ನಗರ ಮತ್ತು ತಾಲ್ಲೂಕಿನಲ್ಲಿ ಬುಧವಾರ 34 ಮಂದಿಗೆ ಕೊರೊನಾ ಸೋಂಕು ತಗುಲಿದೆ. ನಗರದ 9 ಮಂದಿ, ತಾಲ್ಲೂಕಿನ ಸುಂಡ್ರಹಳ್ಳಿಯ 13 ಮಂದಿ ಮತ್ತು ಬಿ.ತಿಮ್ಮಸಂದ್ರದ 12 ಮಂದಿಗೆ ಕೊರೊನಾ ಸೋಂಕು ತಗುಲಿದೆ. ತಾಲ್ಲೂಕಿನ ಸುಂಡ್ರಹಳ್ಳಿಯ ಮಿಲಿಟರಿ ಕ್ಯಾಂಪಿನ 13 ಮಂದಿ, ನಗರದ ವಾಸವಿ ರಸ್ತೆಯ ದಂಪತಿ, ಫಿಲೇಚರ್ ಕ್ವಾಟರ್ಸ್ ನ 28 ವರ್ಷದ ಮಹಿಳೆ, ಮಾರುತಿ ನಗರದ 43 ವರ್ಷದ ವ್ಯಕ್ತಿ, ಅರಳೇಪೇಟೆಯ ನಿವಾಸಿಗಳಾದ 38 ವರ್ಷದ ಮಹಿಳೆ, 24 ವರ್ಷದ ಮಹಿಳೆ, 21 ವರ್ಷದ ಮಹಿಳೆ ಮತ್ತು ಐದು ವರ್ಷದ ಗಂಡು ಮಗು, ಕದಿರಿಪಾಳ್ಯದ 27 ವರ್ಷದ ಗಂಡಸು ಹಾಗೂ ಬಿ.ತಿಮ್ಮಸಂದ್ರದ 38 ವರ್ಷದ ಗಂಡಸು, 26 ವರ್ಷದ ಮಹಿಳೆ, 3 ವರ್ಷದ ಗಂಡು ಮಗು, 30 ವರ್ಷದ ಮಹಿಳೆ, 45 ವರ್ಷದ ಮಹಿಳೆ, 50 ವರ್ಷದ ವ್ಯಕ್ತಿ, 46 ವರ್ಷದ ಮಹಿಳೆ, 34 ವರ್ಷದ ಮಹಿಳೆ, 21 ವರ್ಷದ ಮಹಿಳೆ, 34 ವರ್ಷದ ಮಹಿಳೆ, 13 ವರ್ಷದ ಬಾಲಕ ಮತ್ತು 10 ವರ್ಷದ ಬಾಲಕನಿಗೆ ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದೆ.
ನಗರದಲ್ಲಿ ಮಂಗಳವಾರ ತಹಶೀಲ್ದಾರ್ ಕೆ.ಅರುಂಧತಿ ಅವರಿಗೆ ರೈತರ ಸಮಸ್ಯೆಗಳ ಕುರಿತಾದ ಮನವಿಯನ್ನು ಸಲ್ಲಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿದರು.
ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಅನ್ಯಾಯದ ಕುರಿತಾಗಿ ಹೋರಾಡಿ ಹುತಾತ್ಮರಾದ ರೈತರ ನೆನಪಿನಲ್ಲಿ ಪ್ರತಿ ವರ್ಷ ಜುಲೈ 21ರಂದು ರೈತ ಹುತಾತ್ಮ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ರೈತರ ಹತ್ತು ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ಆಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ರೈತರ ವಿರೋಧದ ನಡುವೆಯೂ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತರ ಕೊರಳಿಗೆ ನೇಣು ಕುಣಿಕೆ ಹಾಕಿದೆ. ಈ ಕಾಯ್ದೆಯನ್ನು ಕೂಡಲೇ ವಾಪಸ್ ಪಡೆಯಬೇಕು. ಎ.ಪಿ.ಎಂ.ಸಿ ಯ ದೋಷಗಳನ್ನು ಸರಿಪಡಿಸದೇ ಇಡೀ ಮಾರುಕಟೆ ವ್ಯವಸ್ಥೆಯನ್ನು ಕಾರ್ಪೊರೇಟ್ ಕಂಪೆನಿಗಳ ವಶಕ್ಕೆ ಒಪ್ಪಿಸಿರುವುದು ಸರಿಯಲ್ಲ. ವಿದ್ಯುತ್ ಸರಬರಾಜನ್ನು ಖಾಸಗಿಯವರಿಗೆ ವಹಿಸಲು ಕೇಂದ್ರ ಸರ್ಕಾರ ತಿದ್ದುಪಡಿ ಕರಡನ್ನು ಹೊರಡಿಸಿದೆ. ಇದರಿಂದ ರೈತ ಸಮುದಾಯಕ್ಕೆ ತೊಂದರೆಯಾಗುತ್ತದೆ. ಕೊರೊನಾ ಸಂಕಷ್ಟ ಪರಿಹಾರ ಸಂಪೂರ್ಣವಾಗಿ ಜಾರಿಯಾಗಲಿ. ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯಡಿ ರೈತರಿಗೆ ಬರಬೇಕಾದ ಪರಿಹಾರದ ಹಣ ಇನ್ನೂ ಬಾಕಿ ಇದೆ. ಬ್ಯಾಂಕುಗಳಿಂದ ರೈತರು ಪಡೆದಿರುವ ಸಾಲವನ್ನು ಮರುಪಾವತಿ ಮಾಡಲು ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಒಂದು ವರ್ಷ ವಿಸ್ತರಿಸಬೇಕು. ಕೃಷಿ ಬಳಕೆಗೆ ಸರಳ ರೀತಿಯಲ್ಲಿ ಬಡ್ಡಿ ರಹಿತ ಸಾಲವನ್ನು ಒದಗಿಸಬೇಕು.
ಜಿಲ್ಲೆಯಲ್ಲಿ ರೈತರು ಬೆಳೆದ ಬೆಳೆಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಹೈನುಗಾರಿಕೆಗೆ ಅತ್ಯಗತ್ಯವಾದ ಬೂಸಾ, ಚಕ್ಕೆ, ಫೀಡು ಮುಂತಾದವುಗಳು ನಿಗದಿತ ಬೆಲೆಗೆ ಸಿಗುವಂತಾಗಬೇಕು. ಹೂ ಬೆಳೆಯುವ ರೈತರು ಕಂಗಾಲಾಗಿದ್ದಾರೆ. ಬೇರೆ ರಾಜ್ಯಗಳಿಗೆ ಹೂಗಳನ್ನು ಕಳುಹಿಸಲು ಅವಕಾಶ ಮಾಡಿಕೊಡಬೇಕು ಮೊದಲಾದ ಬೇಡಿಕೆಗಳ ಪಟ್ಟಿಯನ್ನು ಮನವಿ ಪತ್ರದೊಂದಿಗೆ ನೀಡಿದರು.
ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಮುನಿಕೆಂಪಣ್ಣ, ಉಪಾಧ್ಯಕ್ಷ ಶ್ಯಾಮ್, ಕಾರ್ಯಾಧ್ಯಕ್ಷ ಆಂಜಿನಪ್ಪ, ಮುನಿಯಪ್ಪ, ಅಶ್ವತ್ಥನಾರಾಯಣ, ರಮೇಶ್, ನಾರಾಯಣಸ್ವಾಮಿ, ಮುನೇಗೌಡ, ನರಸಿಂಹಮೂರ್ತಿ, ಕೇಶವ, ಮುರಳಿ, ಸುಬ್ಬರೆಡ್ಡಿ ಹಾಜರಿದ್ದರು.
ನಗರದ ಮೆಹಬೂಬ್ ನಗರದ 8 ವರ್ಷದ ಬಾಲಕಿಗೆ, ತಾಲ್ಲೂಕಿನ ಗಂಗನಹಳ್ಳಿಯ 25 ವರ್ಷದ ಮಹಿಳೆಗೆ, ಮಳ್ಳೂರಿನ 41 ವರ್ಷದ ಗಂಡಸಿಗೆ, ಹಾರಡಿಯ 27 ವರ್ಷದ ವ್ಯಕ್ತಿಗೆ ಮತ್ತು ಗಡಿಮಿಂಚೇನಹಳ್ಳಿಯ 23 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿದೆ.
ತಾಲ್ಲೂಕಿನ ಹಂಡಿಗನಾಳ ಗ್ರಾಮದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶಿಲನಾ ಸಭೆ ನಡೆಸಿ ಸಂಸದ ಮುನಿಸ್ವಾಮಿ ಮಾತನಾಡಿದರು.
ಕೋವಿಡ್ 19 ತಡೆಗಟ್ಟುವುದು ಎಲ್ಲರ ಮುಖ್ಯ ಕರ್ತವ್ಯವಾಗಲಿ. ರಾಜಕಾರಣ ಬಿಟ್ಟು ಕೊರೊನಾ ತಡೆಗಟ್ಟುವ ಕೆಲಸದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಗ್ರಾಮಂತರ ಪ್ರದೇಶಗಳಲ್ಲಿ ಎಲ್ಲಾ ಅಧಿಕಾರಿಗಳು, ಪಿಡಿಒ, ಅಂಗನವಾಡಿ ಕಾರ್ಯಕರ್ತರು, ಜನಪ್ರತಿನಿಧಿಗಳು ಹಾಗೂ ಎಲ್ಲರೂ ಕೈಜೋಡಿಸಿ ಕೋವಿಡ್ ನಿಯಂತ್ರಣ ಕೆಲಸಗಳನ್ನು ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬಂದ ಅನುದಾನಗಳು ಸಾರ್ವಜನಿಕರಿಗೆ ತಲಪುವಂತೆ ಆಗಬೇಕು ಎಂದರು.
ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಆಯಾ ಇಲಾಖೆಯಿಂದ ವಾಟ್ಸಪ್ ಗುಂಪನ್ನು ಮಾಡಿ ಕೋವಿಡ್ ಇರುವ ಸ್ಥಳಗಳಲ್ಲಿರುವವರಿಗೆ ಅನುಕೂಲವಾಗುವ ಹಾಗೆ ಕೋವಿಡ್ ತಡೆಗಟ್ಟು ಕೆಲಸವನ್ನು ಮಾಡಬೇಕು. ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಸಮಯವನ್ನು ನಿಗಧಿಪಡಿಸಿ. ಆ ಮಾಹಿತಿಯಲ್ಲಿ ಎಲ್ಲರಿಗೂ ತಿಳಿಸಿ. ಯಾರಾದರು ನನಗೆ ಅವರು ಗೊತ್ತು, ಇವರು ಗೊತ್ತು ಎಂದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಿ.
ಕೋವಿಡ್ ನಿಂದ ಮೃತ ಪಟ್ಟರೆ ಅಂತ್ಯ ಸಂಸ್ಕಾರವನ್ನು ನಡೆಸಲು ತಂಡಗಳನ್ನು ಮಾಡಿ. ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಲಿ. ಪ್ರಧಾನ ಮಂತ್ರಿಯವರು ಪ್ರತಿ ಮನೆಗೆ ನೀರಿಗಾಗಿ ನಲ್ಲಿ ಹಾಕಿಸಬೇಕು ಎಂಬ ಕನಸು ಇದೆ. ಕೋವಿಡ್ ಮುಗಿದ ಮೇಲೆ ನರೇಗದಿಂದ ಮಾಡಲಾಗುವುದು. ಮಸೀದಿ ಹಾಗೂ ದೇವಾಲಯಗಳಲ್ಲಿ ಕೊರೊನಾ ತಡೆಗಟ್ಟುವ ವಿಚಾರವನ್ನು ಪ್ರಚಾರಮಾಡಬೇಕು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ಕೋವಿಡ್ ಕುರಿತಾಗಿ ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ವಿವರ ನೀಡಿದರು. ಇದುವರೆಗೂ ತಾಲ್ಲೂಕಿನಲ್ಲಿ 58 ಪ್ರಕಣ ದಾಖಲಾಗಿದೆ. ಅದರಲ್ಲಿ 26 ಪ್ರಕರಣಗಳು ನಗರ ಹಾಗೂ ಉಳಿದಿದ್ದು ಗ್ರಾಮಾಂತರ ಪ್ರದೇಶಗಳದ್ದು ಎಂದರು.
ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮಲ್ಲಿ ಯಾರಾದರೂ ಕೊವಿಡ್ ನಿಂದ ಸತ್ತರೆ ತಾಲ್ಲೂಕಿನ ಬಚ್ಚನಹಳ್ಳಿ ಗ್ರಾಮದ ಸರ್ವೆ ನಂ 32 ರಲ್ಲಿ ಸ್ಮಶಾನಕ್ಕೆ ಸ್ಥಳ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ನೀಡಿದ್ದೇವೆ. ಬಚ್ಚನಹಳ್ಳಿಯ ಆಶ್ರಮ ಶಾಲೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಈಗ 18 ಜನರು ಬಚ್ಚನಹಳ್ಳಿ ಕೋವಿಡ್ ಕೇಂದ್ರದಲ್ಲಿ ಇದ್ದಾರೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಬಚ್ಚನಹಳ್ಳಿಯ ಕೋವಿಡ್ ಕೇರ್ ಸೆಂಟರಿನಲ್ಲಿ ಬಿಸಿ ನೀರಿನ ತೊಂದರೆ ಇದೆ. ಅದನ್ನು ಸರಿಪಡಿಸಿದ ನಂತರ ಅಲ್ಲಿ ಕೋವಿಡ್ ವ್ಯಕ್ತಿಗಳನ್ನು ಬಿಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ತಹಶೀಲ್ದಾರ್ ಕೆ.ಅರುಂಧತಿ, ಇಓ ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಡಿ.ವೈ.ಎಸ್.ಪಿ ಡಿ ಶ್ರೀನಿವಾಸ್, ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್, ನಗರ ಸಭೆ ಪೌರಾಯುಕ್ತ ಶ್ರೀನಿವಾಸ್, ಕೋವಿಡ್ ನೋಡಲ್ ಅಧಿಕಾರಿ ಶಿವಕುಮಾರ್ ಹಾಜರಿದ್ದರು.
ನಗರದ ಕದಿರಿಪಾಳ್ಯದ ಒಂದೇ ಕುಟುಂಬದ ಏಳು ಮಂದಿ ಸದಸ್ಯರಿಗೆ ಮತ್ತು ತಾಲ್ಲೂಕಿನ ಸುಂಡ್ರಹಳ್ಳಿಯ ಒಬ್ಬ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. 80 ವರ್ಷದ ವೃದ್ಧ, 40 ವರ್ಷದ ಮಹಿಳೆ, 21 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು, 28 ವರ್ಷದ ಯುವಕ, 25 ವರ್ಷದ ಯುವಕ, 19 ವರ್ಷದ ಯುವಕ ಮತ್ತು ಸುಂಡ್ರಹಳ್ಳಿ ಗ್ರಾಮದ 50 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆರೋಗ್ಯ ಸಿಬ್ಬಂದಿ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕಳುಹಿಸಿದ್ದಾರೆ. ಸೋಂಕಿತರು ವಾಸಿಸುತ್ತಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಿ, ಸೂಕ್ಷ್ಮಾಣು ನಾಶಕವನ್ನು ಸಿಂಪಡಣೆ ಮಾಡಿಸಿದ್ದಾರೆ.
ಹಕ್ಕಿಪಿಕ್ಕಿ ಕಾಲೋನಿಯವರಿಗೆ ಸರ್ಕಾರದಿಂದ ದವಸ ಧಾನ್ಯ ನೀಡುವುದಲ್ಲದೆ ಅವರ ಆರೋಗ್ಯ ಭದ್ರತೆಯನ್ನು ಸಹ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಲತಾ ಭರವಸೆ ನೀಡಿದರು. ತಾಲ್ಲೂಕಿನ ವಿವಿದೆಡೆ ಇರುವ ಕೋವಿಡ್ ಕೇರ್ ಸೆಂಟರುಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಕಂಟೈನ್ ಮೆಂಟ್ ಪ್ರದೇಶಗಳನ್ನು ಭಾನುವಾರ ಭೇಟಿ ನೀಡಿ ಪರಿಶಿಲನೆ ನಡೆಸಿದ ಅವರು ಸಾದಲಿಯ ಹಕ್ಕಿಪಿಕ್ಕಿ ಜನರು ತಮ್ಮ ಕಷ್ಟಗಳನ್ನು ತೋಡಿಕೊಂಡ ಸಂದರ್ಭದಲ್ಲಿ ಮಾತನಾಡಿದರು. ವಿವಿದೆಡೆ ಹೋಗಿ ವ್ಯಾಪಾರ ಮಾಡಿಕೊಂಡು ಬದುಕುವ ಹಕ್ಕಿಪಿಕ್ಕಿ ಜನರಿಗೆ ಕೊರೊನಾದಿಂದಾಗಿ ಬಹಳ ಕಷ್ಟವಾಗಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಗ್ರಾಮ ಪಂಚಾಯಿತಿಯಿಂದ ಈಗಾಗಲೇ ದಿನಸಿ ಸಾಮಗ್ರಿಗಳ ನೆರವನ್ನು ನೀಡಲಾಗಿದೆ. ನೀವುಗಳು ಭಯ, ಅತಂಕ ಪಡುವ ಅಗತ್ಯವಿಲ್ಲ. ನಿಮಗೆ ಅಗತ್ಯ ನೆರವನ್ನು ನೀಡುತ್ತೇವೆ ಎಂದು ಧೈರ್ಯ ತುಂಬಿದರು. ತಾಲ್ಲೂಕಿನ ಕೊಂಡಪ್ಪಗಾರಹಳ್ಳಿ (ಪುರಭೈರನಹಳ್ಳಿ)ಯ ಬಳಿಯಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ತಾಲ್ಲೂಕಿನ ಎರಡನೇ ಕೋವಿಡ್ ಕೇರ್ ಸೆಂಟರನ್ನಾಗಿ ಸಿದ್ಧಪಡಿಸಿರುವುದನ್ನು ಪರಿಶೀಲಿಸಿದರು. ಅಲ್ಲಿ ರೋಗಿಗಳಿಗೆ ಔಷಧಿ, ಆಹಾರ, ನೀರು, ಶುಚಿತ್ವದ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಈ.ತಿಮ್ಮಸಂದ್ರದ ಈಗ್ಲೆಟ್ ಗ್ರಾಮದಲ್ಲಿನ ಕಂಟೈನ್ ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪಿಡಿಒ ಅವರನ್ನು ಕಾರ್ಯಪಡೆಯ ಕಾರ್ಯವೈಖರಿಯ ಕುರಿತಾಗಿ ಪ್ರಶ್ನಿಸಿದರು. ಪಿಡಿಒ ತನ್ವೀರ್ ಅಹಮದ್ ಅವರು ಎಂಟು ಮಂದಿಯ ಕಾರ್ಯಪಡೆಯ ಸದಸ್ಯರು ಗ್ರಾಮದ ಜನರ ಆರೋಗ್ಯದ ಬಗ್ಗೆ ಮಾಹಿತಿ ಹಾಗೂ ಅರಿವು ನೀಡುವುದಲ್ಲದೆ, ಕಂಟೈನ್ ಮೆಂಟ್ ಪ್ರದೇಶದ ಮನೆಗಳವರಿಗೆ ದಿನಸಿ ನೀಡುತ್ತಿರುವುದನ್ನು ವಿವರಿಸಿದರು. ಈ.ತಿಮ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆವರಣದಲ್ಲಿ ಗಿಡವನ್ನು ನೆಟ್ಟರು. ಆಸ್ಪತ್ರೆಯ ಮುಂದಿನ ಉದ್ಯಾನವನ ಮತ್ತು ಔಷಧಿವನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಪೊಲೀಸ್ ಎಸ್.ಪಿ ಮಿಥುನ್ ಕುಮಾರ್, ಪಿಡಿಒ ತನ್ವೀರ್ ಅಹಮದ್ ಹಾಜರಿದ್ದರು.
ನಗರ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ ನಾಲ್ಕು ಮಂದಿಗೆ ಕೊರೊನಾ ಸೋಂಕು ತಗುಲಿದೆ. ನಗರದ ಅರಳೇಪೇಟೆಯ 34 ವರ್ಷದ ವ್ಯಕ್ತಿ, ಆಜಾದ್ ನಗರದ 60 ವರ್ಷದ ಗಂಡಸು, ತಾಲ್ಲೂಕಿನ ಆನೂರು ಗ್ರಾಮದ 39 ವರ್ಷದ ವ್ಯಕ್ತಿ ಮತ್ತು ಚೌಡಸಂದ್ರ ಗ್ರಾಮದ 51 ವರ್ಷ ವಯಸ್ಸಿನ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. ಆರೋಗ್ಯ ಸಿಬ್ಬಂದಿ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕಳುಹಿಸಿದ್ದಾರೆ. ಸೋಂಕಿತರು ವಾಸಿಸುತ್ತಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಿ, ಸೂಕ್ಷ್ಮಾಣು ನಾಶಕವನ್ನು ಸಿಂಪಡಣೆ ಮಾಡಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಯುವಕನಿಗೆ ಚಿಕಿತ್ಸೆಗಾಗಿ ಆರ್ಥಿಕ ನೆರವು ಹಾಗೂ ಮಾಶಾಸನವನ್ನು ಶನಿವಾರ ವಿತರಣೆ ಮಾಡಲಾಯಿತು.
ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವ ಮತ್ತು ತಂದೆ ತಾಯಿ ಇಲ್ಲದ ಶಿಡ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿಯ 20 ವರ್ಷದ ಯುವಕನಿಗೆ ರೂ 10 ಸಾವಿರ ಸಹಾಯಧನ ಹಾಗೂ ಯುವಕ ಜೀವನ ನಡೆಸಲು ಪ್ರತಿ ತಿಂಗಳು 750 ರೂಗಳಂತೆ ಮಾಶಾಸನವನ್ನು ಮಂಜೂರುಗೊಳಿಸಲಾಗಿದೆ.
ಶ್ರೀ ಕ್ಷೇತ್ರದಿಂದ ಮಂಜೂರುಗೊಳಿಸಿದ ಆರ್ಥಿಕ ನೆರವು ಹಾಗೂ ಮಾಸಾಶನವನ್ನು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎ.ಎಂ. ತ್ಯಾಗರಾಜ್ ವಿತರಿಸಿದರು. ಈ ಸಂಧರ್ಭದಲ್ಲಿ ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಮಂಜುನಾಥ್, ಮೇಲ್ವಿಚಾರಕಿ ಜ್ಯೋತಿ, ಸೇವಾಪ್ರತಿನಿಧಿ ಲಕ್ಷ್ಮಮ್ಮ, ಪದಾಧಿಕಾರಿ ಗೀತಾ ಹಾಜರಿದ್ದರು.
ನಗರದ ಕುಚ್ಚಣ್ಣ ಬೀದಿಯ ಒಂದೇ ಕುಟುಂಬದ ಮೂವರಿಗೆ, ಕದಿರಿಪಾಳ್ಯದ ದಂಪತಿಗೆ, ತಾಲ್ಲೂಕಿನ ಜಂಗಮಕೋಟೆಯ 14 ವರ್ಷದ ಬಾಲಕನಿಗೆ, ಜಂಗಮಕೋಟೆ ಕ್ರಾಸ್ ನ 24 ವರ್ಷದ ಗರ್ಭಿಣಿಗೆ, ನಡಿಪಿನಾಯಕನಹಳ್ಳಿಯ 30 ವರ್ಷದ ಗರ್ಭಿಣಿಗೆ, ಬುಸ್ನಳ್ಳಿಯ 35 ವರ್ಷದ ಗಂಡಸು ಮತ್ತು 28 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. ಆರೋಗ್ಯ ಸಿಬ್ಬಂದಿ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕಳುಹಿಸಿದ್ದಾರೆ. ಸೋಂಕಿತರು ವಾಸಿಸುತ್ತಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಿ, ಸೂಕ್ಷ್ಮಾಣು ನಾಶಕವನ್ನು ಸಿಂಪಡಣೆ ಮಾಡಿಸಿದ್ದಾರೆ.
ತಾಲ್ಲೂಕಿನಾದ್ಯಂತ ವಿವಿಧ ಸರ್ಕಾರಿ ಶಾಲೆಗಳಲ್ಲಿ ಅಕ್ಷರ ದಾಸೋಹ ಇಲಾಖೆಯಿಂದ ಸರಬರಾಜಾದ ಬರಗಾಲ ಬಿಸಿಯೂಟದ ಆಹಾರ ಧಾನ್ಯಗಳನ್ನು ಮಕ್ಕಳಿಗೆ ವಿತರಿಸಲಾಯಿತು.
ಇಲಾಖೆಯ ಆದೇಶದಂತೆ ಶಿಕ್ಷಕರು ಅಕ್ಕಿ, ಬೇಳೆ, ಗೋದಿಯನ್ನು ತೂಕ ಮಾಡಿ ಮಕ್ಕಳಿಗೆ ಹಂಚಿಕೆ ಮಾಡಿದರು. ಶಾಲೆಗೆ ಬಂದ ಮಕ್ಕಳು ಅಥವಾ ಅವರ ಪೋಷಕರಿಗೆ ಮಾಸ್ಕ್ ಧರಿಸುವಂತೆ, ಅಂತರ ಕಾಯ್ದುಕೊಳ್ಳುವಂತೆ ಶಿಕ್ಷಕರು ತಿಳಿಸುತ್ತಿದ್ದರು.
ಕೊರೊನಾ ಸಂದರ್ಭದಲ್ಲಿ ಎಲ್ಲೆಡೆ ಆರ್ಥಿಕ ಮುಗ್ಗಟ್ಟು ತಲೆದೋರಿದೆ. ಶಾಲೆಗಳು ಕೂಡ ನಡೆಯುತ್ತಿಲ್ಲ. ಈ ಕಷ್ಟಕಾಲದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡುತ್ತಿರುವ ಆಹಾರ ಧಾನ್ಯಗಳು ಅನುಕೂಲವಾಗಿದೆ ಎಂದು ಪೋಷಕರೊಬ್ಬರು ತಿಳಿಸಿದರು.
ಇಲಾಹಿನಗರ – ಮಹಿಳೆ (೨೨), ಸಾದಲಿ – ಮಹಿಳೆ (೨೦), ಮಹಬೂಬ್ ನಗರ ಒಬ್ಬ (ಗಂಡು), ಆಜಾದ್ ನಗರ ಒಬ್ಬ (ಗಂಡು) ಸೇರಿದಂತೆ ಶ್ಯಾಮಣ್ಣ ಬೀದಿಯ ನಿವಾಸಿಗಲಾದ ಇಬ್ಬರು ಮಹಿಳೆಯರು, ಸಿ ರ್ ಲೇಔಟ್ ನ ಒಬ್ಬ (ಗಂಡು), ಈ ತಿಮ್ಮಸಂದ್ರ ಗ್ರಾಮದ ಒಬ್ಬ (ಗಂಡು) ಮತ್ತು ಜಂಗಮಕೋಟೆಯ ಇಬ್ಬರು ಮಹಿಳೆಯರಲ್ಲಿ ಕೊರೊನ ಸೋಂಕು ಇರುವುದು ಶುಕ್ರವಾರ (July 17) ದೃಢಪಟ್ಟಿದೆ.
ಶುಕ್ರವಾರ (17 July) ಶಿಡ್ಲಘಟ್ಟ ನಗರದಲ್ಲಿ 3 ಪ್ರಕರಣಗಳು ಸೇರಿದಂತೆ ಒಟ್ಟು 6 ಕೊರೊನ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಶ್ಯಾಮಣ್ಣ ಬೀದಿಯ ನಿವಾಸಿಗಳಾದ ಇಬ್ಬರು ಮಹಿಳೆಯರು, C R ಲೇಔಟ್ ನ ಒಬ್ಬ (ಗಂಡು), ಈ ತಿಮ್ಮಸಂದ್ರ ಗ್ರಾಮದ ಒಬ್ಬ (ಗಂಡು) ಮತ್ತು ಜಂಗಮಕೋಟೆಯ ಇಬ್ಬರು ಮಹಿಳೆಯರಲ್ಲಿ ಕೊರೊನ ಸೋಂಕು ಇರುವುದು ದೃಢಪಟ್ಟಿದೆ.
ಶಿಡ್ಲಘಟ್ಟ ನಗರದಲ್ಲಿ ಒಬ್ಬ ಸೇರಿದಂತೆ ತಾಲ್ಲೂಕಿನಲ್ಲಿ ಎರಡು ಕೊರೊನ ಪಾಸಿಟಿವ್ ಪ್ರಕರಣಗಳು ಗುರುವಾರ (16 July) ದಾಖಲಾಗಿದೆ. ನಗರದ ಫಿಲೇಚರ್ ಕ್ವಾರ್ಟರ್ಸ್ ನಿವಾಸಿ 30 ವರ್ಷದ ಯುವಕ ಹಾಗೂ ಚಿಕ್ಕದಾಸರಹಳ್ಳಿ ಯ 22 ವರ್ಷದ ಗರ್ಭಿಣಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ
ನಗರದ ಒಬ್ಬ ವ್ಯಕ್ತಿ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ ಮೂವರಿಗೆ ಕೊರೊನಾ ಸೋಂಕು ತಗುಲಿದೆ. ನಗರದ ಆಜಾದ್ ನಗರದ 32 ವರ್ಷ ವಯಸ್ಸಿನ ವ್ಯಕ್ತಿ ಹಾಗೂ ತಾಲ್ಲೂಕಿನ ಆನೂರಿನ 7 ವರ್ಷದ ಬಾಲಕ ಮತ್ತು ದೇವಗಾನಹಳ್ಳಿಯ 35 ವರ್ಷದ ವ್ಯಕ್ತಿಗೆ ಕೊರೊನಾ ಸೋಕು ತಗುಲಿರುವುದು ತಿಳಿಯುತ್ತಿದ್ದಂತೆಯೇ ಆರೋಗ್ಯ ಸಿಬ್ಬಂದಿ ಅವರನ್ನು ಕೋವಿಡ್ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕಳುಹಿಸಿದ್ದಾರೆ. ಸೋಂಕಿತರು ವಾಸಿಸುತ್ತಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಿ, ಸೂಕ್ಷ್ಮಾಣು ನಾಶಕವನ್ನು ಸಿಂಪಡಣೆ ಮಾಡಿಸಿದ್ದಾರೆ.