20.1 C
Sidlaghatta
Thursday, December 25, 2025
Home Blog Page 17

ಆರ್ಥಿಕ ಜ್ಞಾನ ಎಲ್ಲರಿಗೂ ಅಗತ್ಯ – ಬ್ಯಾಂಕ್ ಖಾತೆ, ವಿಮೆ, ಭದ್ರತಾ ಯೋಜನೆಗಳ ಅರಿವು ಇರಲಿ

0
Sidlaghatta Talakayalabetta Social Security Schemes Awareness

Talakayalabetta, Sidlaghatta, chikkaballapur : “ಪ್ರತಿಯೊಬ್ಬರೂ ಬ್ಯಾಂಕ್ ವಹಿವಾಟು, ಜೀವ–ಆರೋಗ್ಯ ವಿಮೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಇದರಿಂದ ಆರ್ಥಿಕ ಸುರಕ್ಷತೆ ಹೆಚ್ಚಿ ಜೀವನ ಗುಣಮಟ್ಟವೂ ಉತ್ತಮವಾಗುತ್ತದೆ,” ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಿಡ್ಲಘಟ್ಟ ತಾಲ್ಲೂಕಿನ ಆರ್ಥಿಕ ಸಾಕ್ಷರತಾ ಸಲಹೆಗಾರ ಎಂ. ಮಲ್ಲಾರೆಡ್ಡಿ ಹೇಳಿದರು.

ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ದಿಬ್ಬೂರಹಳ್ಳಿಯ ಕೆನರಾ ಬ್ಯಾಂಕ್ ಶಾಖೆಯಿಂದ ಆಯೋಜಿಸಿದ್ದ ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಅಭಿಯಾನ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಯಾರೇ ಆಗಲಿ — ರೈತ, ಉದ್ಯೋಗಿ, ವ್ಯಾಪಾರಿ ಅಥವಾ ನೌಕರ — ಎಲ್ಲರೂ ಬ್ಯಾಂಕ್ ಖಾತೆ ತೆರೆಯಬೇಕು. ಸರ್ಕಾರದ ಎಲ್ಲಾ ಸೌಲಭ್ಯಗಳು ಇಂದಿಗೆ ನೇರವಾಗಿ ಬ್ಯಾಂಕ್ ಖಾತೆ ಮೂಲಕವೇ ಸಿಗುತ್ತಿವೆ. ಉಳಿತಾಯ ಅಭ್ಯಾಸ ಬೆಳೆಸಬೇಕು ಮತ್ತು ಎಲ್ಲಾ ಹಣಕಾಸು ವ್ಯವಹಾರಗಳು ಬ್ಯಾಂಕ್ ಮೂಲಕ ನಡೆಯಬೇಕು,” ಎಂದು ಸಲಹೆ ನೀಡಿದರು.

ಅವರು ಪಿಎಂಜೆಡಿವೈ, ಪಿಎಂಜೆಜೆಬಿವೈ, ಪಿಎಂಎಸ್ಬಿವೈ, ಅಟಲ್ ಪೆನ್ಷನ್ ಯೋಜನೆ, ಕೃಷಿ ಕರ್ಡ್ (KCC) ಮುಂತಾದ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಮಾಹಿತಿ ನೀಡಿದರು. “ಪ್ರತಿ ಖಾತೆಯಲ್ಲಿಯೂ ನಾಮನಿರ್ದೇಶನ (Nominee) ಮಾಡುವುದು ಅತ್ಯಂತ ಮುಖ್ಯ. ಇಲ್ಲದಿದ್ದರೆ ನಂತರ ನ್ಯಾಯಾಲಯ ಅಥವಾ ತಹಶೀಲ್ದಾರ್ ಕಚೇರಿಯಿಂದ ಪ್ರಮಾಣ ಪತ್ರ ಪಡೆಯುವುದು ತುಂಬಾ ಕಷ್ಟಕರ,” ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಸಂಬಂಧಿಸಿದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟರಮಣಪ್ಪ, ಪಿಡಿಒ ಶ್ರೀನಿವಾಸಪ್ಪ, ಕೆನರಾ ಬ್ಯಾಂಕ್ ಅಧಿಕಾರಿಗಳು ಕರುಣಾಕರನ್ ಮತ್ತು ಮಮತ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

“ಇ-ಖಾತಾ ಕಡತ ವಿಲೇವಾರಿಯಲ್ಲಿ ಪಾರದರ್ಶಕತೆ ಇರಬೇಕು” – ಶಾಸಕರ ಅಸಮಾಧಾನ

0
e Khata Sidlaghatta Municipality Delay MLA Intervene

Sidlaghatta, Chikkaballapur : ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿನ ಆಸ್ತಿಗಳ ಇ-ಖಾತಾ ಕಡತಗಳ ವಿಲೇವಾರಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿರುವುದು ಮತ್ತು ನಾಗರಿಕರನ್ನು ಅನವಶ್ಯಕವಾಗಿ ಅಲೆದಾಡಿಸುತ್ತಿರುವುದು ಕುರಿತು ಶಾಸಕ ಬಿ.ಎನ್. ರವಿಕುಮಾರ್ ಅವರು ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರ ಮುಂದೆಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಧ್ಯವರ್ತಿಗಳ ಮೂಲಕ ಅಥವಾ ನಗರಸಭೆಯ ಕೆಲ ಸದಸ್ಯರ ಶಿಫಾರಸಿನ ಮೇರೆಗೆ ಬಂದ ಕಡತಗಳನ್ನು ಮಾತ್ರ ವಿಲೇವಾರಿ ಮಾಡಲಾಗುತ್ತಿದ್ದು, ನೇರವಾಗಿ ಆಸ್ತಿ ಮಾಲೀಕರು ಸಲ್ಲಿಸಿದ ಅರ್ಜಿಗಳನ್ನು ಕಾರಣವಿಲ್ಲದೆ ಬಾಕಿ ಇಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆ ಶಾಸಕರು ನಗರಸಭೆಗೆ ನೇರವಾಗಿ ಭೇಟಿ ನೀಡಿದರು.

ಪೌರಾಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಶಾಸಕರು ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳ ಜೊತೆ ಇ-ಖಾತಾ ಕಡತಗಳ ಪ್ರಗತಿ, ಬಾಕಿ ಇರುವ ಕಡತಗಳ ಸಂಖ್ಯೆ ಮತ್ತು ತಡವಾದ ಕಾರಣಗಳ ಕುರಿತು ಚರ್ಚೆ ನಡೆಸಿದರು.

ಅಧಿಕಾರಿಗಳಿಂದ ಕಡತ ವಿಲೇವಾರಿ ಮಾನದಂಡಗಳ ಬಗ್ಗೆ ವಿವರ ಪಡೆದು, “ಸಾರ್ವಜನಿಕರಿಂದ ಬಂದಿರುವ ದೂರುಗಳು ಗಂಭೀರವಾಗಿವೆ. ಇಂತಹ ಅಸಮಾನತೆಗಳು ಮತ್ತೆ ನಡೆಯಬಾರದು. ಮಧ್ಯವರ್ತಿಗಳ ಪ್ರಭಾವದಿಂದ ನಾಗರಿಕರನ್ನು ತೊಂದರೆಪಡಿಸುವ ಕೆಲಸ ಬೇಡ” ಎಂದು ಶಾಸಕರು ಎಚ್ಚರಿಸಿದರು.

ಈ ವೇಳೆ ಪೌರಾಯುಕ್ತೆ ಜಿ. ಅಮೃತ ಅವರು ಸ್ಪಷ್ಟಪಡಿಸುತ್ತಾ, “ನೇರವಾಗಿ ಆಸ್ತಿ ಮಾಲೀಕರು ಕಡತ ಸಲ್ಲಿಸಲು ಸೂಚನೆ ನೀಡಲಾಗಿದೆ. ಮಧ್ಯವರ್ತಿಗಳಿಂದ ಬಂದ ಕಡತಗಳನ್ನು ಸ್ವೀಕರಿಸಲಾಗುತ್ತಿಲ್ಲ,” ಎಂದು ತಿಳಿಸಿದರು.

ಅವರು ಮುಂದುವರೆದು, “ಸಿಬ್ಬಂದಿ ಕೊರತೆ ಮತ್ತು ಸಮೀಕ್ಷೆ, ಕಂದಾಯ ವಸೂಲಿ ಮುಂತಾದ ಕೆಲಸಗಳ ಹಿನ್ನೆಲೆ ಕಡತ ವಿಲೇವಾರಿ ತಡವಾಗುತ್ತಿದೆ. ಶೀಘ್ರದಲ್ಲೇ ಎಲ್ಲಾ ಬಾಕಿ ಕಡತಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ,” ಎಂದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-29/10/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 29/10/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 317
Qty: 16502 Kg
Mx : 729
Mn: 385
Avg: 622

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 06
Qty: 351 Kg
Mx : ₹ 706
Mn: ₹ 616
Avg: ₹ 663


For Daily Updates WhatsApp ‘HI’ to 7406303366

2011ರಿಂದ ನಿವೃತ್ತಿಯಾದ ಎಲ್ಲ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ನೀಡಬೇಕು

0
Sidlaghatta Anganwadi Protest

Sidlaghatta : 2011ರಿಂದ 2023ರ ಮಾರ್ಚ್ ವರೆಗೆ ನಿವೃತ್ತಿಯಾದ ಎಲ್ಲ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಗ್ರಾಚ್ಯುಟಿ ಮೊತ್ತ ನೀಡಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಮಂಗಳವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಆಗಮಿಸಿದ ಸಿಐಟಿಯು ನೇತೃತ್ವದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು, ಶಿಶು ಅಭಿವೃದ್ದಿ ಅಧಿಕಾರಿ ವಿದ್ಯಾ ವಸ್ತ್ರದ್ ಅವರಿಗೆ ಮನವಿ ಪತ್ರವನ್ನು ಹಸ್ತಾಂತರಿಸಿದರು.

ಈ ವೇಳೆ ಸಂಘದ ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ ಮಾತನಾಡಿ, “ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ 2011ರಿಂದ ನಿವೃತ್ತರಾದ ಎಲ್ಲರಿಗೂ ಗ್ರಾಚ್ಯುಟಿ ನೀಡಬೇಕಾಗಿದೆ. ಆದರೆ ಸರ್ಕಾರವು 2023ರ ಏಪ್ರಿಲ್‌ನ ನಂತರ ನಿವೃತ್ತರಾದವರಿಗೆ ಮಾತ್ರ ಮೊತ್ತ ಬಿಡುಗಡೆ ಮಾಡುತ್ತಿದೆ,” ಎಂದು ಖಂಡಿಸಿದರು.

ಅವರು ಮುಂದುವರಿದು, “ಸುಪ್ರೀಂ ಕೋರ್ಟ್ ಆದೇಶದಂತೆ 2011ರಿಂದಲೇ ಗ್ರಾಚ್ಯುಟಿ ಕಾಯಿದೆಯನ್ನು ಜಾರಿಗೆ ತರಬೇಕು. 2011ರಿಂದ 2023ರೊಳಗೆ ನಿವೃತ್ತರಾದ 10,311 ಕಾರ್ಯಕರ್ತೆ ಮತ್ತು 11,980 ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಬೇಕೆಂಬುದು ನಮ್ಮ ಬೇಡಿಕೆ. ಸರ್ಕಾರ 193 ಕೋಟಿ ರೂ. ಬಿಡುಗಡೆಗೆ ಹಣಕಾಸು ಇಲಾಖೆಗೆ ಮನವಿ ಮಾಡಿದ್ದರೂ, ಇನ್ನೂ ಹಣ ಬಿಡುಗಡೆ ಆಗಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ, ಸಂಘದ ಕಾರ್ಯಕರ್ತೆಯರು ಸಿಡಿಪಿಒ (CDPO) ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ತಕ್ಷಣ ಅನುದಾನ ಬಿಡುಗಡೆ ಮಾಡಿ ನಿವೃತ್ತ ನೌಕರರಿಗೆ ಗ್ರಾಚ್ಯುಟಿ ನೀಡಬೇಕೆಂದು ಕೋರಿದರು.

ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಉಪಾಧ್ಯಕ್ಷ ಶಾಂತಮ್ಮ ಗೌರಮ್ಮ ಜಂಟಿ ಕಾರ್ಯದರ್ಶಿ ಭಾಗ್ಯಮ್ಮ ಮುಖಂಡರಾದ ಸುನಂದ, ನಿವೃತ್ತ ಸಿಬ್ಬಂದಿಗಳಾದ ರಾಮ ಲಕ್ಷ್ಮಮ್ಮ ಶಾಂತಮ್ಮ ಗೀತಾಬಾಯಿ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ

0
Sidlaghatta School Transportation Safety Meeting

Sidlaghatta, Chikkaballapur : “ಸಂಚಾರಿ ನಿಯಮಗಳನ್ನು ಪಾಲಿಸುವುದು ಕೇವಲ ಕಾನೂನು ಪಾಲನೆ ಅಲ್ಲ — ಅದು ನಿಮ್ಮ ಜೀವ ಉಳಿಸುವ ಕ್ರಮ,” ಎಂದು ಶಿಡ್ಲಘಟ್ಟ ನಗರ ಠಾಣೆಯ ಎಸ್‌.ಐ ವೇಣುಗೋಪಾಲ್ ಅವರು ತಿಳಿಸಿದರು.

ನಗರದ ಡಾಲ್ಫಿನ್ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ನಡೆದ ಶಾಲಾ ಮತ್ತು ಕಾಲೇಜುಗಳ ಮುಖ್ಯಸ್ಥರು ಹಾಗೂ ವಾಹನ ಚಾಲಕರ ಸಭೆಯಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳನ್ನು ಕರೆತರಲು ಬಳಸುವ ವಾಹನಗಳ ಚಾಲಕರು ನಿಯಮ ಪಾಲನೆಗೆ ಹೆಚ್ಚು ಜವಾಬ್ದಾರಿ ವಹಿಸಬೇಕು ಎಂದು ಅವರು ಹೇಳಿದರು.

“ವಾಹನ ಚಲಾಯಿಸುವ ಮುನ್ನ ಅದರ ಬ್ರೇಕ್, ಲೈಟ್, ಟೈರ್, ಮಿರರ್ ಇತ್ಯಾದಿ ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ಬೈಕ್ ಸವಾರರು ಐ.ಎಸ್‌.ಐ ಮಾರ್ಕ್‌ನ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು, ಹಾಗೂ ಕಾರು ಚಾಲಕರು ಸೀಟ್‌ಬೆಲ್ಟ್ ಹಾಕಿಕೊಳ್ಳಬೇಕು. ಇವು ಕಡ್ಡಾಯ, ” ಎಂದು ವೇಣುಗೋಪಾಲ್ ಹೇಳಿದರು.

“ರಸ್ತೆಯಲ್ಲಿ ಸಿಗ್ನಲ್ ಹಾಗೂ ಚಿಹ್ನೆಗಳನ್ನು ಗೌರವಿಸಿ, ನಿಗದಿತ ವೇಗ ಮೀರಬೇಡಿ. ಮೊಬೈಲ್‌ನಲ್ಲಿ ಮಾತನಾಡುತ್ತಾ ಅಥವಾ ಹಾಡು ಕೇಳುತ್ತಾ ವಾಹನ ಚಲಾಯಿಸುವುದು ಅಪಘಾತಕ್ಕೆ ಕಾರಣವಾಗಬಹುದು. ಮದ್ಯಪಾನ ಮಾಡಿ ಯಾವುದೇ ವಾಹನ ಚಲಾಯಿಸಬಾರದು – ಇದು ನಿಮ್ಮ ಪ್ರಾಣಕ್ಕೂ ಇತರರಿಗೂ ಅಪಾಯ,” ಎಂದು ಎಚ್ಚರಿಸಿದರು.

ಶಾಲೆ ಮತ್ತು ಆಸ್ಪತ್ರೆಗಳ ಬಳಿ ನಿಧಾನವಾಗಿ ಚಾಲನೆ ಮಾಡಬೇಕು, ತಿರುವುಗಳಲ್ಲಿ ಅಥವಾ ಓವರ್‌ಟೇಕ್ ಮಾಡುವಾಗ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು. ಶಾಲಾ ವಾಹನ ಚಾಲಕರು “ಭವಿಷ್ಯದ ಪ್ರಜೆಗಳನ್ನು ಕರೆತರ್ತಿದ್ದಾರೆ” ಎಂಬ ಅರಿವಿನಿಂದ ಹೆಚ್ಚು ಜವಾಬ್ದಾರಿ ವಹಿಸಬೇಕೆಂದು ಸಲಹೆ ನೀಡಿದರು.

ಕೊನೆಗೆ, “ಮಳೆ, ಮಂಜು ಅಥವಾ ಕತ್ತಲೆಯಲ್ಲಿ ಲೈಟ್ ಆನ್ ಮಾಡಿಕೊಂಡು ನಿಧಾನವಾಗಿ ಹೋಗಿ. ವಾಹನದ ದಾಖಲೆಗಳು ಸರಿಯಾಗಿರಲಿ. ಇದು ನಿಮ್ಮ ಕುಟುಂಬದ ಸುರಕ್ಷತೆಗೂ ಹಾಗೂ ಸಮಾಜದ ಶಾಂತಿಗೂ ಅಗತ್ಯ,” ಎಂದು ಎಸ್‌.ಐ ವೇಣುಗೋಪಾಲ್ ಹೇಳಿದರು.

ಸಭೆಯಲ್ಲಿ ಶಾಲಾ ಮತ್ತು ಕಾಲೇಜು ಮುಖ್ಯಸ್ಥರು, ಶಿಕ್ಷಕರು ಮತ್ತು ಚಾಲಕರು ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-28/10/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 28/10/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 285
Qty: 14046 Kg
Mx : 729
Mn: 250
Avg: 570

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 05
Qty: 276 Kg
Mx : ₹ 720
Mn: ₹ 572
Avg: ₹ 685

Sidlaghatta WhatsApp Channel Group

For Daily Updates WhatsApp ‘HI’ to 7406303366

ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ಸಮಾಜದ ಬೆನ್ನೆಲುಬಾಗಲಿ

0
Sidlaghatta Sri Saraswathi Convent Law Awareness Programme

Sidlaghatta, Chikkaballapur : ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದರೆ ಅದು ಅವರಿಗಷ್ಟೇ ಅಲ್ಲ, ಕುಟುಂಬ ಮತ್ತು ಇಡೀ ಸಮಾಜಕ್ಕೂ ಶಕ್ತಿಯ ಮೂಲವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಅಭಿಪ್ರಾಯಪಟ್ಟರು.

ನಗರದ ಸರಸ್ವತಿ ಕಾನ್ವೆಂಟ್ ಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಕ್ಷಣಿಕ ಸುಖಕ್ಕಾಗಿ ತಪ್ಪು ದಾರಿಯಲ್ಲಿ ನಡೆಯಬೇಡಿ. ನಿಮ್ಮ ಸ್ನೇಹಿತರು ತಪ್ಪು ದಾರಿಗೆ ಹೋಗುತ್ತಿದ್ದರೆ ಶಿಕ್ಷಕರಿಗೂ, ಹೆತ್ತವರಿಗೂ ತಿಳಿಸಿ. ಶಿಕ್ಷಣ ನಿಮ್ಮ ಜೀವನದ ಶಕ್ತಿಯಾಗಿದೆ,” ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.

“ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಸಮಾನರು. ಎಲ್ಲರಿಗೂ ಸಮಾನ ಅವಕಾಶಗಳಿವೆ. ಗಂಡು ಹೆಚ್ಚು, ಹೆಣ್ಣು ಕಡಿಮೆ ಎನ್ನುವ ಭಾವನೆಗಳಿಂದ ಬದುಕು ನಾಶವಾಗಬಾರದು,” ಎಂದರು.

ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ ಮಾತನಾಡಿ, “ಹೆಣ್ಣು ಮತ್ತು ಗಂಡು ಇಬ್ಬರೂ ಎರಡು ಕಣ್ಣುಗಳಂತವರು. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣನ್ನು ತಾಯಿ, ಅಕ್ಕ, ದೇವಿಯ ರೂಪದಲ್ಲಿ ಕಾಣುವ ಪರಂಪರೆ ಇದೆ. ಆ ಗೌರವವನ್ನು ಉಳಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಹೆಣ್ಣು ಮಕ್ಕಳು ಮುಂದಾಗಬೇಕು,” ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬಿಇಒ ನರೇಂದ್ರ ಕುಮಾರ್, ಶ್ರೀ ಸರಸ್ವತಿ ಕಾನ್ವೆಂಟ್ ಶಾಲೆಯ ಅಧ್ಯಕ್ಷ ಎನ್. ಶ್ರೀಕಾಂತ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ. ಭಾಸ್ಕರ್, ಎಪಿಪಿ ಮೊಹಮ್ಮದ್ ಖಾಜಾ, ವಕೀಲರಾದ ರಾಘವೇಂದ್ರ, ಪ್ರಭು, ಆರ್. ವೀಣಾ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಶಿಡ್ಲಘಟ್ಟದಲ್ಲಿ ಶಾಲಾ ವಾಹನಗಳ ಸುರಕ್ಷತೆ ಕುರಿತು ಪೊಲೀಸರ ಸಭೆ, ಚಾಲಕರ ದಾಖಲೆ ಪರಿಶೀಲನೆಗೆ ಸೂಚನೆ

0
Sidlaghatta Police School Transport safety Measures Meeting

Sidlaghatta, chikkballapur : ಶಿಡ್ಲಘಟ್ಟ ನಗರ ಪೊಲೀಸ್ ವಲಯದ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ನಗರ ವ್ಯಾಪ್ತಿಯ ಖಾಸಗಿ ಹಾಗೂ ಅನುದಾನಿತ ಶಾಲೆಗಳ ಮುಖ್ಯಸ್ಥರ ಸಭೆ ನಡೆಯಿತು. ಶಾಲಾ ವಾಹನಗಳ ಸುರಕ್ಷತೆ, ಚಾಲಕರ ಅರ್ಹತೆ ಮತ್ತು ದಾಖಲೆಗಳ ಪರಿಶೀಲನೆ ಕುರಿತಂತೆ ಈ ಸಭೆಯಲ್ಲಿ ಚರ್ಚೆ ನಡೆಯಿತು.

ಇತ್ತೀಚೆಗೆ ಚೇಳೂರು ಸಮೀಪ ಖಾಸಗಿ ಶಾಲಾ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರು ಮೃತಪಟ್ಟಿದ್ದರಿಂದ ಜಿಲ್ಲಾದ್ಯಂತ ಶಾಲಾ ವಾಹನಗಳ ಸುರಕ್ಷತಾ ಕ್ರಮಗಳ ಪರಿಶೀಲನೆ ಆರಂಭಿಸಲಾಗಿದೆ. ಇದರ ಭಾಗವಾಗಿ ಶಾಲಾ ವಾಹನಗಳ ತಾಂತ್ರಿಕ ಸ್ಥಿತಿ, ಚಾಲಕರ ತರಬೇತಿ, ಚಾಲನಾ ಪರವಾನಗಿ ಮತ್ತು ದಾಖಲೆಗಳ ನಿಖರ ನಿರ್ವಹಣೆ ಕುರಿತಂತೆ ಅಧಿಕಾರಿಗಳು ಚರ್ಚಿಸಿದರು.

ಸಭೆಯಲ್ಲಿ ಶಿಡ್ಲಘಟ್ಟ ನಗರ ವ್ಯಾಪ್ತಿಯ ಎಲ್ಲಾ ಶಾಲಾ ಮುಖ್ಯಸ್ಥರು ಹಾಜರಿದ್ದರು. ಮಂಗಳವಾರ ಬೆಳಗ್ಗೆ ಡಾಲ್ಫಿನ್ ಕಾಲೇಜಿನಲ್ಲಿ ನಗರದ ಎಲ್ಲಾ ಶಾಲೆ ಹಾಗೂ ಕಾಲೇಜುಗಳ ಮುಖ್ಯಸ್ಥರು ಮತ್ತು ವಾಹನ ಚಾಲಕರ ಸಭೆ ನಡೆಸಲು ತೀರ್ಮಾನಿಸಲಾಯಿತು.

ಈ ಸಭೆಗೆ ಚಾಲಕರು ದೈಹಿಕ ಸದೃಢತೆಯ ಪ್ರಮಾಣಪತ್ರ, ಚಾಲನಾ ಪರವಾನಗಿ ಹಾಗೂ ವಾಹನಗಳ ದಾಖಲೆಗಳೊಂದಿಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದರು. ಸಭೆಯಲ್ಲಿ ಡಿವೈಎಸ್ಪಿ ಮುರಳೀಧರ್, ಸರ್ಕಲ್ ಇನ್ಸ್‌ಪೆಕ್ಟರ್ ಎಂ. ಶ್ರೀನಿವಾಸ್, ಎಸ್‌.ಐ ವೇಣುಗೋಪಾಲ್ ಹಾಗೂ ನಗರದಲ್ಲಿನ ಶಾಲಾ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ AI ಆಧಾರಿತ ಶಿಕ್ಷಣ ಅಗತ್ಯ

0
Sugaturu Govt School LED TV Donation

Sugarutu, sidlaghatta, chikkaballapur : ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸ್ಪರ್ಧೆಗಳಿಗೆ ತಕ್ಕಂತೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮಕ್ಕಳೂ ತಂತ್ರಜ್ಞಾನಾಧಾರಿತ ಶಿಕ್ಷಣದಲ್ಲಿ ಹಿಂದಿರಬಾರದು ಎಂದು ಬೆಂಗಳೂರು ಜಲಮಂಡಳಿಯ ಸಹಾಯಕ ಎಂಜಿನಿಯರ್ ದಿನೇಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತ್ಯಾಧುನಿಕ LED ಟಿವಿ ಮತ್ತು ಗಿಡ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

“ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇಲಾಖೆಯ ಜೊತೆಗೆ ಸಮುದಾಯದ ಸಹಕಾರವೂ ಅಗತ್ಯ. ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಭವಿಷ್ಯಕ್ಕೆ ಸಿದ್ಧರಾಗಲು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಕುರಿತ ತರಬೇತಿ ಶಾಲಾ ಹಂತದಲ್ಲಿಯೇ ನೀಡಬೇಕು,” ಎಂದರು.

ಕಳೆದ ಜೂನ್‌ನಲ್ಲಿ ನಡೆದ ಪರಿಸರ ದಿನಾಚರಣೆ ಸಂದರ್ಭದಲ್ಲಿ “ಹಸಿರು ಸುಗಟೂರು” ಆಂದೋಲನದಡಿ 6,000 ಗಿಡಗಳನ್ನು ವಿತರಿಸಲಾಗಿತ್ತು. ರೈತರು ತಮ್ಮ ಜಮೀನು ಮತ್ತು ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ಮುಂದಿನ ಜೂನ್‌ನಲ್ಲಿ ಉತ್ತಮವಾಗಿ ಪೋಷಿಸಿದ ರೈತರಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಗುವುದು ಎಂದು ದಿನೇಶ್ ಹೇಳಿದರು.

ಶಾಲೆಯ ಮುಖ್ಯಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಮಾತನಾಡಿ,

“ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಲಾಗುತ್ತಿದೆ. ಎನ್‌ಎಂಎಂಎಸ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಈಗ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅಗತ್ಯವಾದ ಕೃತಕ ಬುದ್ಧಿಮತ್ತೆ ಆಪ್‌ಗಳ ಪರಿಚಯ ಮಾಡಲಾಗುತ್ತಿದೆ,” ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಛಲ, ಆತ್ಮವಿಶ್ವಾಸ, ಸಮಯಪ್ರಜ್ಞೆ ಮತ್ತು ಗುರುಹಿರಿಯರ ಬಗ್ಗೆ ಗೌರವದ ಮನೋಭಾವ ಬೆಳೆಸುವ ಅಗತ್ಯವಿದೆ ಎಂದು ಅವರು ಹೇರಳಿಸಿದರು.

ಈ ಸಂದರ್ಭದಲ್ಲಿ ನಂದಿನಿ ದಿನೇಶ್ ಅವರು ಶಾಲೆಗೆ ಅತ್ಯಾಧುನಿಕ ಎಲ್‌ಇಡಿ ಟಿವಿ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಮಾಜಿ ಸದಸ್ಯ ಬಚ್ಚೇಗೌಡ, ನಂದಿನಿ, ರಾಮ್‌ಚರಣ್, ತ್ರಿಷಿಕಾ, ಶಿಕ್ಷಕರು ಬಿ. ನಾಗರಾಜು, ಟಿ.ಎಂ. ಮಧು ಮತ್ತು ಶಿಕ್ಷಕಿ ತಾಜೂನ್ ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-27/10/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 25/10/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 387
Qty: 20137 Kg
Mx : 692
Mn: 330
Avg: 508

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 15
Qty: 1300 Kg
Mx : ₹ 766
Mn: ₹ 415
Avg: ₹ 623

Sidlaghatta WhatsApp Channel Group

For Daily Updates WhatsApp ‘HI’ to 7406303366

error: Content is protected !!