ನಿಧನ ವಾರ್ತೆ: ಗೌರವ ಡಾಕ್ಟರೇಟ್ ಪಡೆದ ಪ್ರಗತಿಪರ ರೈತ ಎನ್.ಸಿ. ಪಟೇಲ್

N.C. Patel progressive farmer Bhaktarahalli Sidlaghatta obituary

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಮಾವು ಮತ್ತು ನೇರಳೆ ಬೆಳೆದು ಮಾದರಿ ರೈತರೆನಿಸಿದ್ದ ಪ್ರಗತಿಪರ ರೈತ ಹಾಗೂ ಕೃಷಿ ಕ್ಷೇತ್ರದ ಸಾಧಕ ಎನ್.ಸಿ. ಪಟೇಲ್ (82) ಶುಕ್ರವಾರ ಸಂಜೆ ನಿಧನರಾದರು.

ಅವರು 30 ಎಕರೆ ಜಮೀನಿನಲ್ಲಿ ಮಾವು ಮತ್ತು ನೇರಳೆ ಬೆಳೆಗಳನ್ನು ವೈಜ್ಞಾನಿಕವಾಗಿ ಬೆಳೆದಿದ್ದರು. ವಿಶೇಷವಾಗಿ ನೇರಳೆ ಕೃಷಿಯಲ್ಲಿ ಹೆಸರು ಮಾಡಿದ್ದ ಅವರು, ಪಟೇಲ್ ಜಂಬೋ, ಪಟೇಲ್ ಸಮೃದ್ಧಿ ಹಾಗೂ ಪಟೇಲ್ ಅಕಲ್ ಎಂಬ ಮೂರು ವಿಶಿಷ್ಟ ತಳಿಗಳನ್ನು ಆಯ್ಕೆ ಮಾಡಿ ಸಂರಕ್ಷಿಸಿದ್ದರು. ಈ ತಳಿಗಳನ್ನು ICAR–IIHR ವಿಜ್ಞಾನಿಗಳು ಗುರುತಿಸಿದ್ದರು.

ಹನಿ ನೀರಾವರಿ, ಸಾವಯವ ಹಾಗೂ ಒಣಭೂಮಿ ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ನಡೆಸಿ ರೈತರಿಗೆ ಮಾರ್ಗದರ್ಶನ ನೀಡಿದ್ದರು. ಕೃಷಿ ಕ್ಷೇತ್ರದ ಸಾಧನೆ ಗುರುತಿಸಿ ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು 56ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿತ್ತು. ಎರಡು ದಶಕಗಳ ಬಳಿಕ ರೈತರೊಬ್ಬರಿಗೆ ಈ ಗೌರವ ಲಭಿಸಿತ್ತು.

ಎನ್.ಸಿ. ಪಟೇಲ್ ಅವರಿಗೆ ಅತ್ಯುತ್ತಮ ಪ್ರಗತಿಪರ ರೈತ ಎಂದು 1995ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿತ್ತು.

ಅಂತ್ಯಕ್ರಿಯೆ ಶನಿವಾರ (ನ.21) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಗದಾಸನಹಳ್ಳಿಯಲ್ಲಿ ನಡೆಯಲಿದೆ.

ಇದನ್ನೂ ಓದಿ: ಮೂರು ತಿಂಗಳ ಗ್ರಾಮೀಣ ವಾಸ್ತವ್ಯದ ಸಮಾರೋಪ ‘ಹೊನ್ನೆಲೆ’; ರೈತರ ದಸರಾದಲ್ಲಿ ಅಪರೂಪದ ಬೀಜ ತಳಿಗಳ ಪ್ರದರ್ಶನ.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ