Sidlaghatta : ಸುಮಾರು 170 ಕಾದಂಬರಿಗಳನ್ನು ಬರೆದು ಕನ್ನಡದ ಜನಪ್ರಿಯ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಚ್.ಜಿ.ರಾಧಾದೇವಿ (1952–2006) ಅವರು ಶಿಡ್ಲಘಟ್ಟದವರು.
ಸಂಕ್ಷಿಪ್ತ ಪರಿಚಯ
ಪೂರ್ಣ ಹೆಸರು: ರಾಧಾಮಣಿ (ಕಾವ್ಯನಾಮ: ಎಚ್.ಜಿ.ರಾಧಾದೇವಿ)
ಜನನ – ನಿಧನ: 1952 – 2006
ಹುಟ್ಟೂರು: ಶಿಡ್ಲಘಟ್ಟ
ಪ್ರಸಿದ್ಧಿ: ಸುಮಾರು 170 ಕಾದಂಬರಿಗಳ ಕರ್ತೃ; ‘ಸುವರ್ಣ ಸೇತುವೆ’, ‘ಅನುರಾಗ ಅರಳಿತು’ ಕಾದಂಬರಿಗಳು ಜನಪ್ರಿಯ ಚಲನಚಿತ್ರಗಳಾಗಿ ಮೂಡಿಬಂದವು
ಸಾಹಿತ್ಯ ಮತ್ತು ಚಲನಚಿತ್ರ ಕ್ಷೇತ್ರದ ಕೊಡುಗೆ
ಎಚ್.ಜಿ.ರಾಧಾದೇವಿ ಅವರ ‘ಸುವರ್ಣ ಸೇತುವೆ’ ಕಾದಂಬರಿಯು ಇದೇ ಹೆಸರಿನಿಂದ ಚಲನಚಿತ್ರವಾಗಿ ವಿಷ್ಣುವರ್ಧನ್ ಮತ್ತು ಆರತಿ ಅವರ ಅಭಿನಯದಲ್ಲಿ ತೆರೆಕಂಡು ಜನಮನ್ನಣೆ ಗಳಿಸಿತು. ಮತ್ತೊಂದು ಕಾದಂಬರಿ ‘ಅನುರಾಗ ಅರಳಿತು’ ಸಹ ಇದೇ ಹೆಸರಿನಿಂದ ಚಲನಚಿತ್ರವಾಗಿ ಡಾ.ರಾಜ್‌ಕುಮಾರ್, ಮಾಧವಿ ಮತ್ತು ಗೀತಾ ಅವರ ಅಭಿನಯದ ಜನಪ್ರಿಯ ಚಿತ್ರವೆನಿಸಿತು. ಇವರ ಕೆಲವು ಕೃತಿಗಳು ಹಿಂದಿ ಭಾಷೆಗೂ ಅನುವಾದಗೊಂಡಿದ್ದವು.
ಪ್ರಶಸ್ತಿಗಳು
ಅನಕೃ ಸ್ಮಾರಕ ಕಾದಂಬರಿ ಸ್ಪರ್ಧೆ – ‘ಭ್ರಮರ ಬಂಧನ’ ಕಾದಂಬರಿಗೆ ಪ್ರಥಮ ಬಹುಮಾನ
ಧಾರವಾಡ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ – ‘ಮಿಂಚಿನಿಂದಿಳಿದ ಮೋಹನಾಂಗಿ’ ಜಾನಪದ ಕಥಾಸಂಕಲನಕ್ಕೆ
ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ
ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ
‘ಅನುರಾಗ ಅರಳಿತು’ ಚಿತ್ರಕಥೆಗಾಗಿ ಅತ್ಯುತ್ತಮ ಕಥಾ ಪ್ರಶಸ್ತಿ
In English: H.G. Radhadevi (1952-2006), born Radhamani in Sidlaghatta, was one of Kannada’s most widely-read novelists, authoring around 170 novels. Two of her works were adapted into popular Kannada films: ‘Suvarna Sethuve’, starring Vishnuvardhan and Aarathi, and ‘Anuraga Aralithu’, starring Dr. Rajkumar, Madhavi and Geetha. Several of her books were also translated into Hindi. She won the Anakru Memorial Novel Competition’s first prize for ‘Bhramara Bandhana’, the Dharwad Vidyavardhaka Sangha’s Matoshree Ratnamma Heggade Award for her folklore collection ‘Minchinindilida Mohanangi’, the Attimabbe Pratishtana Award, the Visvesvaraya Memorial Award, and a best-story award for ‘Anuraga Aralithu’.
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.