ಶಿಡ್ಲಘಟ್ಟದ್ಲಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದ್ಲಲಿ ಗ್ರಾಮ ಪಂಚಾಯಿತಿ ಚುನಾವಣೆಯ ಎಣಿಕೆ ಕಾರ್ಯ ನಡೆಯಿತು. ತ್ಲಾಲೂಕಿನ್ಲಲಿ ಜೆ.ಡಿ.ಎಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದರು.
ಮದ್ಯ ವಿತರಿಸಿ ಹಲವರ ಸಾವಿಗೆ ಕಾರಣರಾದವರನ್ನು ಪೋಲಿಸ್ ವರಿಷ್ಠಾಧಿಕಾರಿ ದಸ್ತಗಿರಿ ಮಾಡಿದರು
ಶಿಡ್ಲಘಟ್ಟ ತ್ಲಾಲೂಕಿನ ದಿಬ್ಬೂರಹಳ್ಳಿ ಪೋಲಿಸ್ ಠಾಣೆಯ್ಲಲಿ ನಕಲಿ ಮದ್ಯ ವಿತರಿಸಿ ಹಲವರ ಸಾವಿಗೆ ಕಾರಣರಾದ ಏಳು ಮಂದಿಯನ್ನು ಪೋಲಿಸ್ ವರಿಷ್ಠಾಧಿಕಾರಿ ಡಾ.ಡಿ.ಟಿ.ಪವಾರ್, ಡಿವೈಎಸ್ಪಿ ಗೋವಿಂದಯ್ಯ ಮತ್ತು ವೃತ್ತ ನಿರೀಕ್ಷಕ ಪಿ.ನರಸಿಂಹಮೂರ್ತಿ ದಸ್ತಗಿರಿ ಮಾಡಿದರು.
ಗೋದಾಮಿಗೆ ಬೆಂಕಿಬ್ದಿದು 6 ಮಂದಿಗೆ ಗಾಯ
ಶಿಡ್ಲಘಟ್ಟದ ಅಂಬೇಡ್ಕರ್ ಜೋಡಿ ರಸ್ತೆಯ್ಲಲಿ ಕಲಬೆರಕೆ ಇಂಧನದ ಗೋದಾಮಿಗೆ ಬೆಂಕಿಬ್ದಿದು ೬ ಮಂದಿ ಗಾಯಗೊಂಡರು.
ನಕಲಿ ಮದ್ಯ ಸೇವಿಸಿ ೧೧ ಮಂದಿ ಮರಣ
ಶಿಡ್ಲಘಟ್ಟ ತ್ಲಾಲೂಕಿನ ದಿಬ್ಬೂರಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯ್ಲಲಿ ಗ್ರಾಮ ಪಂZಚಿತಿ ಚುನಾವಣೆ ಪ್ರಚಾರದ ಸಮಯದ್ಲಲಿ ಹಂಚಲಾದ ನಕಲಿ ಮದ್ಯ ಸೇವಿಸಿ ೧೧ ಮಂದಿ ಮೃತಪಟ್ಟರು. ಚಿಕ್ಕದಿಬ್ಬೂರಹಳ್ಳಿಯ್ಲಲಿ ಮದ್ಯ ಸೇವಿಸಿ ಮೃತಪಟ್ಟ ವೆಂಕಟಮ್ಮ ಮತ್ತು ನಾಗರಾಜ್ ಅವರ ಮನೆಗೆ ಅಬಕಾರಿ ಸಚಿವ ರೇಣುಕಾಚಾರ್ಯ ಭೇಟಿ ನೀಡಿ ಸಾಂತ್ವನ ಹೇಳಿದರು.
ಮರಳು ದಿಬ್ಬ ಕುಸಿದು ನಾಲ್ವರ ಮರಣ
ಶಿಡ್ಲಘಟ್ಟ ತ್ಲಾಲೂಕಿನ ತಿಮ್ಮನಾಯಕನಹಳ್ಳಿಯ ಹತ್ತಿರದ ಪಾಪಾಗ್ನಿ ನದಿ ದಂಡೆಯ್ಲಲಿ ಮರಳು ತೋಡುವಾಗ ಮರಳು ದಿಬ್ಬ ಕುಸಿದು ನಾಲ್ವರು ಮೃತಪಟ್ಟರು.
ಪರಿಸರ ಸ್ನೇಹಿ ತೇವಾಂಶದಿಂದ ನೀರನ್ನು ತಯಾರಿಸುವ ಯಂತ್ರ
ಶಿಡ್ಲಘಟ್ಟದ ಪುರಸಭೆ ಆವರಣದ್ಲಲಿ ಹತ್ತು ಲಕ್ಷ ರೂಗಳ ವೆಚ್ಚದ್ಲಲಿ ವಾತಾವರಣದ ತೇವಾಂಶದಿಂದ ನೀರನ್ನು ತಯಾರಿಸುವ ಯಂತ್ರವನ್ನು ಸೋಮವಾರ ಸ್ಥಾಪಿಸಲಾಯಿತು. ಪ್ರತಿ ದಿನ 500 ರಿಂದ 1000 ಲೀಟರ್ ನೀರನ್ನಿದು ಉತ್ಪಾದಿಸಬ್ಲಲದು. ಕಡಿಮೆ ವಿದ್ಯುತ್ ಅಂದರೆ ಪ್ರತಿ ದಿನ 8 ಯೂನಿಟ್ ವಿದ್ಯುತ್ ಬಳಸುತ್ತದೆ. ಹಾಗಾಗಿ ಒಂದು ಲೀಟರ್ ನೀರಿಗೆ ಹತ್ತು ಪೈಸೆ ಬೀಳುತ್ತದೆ. ಓಜೋನ್ ತಂತ್ರಜ್ಞಾನ ಬಳಸಿ ನೀರನ್ನು ಶುದ್ಧೀಕರಿಸುವುದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್ಗಳಿಂದ ಮುಕ್ತವಾಗಿರುತ್ತದೆ. ಯಂತ್ರವನ್ನು ಪ್ರಾರಂಭಮಾಡಿದ ಎರಡು ಗಂಟೆಗ್ಲೆಲಾ ನೀರನ್ನು ಉತ್ಪಾದಿಸತೊಡಗುತ್ತದೆ ಹಾಗೂ ಇದು ಪರಿಸರ ಸ್ನೇಹಿಯಾಗಿದೆ.
ಶಿಡ್ಲಘಟ್ಟದ್ಲಲಿ ರಸ್ತೆ ಅಗಲೀಕರಣ
ಶಿಡ್ಲಘಟ್ಟದ್ಲಲಿ ರಸ್ತೆ ಅಗಲೀಕರಣದ ಕಾಮಗಾರಿಯ್ಲಲಿ ಸ್ವಯಂ ಪ್ರೇರಿತರಾಗಿ ಜನರು ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿದರು.
ಪಿಂಡಿಪಾಪನಹಳ್ಳಿಯ ತಮಟೆ ಕಲಾವಿದ ಮುನಿವೆಂಕಟಪ್ಪ ಅವರಿಗೆ ಪ್ರಶಸ್ತಿ
ಶಿಡ್ಲಘಟ್ಟ ಇತಿಹಾಸ
ಉಜ್ಜನಿ ಮೂಲದ ಕೆಂಪೇಗೌಡ ತನ್ನ ಗರ್ಭಿಣಿ ಮಡದಿ ಹಲಸೂರಮ್ಮನೊಂದಿಗೆ ಶಿಡ್ಲಘಟ್ಟದ ಉತ್ತರಕ್ಕಿರುವ ಅಬ್ಲೂಡಿಗೆ ಬಂದು ವಾಸಿಸುತ್ತಿದ್ದನು. ವೆಲ್ಲೂರಿನ ಕದನದಲ್ಲಿ ಈತ ನಿಧನನಾದ. ಹಲಸೂರಮ್ಮ ಅಬ್ಲೂಡಿನಲ್ಲಿ ಕೋಟೆ ಕಟ್ಟಿ ಸುತ್ತಮುತ್ತಲಿನ ಪ್ರದೇಶವನ್ನು ಆಕ್ರಮಿಸಿಕೊಂಡು ಆಳತೊಡಗಿದಳು. ನಂತರ ತನ್ನ ಮಾವ ಶಿಡ್ಲೇಗೌಡನ ಹೆಸರಿನಲ್ಲಿ ಶಿಡ್ಲಘಟ್ಟವನ್ನು 1526ರಲ್ಲಿ ಸ್ಥಾಪಿಸಿದಳು. ಆಕೆಯ ಮಗ ಶಿವನೇಗೌಡ 47 ವರ್ಷಗಳ ಕಾಲ ಈ ಊರನ್ನು ಆಳಿದನು.
ಈ ಪಟ್ಟಣದ ನೈರುತ್ಯಕ್ಕಿರುವ ಅಮ್ಮನಕೆರೆಯನ್ನು ಹಲಸೂರಮ್ಮನು, ಆಗ್ನೇಯಕ್ಕಿರುವ ಗೌಡನಕೆರೆಯನ್ನು ಶಿವನೇಗೌಡನು ಕಟ್ಟಿಸಿದರೆಂದು ಪ್ರತೀತಿ. ಅಮ್ಮನಕೆರೆಯ ಸಮೀಪದಲ್ಲಿಯೆ ಶಿವನೇಗೌಡ ಮತ್ತು ಆತನ ಹೆಂಡತಿಯ ಸಮಾಧಿಗಳಿವೆ. ಶಿವನೇಗೌಡನ ನಂತರ ಅವನ ಮಗ ಇಮ್ಮಡಿ ಶಿವನೇಗೌಡ 1576ರಿಂದ ಸುಮಾರು 40 ವರ್ಷ ಆಳಿದ.
ಈ ಪಟ್ಟಣ ಹದಿನೇಳನೇ ಶತಮಾನದಲ್ಲಿ ಮರಾಠರ, ನಂತರ ವಿಜಾಪುರ ಸುಲ್ತಾನರ ಮತ್ತು ಮೊಗಲರ ಆಳ್ವಿಕೆಗೆ ಒಳಪಟ್ಟಿತ್ತು. 1679ರಲ್ಲಿ ಇದನ್ನು ವಶಪಡಿಸಿಕೊಂಡ ಮರಾಠರು 1691ರಲ್ಲಿ ಅಣ್ಣಯ್ಯಗೌಡ ಎಂಬಾತನಿಗೆ ಮಾರಿದರು. ಇದನ್ನು 1762ರಲ್ಲಿ ಹೈದರ್‍ಅಲಿಯು ವಶಪಡಿಸಿಕೊಂಡನು.
ಮಹಾಭಾರತದ ಪಾಂಡವರ ವನವಾಸಕ್ಕೂ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮಕ್ಕೂ ಸಂಬಂಧವಿದೆ. ಪಾಂಡವರೈವರಲ್ಲಿ ಒಬ್ಬನಾದ ಸಹದೇವನು ಸಾದಲಿ ಪಟ್ಟಣವನ್ನು ನಿರ್ಮಿಸಿದನು. ಅದನ್ನು ಹಿಂದೆ ಸಹದೇವಪಟ್ಟಣವೆಂದು ಕರೆಯಲಾಗುತ್ತಿತ್ತು. ಇಲ್ಲಿ ಸಹದೇವನು ನಿರ್ಮಿಸಿದನೆಂದು ಹೇಳಲಾಗುವ ನಂದೀಶ್ವರ ದೇವಾಲಯವಿದೆ. ಈ ಗ್ರಾಮದ ನಾಗರಕಲ್ಲು ಕಟ್ಟೆಯ ಬಳಿಯಿರುವ ಬಂಡೆಯ ಮೇಲಿನ ಕ್ರಿ.ಶ.1792ರ ಶಾಸನವು ಆವತಿ ನಾಡಪ್ರಭು ದೊಡ್ಡಭೈರೇಗೌಡನ ಮೊಮ್ಮಗ ಚನ್ನಣಪ್ಪಯ್ಯನ ಮಗ ರಾಮಸ್ವಾಮಿಯೆಂಬ ಅಧಿಕಾರಿಯು ನಂದೀಶ್ವರ ದೇವರ ಅರ್ಚಕರಾದ ರಾಮಶಾಸ್ತ್ರಿ ಎಂಬುವರಿಗೆ ನೀಡಿದ ಹಲವು ದಾನಗಳನ್ನು ದಾಖಲಿಸುತ್ತದೆ.
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಸಮೀಪದಲ್ಲಿರುವ ಸುಗುಟೂರು ಪ್ರಾಚೀನ ಊರಾಗಿದ್ದು, ಚೋಳರ ಕಾಲಕ್ಕಾಗಲೇ ಪ್ರಮುಖ ನೆಲೆಯಾಗಿದ್ದ ಅಂಶ ಸುಗುಟೂರಿನಲ್ಲಿ ಪತ್ತೆಯಾಗಿರುವ ಚೋಳ ಶಾಸನಗಳಿಂದ ವೇದ್ಯವಾಗುತ್ತದೆ.




