15.1 C
Sidlaghatta
Saturday, December 27, 2025
Home Blog Page 36

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಮಾದರಿ ಸರ್ಕಾರಿ ನೌಕರರ ಭವನ ಶಿಡ್ಲಘಟ್ಟದಲ್ಲಿ ನಿರ್ಮಾಣ: ಕೆ ಎನ್ ಸುಬ್ಬಾರೆಡ್ಡಿ

0
Sidlaghatta Workers Bhavan ground breaking ceremony

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸರ್ಕಾರಿ ನೌಕರರ ಸುಮಾರು ವರ್ಷಗಳ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು ಜಿಲ್ಲೆಯಲ್ಲಿಯೇ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಾದರಿ ಸರ್ಕಾರಿ ನೌಕರರ ಭವನ ನಿರ್ಮಾಣ ಮಾಡಲಾಗುವುದು ಎಂದು ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ ತಿಳಿಸಿದರು.

ನಗರದ ಸರ್ಕಾರಿ ಪ್ರೌಡಶಾಲೆ ಆವರಣದಲ್ಲಿ ಸರ್ಕಾರಿ ನೌಕರರ ಭವನದ ಕಾಮಗಾರಿಗೆ ಅಡಿಗಲ್ಲು ಪೂಜೆ ನೆರವೇರಿಸಿ ಅವರು ಮಾತನಾಡಿದರು

ಇತ್ತೀಚಿಗೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ, ಸರ್ಕಾರಿ ನೌಕರರ ಭವನ ಹಾಗೂ ಗುರುಭವನ ಕಾಮಗಾರಿಯನ್ನು ಆರಂಭಿಸಲು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ ಸಿ ಸುಧಾಕರ್ ಹಾಗೂ ಶಾಸಕ ಮೇಲೂರು ರವಿಕುಮಾರ್ ಅವರು ಭೂಮಿಪೂಜೆಯನ್ನು ನೆರವೇರಿಸಿದ್ದರು. ಶಾಸಕ ರವಿಕುಮಾರ್ ಅವರು ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 20 ಲಕ್ಷ ರೂಗಳ ಅನುದಾನವನ್ನು ಮಂಜೂರು ಮಾಡಿದ್ದಾರೆ. ಇನ್ನು ಅಧಿಕ ಅನುದಾನದ ಅಗತ್ಯವಿದ್ದು ಸಂಸದರ ಹಾಗೂ ವಿಧಾನಪರಿಷತ್ ಸದಸ್ಯರ ಸಹಕಾರದಿಂದ ಸರ್ಕಾರಿ ನೌಕರರ ಭವನವನ್ನು ಮಾದರಿಯಾಗಿ ನಿರ್ಮಿಸಲಾಗುವುದೆಂದರು.

ಸರ್ಕಾರಿ ನೌಕರರಿಗೆ ಸರ್ವ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಮೂರು ಅಂತಸ್ತಿನ ಕಟ್ಟಡ ತಲೆ ಎತ್ತಲಿದ್ದು ಇಡೀ ಜಿಲ್ಲೆಯಲ್ಲಿ ಮಾದರಿ ಭವನ ನಿರ್ಮಾಣ ಮಾಡಲು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಎನ್. ಸುಬ್ಬಾರೆಡ್ಡಿ ಮತ್ತು ಪದಾಧಿಕಾರಿಗಳು ಸಂಕಲ್ಪ ಮಾಡಿದ್ದು ಅದಕ್ಕಾಗಿ ಇನ್ನಷ್ಟು ಅನುದಾನ ಕ್ರೂಡಿಕರಿಸಲು ಈಗಾಗಲೇ ಸಿದ್ಧತೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗಗನ ಸಿಂಧು, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಅಕ್ಕಲರೆಡ್ಡಿ, ಉಪಾಧ್ಯಕ್ಷ ಮಧುಸೂದನ್, ಪ್ರಧಾನ ಕಾರ್ಯದರ್ಶಿ ಅಪ್ಪೇಗೌಡನಹಳ್ಳಿ ಕೆಂಪೇಗೌಡ, ಖಜಾಂಚಿ ವಸಂತ್ ಕುಮಾರ್, ಟಿ. ಟಿ. ನರಸಿಂಹಪ್ಪ, ಎನ್‌.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಪ್ರಧಾನ ಕಾರ್ಯದರ್ಶಿ ನರಸಿಂಹರಾಜು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ, ಬಿ ಇ ಓ ನರೇಂದ್ರ ಕುಮಾರ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ತಿಮ್ಮರಾಜು, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ. ವೆಂಕಟರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಅರುಣಮ್ಮ, ಸಂಘದ ಪದಾಧಿಕಾರಿಗಳಾದ ಲಲಿತಮ್ಮ ಟಿಪ್ಪು ಸುಲ್ತಾನ್ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಸೌಹಾರ್ದತೆಯ ಪ್ರತೀಕವಾದ ಈದ್ ಮಿಲಾದ್ ಹಬ್ಬ ಆಚರಣೆ

0
Sidlaghatta Eid Milad 2025 Celebration

Sidlaghatta : ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.

ಈದ್ ಮಿಲಾದ್ ಹಬ್ಬದ ಅಂಗವಾಗಿ ಮನೆಗಳಲ್ಲಿ ಸಿಹಿ ಪದಾರ್ಥ ತಯಾರಿಸಿ ಪರಸ್ಪರ ನೆರೆಹೊರೆಯವರಿಗೆ ಹಂಚಲಾಗುತ್ತದೆ. ಪ್ರಮುಖ ಮಸೀದಿ ಹಾಗೂ ದರ್ಗಾಗಳಲ್ಲಿ ದಾನಿಗಳು ಊಟ ಮಾಡಿಸುವುದು ಸಂಪ್ರದಾಯ. ಇಸ್ಲಾಮಿನ ರಬಿವುಲ್ ಅವ್ವಲ್ ತಿಂಗಳಲ್ಲಿ ಈ ಹಬ್ಬ ಬರುವ ಕಾರಣ ಒಂದು ತಿಂಗಳ ಕಾಲ ಮಸೀದಿಗಳಲ್ಲಿ ಮೌಲಿದ್ ಪಾರಾಯಣ (ಮುಹಮ್ಮದ್ ಫೈಗಂಬರ್ ಅವರ ಕೀರ್ತನೆ) ಮಾಡಲಾಗುತ್ತಿದೆ.

ಶುಕ್ರವಾರ ತಾಲ್ಲೂಕಿನಾದ್ಯಂತ ಈದ್-ಮಿಲಾದ್ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಮಹಮದ್ ಪೈಗಂಬರ್ ಜನ್ಮದಿನದಂದು ಸಂಭ್ರಮದಿಂದ ಆಚರಿಸಲಾಗುವ ಈ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳನ್ನು ಹಾಗೂ ಹಲವು ಸ್ಥಳಗಳನ್ನು ಅಲಂಕರಿಸಲಾಗಿತ್ತು.

ಹಬ್ಬದ ನಿಮಿತ್ತ ಎಲ್ಲಾ ಬಡಾವಣೆಗಳ ಪ್ರಮುಖ ಮಸೀದಿಗಳಿಂದ ಮುಹಮ್ಮದ್ ಫೈಗಂಬರ್ ಅವರ ಜನ್ಮಸ್ಥಳ ಮೆಕ್ಕಾ ಹಾಗೂ ಇಸ್ಲಾಂ ಪ್ರಚಾರ ಅರಂಭಿಸಿದ ಮದೀನಾ ನಗರಗಳ ಸ್ಥಬ್ದ ಚಿತ್ರದ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಮುಹಮ್ಮದ ಅವರ ಕುರಿತ ನಾತೆ, ಕವ್ವಾಲಿಗಳು ಹಾಡಲಾಗುತ್ತಿತ್ತು.

ಮನೆಗಳಲ್ಲಿ ಮಹಿಳೆಯರು ಸಿಹಿ ತಿಂಡಿಗಳನ್ನು ತಯಾರಿಸಿ ವಿತರಿಸಿದರು. ಕಿರಿಯರು ಮತ್ತು ಹಿರಿಯರು ಹೊಸ ಉಡುಪುಗಳನ್ನು ತೊಟ್ಟು ಸಂತಸಪಟ್ಟರು. ಮೆರವಣಿಗೆ ಹಾಗೂ ಸಾಮೂಹಿಕ ಪ್ರಾರ್ಥನೆಯನ್ನು ಈದ್ಗಾ ಮೈದಾನದಲ್ಲಿ ನಡೆಸಲಾಯಿತು.

“ಪ್ರವಾದಿ ಮುಹಮ್ಮದ್ ಅವರು ಬಡವರ ಹಾಗೂ ಹಸಿವಿಗೆ ಹೆಚ್ಚಿನ ಮಹತ್ವ ನೀಡಿದ ಕಾರಣ ಹಬ್ಬದಂದು ಅನ್ನ ಸಂತರ್ಪಣೆ ಮಾಡುವುದು ಸಂಪ್ರದಾಯ. ಉಳ್ಳವರು ಮಸೀದಿಗಳಲ್ಲಿ ಊಟ ಮಾಡಿಸುವುದು ಹಾಗೂ ಬಡವರಿಗೆ ಬಟ್ಟೆ, ನಗದು ದಾನ ಮಾಡುವ ಸಂಪ್ರದಾಯವೂ ಇದೆ. ಅವರ ಅನುಯಾಯಿ ಮುಸ್ಲಿಮರೆಲ್ಲರೂ ಈ ಸಂಪ್ರದಾಯ ಪಾಲನೆ ಮಾಡುತ್ತಾ ಬಂದಿದ್ದಾರೆ” ಎಂದು ಮೆಹಬೂಬ್ ಪಾಷ ತಿಳಿಸಿದರು.

“ಮಿಲಾದ್ ಅಂದರೆ ಹುಟ್ಟು, ಪ್ರವಾದಿ ಮುಹಮ್ಮದ್ ಅವರ ಹುಟ್ಟಿದ ದಿನವನ್ನು ಹಬ್ಬದ ಆಚರಣೆ ಮಾಡಲಾಗುತ್ತದೆ. ಮನೆ, ಮಸೀದಿಗಳ ಅಲಂಕಾರ ವಿಶೇಷವಾಗಿರುತ್ತದೆ. ಹೀಗಾಗಿ ಹಲವರು ಮದರಸಾಗಳ ಮಕ್ಕಳಿಗೆ ಹಾಗೂ ಬಡ ಜನರಿಗೆ ಬಟ್ಟೆದಾನ ಮಾಡಿದ್ದಾರೆ. ಹಬ್ಬದ ಆಚರಣೆಯ ಒಟ್ಟು ಉದ್ದೇಶ ಪರಸ್ಪರ ಸಹೋದರತೆ, ಪರಧರ್ಮ ಸಹಿಷ್ಣುತೆ, ಮಾನವೀಯ ಮೌಲ್ಯಗಳನ್ನು ತಿಳಿಸುವುದಾಗಿದೆ” ಎಂದು ಅವರು ಹೇಳಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-05/09/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 05/09/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 306
Qty: 17143 Kg
Mx : ₹ 732
Mn: ₹ 132
Avg: ₹ 634

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 15
Qty: 1014 Kg
Mx : ₹ 805
Mn: ₹ 561
Avg: ₹ 749


For Daily Updates WhatsApp ‘HI’ to 7406303366

ಎಚ್.ಎಸ್. ರುದ್ರೇಶಮೂರ್ತಿಗೆ ರಾಜೀವ್‌ಗಾಂಧಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗೌರವ

0
Sugaturu govt school teacher H S Rudreshmurthy Best Teacher Award

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಅವರು ಪ್ರಸಕ್ತ ಸಾಲಿನ ರಾಜೀವ್‌ಗಾಂಧಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸೆಪ್ಟೆಂಬರ್ 5ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಕೆಪಿಸಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಶಿಕ್ಷಣ ಸಚಿವ ಮಧುಬಂಗಾರಪ್ಪ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಹಲವು ಸಚಿವರು, ಶಾಸಕರು ಹಾಜರಿರಲಿದ್ದಾರೆ.

ಬಹುಮುಖ ಪ್ರತಿಭೆಯ ಅಧ್ಯಾಪಕರಾಗಿರುವ ಎಚ್.ಎಸ್. ರುದ್ರೇಶಮೂರ್ತಿ ಅವರು ಕೃತಕ ಬುದ್ಧಿಮತ್ತೆಯ ಬಳಕೆ, ಇ-ಕಂಟೆಂಟ್ ತಯಾರಿ, ಆಡಿಯೋ-ವೀಡಿಯೋ ಪಾಠ ಸೃಷ್ಟಿ, ಕಲಿಕಾಫಲಾಧಾರಿತ ಪ್ರಶ್ನೆಪತ್ರಿಕೆ ತಯಾರಿ ಮತ್ತು ಮೌಲ್ಯಾಂಕನ ಸಾಮಗ್ರಿಗಳ ರೂಪಿಕರಣದಲ್ಲಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಶಿಕ್ಷಕಪರ್ವ, ನಿಷ್ಟಾ, ದೀಕ್ಷಾ ಮೊದಲಾದ ಕಾರ್ಯಕ್ರಮಗಳಿಗೆ ಸಂಪನ್ಮೂಲ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಶಿಕ್ಷಕರ ತರಬೇತಿ ಕಾರ್ಯಾಗಾರಗಳಲ್ಲಿ ಸಾಹಿತ್ಯ ರಚನೆ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಕೊಡುಗೆ ನೀಡಿರುವ ಅವರು, ಸಾಹಿತ್ಯ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಶಾಲೆಯ ಭೌತಿಕ ಮತ್ತು ಶೈಕ್ಷಣಿಕ ವಾತಾವರಣ ಸುಧಾರಿಸಲು ವಿಶೇಷ ಗಮನ ಹರಿಸಿರುವ ಅವರು, ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಮಾರ್ಗದರ್ಶನ ನೀಡಿ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಿದ್ದಾರೆ.

“ಏಕ್ ಭಾರತ್ ಶ್ರೇಷ್ಟ ಭಾರತ್”, “ಮಿಷನ್ ಲೈಫ್ ಇಕೋ ಕ್ಲಬ್”, “ಜಲಶಕ್ತಿ ಅಭಿಯಾನ್” ಮೊದಲಾದ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ರುದ್ರೇಶಮೂರ್ತಿ, ‘ಹಸಿರು ಸುಗಟೂರು’ ಅಭಿಯಾನದಡಿ ಮನೆಮನೆಗೆ ಸಸಿ ವಿತರಿಸಿ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ಕೆ ರಾಜ್ಯಮಟ್ಟದಲ್ಲಿ ಮೆಚ್ಚುಗೆ ಪಡೆದಿದ್ದಾರೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

0
Sidlaghatta Dolphins PU College Students Sports State Level

Sidlaghatta : ಚಿಂತಾಮಣಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟದಲ್ಲಿ ಶಿಡ್ಲಘಟ್ಟದ ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ವಿವಿಧ ವೈಯಕ್ತಿಕ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಇವರಲ್ಲಿ ಹಲವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿನಿ ನಯನ 400 ಮೀಟರ್ ಓಟ ಹಾಗೂ ಕರಾಟೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕುಮಾರಿ ರಿಹಾನ ಕರಾಟೆ ಮತ್ತು ಜೂಡೋ ಸ್ಪರ್ಧೆಗಳಲ್ಲಿ ಸ್ಥಾನ ಗಳಿಸಿ ರಾಜ್ಯಮಟ್ಟ ಪ್ರವೇಶ ಪಡೆದಿದ್ದಾಳೆ. ವಿಷ್ಣು ಸ್ಕಂದ ಬಾಲಕರ ಬಾಕ್ಸಿಂಗ್‌ನಲ್ಲಿ ಮತ್ತು ಮೊಹಮ್ಮದ್ ಅವೆಝ್ 80 ಕೆ.ಜಿ. ವಿಭಾಗದ ಪವರ್ ಲಿಪ್ಟಿಂಗ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸಲಿದ್ದಾರೆ ಎಂದು ಕಾಲೇಜಿನ ಕ್ರೀಡಾ ತರಬೇತುದಾರ ಸಂಪತ್ ಕುಮಾರ್ ತಿಳಿಸಿದ್ದಾರೆ.

ಡಾಲ್ಫಿನ್ಸ್ ವಿಧ್ಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್. ಅಶೋಕ್, ಆಡಳಿತಾಧಿಕಾರಿ ಚಂದನಾ ಅಶೋಕ್ ಹಾಗೂ ಪ್ರಾಂಶುಪಾಲ ಡಾ. ಎನ್. ಶ್ರೀನಿವಾಸಮೂರ್ತಿ ವಿದ್ಯಾರ್ಥಿಗಳನ್ನು ಅಭಿನಂದಿಸಿ, ರಾಜ್ಯಮಟ್ಟದಲ್ಲಿಯೂ ಉನ್ನತ ಸಾಧನೆ ಮಾಡುವಂತೆ ಹಾರೈಸಿದ್ದಾರೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

ಶಿಡ್ಲಘಟ್ಟ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಬೆಳೆಗಾರರಿಗೆ ಅತ್ಯುತ್ತಮ ಬೆಲೆ

0
Sidlaghatta Cocoon Market Highest Price

Sidlaghatta : ಹವಾಮಾನದ ವೈಪರಿತ್ಯ ಹಾಗೂ ವಾತಾವರಣದಲ್ಲಿ ಏರುಪೇರುವಿನ ನಡುವೆಯೇ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಬೆಲೆ ಏರಿಕೆ ಕಂಡಿದೆ. ರೇಷ್ಮೆ ಬೆಳೆಗಾರರೊಬ್ಬರು ಬೆಳೆದ ದ್ವಿತಳಿ ರೇಷ್ಮೆ ಗೂಡು 813 ರೂಗಳಿಗೆ ಗುರುವಾರ ಮಾರಾಟ ಮಾಡುವ ಮೂಲಕ ಈ ವರ್ಷದ ಅತ್ಯಧಿಕ ಬೆಲೆ ಎಂದು ದಾಖಲೆ ಬರೆದಿದ್ದಾರೆ.

ಹೊಸಕೋಟೆ ತಾಲ್ಲೂಕಿನ ಮಾರಸಂಡಹಳ್ಳಿಯ ಕೆಂಪಣ್ಣ ಎಂಬ ರೇಷ್ಮೆ ಬೆಳೆಗಾರ ಶಿಡ್ಲಘಟ್ಟದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ತಾವು ಬೆಳೆದಿರುವ ಬೈವೋಲ್ಟೀನ್ ಗೂಡನ್ನು ಒಂದು ಕೇ.ಜಿ ಗೆ 813 ರೂಗಳಿಗೆ ಮಾರಾಟ ಮಾಡುವ ಮೂಲಕ ಅತ್ಯಧಿಕ ಧಾರಣೆ ಎಂಬ ದಾಖಲೆಯನ್ನು ಮಾಡಿದ್ದಾರೆ. ಅವರು 215 ಮೊಟ್ಟೆಗಳಿಂದ 207 ಕೇ.ಜಿ ರೇಷ್ಮೆ ಗೂಡನ್ನು ಬೆಳೆದು ಮಾರುಕಟ್ಟೆಗೆ ತಂದಿದ್ದರು. ಈ ಗೂಡನ್ನು ಸಯ್ಯದ್ ಇನಾಯತ್ತುಲ್ಲ ಎಂಬ ರೀಲರ್ ಖರೀದಿಸಿದ್ದಾರೆ.

ಕೋಲಾರ ತಾಲ್ಲೂಕು ಮೇಡಿಹಾಳದ ಮುರಳಿ ಎಂಬ ರೇಷ್ಮೆ ಬೆಳೆಗಾರ ತಂದಿದ್ದ ಬೈವೋಲ್ಟೀನ್ ಗೂಡು, ಒಂದು ಕೇ.ಜಿ ಗೆ 738 ರೂಗಳಿಗೆ ಮಾರಾಟವಾಗಿ ಎರಡನೇ ಅತ್ಯಧಿಕ ಬೆಲೆ ಎಂದು ದಾಖಲಾಗಿದೆ. ಅವರು 250 ಮೊಟ್ಟೆಗಳಿಂದ 225 ಕೇ.ಜಿ ರೇಷ್ಮೆ ಗೂಡನ್ನು ಬೆಳೆದು ಮಾರುಕಟ್ಟೆಗೆ ತಂದಿದ್ದರು. ಈ ಗೂಡನ್ನು ಮೆಹಬೂಬ್ ಖಾನ್ ಎಂಬ ರೀಲರ್ ಖರೀದಿಸಿದ್ದಾರೆ.

“ರೇಷ್ಮೆ ಬೆಳೆಗಾರರು ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬಂದು ಗೂಡು ಮಾರಾಟ ಮಾಡಿ ಅಧಿಕ ದರ ಪಡೆಯಬೇಕು, ಜೊತೆಗೆ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು. ಮಾರಿದ ರೈತರಿಗೆ ಹಾಗೂ ಕೊಂಡ ರೀಲರಿಗೆ ಇಲಾಖೆಯ ವತಿಯಿಂದ ಪ್ರಮಾಣಪತ್ರವನ್ನು ನೀಡಿದ್ದೇವೆ” ಎಂದು ರೇಷ್ಮೆ ಉಪನಿರ್ದೇಶಕ ಎನ್.ಉಮೇಶ್ ತಿಳಿಸಿದರು.

ರೇಷ್ಮೆ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ವಿಸ್ತರಣಾಧಿಕಾರಿ ಶ್ರೀನಿವಾಸ್, ನಿರೀಕ್ಷಕರಾದ ರಮೇಶ್ ರಾಥೋಡ್, ವಿ.ಸಿ.ಬಾಬು, ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್, ರೀಲರುಗಳಾದ ಫೈರೋಸ್ ಪಾಷ, ನಬೀ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-04/09/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 04/09/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 305
Qty: 16007 Kg
Mx : ₹ 738
Mn: ₹ 401
Avg: ₹ 653

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 04
Qty: 272 Kg
Mx : ₹ 813
Mn: ₹ 716
Avg: ₹ 789


For Daily Updates WhatsApp ‘HI’ to 7406303366

ಶಿಡ್ಲಘಟ್ಟ ತಾಲ್ಲೂಕಿನ ಮೂವರು ಶಿಕ್ಷಕಿಯರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

0
Sidlaghatta Taluk Best Teacher Award 2025

Sidlaghatta : ಶಿಕ್ಷಕರ ದಿನಚರಣೆ ಅಂಗವಾಗಿ ಕೊಡುವ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲ್ಲೂಕಿನ ಮೂವರು ಶಿಕ್ಷಕರು ಭಾಜನರಾಗಿದ್ದಾರೆ.

ಕಿರಿಯ ಪ್ರಥಮಿಕ ಶಾಲಾ ವಿಭಾಗದಿಂದ ಆಮೂರತಿಮ್ಮನಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ನಾಗರತ್ನಮ್ಮ, ಹಿರಿಯ ಪ್ರಥಮಿಕ ವಿಭಾಗದಿಂದ ಸುಗಟೂರು ಸರ್ಕಾರಿ ಶಾಲೆಯ ಶಿಕ್ಷಕಿ ಎಚ್.ತಾಜೂನ್, ಪ್ರೌಢಶಾಲಾ ವಿಭಾಗದಿಂದ ಮುತ್ತೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಕೆ.ಬೃಂದ ಆಯ್ಕೆಯಾಗಿದ್ದಾರೆ.

ಶಿಕ್ಷಕಿ ನಾಗರತ್ನಮ್ಮ ಅವರು ಸುಮರು 6 ವರ್ಷಗಳ ಕಾಲ ತಿಮ್ಮನಾಯ್ಕನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು ಕಳೆದ 23 ವರ್ಷಗಳಿಂದ ಆಮೂರತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಲಿಕಲಿ ಮಕ್ಕಳಿಗೆ ಚಟುವಟಿಕೆ ಆಧಾರಿತ ಕಲಿಕೆಗೆ ಒತ್ತು ನೀಡಿ ದಾಖಲಾತಿ ಹೆಚ್ಚಳ, ದಾನಿಗಳಿಂದ ಶಾಲೆಗೆ ಬೇಕಾದ ಟಿ.ವಿ, ಪೀಠೋಪಕರಣಗಳನ್ನು ಕಲ್ಪಿಸಿಕೊಡುವಲ್ಲಿ ಶ್ರಮಿಸಿದ್ದಾರೆ.

ಶಿಕ್ಷಕಿ ಎಚ್.ತಾಜೂನ್ ಅವರು ಆರು ವರ್ಷಗಳ ಕಾಲ ಪೆರೇಸಂದ್ರದ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದು, ಕಳೆದ 20 ವರ್ಷಗಳಿಂದ ಸುಗಟೂರು ಸರ್ಕರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ 1 ರಿಂದ 5 ನೇ ತರಗತಿ ಮಕ್ಕಳಿಗೆ ನಲಿ-ಕಲಿ ವಿಧಾನದಲ್ಲಿ ಬೋಧಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

ಶಿಕ್ಷಕಿ ಕೆ.ಬೃಂದ ಅವರು ಕಳೆದ 15 ವರ್ಷಗಳಿಂದ ಮುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕಿಯಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎನ್‌.ಟಿ.ಎಸ್‌.ಈ ಮತ್ತು ಎನ್‌.ಎಂ.ಎಂ.ಎಸ್ ಪರೀಕ್ಷಾ ತರಬೇತಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇ-ಕಂಟೆಂಟ್ ತಯಾರಿ ಸೇರಿದಂತೆ ವಿವಿಧ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಗಿ ಭಾಗವಹಿಸಿದ್ದಾರೆ. ವಿಜ್ಞಾನಸಂಘದ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ವೃದ್ಧಿಸುತ್ತಿದ್ದು, ದಾನಿಗಳಿಂದ ಕಲಿಕೆಗಾಗಿ ಬೆಳಕು ಕಾರ್ಯಕ್ರಮದಡಿ ವಿದ್ಯುತ್‌ದೀಪಗಳನ್ನು ಕೊಡಿಸಿದ್ದಾರೆ. ಗ್ರಾಮಾಂತರ ಟ್ರಸ್ಟ್ ಸಹಕಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿವರ್ಷವೂ 1.5 ಲಕ್ಷ ರೂಗೂ ಹೆಚ್ಚು ವಿದ್ಯಾರ್ಥಿವೇತನ ಕೊಡಿಸುತ್ತಿದ್ದಾರೆ. ಎಸ್‌.ಎಸ್‌.ಎಲ್‌.ಸಿ ಪ್ರಶ್ನೆಕೋಠಿ ಮತ್ತು ಪಾಸಿಂಗ್ ಪ್ಯಾಕೇಜ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ವೇತನ ಪಾವತಿಸಿಲ್ಲವೆಂದು ಆರೋಪಿಸಿ, ಕಾರ್ಮಿಕರ ಪ್ರತಿಭಟನೆ

0
Sidlaghatta jangamakote unpaid Garments workers protest

Jangamakote, Sidlaghatta : ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡದೇ ಸತಾಯಿಸುತ್ತಿದ್ದಾರೆ. ಮಾಲೀಕರಿಗೆ ಕರೆ ಮಾಡಿದರೆ ಅವರು ಸ್ವೀಕಾರ ಮಾಡುತ್ತಿಲ್ಲ ಎಂದು ಗಾರ್ಮೆಂಟ್ಸ್ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಜಂಗಮಕೋಟೆ ಕ್ರಾಸ್ ನಲ್ಲಿರುವ ಗೋಲ್ಡನ್ ಥ್ರೆಡ್ಸ್ ಗಾರ್ಮೆಂಟ್ಸ್ ನಲ್ಲಿ 150 ಕ್ಕೂ ಹೆಚ್ಚು ಮಂದಿ ಮಹಿಳಾ ಕಾರ್ಮಿಕರು ಸಿದ್ಧ ಉಡುಪುಗಳು ತಯಾರಿಕೆ ಮಾಡುವ ಕೆಲಸ ಮಾಡುತ್ತಿದ್ದೇವೆ. ನಮಗೆ ಮೂರು ತಿಂಗಳಿನಿಂದ ವೇತನ ಕೊಟ್ಟಿಲ್ಲ. ನಾವು ಹಲವಾರು ಬಾರಿ ಕೇಳಿದರೂ ನಮಗೆ ಸ್ಪಂದನೆ ನೀಡುತ್ತಿಲ್ಲ.

ಕಾರ್ಮಿಕರು ಹಾಗೂ ಇಲ್ಲಿನ ಸಿಬ್ಬಂದಿಯವರೆಲ್ಲರೂ ಶಿಡ್ಲಘಟ್ಟಕ್ಕೆ ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಹೋದಾಗ ಅವರು ದೂರು ಸ್ವೀಕರಿಸಲಿಲ್ಲ. ಕಾರ್ಖಾನೆಯ ಮಾಲೀಕರೊಂದಿಗೆ ಮಾತನಾಡಿ, ಎರಡು ಕಂತುಗಳಲ್ಲಿ ವೇತನ ನೀಡುವುದಾಗಿ ಭರವಸೆ ನೀಡಿ, 9 ಲಕ್ಷ ರೂಪಾಯಿಗಳ ಚೆಕ್ ಕೊಟ್ಟಿದ್ದರು. ಈ ಚೆಕ್ಕನ್ನು ಬ್ಯಾಂಕಿನಲ್ಲಿ ಕೊಟ್ಟರೆ ಹಣವಿಲ್ಲವೆಂದು ವಾಪಸ್ಸು ಕಳುಹಿಸಿದ್ದಾರೆ. ಚೆಕ್ ಬೌನ್ಸ್ ಆಗಿದೆ.

ನಾವು ಇದನ್ನೇ ನಂಬಿಕೊಂಡು ನೂರಾರು ಮಂದಿ ಜೀವನ ನಡೆಸುತ್ತಿದ್ದೇವೆ. ಒಬ್ಬೊಬ್ಬರಿಗೆ ತಿಂಗಳಿಗೆ 11 ಸಾವಿರದಂತೆ 33 ಸಾವಿರ ಕೊಡಬೇಕು. ನಮಗೆ ಅರ್ಧ ಸಂಬಳವನ್ನಾದರೂ ಕೊಡಿ ಎಂದು ಅಂಗಲಾಚಿಕೊಂಡರೂ ಅವರು, ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ನಾವು ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಆದ್ದರಿಂದ ನಾವು, ಕಾರ್ಖಾನೆಯಲ್ಲಿ ಉತ್ಪಾದನೆ ಮಾಡಿರುವ ಉತ್ಪನ್ನ ಸಹಿತ ಕಾರ್ಖಾನೆಗೆ ಬೀಗ ಹಾಕಿದ್ದೇವೆ.

ಪೊಲೀಸರೂ ಮಾಲೀಕರ ಬಳಿಯಲ್ಲಿ ನಡೆಸುತ್ತಿರುವ ಮಾರುಕತೆಗಳು ವಿಫಲವಾಗಿವೆ. ರಾತ್ರೋ ರಾತ್ರಿ ಕಾರ್ಖಾನೆಯನ್ನು ಖಾಲಿ ಮಾಡಿಕೊಂಡು ಹೋದರೆ ನಾವೆಲ್ಲಿಗೆ ಹೋಗಬೇಕು? ನಮ್ಮ ಮಕ್ಕಳ ಭವಿಷ್ಯದ ಕನಸು ಇಟ್ಟುಕೊಂಡು ನಾವು ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದೇವೆ. ವೇತನವನ್ನೂ ಕೊಡದೇ ಹೀಗೆ ಸತಾಯಿಸಿದರೆ ನಾವು ಬದುಕುವುದು ಹೇಗೆ ಎಂದು ಕಾರ್ಮಿಕ ಮಹಿಳೆ ಮಧು ಆಕ್ರೋಶ ವ್ಯಕ್ತಪಡಿಸಿದರು.

ಈ ಕಾರ್ಖಾನೆಯನ್ನು ನಡೆಸುತ್ತಿರುವ ಮಾಲೀಕರಿಗೆ ನಾವು ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಇಲ್ಲಿನ ಕೆಲ ಯಂತ್ರೋಪಕರಣಗಳನ್ನು ಬೇರೆ ಕಡೆಗೆ ಸಾಗಿಸಿಬಿಟ್ಟಿದ್ದಾರೆ. ಈಗ ಪೊಲೀಸರ ಮೂಲಕ ನಮ್ಮಿಂದ ಬೀಗವನ್ನು ತೆಗೆದುಕೊಂಡಿದ್ದಾರೆ. ಬೀಗವನ್ನು ಇಟ್ಟುಕೊಂಡು,ಒಳಗಿರುವ ಉತ್ಪನ್ನಗಳನ್ನೂ ಹೊತ್ತುಕೊಂಡು ಹೋದರೆ, ನಮಗೆ ಬಾಕಿ ವೇತನ ಕೊಡುವವರು ಯಾರು? ನಮ್ಮ ಕೆಲಸದ ಗತಿಯೇನು? ನಾವು ಇಷ್ಟು ವರ್ಷಗಳ ಇಲ್ಲಿ ಕೆಲಸ ಮಾಡಿ, ಪುನಃ ಎಲ್ಲಿಗೆ ಹೋಗಬೇಕು ಎಂದು ಕೆಲ ಕಾರ್ಮಿಕ ಮಹಿಳೆಯರು ಅಲವತ್ತುಕೊಂಡರು.

ರಸ್ತೆ ಬಂದ್ ಮಾಡಲು ಮುಂದಾಗಿದ್ದ ಮಹಿಳೆಯರು: ಗಾರ್ಮೆಂಟ್ಸ್ ನ ಮಾಲೀಕರು, ನಮ್ಮ ಕೂಗಿಗೆ ಸ್ಪಂದಿಸುತ್ತಿಲ್ಲ. ನಮಗೆ ನ್ಯಾಯ ಕೊಡುವವರೂ ಇಲ್ಲ ಎಂದು ಆಕ್ರೋಶಗೊಂಡ ಕಾರ್ಮಿಕರು, ಮುಖ್ಯರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟಿಸಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಕಾರ್ಮಿಕರನ್ನು ಮನವೊಲಿಸಿ, ರಸ್ತೆಯಿಂದ ತೆರವುಗೊಳಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ರಾಜಕಾಲುವೆ ಆಸುಪಾಸು ಕಲ್ಲು ಚಪ್ಪಡಿ ಮೋರಿ ತೆರವಿಗೆ ಸ್ಥಳೀಯರಿಂದ ಅಡ್ಡಿ

0
Sidlaghatta Rajakaluve expansion protest

Sidlaghatta : ಶಿಡ್ಲಘಟ್ಟ ನಗರದ ಟೋಲ್‌ ಗೇಟ್ ಬಳಿ ಹಾದು ಹೋಗಿರುವ ರಾಜಕಾಲುವೆಗೆ ಸಿಮೆಂಟ್ ತಡೆಗೋಡೆ ನಿರ್ಮಿಸುವುದಕ್ಕಾಗಿ ಕಾಲುವೆಯಲ್ಲಿನ ಹೂಳೆ ತ್ಯಾಜ್ಯ ತೆಗೆದು ಕಾಲುವೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ರಾಜಕಾಲುವೆ ಆಸು ಪಾಸು ವಾಸಿಗಳು ಸಂಚರಿಸಲು ಅನುಕೂಲ ಆಗುವಂತೆ ಮೋರಿ ನಿರ್ಮಿಸಿಕೊಡಲು ಸ್ಥಳೀಯರು ಆಗ್ರಹಿಸಿದರು.

ಟೋಲ್‌ ಗೇಟ್ ಬಳಿ ರಾಜಕಾಲುವೆಯ ಒಂದು ಬದಿ ಎಂಟತ್ತು ಮನೆಗಳಿದ್ದು ಅಲ್ಲಿರುವ ಕಲ್ಲು ಚಪ್ಪಡಿಗಳಿಂದ ನಿರ್ಮಿಸಿದ್ದ ಮೋರಿಯ ಮೇಲೆ ಅಲ್ಲಿನವರು ಓಡಾಡುತ್ತಿದ್ದರು. ಆದರೆ ರಾಜಕಾಲುವೆ ಅಗಲೀಕರಣ ಮತ್ತು ಹೂಳು ಮಣ್ಣು ತೆಗೆಯುವಾಗ ಅದನ್ನು ತೆಗೆದು ಹಾಕಲಾಗುತ್ತದೆ ಎನ್ನಲಾಗಿದೆ.

ಇದರಿಂದ ಆತಂಕಗೊಂಡ ಸ್ಥಳೀಯರು ನಗರಸಭೆ ಪೌರಾಯುಕ್ತೆ ಜಿ.ಅಮೃತ ಅವರಿಗೆ ಮನವಿ ಸಲ್ಲಿಸಿದ ಹಿನ್ನಲೆ ಪೌರಾಯುಕ್ತರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯರ ಅಹವಾಲು ಆಲಿಸಿದರು.

ಈ ವೇಳೆ ಸ್ಥಳೀಯವಾಸಿ ಹಾಗೂ ಕೇಂದ್ರ ಟೆಲಿಕಾಂ ಸಲಹಾ ಸಮಿತಿ ಮಾಜಿ ಸದಸ್ಯ ವೆಂಕಟೇಶ್ ಮಾತನಾಡಿ, ರಾಜಕಾಲುವೆ ಪಕ್ಕ ಜಮೀನುಗಳಿದ್ದು ಇಲ್ಲಿ ನಮ್ಮಪ್ಪ ತಾತನ ಕಾಲದಿಂದಲೂ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದೇವೆ. ನಗರಸಭೆಯವರೆ ನಿರ್ಮಿಸಿಕೊಟ್ಟಿದ್ದ ಕಲ್ಲು ಚಪ್ಪಡಿಗಳ ಮೋರಿ ಮೇಲೆ ಓಡಾಡುತ್ತಿದ್ದೇವೆ ಎಂದರು.

ಆದರೆ ಇದೀಗ ರಾಜ ಕಾಲುವೆಗೆ ಸಿಮೆಂಟ್ ತಡೆಗೋಡೆ ನಿರ್ಮಿಸಲು ಹೂಳು ತೆಗೆಯುವ ಕಾಮಗಾರಿ ನಡೆಯುತ್ತಿದ್ದು ಕಲ್ಲು ಚಪ್ಪಡಿಗಳ ಮೋರಿ ತೆಗೆದು ಹಾಕಿದ ಮೇಲೆ ಮತ್ತೆ ಮೋರಿ ನಿರ್ಮಿಸುವುದಿಲ್ಲ ಎಂದು ವಾರ್ಡಿನ ಸದಸ್ಯ ರಾಘವೇಂದ್ರ ಅವರು ಹೇಳಿದ್ದಾರೆ.

ಮೋರಿ ನಿರ್ಮಿಸಿಲ್ಲವಾದರೆ ನಾವು ಓಡಾಡುವುದು ಹೇಗೆ? ದನಕರುಗಳಿಗೆ ಮೇವು ಸಾಗಿಸುವುದು ಹೇಗೆ? ಬದುಕು ನಡೆಸುವುದಾದರೂ ಹೇಗೆಂದು ಪೌರಾಯುಕ್ತರನ್ನು ಪ್ರಶ್ನಿಸಿ ನಮಗೆ ಮೋರಿ ನಿರ್ಮಿಸಿ ಓಡಾಡಲು ಅನುಕೂಲ ಮಾಡಿಕೊಡುವುದಾದರೆ ಮಾತ್ರ ಈಗಿರುವ ಕಲ್ಲು ಚಪ್ಪಡಿ ಮೋರಿ ಕಿತ್ತು ಹೂಳು ತ್ಯಾಜ್ಯ ತೆಗೆಯಲು ಬಿಡುತ್ತೇವೆ ಇಲ್ಲವಾದರೆ ಬಿಡೊಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತೆ ಜಿ.ಅಮೃತ ಅವರು ಈ ಜಮೀನುಗಳು ನಗರಸಭೆಗೆ ಸೇರಿಲ್ಲ. ನೀವು ಕಟ್ಟಿರುವ ಮನೆಗಳು ನಗರಸಭೆ ವ್ಯಾಪ್ತಿಗೂ ಬರುವುದಿಲ್ಲ. ರಾಜಕಾಲುವೆ ಮೇಲೆ ಮೋರಿ ನಿರ್ಮಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ನಮಗೂ ಅಧಿಕಾರವಿಲ್ಲ. ಬೇಕಾದರೆ ಮನವಿ ಕೊಡಿ ನಾವು ಡಿಸಿಗೆ ಬರೆಯುತ್ತೇವೆ ಎಂದರು.

ಇದರಿಂದ ಕುಪಿತಗೊಂಡ ವೆಂಕಟೇಶ್ ಮತ್ತು ಇನ್ನಿತರೆ ಸ್ಥಳೀಯರು ಈ ರಾಜಕಾಲುವೆ ಇಡೀ ನಗರದಲ್ಲಿ ಸುಮಾರು 2-3 ಕಿ.ಮೀ. ದೂರ ಹಾದು ಹೋಗಿದೆ. ಅಲ್ಲೆಲ್ಲಾ ಮೋರಿ ಹೇಗೆ ನಿರ್ಮಿಸಿದ್ದೀರಿ, ರಾಜ ಕಾಲುವೆ ಮೇಲೆ ಮನೆ ಅಂಗಡಿ ಕಾಂಪ್ಲೆಕ್ಸ್‌ಗಳು ಕಟ್ಟಿದ್ದರೂ ಅವುಗಳಿಗೆ ಅನುಮತಿ ಹೇಗೆ ಕೊಟ್ಟಿದ್ದೀರಿ.

ನಮಗೆ ಮಾತ್ರ ಮೋರಿ ಕಟ್ಟಲು ಆಗೊಲ್ಲ ಅಧಿಕಾರ ಇಲ್ಲ ಎನ್ನುತ್ತೀರಿ. ಶ್ರೀಮಂತರಿಗೆ ಒಂದು ಬಡವರಿಗೆ ಒಂದು ನ್ಯಾಯವಾ ಎಂದು ಪೌರಾಯುಕ್ತರೊಂದಿಗೆ ವಾಗ್ವಾದಕ್ಕೆ ಇಳಿದರು. ನಗರದಲ್ಲಿ ಎಲ್ಲೆಲ್ಲಿ ರಾಜಕಾಲುವೆ ಮೇಲೆ ಮೋರಿ ರಸ್ತೆ ಇದೆಯೋ ಅವೆಲ್ಲವನ್ನೂ ತೆರೆವುಗೊಳಿಸಿ ನಮ್ಮದೂ ತೆರವುಗೊಳಿಸಿ. ಅದು ಬಿಟ್ಟು ನಮ್ಮ ಮೋರಿ ಮಾತ್ರ ತೆರವುಗೊಳಿಸಲು ಬಿಡೊಲ್ಲ ಎಂದು ಪಟ್ಟು ಹಿಡಿದು ವಾದಕ್ಕಿಳಿದರು.

ಕೊನೆಗೆ ಈ ಬಗ್ಗೆ ನಗರೋತ್ಥಾನ ಯೋಜನೆಯ ಇಂಜಿನಿಯರ್‌ ಗಳು ಹಾಗೂ ಪಿಡಿ ಅವರ ಗಮನಕ್ಕೆ ತರುತ್ತೇನೆ. ಅವರು ನೀಡುವ ಸೂಚನೆ ಮಾರ್ಗದರ್ಶನದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಅದುವರೆಗೂ ಕೆಲಸಕ್ಕೆ ಯಾರೂ ಅಡ್ಡಿಪಡಿಸಬೇಡಿ ಎಂದು ಪೌರಾಯುಕ್ತೆ ಸ್ಥಳೀಯರಿಗೆ ತಿಳಿಸಿ ಅಲ್ಲಿಂದ ತೆರಳಿದರು.

ನಗರಸಭೆ ಕಂದಾಯ ಅಧಿಕಾರಿ ನಾಗರಾಜ್, ಜೆಇ ಚಕ್ರಪಾಣಿ, ಸ್ಥಳೀಯರಾದ ವೆಂಕಟೇಶ್, ದೇವರಾಜ್, ಭರತ್, ಪಿಳ್ಳಪ್ಪ, ಶ್ರೀನಿವಾಸ್, ನಾಗರಾಜ್ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

error: Content is protected !!