪಾಧ್ಯಕ್ಷ ಲಕ್ಷ್ಮಣಾಚಾರ್, ಪದ್ಮನಾಭ, ಎಸ್.ಸೋಮಶೇಖರ್, ಗುಂಡೂರಾವ್, ದೇವರಾಜ್, ರಮೇಶ್, ನಾಗರಾಜ್, ಪಿ.ಗೋಪಿನಾಥ್, ಬೈರಾರೆಡ್ಡಿ, ನಾನಾಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







