23.1 C
Sidlaghatta
Thursday, December 25, 2025
Home Blog Page 12

ಡಿಸೆಂಬರ್ 6 ರಂದು ಬೃಹತ್ ಉದ್ಯೋಗ ಮೇಳ

0
Sidlaghatta jangamakote Gnana jyothi institution Job Fair

Sidlaghatta, chikkaballapur : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನ ಜ್ಞಾನ ಜ್ಯೋತಿ ಶಾಲಾ ಆವರಣದಲ್ಲಿ ಡಿಸೆಂಬರ್ 6, 2025 (ಶನಿವಾರ) ರಂದು ಬೃಹತ್ ಉದ್ಯೋಗ ಮೇಳ (Mega Job Mela 2025) ಆಯೋಜಿಸಲಾಗಿದೆ. ಈ ಮೇಳವನ್ನು ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ (Rural Education Development Trust) ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಸ್ಥಳೀಯ ಹಾಗೂ ಗ್ರಾಮೀಣ ಯುವಕರಿಗೆ ಸಾವಿರಾರು ಉದ್ಯೋಗಾವಕಾಶಗಳು ಲಭ್ಯವಾಗಲಿವೆ.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಜೀವ್ ಕುಮಾರ್ ಮಾತನಾಡಿ, ಸಂಸ್ಥಾಪಕ ಬಿ.ಎಂ. ಮೂರ್ತಿ ಅವರ 25ನೇ ಪುಣ್ಯಸ್ಮರಣೆ ಅಂಗವಾಗಿ ಈ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಇವರ ಜನಪರ ಸೇವಾ ಮನೋಭಾವಕ್ಕೆ ಗೌರವ ಸೂಚಿಸುವ ಉದ್ದೇಶದಿಂದ ಈ ಮೇಳ ದೊಡ್ಡ ಮಟ್ಟದಲ್ಲಿ ನಡೆಯಲಿದೆ ಎಂದು ಅವರು ವಿವರಿಸಿದರು.

10,000ಕ್ಕೂ ಹೆಚ್ಚು ಉದ್ಯೋಗಗಳ ಅಗತ್ಯ – 50+ ಕಂಪನಿಗಳ ಭಾಗವಹಿಸುವಿಕೆ

ಈ ಉದ್ಯೋಗ ಮೇಳಕ್ಕೆ ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿವೆ. ಕಂಪನಿಗಳಿಗೆ ಒಟ್ಟು 10,000+ ಉದ್ಯೋಗಿಗಳ ಅಗತ್ಯವಿದ್ದು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಸುತ್ತಮುತ್ತಲಿನ ಯುವಕರಿಗೆ ಇದು ದೊಡ್ಡ ಅವಕಾಶ ಎಂದು ರಾಜೀವ್ ಕುಮಾರ್ ಹೇಳಿದರು.

ಯಾರು ಭಾಗವಹಿಸಬಹುದು?

  • ✔ SSLC
  • ✔ ITI
  • ✔ Diploma
  • ✔ D.Ed / B.Ed
  • ✔ D.Pharm / B.Pharm
  • ✔ ಯಾವುದೇ ಪದವಿ

ಯಾರೇ ಆಗಿದ್ದರೂ ಉಚಿತವಾಗಿ, ತಮ್ಮ ಸ್ವವಿವರ ಹಾಗೂ ವಿದ್ಯಾರ್ಹತೆ ಪ್ರಮಾಣಪತ್ರಗಳೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಸಮೀಪದ ಪ್ರದೇಶದ ಕಂಪನಿಗಳೇ ಭಾಗವಹಿಸುತ್ತಿದ್ದು – ಉದ್ಯೋಗಕ್ಕಾಗಿ ದೂರ ಪ್ರಯಾಣ ಬೇಡ

ಉದ್ಯೋಗದಾತ ಫೌಂಡೇಶನ್ ಅಧ್ಯಕ್ಷ ರುಕ್ಮಾಂಗದ ಮಾತನಾಡಿ, ಶಿಡ್ಲಘಟ್ಟ ಪ್ರದೇಶದ ಯುವಕರಿಗೆ ದೂರದ ನಗರಗಳಿಗೆ ಹೋಗಬೇಕಾದ ಅಗತ್ಯವಿಲ್ಲ. ಭಾಗವಹಿಸುವ ಪ್ರಮುಖ ಕಂಪನಿಗಳಲ್ಲಿ

  • ಐಫೋನ್ ತಯಾರಿಕಾ ಕಂಪನಿ (1500 ಉದ್ಯೋಗಗಳು)
  • ಕ್ರೀಯೇಟಿವ್ ಎಂಜಿನಿಯರಿಂಗ್ (500 ಉದ್ಯೋಗಗಳು)
  • ಮೆಡ್ ಪ್ಲಸ್—ಫಾರ್ಮಸಿ ವಿಭಾಗ (100 ಉದ್ಯೋಗಗಳು)
  • ಟಾಟಾ ಎಲೆಕ್ಟ್ರಾನಿಕ್ಸ್, ಕೋಲಾರ (500 ಉದ್ಯೋಗಗಳು)
  • ಇತರ ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದ ಕಂಪನಿಗಳು

ವಿಶೇಷ ಕೌಶಲ್ಯಗಳ ಕೊರತೆ ಇದ್ದರೆ, ಯುವಕರಿಗೆ ಅಗತ್ಯ ಕೌಶಲ್ಯ ತರಬೇತಿ ಕೂಡ ನೀಡಲಾಗುತ್ತದೆ ಎಂದು ಹೇಳಿದರು.

ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಕೆ. ಗುಡಿಯಪ್ಪ ಮತ್ತು ಜ್ಞಾನ ಜ್ಯೋತಿ ಶಾಲೆಯ ಪ್ರಾಂಶುಪಾಲೆ ಮನುಶ್ರೀ ರಾಜೀವ್ ಕುಮಾರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಶಿಡ್ಲಘಟ್ಟ ಬಾಲ ಟೆನ್ನಿಸ್ ತಾರೆ ಪುನೀತ್ ಮನೋಹರ್ – ರಾಷ್ಟ್ರೀಯ ರ್ಯಾಂಕಿಂಗ್‌ನಲ್ಲಿ ನಂ.1!

0
Sidlaghatta Melur Puneeth Manohar u14 Tennis champion

Melur, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ 13 ವರ್ಷದ ಪುನೀತ್ ಮನೋಹರ್, ಜೂನಿಯರ್ ರಾಷ್ಟ್ರೀಯ ಟೆನ್ನಿಸ್ ರ್ಯಾಂಕಿಂಗ್ (14 ವರ್ಷದೊಳಗಿನ) ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಕ್ಕೆ ಮತ್ತು ಶಿಡ್ಲಘಟ್ಟಕ್ಕೆ ಹೊಸ ಗೌರವ ತಂದಿದ್ದಾನೆ. 12 ವರ್ಷದೊಳಗಿನ ವಿಭಾಗದಲ್ಲೂ ನಂಬರ್ 1 ಆಗಿದ್ದ ಪುನೀತ್, ಈಗ 14 ವರ್ಷದೊಳಗಿನ ರ್ಯಾಂಕಿಂಗ್‌ನಲ್ಲೂ ನಂ.1 ಸ್ಥಾನಕ್ಕೇರುತ್ತ ಅಪರೂಪದ ಸಾಧನೆ ಮಾಡಿ ಗಮನ ಸೆಳೆದಿದ್ದಾನೆ.

ಪುನೀತ್ ಸಿಂಗಲ್ಸ್ ಹಾಗೂ ಡಬಲ್ಸ್ ಸೇರಿದು 871.25 ಪಾಯಿಂಟ್‌ ಗಳಿಸಿ ರಾಷ್ಟ್ರಮಟ್ಟದಲ್ಲಿ ಮೊದಲಿಗನಾಗಿದ್ದಾನೆ. ಉತ್ತರ ಪ್ರದೇಶದ ಕೌಸ್ತುಬ್ ಸಿಂಗ್ (776.8 ಪಾಯಿಂಟ್‌) ದ್ವಿತೀಯ ಸ್ಥಾನದಲ್ಲಿದ್ದಾರೆ.

ಕೊನೆಯ ನಾಲ್ಕು ತಿಂಗಳುಗಳಿಂದ ಚಂಡೀಗಡದ ರೌಂಡ್ ಗ್ಲಾಸ್ ಟೆನ್ನಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಪುನೀತ್, ತಾಯಿ ನಮ್ರತಾ ಅವರೊಂದಿಗೆ ಅಲ್ಲಿ ನೆಲೆಸಿದ್ದಾನೆ.

ಪುನೀತ್ ಮನೋಹರ್‌ರ ಸಾಧನೆಗಳು

  • 31 ವಾರಗಳ ಕಾಲ ಭಾರತದ ನಂ.1 (12 ವರ್ಷದೊಳಗಿನ)
  • 81 ವಾರಗಳ ಕಾಲ ಕರ್ನಾಟಕ ನಂ.1
  • ರಾಷ್ಟ್ರಮಟ್ಟದ ಸಿಂಗಲ್ಸ್ ಮತ್ತು ಡಬಲ್ಸ್ — ಚಾಂಪಿಯನ್
  • ನೇಪಾಳದ ಕಠ್ಮಂಡುವಿನಲ್ಲಿ ನಡೆದ ದಕ್ಷಿಣ ಏಷ್ಯಾ ಅಂತರಾಷ್ಟ್ರೀಯ (U-12) ಚಿನ್ನದ ಪದಕ
  • ಕಝಕಿಸ್ತಾನ ಏಷ್ಯಾ ಚಾಂಪಿಯನ್‌ಶಿಪ್ — 4ನೇ ಸ್ಥಾನ
  • ಅಮೆರಿಕಾದ ಟೆಕ್ಸಾಸ್‌ನಲ್ಲಿ ನಡೆದ ಆರೆಂಜ್ ಬೌಲ್ ಸಬ್-ಜೂನಿಯರ್ ಗ್ರ್ಯಾಂಡ್ ಸ್ಲಾಮ್ — 4ನೇ ಸ್ಥಾನ
  • ಯೂರೋಪಿನ ಹಲವು ಪಂದ್ಯಾವಳಿಗಳಲ್ಲಿ ಮೂರನೇ ಸ್ಥಾನ
  • ಅಜರ್‌ಬೈಜಾನ್ (ಬಾಕು), ಸ್ಪೇನ್ (ಬಾರ್ಸಿಲೋನಾ), ಫಿಲಿಪ್ಪೀನ್ — 14 ವರ್ಷದೊಳಗಿನ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ
  • ದೆಹಲಿ, ಜೈಪುರ್ ಮೊದಲಾದ ನ್ಯಾಷನಲ್ ಈವೆಂಟ್‌ಗಳಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಚಾಂಪಿಯನ್

ಈ ಸಾಧನೆಗಳಿಂದ ಪುನೀತ್ ಮನೋಹರ್ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಭರವಸೆಯ ತಾರೆ ಆಗಿ ಗುರುತಿಸಿಕೊಂಡಿದ್ದಾನೆ.

“ನನ್ನ ಮಗ ಪುನೀತ್, 14 ವರ್ಷದೊಳಗಿನ ಟೆನ್ನಿಸ್ ಟೆನ್ನಿಸ್ ರ್ಯಾಂಕಿಂಗ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ನನಗೆ ಹಾಗೂ ನನ್ನ ಕುಟುಂಬಕ್ಕೆ ಹೆಮ್ಮೆಯ ವಿಷಯವಾಗಿದೆ.ದೇಶವನ್ನು ಅವನು ಪ್ರತಿನಿಧಿಸಿ ಅಂತಾರಾಷ್ಟ್ರೀಯಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರಬೇಕೆಂಬುದು ನಮ್ಮ ಅಭಿಲಾಷೆ” ಎಂದು ಶಿಡ್ಲಘಟ್ಟದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಆಗಿರುವ ಪುನೀತ್ ತಂದೆ ಡಾ.ಮನೋಹರ್ ತಿಳಿಸಿದ್ದಾರೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-17/11/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 17/11/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 420
Qty: 22842 Kg
Mx : 762
Mn: 505
Avg: 688

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 17
Qty: 1093 Kg
Mx : ₹ 853
Mn: ₹ 693
Avg: ₹ 785


For Daily Updates WhatsApp ‘HI’ to 7406303366

ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಪಕ್ಷದಿಂದ “ವೋಟ್ ಚೋರ್ ಗದ್ದಿ ಚೋಡ್” ಸಹಿ ಸಂಗ್ರಹ ಅಭಿಯಾನ

0
Sidlaghatta congress Protest Vote Chor Gaddi Chod

Sidlaghatta, chikkaballapur : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸರ್ಕಾರವು ತನ್ನ ಅಧಿಕಾರ ಮತ್ತು ಬೊಕ್ಕಸವನ್ನು ದುರುಪಯೋಗಪಡಿಸಿಕೊಂಡು ಗೆದ್ದಿದ್ದು, ಇದು ಪ್ರಜಾಪ್ರಭುತ್ವ ಗೆಲುವಲ್ಲ, ಆಡಳಿತದ ದುರುಪಯೋಗದ ಗೆಲುವು ಎಂದು ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಆರೋಪಿಸಿದ್ದಾರೆ.

ಭಾನುವಾರ ನಗರದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಮಿತಿಯ “ವೋಟ್ ಚೋರ್ ಗದ್ದಿ ಚೋಡ್” ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಿಹಾರದಲ್ಲಿ 1.25 ಕೋಟಿ ಕುಟುಂಬಗಳ ಖಾತೆಗಳಿಗೆ ತಲಾ ₹10,000 ಜಮಾ ಮಾಡಿದದ್ದು ಚುನಾವಣೆಗೋಸ್ಕರ ಮಾಡಿರುವ ಸ್ಪಷ್ಟವಾದ ಕ್ರಮ ಎಂದು ಹೇಳಿದರು.

“ಚುನಾವಣೆ ಹತ್ತಿರ ಬಂದಾಗ ಹಣ ಸುರಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಅವಮಾನ. ಇದನ್ನು ‘ಗೆಲುವು’ ಎಂದು ಹೇಳುವುದು ತಪ್ಪು” ಎಂದು ಮುನಿಯಪ್ಪ ತೀವ್ರ ಟೀಕಿಸಿದರು.

ದೇಶದಾದ್ಯಂತ ಕಾಂಗ್ರೆಸ್ ಪರ ಜನರ ಅಭಿಪ್ರಾಯ ಹೆಚ್ಚಾಗಿದ್ದು, ಬీజేపಿ ಮತಗಳ್ಳತನದಿಂದ ಅಧಿಕಾರಕ್ಕೆ ಬರುತ್ತಿದೆ. ಇದರ ವಿರುದ್ಧ ಜನಜಾಗೃತಿ ಮೂಡಿಸುವ ಕಾರ್ಯವನ್ನು ಕಾಂಗ್ರೆಸ್ ಕೈಗೊಂಡಿದೆ ಎಂದರು.

“ಶಿಡ್ಲಘಟ್ಟ ಕಾಂಗ್ರೆಸ್‌ನ ಭದ್ರಕೋಟೆ”

Sidlaghatta congress Protest Vote Chor Gaddi Chod

ಶಿಡ್ಲಘಟ್ಟ ಕ್ಷೇತ್ರದಲ್ಲಿ ಮಾಜಿ ಸಚಿವ ವಿ. ಮುನಿಯಪ್ಪ ಅವರು ಕಾಂಗ್ರೆಸ್ ಅನ್ನು ಬಲಪಡಿಸಿದ್ದಾರೆ. “ನೀವೆಲ್ಲರೂ ಅವರ ಬೆಂಬಲಿಗರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೆ ಗೆಲ್ಲಬೇಕು” ಎಂದು ಮುನಿಯಪ್ಪ ಕಾರ್ಯಕರ್ತರನ್ನು ಮನವಿ ಮಾಡಿದರು.

ರಾಜೀವ್ ಗೌಡರ ಕಾರ್ಯವನ್ನು ಶ್ಲಾಘಿಸಿದ ಅವರು, “ಶಾಸಕರು ಸರ್ಕಾರದ ಹಣದಲ್ಲಿ ಅಭಿವೃದ್ಧಿ ಮಾಡುತ್ತಾರೆ. ಆದರೆ ರಾಜೀವ್ ಗೌಡರು ತಮ್ಮ ಸ್ವಂತ ಹಣದಲ್ಲಿ ಆಂಬ್ಯುಲೆನ್ಸ್, ಸಮುದಾಯ ಭವನ, ರಸ್ತೆಗಳು ಸೇರಿದಂತೆ ಅನೇಕ ಸೇವೆ ಮಾಡಿದ್ದಾರೆ. ಇದು ವಿರಳ” ಎಂದರು.

ಕಳೆದ ಚುನಾವಣೆಯಲ್ಲಿನ ಸಣ್ಣ ಗೊಂದಲ ಮರುಕಳಿಸಬಾರದು. ಮುಂದಿನ ಬಾರಿ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಲೇಬೇಕು,” ಎಂದು ಕರೆ ನೀಡಿದರು.

“1.5 ಲಕ್ಷ ಸಹಿ ಮಾಡಿದರೆ ರಾಹುಲ್ ಗಾಂಧಿ ಭೇಟಿಗೆ ಅವಕಾಶ”

ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಮಾತನಾಡಿ,
“ನಾನು ಗೆಲ್ಲಲಿ ಸೋಲಲಿ, ನಿಮ್ಮ ಮನೆ ಮಗನಾಗಿ ನಿಮ್ಮೊಂದಿಗೇ ಇರುತ್ತೇನೆ. ಅಧಿಕಾರದ ಆಸೆ ನನಗಿಲ್ಲ. ಆದರೆ ಕಾರ್ಯಕರ್ತರಿಗೆ ನ್ಯಾಯ ಮತ್ತು ಗೌರವ ಸಿಗಬೇಕು ಎಂಬುದು ನನ್ನ ಆಸೆ” ಎಂದು ಹೇಳಿದರು.

ಬಂಗಾರಪೇಟೆಯಲ್ಲಿ 1.25 ಲಕ್ಷ ಸಹಿಗಳು ಸಂಗ್ರಹವಾದಂತೆ, ಶಿಡ್ಲಘಟ್ಟದಲ್ಲಿ 1.5 ಲಕ್ಷ ಸಹಿ ಮಾಡಿದರೆ ರಾಹುಲ್ ಗಾಂಧಿಯನ್ನು ಭೇಟಿಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಉಸ್ತುವಾರಿ ಉದಯ್ ಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ಕೃಷ್ಣಂರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ, ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಹೈಟೆಕ್ ಮಾರುಕಟ್ಟೆ ಉದ್ಘಾಟನೆ ದಿನವೇ ರೇಷ್ಮೆ ರೀಲರುಗಳ ಕಪ್ಪುಪಟ್ಟಿ ಪ್ರತಿಭಟನೆ

0
Sidlaghatta CM Siddaramaiah Visit Silk Reelers Protest

Sidlaghatta, chikkaballapur : ರೇಷ್ಮೆ ರೀಲರುಗಳ ಬೇಡಿಕೆಗಳನ್ನು ಈಡೇರಿಸದ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ, ನವೆಂಬರ್ 24ರಂದು ಹೈಟೆಕ್ ಗೂಡಿನ ಮಾರುಕಟ್ಟೆಯ ಉದ್ಘಾಟನೆಗೆ ಬರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಭೇಟಿಯ ವೇಳೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಕಲ್ಯಾಣ ಸಂಘದ ಅಧ್ಯಕ್ಷ ಅನ್ಸರ್ ಖಾನ್ ತಿಳಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸರ್ಕಾರವು ಹಲವು ವರ್ಷಗಳಿಂದ ರೀಲರುಗಳ ಸಮಸ್ಯೆಗಳ ಬಗ್ಗೆ ಯಾವಾಗಲೂ ತಾರತಮ್ಯ ನೀತಿಯನ್ನೇ ಅನುಸರಿಸಿದೆ ಎಂದು ಆರೋಪಿಸಿದರು.

ಹಿಂದಿನ ಸರ್ಕಾರ ಬಡ್ಡಿರಹಿತ ₹3 ಲಕ್ಷ ವರ್ಕಿಂಗ್ ಕ್ಯಾಪಿಟಲ್ ನೀಡುವುದಾಗಿ ಭರವಸೆ ನೀಡಿದ್ದರೂ, ಇಂದಿನ ಸರ್ಕಾರ ಅದನ್ನು ₹5 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ರೀಲರುಗಳು ಉತ್ಪಾದಿಸುವ ಕಚ್ಚಾ ರೇಷ್ಮೆಗೆ ಸರ್ಕಾರಿ ಖರೀದಿ ಮಾರುಕಟ್ಟೆ ಇಲ್ಲದಿರುವುದರಿಂದ ಅವರು ವ್ಯಾಪಾರಿಗಳ ದಯೆಗೆ ಬಿದ್ದಿದ್ದಾರೆ ಎಂದು ಹೇಳಿದರು.

ರೀಲರುಗಳಿಗೆ ಆಧುನಿಕ ಸೌಲಭ್ಯಗಳೊಂದಿಗೆ ರೀಲಿಂಗ್ ಪಾರ್ಕ್ ನಿರ್ಮಿಸುವ ಅಗತ್ಯವಿದೆ. ರೇಷ್ಮೆ ಕೈಗಾರಿಕೆಯಲ್ಲಿ ಕೆಲಸ ಮಾಡುವವರಲ್ಲಿ ಶೇಕಡಾ 80ರಷ್ಟು ಮಂದಿ ಉಸಿರಾಟದ ಸಮಸ್ಯೆ ಮತ್ತು ಆಸ್ತಮಾ ಸಮಸ್ಯೆಯಿಂದ ಬಳಲುತ್ತಿರುವ ಕಾರಣ, ವಿಶೇಷ ಟಿಬಿ–ಶ್ವಾಸಕೋಶ ಆಸ್ಪತ್ರೆ ಸ್ಥಾಪನೆ ಕೂಡ ಅಗತ್ಯವಿದೆ ಎಂದು ಒತ್ತಾಯಿಸಿದರು.

ಈಗಿರುವ ಗೂಡಿನ ಮಾರುಕಟ್ಟೆಗೆ ಗೂಡಿನ ಆವಕವೇ ಕಡಿಮೆಯಾಗಿರುವ ಸಂದರ್ಭದಲ್ಲಿ ‘ಹೈಟೆಕ್ ಮಾರುಕಟ್ಟೆ’ ನಿರ್ಮಾಣಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚ ಹಾಕುವುದರಿಂದ ರೈತರು ಹಾಗೂ ರೀಲರುಗಳಿಗೆ ಏನು ಪ್ರಯೋಜನ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು.

ರೈತರಿಗೆ ಇ-ಹರಾಜು ಮೂಲಕ ಅದೇ ದಿನ ಹಣ ಲಭ್ಯವಾಗುವ ವ್ಯವಸ್ಥೆ ಇದ್ದರೂ, ರೀಲರುಗಳಿಗೆ ಅದೇ ರೀತಿಯ ಭದ್ರತೆ ಮತ್ತು ಬೆಂಬಲ ಒದಗಿಸುವ ಯಾವುದೇ ಸರ್ಕಾರಿ ವ್ಯವಸ್ಥೆ ಇಲ್ಲದಿರುವುದನ್ನು ಅವರು ಕಿಡಿಗೇಡಿಯಾಗಿ ಟೀಕಿಸಿದರು. “ಮಗ್ಗದ ದೊಡ್ಡ ವ್ಯಾಪಾರಿಗಳ ಶೋಷಣೆಯಿಂದ ರೀಲರುಗಳನ್ನು ರಕ್ಷಿಸುವ ವ್ಯವಸ್ಥೆ ಸರ್ಕಾರ ರೂಪಿಸಿದಾಗ ಮಾತ್ರ ಈ ಕೈಗಾರಿಕೆ ಉಳಿಯಲಿದೆ,” ಎಂದು ಹೇಳಿದರು.

ಸಭೆಯಲ್ಲಿ ರೈತರು ಮತ್ತು ರೀಲರುಗಳ ಸಂಘದ ಜಿ.ರೆಹಮಾನ್, ಕೆ.ಆನಂದ್ ಕುಮಾರ್, ಕೆ.ಸಾದಿಕ್ ಪಾಷ, ಕೆ.ಬಿ.ಮಂಜುನಾಥ್, ಮುನಿಕೃಷ್ಣಪ್ಪ, ಸಾದಿಕ್ ಪಾಷ, ಮುರ್ತುಜ್ ಪಾಷ ಸೇರಿ ಹಲವರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-16/11/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 16/11/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 279
Qty: 15267 Kg
Mx : 741
Mn: 556
Avg: 688

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 03
Qty: 167 Kg
Mx : ₹ 826
Mn: ₹ 611
Avg: ₹ 821


For Daily Updates WhatsApp ‘HI’ to 7406303366

ನ.16 ರಂದು ರಂದು ವಿದ್ಯುತ್ ವ್ಯತ್ಯಯ

0
Sidlaghatta BESCOM Power Cut

Sidlaghatta, Chikkaballapur : 66/11 ಕೆವಿ ಶಿಡ್ಲಘಟ್ಟ ವಿತರಣಾ ಕೇಂದ್ರದ 11ಕೆವಿ ಎಫ್-2 ಸಂತೋಷನಗರ, ಎಫ್-8 ವಿಧಾನಸೌಧ ಮತ್ತು ಎಫ್-10 ಹನುಮಂತಪುರ ಮಾರ್ಗಗಳ 11ಕೆವಿ ಜಿಒಎಸ್ ಗಳ ಬದಲಾವಣೆ ಕಾಮಗಾರಿ ಕಾರಣದಿಂದ ನವೆಂಬರ್ 16, 2025 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಶಿಡ್ಲಘಟ್ಟ ನಗರ, ಲಕ್ಕಹಳ್ಳಿ, ಪೈಲಹಳ್ಳಿ, ಎಲ್.ಮುತ್ತುಕದಹಳ್ಳಿ, ಕುರುಬಚ್ಚನಪಡೆ, ಹನುಮಂತಪುರ, ಹರ್ಲಹಳ್ಳಿ, ವರದನಾಯಕನಹಳ್ಳಿ, ಚೀಮನಹಳ್ಳಿ, ಅಬ್ಲೂಡು ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.

ಇದರ ಪರಿಣಾಮವಾಗಿ ಶಿಡ್ಲಘಟ್ಟ ಪಟ್ಟಣ ಮತ್ತು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

ಶಿಡ್ಲಘಟ್ಟದಲ್ಲಿ ನ.16 ರಂದು ‘ವೋಟ್ ಚೋರ್ ಗದ್ದಿ ಚೋಡ್’ ಸಹಿ ಅಭಿಯಾನ

0
Sidlaghatta Congress Vote Chor Gaddi Chod Campaign

Sidlaghatta, Chikkaballapur : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಸೂಚನೆಯಂತೆ ನವೆಂಬರ್ 16, ಭಾನುವಾರ ಶಿಡ್ಲಘಟ್ಟದಲ್ಲಿ ‘ವೋಟ್ ಚೋರ್ ಗದ್ದಿ ಚೋಡ್’ ಸಹಿ ಸಂಗ್ರಹ ಅಭಿಯಾನವನ್ನು ನಡೆಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ ಎಂದು ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಭಾನುವಾರ ಬೆಳಗ್ಗೆ 10.30ಕ್ಕೆ ನಗರದಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸಹಿ ಅಭಿಯಾನ ಆರಂಭವಾಗಲಿದೆ. ಬಳಿಕ ಬಸ್ ನಿಲ್ದಾಣದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಬಿಜೆಪಿಯ ಮತಗಳ್ಳತನದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಎಂ.ಸಿ. ಸುಧಾಕರ್, ಕೆ.ಎಚ್. ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಉಸ್ತುವಾರಿ ಉದಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಅನೇಕ ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ ತಮ್ಮ ಬೆಂಬಲ ಸೂಚಿಸಬೇಕೆಂದು ರಾಜೀವ್ ಗೌಡ ಮನವಿ ಮಾಡಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಶೀಘ್ರ ನ್ಯಾಯದಾನ ನಮ್ಮ ಗುರಿ – ಪ್ರಧಾನ ಜಿಲ್ಲಾ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ

0
Sidlaghatta Court T P Ramalingegowda urges Timely discharge of cases

Sidlaghatta : “ಈ ನಾಡಿನ ಪ್ರತಿಯೊಬ್ಬ ಕಕ್ಷಿದಾರನಿಗೂ ತ್ವರಿತ ಮತ್ತು ಅಗ್ಗದ ನ್ಯಾಯ ದೊರಕುವಂತೆ ಮಾಡಲು ನಾವು ಬದ್ಧರಾಗಿದ್ದೇವೆ. ವಕೀಲರ ಸಹಕಾರದಿಂದಲೇ ಈ ಗುರಿ ಸಾಧಿಸಬಹುದು,” ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಪಿ. ರಾಮಲಿಂಗೇಗೌಡ ಹೇಳಿದರು.

ನಗರದ ನ್ಯಾಯಾಲಯಕ್ಕೆ ಶುಕ್ರವಾರ ಆಗಮಿಸಿದ ಅವರು ವಕೀಲರೊಂದಿಗೆ ಮಾತುಕತೆ ನಡೆಸಿದರು.

“ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ನ್ಯಾಯ ದೊರಕಿಸುವುದೇ ನಿಜವಾದ ಸೇವೆ. ವಕೀಲರು ಈ ದೃಷ್ಟಿಯಲ್ಲಿ ಕೆಲಸ ಮಾಡಿದರೆ ನಿಮ್ಮ ಖ್ಯಾತಿಯೂ, ಕಕ್ಷಿದಾರರ ವಿಶ್ವಾಸವೂ ಹೆಚ್ಚಾಗುತ್ತದೆ. ವರ್ಷಾನುಗಟ್ಟಲೆ ನ್ಯಾಯಾಲಯದ ಸುತ್ತ ಸುತ್ತುವ ಕಾಲ ಹೋಯಿತು; ಈಗ ಕಾಲ ಬದಲಾಗಿದೆ, ನ್ಯಾಯದಾನದಲ್ಲಿ ವೇಗ, ತಂತ್ರಜ್ಞಾನ ಮತ್ತು ಸೌಹಾರ್ದತೆ ಅಗತ್ಯ,” ಎಂದು ಹೇಳಿದರು.

“ಮುಂದಿನ ಲೋಕ್ ಅದಾಲತ್ ನಲ್ಲಿ ಹೆಚ್ಚಿನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿ, ಚಿಕ್ಕಬಳ್ಳಾಪುರ ಜಿಲ್ಲೆಯನ್ನು ರಾಜ್ಯದ ಮಾದರಿಯನ್ನಾಗಿಸಬೇಕು. ಇದಕ್ಕಾಗಿ ಎಲ್ಲಾ ವಕೀಲರು ಸಂಪೂರ್ಣ ಸಹಕಾರ ನೀಡಬೇಕು,” ಎಂದು ವಕೀಲರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪಾ ಬಿ, ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಮೊಹಮ್ಮದ್ ರೋಷನ್ ಷಾ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಸುಕನ್ಯಾ ಸಿ.ಎಸ್, ಹಿರಿಯ ವಕೀಲ ಎಂ. ಪಾಪಿರೆಡ್ಡಿ, ವಕೀಲರ ಸಂಘದ ಕಾರ್ಯದರ್ಶಿ ಸಿ.ಜಿ. ಭಾಸ್ಕರ್, ಹಾಗೂ ಅನೇಕ ವಕೀಲರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-15/11/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 15/11/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 305
Qty: 16100 Kg
Mx : 768
Mn: 565
Avg: 691

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 16
Qty: 943 Kg
Mx : ₹ 844
Mn: ₹ 688
Avg: ₹ 772


For Daily Updates WhatsApp ‘HI’ to 7406303366

error: Content is protected !!