ಶಿಡ್ಲಘಟ್ಟದಲ್ಲಿ ನ್ಯಾರೋಗೇಜ್ ನಿಂದ ಬ್ರಾಡ್ಗೇಜ್ಗೆ ಪರಿವರ್ತನೆಯಾದ ಮೇಲೆ ಶುಕ್ರವಾರ ಚಿಕ್ಕಬಳ್ಳಾಪುರದಲ್ಲಿ ಉದ್ಘಾಟನೆಗೊಂಡು ಹೊಸ ದಾರಿಯಲ್ಲಿ ತನ್ನ ಚೊಚ್ಚಲ ಪ್ರಯಾಣವನ್ನು ಪ್ರಾರಂಭಿಸಿದ ರೈಲನ್ನು ಜನರು ಹರ್ಷೋದ್ಘಾರದಿಂದ ಸ್ವಾಗತಿಸಿದರು.
ಶಿಡ್ಲಘಟ್ಟದಲ್ಲಿ ಚೊಚ್ಚಲ ಬ್ರಾಡ್ಗೇಜ್ಗೆ ರೈಲನ್ನು ಜನರು ಸ್ವಾಗತಿಸಿದರು
ದಲಿತರ ಹಕ್ಕೊತ್ತಾಯಗಳಿಗಾಗಿ ಒತ್ತಾಯಿಸಿ ಧರಣಿ
ಶಿಡ್ಲಘಟ್ಟದಲ್ಲಿ ಸೋಮವಾರ ದಲಿತರ ಹಕ್ಕೊತ್ತಾಯಗಳಿಗಾಗಿ ಒತ್ತಾಯಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿಯಿಂದ ಅನಿರ್ಧಿಷ್ಟಕಾಲ ಧರಣಿಯ ಭಾಗವಾಗಿ ತಮಟೆ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ನೀರಾವರಿ ಯೋಜನೆ ಜಾರಿಗಾಗಿ ಬೃಹತ್ ಮೆರವಣಿಗೆ
ಶಿಡ್ಲಘಟ್ಟದಲ್ಲಿ ಸೋಮವಾರ ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಬೃಹತ್ ಮೆರವಣಿಗೆಯನ್ನು ಆಯೋಜಿಸಿತ್ತು. ಮೆರವಣಿಗೆಯಲ್ಲಿ ನೂರಾರು ಮಂದಿ ರೈತರು, ರೈತ ಮಹಿಳೆಯರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ವಕೀಲರು ಭಾಗವಹಿಸಿದ್ದರು.
ಶಿಕ್ಷಕ ಆರ್.ಮುನಿವೆಂಕಟಸ್ವಾಮಿ ಅವರಿಗೆ ರಾಜ್ಯಪ್ರಶಸ್ತಿ
ಶಿಡ್ಲಘಟ್ಟ ತಾಲ್ಲೂಕಿನ ಗಂಗಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರೂಪುಗೊಳ್ಳಲು ಶ್ರಮಿಸಿರುವ ಶಿಕ್ಷಕ ಆರ್.ಮುನಿವೆಂಕಟಸ್ವಾಮಿ ಅವರಿಗೆ ಈ ಬಾರಿ ರಾಜ್ಯಪ್ರಶಸ್ತಿ ಲಭಿಸಿದೆ.
ಮೆಕ್ಸಿಕೊ, ಚಿಲಿ, ಸ್ಪೇನ್, ಜರ್ಮನಿ, ಚೀನಾ ಮತ್ತು ಅಮೆರಿಕಾ ದೇಶಗಳಿಂದ ವಿದೇಶಿ ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮ
ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ರೈತ ಸುರೇಶ್ ಅವರ ಚಾಕಿ ಕೇಂದ್ರಕ್ಕೆ ಬುಧವಾರ ಮೆಕ್ಸಿಕೊ, ಚಿಲಿ, ಸ್ಪೇನ್, ಜರ್ಮನಿ, ಚೀನಾ ಮತ್ತು ಅಮೆರಿಕಾ ದೇಶಗಳಿಂದ ವಿದೇಶಿ ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮದಲ್ಲಿ ಆಗಮಿಸಿರುವ 25 ವಿದ್ಯಾರ್ಥಿಗಳು ಅಧಿಕಾರಿ ಜನಾರ್ಧಮೂರ್ತಿ ಅವರಿಂದ ರೇಷ್ಮೆಯ ವಿವಿಧ ಹಂತಗಳ ಬಗ್ಗೆ ತಿಳಿದುಕೊಂಡರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಶಿಡ್ಲಘಟ್ಟದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಉತ್ತನೂರು ರಾಜಮ್ಮ ಅವರನ್ನು ಗುರುವಾರ ಮೆರವಣಿಗೆಯಲ್ಲಿ ಕರೆತರಲಾಯಿತು. ಕಸಾಪ ಜಿಲ್ಲಾಧ್ಯಕ್ಷ ವೈ.ಎಲ್.ಹನುಮಂತರಾವ್ ಹಾಜರಿದ್ದರು.
ಅರಣ್ಯ ರಕ್ಷಕರ ಆರೈಕೆಯಲ್ಲಿರುವ ಕೃಷ್ಣಮೃಗ
ಶಿಡ್ಲಘಟ್ಟದ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಬಳಿ ಅರಣ್ಯ ರಕ್ಷಕರ ಆರೈಕೆಯಲ್ಲಿರುವ ಕೃಷ್ಣಮೃಗ.
ತನ್ನ ತಂದೆ ತಾಯಿ ಕುಟುಂಬದಿಂದ ದೂರವಾದರೂ ಅರಣ್ಯ ರಕ್ಷಕರ ನೆರವಿನಿಂದ ಸ್ವತಂತ್ರ್ಯ ಬದುಕಿಗೆ ಅಣಿಯಾಗಿದೆ.
ಹದಿನಾಲ್ಕನೆಯ ಶಾಸಕರಾಗಿ ಎಂ.ರಾಜಣ್ಣ
ಶಿಡ್ಲಘಟ್ಟ ಕ್ಷೇತ್ರಕ್ಕೆ ಹದಿನಾಲ್ಕನೆಯ ಶಾಸಕರಾಗಿ ಆಯ್ಕೆಯಾದ ಜೆಡಿಎಸ್ ಪಕ್ಷದ ಎಂ.ರಾಜಣ್ಣ ಅವರನ್ನು ಬಸ್ನಿಲ್ದಾಣದ ಬಳಿ ಕಾರ್ಯಕರ್ತರು ಸ್ವಾಗತಿಸಿದರು.
ವರದನಾಯಕನಹಳ್ಳಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಸಹಯೋಗದಲ್ಲಿ ಮಹಿಳಾ ದಿನಾಚರಣೆ
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆಸಿದ ನೀರು ಬಿಂದಿಗೆ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಹಿಳೆಯರು.
ಬಸ್ ಡಿಪೋ ನಿರ್ಮಾಣ ಹಾಗೂ ಸಮರ್ಪಕವಾದ ಸಾರಿಗೆ ವ್ಯವಸ್ಥೆಗೆ ಒತ್ತಾಯಿಸಿ ಪ್ರತಿಭಟನೆ
ಶಿಡ್ಲಘಟ್ಟದಲ್ಲಿ ಬಸ್ ಡಿಪೋ ನಿರ್ಮಾಣ ಹಾಗೂ ಸಮರ್ಪಕವಾದ ಸಾರಿಗೆ ವ್ಯವಸ್ಥೆಗೆ ಒತ್ತಾಯಿಸಿ ಸೋಮವಾರ ಬಸ್ ನಿಲ್ದಾಣದ ಬಳಿ ಎಸ್.ಎಫ್.ಐ. ಸಂಘಟನೆಯ ಪದಾಧಿಕಾರಿಗಳು ಮಾನವ ಸರಪಳಿಯನ್ನು ನಿರ್ಮಸಿ ಪ್ರತಿಭಟನೆಯನ್ನು ನಡೆಸಿದರು.


