22.1 C
Sidlaghatta
Saturday, December 27, 2025
Home Blog Page 39

ಶಿಡ್ಲಘಟ್ಟ ಕ್ಷೇತ್ರದ ವಿವಿಧ ಸಮಿತಿಗಳಿಗೆ ನಾಮನಿರ್ದೇಶಕರ ನೇಮಕ; ರಾಜೀವ್‌ ಗೌಡ ಬಣಕ್ಕೆ ಮಣೆಹಾಕಿದ ಡಿಕೆಶಿ

0
Sidlaghatta Nominations Withheld by D K Shivakumar

Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ, ಭೂ ನ್ಯಾಯ ಮಂಡಳಿ, ಆಶ್ರಯ ಸಮಿತಿ ಸೇರಿದಂತೆ 16ಕ್ಕೂ ಹೆಚ್ಚು ತಾಲ್ಲೂಕು ಮಟ್ಟದ ವಿವಿಧ ಸಮಿತಿಗಳಿಗೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಿಸುವ ವಿಚಾರವಾಗಿ ಕಾಂಗ್ರೆಸ್‌ನಲ್ಲಿನ ರಾಜೀವ್‌ ಗೌಡ ಮತ್ತು ಪುಟ್ಟು ಆಂಜಿನಪ್ಪ ಬಣಗಳ ಕಿತ್ತಾಟ ರಾಜ್ಯ ಕಾಂಗ್ರೆಸ್‌ ನ ಹೈ ಕಮಾಂಡ್ ಅಂಗಳ ತಲುಪಿದೆ.

ಮಾಜಿ ಸಚಿವ ವಿ.ಮುನಿಯಪ್ಪ ಅವರು ಶಿಫಾರಸ್ಸು ಮಾಡಿರುವ ಆಧಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಹಲವು ಸಮಿತಿಗಳಿಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸುವಂತೆ ಪಟ್ಟಿಗಳನ್ನು ಸಂಬಂಧಿಸಿದ ಸಚಿವರಿಗೆ ಸಲ್ಲಿಸಿ ನೇಮಕಾತಿ ಆದೇಶ ಹೊರಡಿಸಿದ್ದರು.

ಆದರೆ ಇದೀಗ ಆ ಪಟ್ಟಿಗೆ ತಡೆ ನೀಡಿ ಆದೇಶಿಸುವಂತೆ ಸರ್ಕಾರದ ಕಾರ್ಯದರ್ಶಿಗಳಿಗೆ ಕೆಪಿಸಿಸಿ ಅಧ್ಯಕ್ಷರು ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪತ್ರ ಬರೆದು ಸೂಚಿಸಿದ್ದಾರಲ್ಲದೆ ರಾಜೀವ್‌ ಗೌಡ ಅವರು ಶಿಫಾರಸ್ಸು ಮಾಡಿರುವ ಹೆಸರುಗಳ ಪಟ್ಟಿಯನ್ನು ಅಂತಿಮಗೊಳಿಸಿ ನೇಮಕಾತಿ ಮಾಡುವಂತೆ ಸಂಬಂಧಿಸಿದ ಸಚಿವರಿಗೆ ಪತ್ರ ಬರೆದು ಕ್ರಮವಹಿಸಲು ಕೋರಿದ್ದಾರೆ.

ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಮಾಜಿ ಸಚಿವ ವಿ.ಮುನಿಯಪ್ಪ ಹಾಗೂ ಪುಟ್ಟು ಆಂಜಿನಪ್ಪ ಬಣಗಳಿಗೆ ತೀವ್ರ ಮುಖ ಭಂಗವಾಗಿದೆ.

ಕ್ಷೇತ್ರದಲ್ಲಿ ಮಾಜಿ ಸಚಿವ ವಿ.ಮುನಿಯಪ್ಪ, ರಾಜೀವ್‌ ಗೌಡ ಹಾಗೂ ಪುಟ್ಟು ಆಂಜಿನಪ್ಪ ಬಣಗಳಿದ್ದು ವಿವಿಧ ಸಮಿತಿಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಹೆಸರುಗಳನ್ನು ಅಂತಿಮಗೊಳಿಸಲು ಈ ಮೂವರ ನಡುವೆ ಒಮ್ಮತ ಮೂಡದೆ ಇದುವರೆಗೂ ಸಾಧ್ಯವಾಗಿರಲಿಲ್ಲ.

ಪಕ್ಷದ ನಿಯಮದಂತೆ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯಾಗಿದ್ದ ನನ್ನ ಮೂಲಕವೇ ಎಲ್ಲ ಸಮಿತಿಗಳಿಗೂ ನೇಮಕಾತಿಯ ಪಟ್ಟಿ ರವಾನೆ ಆಗಬೇಕೆಂಬುದು ರಾಜೀವ್‌ ಗೌಡ ಅವರ ಪಟ್ಟಾಗಿತ್ತು. ಅದರಂತೆ 16 ಸಮಿತಿಗಳಿಗೂ ಹೆಸರನ್ನು ಸೂಚಿಸಿ ಪಟ್ಟಿಯನ್ನು ಸಲ್ಲಿಸಿದ್ದರು.

ಇನ್ನೊಂದು ಕಡೆ ಪುಟ್ಟು ಆಂಜಿನಪ್ಪ ಅವರು ವಿ.ಮುನಿಯಪ್ಪ ಅವರ ಮೂಲಕ ಹೆಸರುಗಳನ್ನು ನೀಡಿ ಪಟ್ಟಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ರಾಜೀವ್‌ ಗೌಡ ಅವರು ನೀಡಿದ್ದ ಪಟ್ಟಿಯ ಬದಲಿಗೆ ವಿ.ಮುನಿಯಪ್ಪ ಅವರ ಶಿಫಾರಸ್ಸು ಪತ್ರದ ಮೂಲಕ ಪುಟ್ಟು ಆಂಜಿನಪ್ಪ ಸಲ್ಲಿಸಿದ್ದ ಕೆಲವೊಂದು ಸಮಿತಿಗಳ ಪಟ್ಟಿಗೆ ಸರ್ಕಾರದಿಂದ ಅನುಮೋದನೆ ಕೊಡಿಸಿದ್ದರು. ಇದು ರಾಜೀವ್‌ ಗೌಡ ಅವರಿಗೆ ಹಾಗೂ ಅವರ ಬಣದ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯವಾಗಿ ತೀವ್ರ ಚರ್ಚೆಗೂ ವೇದಿಕೆಯಾಗಿದೆ.

ಪಕ್ಷದ ನಿಯಮದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ರಾಜೀವ್‌ಗೌಡ ಅವರು ಶಿಫಾರಸ್ಸು ಮಾಡಿದ್ದ ಹೆಸರುಗಳ ಪಟ್ಟಿಯನ್ನು ಕೈ ಬಿಟ್ಟು ಮಾಜಿ ರಾಜಕಾರಣದಿಂದಲೆ ದೂರ ಸರಿದ ಮಾಜಿ ಸಚಿವ ವಿ.ಮುನಿಯಪ್ಪ ಅವರ ಮೂಲಕ ಪುಟ್ಟು ಆಂಜಿನಪ್ಪ ಬಣದವರು ಶಿಫಾರಸ್ಸು ಮಾಡಿದ ಪಟ್ಟಿಗೆ ಮನ್ನಣೆ ನೀಡಿದ ಸಚಿವ ಡಾ.ಎಂ.ಸಿ.ಸುಧಾಕರ್ ಕ್ರಮಕ್ಕೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-26/08/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 26/08/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 348
Qty: 18480 Kg
Mx : ₹ 702
Mn: ₹ 301
Avg: ₹ 619

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 10
Qty: 531 Kg
Mx : ₹ 739
Mn: ₹ 500
Avg: ₹ 622


For Daily Updates WhatsApp ‘HI’ to 7406303366

ಯಾದವ ಸಂಘದ ನೂತನ ಅಧ್ಯಕ್ಷರಾಗಿ ಲಕ್ಷ್ಮಣ್ ಅವಿರೋಧ ಆಯ್ಕೆ

0
Sidlaghatta Yadava Sangha President Election

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಯಾದವ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ ನಡೆಯಿತು. ನಗರದ ಟಿ.ಬಿ.ರಸ್ತೆಯಲ್ಲಿನ ಶ್ರೀಕೃಷ್ಣಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಯಾದವ ಸಮುದಾಯದ ಮುಖಂಡರು ಸಭೆ ಸೇರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.

ತಾಲ್ಲೂಕು ಯಾದವ(ಗೊಲ್ಲ) ಸಂಘದ ಅಧ್ಯಕ್ಷರಾಗಿ ಲಕ್ಷ್ಷ್ಮಣ್, ಕರಿಯಪ್ಪನವರ ಮೂರ್ತಿ(ಉಪಾಧ್ಯಕ್ಷ), ವಿ.ದೇವರಾಜ್(ಪ್ರಧಾನ ಕಾರ್ಯದರ್ಶಿ), ನವೀನ್ ಕುಮಾರ್(ಖಜಾಂಚಿ), ಎಸ್.ಎ.ನಾರಾಯಣಸ್ವಾಮಿ(ಗೌರವಾಧ್ಯಕ್ಷ),ರನ್ನಾಗಿ ಆಯ್ಕೆ ಮಾಡಲಾಯಿತು.

ಸಮಿತಿ ಸದಸ್ಯರಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶದಿಂದ ಹಂಡಿಗನಾಳ ರಾಮಚಂದ್ರ, ಆನೂರು ನಾರಾಯಣಸ್ವಾಮಿ, ಪಿಲ್ಲಗುಂಡ್ಲಹಳ್ಳಿ ಶ್ರೀನಿವಾಸ್, ನಲ್ಲಿಮರದಹಳ್ಳಿ ಮುರಳಿ, ಅರಿಕೆರೆ ವೆಂಕಟೇಶ್, ಮುನಿರೆಡ್ಡಿ, ಕೆ.ಕೆ.ಪೇಟೆ ರಮೇಶ್, ಅಜ್ಜಕದಿರೇನಹಳ್ಳಿ ಅನಂದ್, ಬಚ್ಚಹಳ್ಳಿ ಶ್ರೀನಿವಾಸ್, ಚೊಕ್ಕನಹಳ್ಳಿ ವೆಂಕಟೇಶಪ್ಪ, ಪಲಿಚೇರ್ಲು ಜಯರಾಂ, ಕಾನೂನು ಸಲಹೆಗಾರರಾಗಿ ವಕೀಲ ಎಂ.ಮುನಿರಾಜ್, ಮಾಧ್ಯಮ ಸಲಹೆಗಾರರಾಗಿ ಚಿಕ್ಕತೇಕಹಳ್ಳಿ ಡಿ.ಶಿವಕುಮಾರ್‌ ರನ್ನು ನೇಮಿಸಲಾಯಿತು.

ಯಾದವ ಯುವಕರ ಸಂಘದ ಅಧ್ಯಕ್ಷರಾಗಿ ಆರ್.ವಿಜಯ್ ಕುಮಾರ್, ವಿ.ನಾಗಚಂದ್ರ(ಪ್ರಧಾನ ಕಾರ್ಯದರ್ಶಿ), ಸಿ.ರಮೇಶ್(ಖಜಾಂಚಿ)ಅವರನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಲಕ್ಷ್ಮಣ್, ಯಾದವ ಕುಲಬಾಂಧವರು ನನ್ನ ಮೇಲೆ ಭರವಸೆಯನ್ನಿಟ್ಟು ಸಮುದಾಯದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದು ಅವರ ನಿರೀಕ್ಷೆಯಂತೆ ಸಮುದಾಯದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.

ಈ ದೇವಾಲಯದ ಅಭಿವೃದ್ಧಿಗೆ ನನ್ನ ಪ್ರಯತ್ನ ಮೀರಿ ಶ್ರಮಿಸುತ್ತೇನೆ. ನನ್ನ ಅಧಿಕಾರದ ಅವಧಿಯಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹಾಗೂ ಒಳ ಮೀಸಲಾತಿ ಸಮೀಕ್ಷೆ ನಡೆಯುತ್ತಿರುವುದರಿಂದ ಎಲ್ಲಾ ಯಾದವ ಕುಲಬಾಂಧವರು ಸಮೀಕ್ಷೆಗೆ ಬಂದ ಸಮಯದಲ್ಲಿ ತಮ್ಮ ಜಾತಿಯನ್ನು ನೋಂದಣಿ ಮಾಡಿಸುವಾಗ ಗೊಲ್ಲ ಜಾತಿ ಎಂದು ತಪ್ಪದೆ ನಮೂದಿಸಬೇಕು ಎಂದು ಮನವಿ ಮಾಡಿದರು.

ನಿಕಟಪೂರ್ವ ಅಧ್ಯಕ್ಷ ಸಿ.ಅಶ್ವತ್ಥಪ್ಪ, ಸಮುದಾಯದ ಮುಖಂಡರಾದ ದೊಗರನಾಯಕನಹಳ್ಳಿ ವೆಂಕಟೇಶ್, ಟಿ.ಕೆ. ನಟರಾಜ್, ಅರಿಕೆರೆ ಮುನಿರಾಜು, ಲೋಡರ್ ರಾಮಚಂದ್ರಪ್ಪ, ದ್ಯಾವಪ್ಪ ಬೀರಪ್ಪನಹಳ್ಳಿ, ರಾಮಕೃಷ್ಣಪ್ಪ, ನಲ್ಲಿಮರದಹಳ್ಳಿ ಚಂದ್ರು ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಶಿಡ್ಲಘಟ್ಟದಲ್ಲಿ ಹಿಂದೂ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ

0
Hindu Groups Dharmasthala Protest

Sidlaghatta : ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆ ಮತ್ತು ಪ್ರಗತಿ ವಿರುದ್ದ ನಡೆದ ಷಡ್ಯಂತ್ರದ ವಿರುದ್ಧ ನಾವು ನೀವು ಧ್ವನಿ ಎತ್ತದಿದ್ದರೆ ಮುಂದೊಂದು ದಿನ ನಾವು ಪಶ್ಚಾತ್ತಾಪ ಪಡಬೇಕಾಗುತ್ತದೆ. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳೆ ಪರಕೀಯರಂತೆ ಬದುಕುವ ದಿನಗಳು ದೂರವೇನಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಆತಂಕ ವ್ಯಕ್ತಪಡಿಸಿದರು.

ಧರ್ಮಸ್ಥಳ ಮಂಜುನಾಥಸ್ವಾಮಿ ದೇಗುಲದ ಪಾವಿತ್ರ್ಯತೆಯನ್ನು ಹಾಳು ಮಾಡುವ ಷಡ್ಯಂತ್ರದ ತನಿಖೆಯನ್ನು ಎನ್‌.ಐ.ಎಗೆ ವಹಿಸಬೇಕು. ಷಡ್ಯಂತ್ರ ನಡೆಸಿರುವವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ನಾನಾ ಹಿಂದೂ ಪರ ಸಂಘಟನೆಗಳು ಸೋಮವಾರ ನಗರದಲ್ಲಿ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮವನ್ನು, ಹಿಂದೂ ಧರ್ಮದ ದೇವಾಲಯಗಳ ಪಾವಿತ್ರ್ಯತೆಗೆ ಧಕ್ಕೆ ತರುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ದ ಹಿಂದೂಗಳಾದ ನಾವು ಜಾತಿ, ಮತ, ಪಕ್ಷವನ್ನು ಬಿಟ್ಟು ಗಟ್ಟಿಯಾದ ಧ್ವನಿ ಎತ್ತಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ನಾವು ಇಲ್ಲಿ ಯಾವುದರ ವಿರುದ್ದವೂ ಧ್ವನಿ ಎತ್ತಲಾಗದ ಪರಿಸ್ಥಿತಿಗೆ ಬಂದು ಬಿಡುತ್ತೇವೆಂದರು.

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಪಕ್ಷಾತೀತ, ಧರ್ಮಾತೀತವಾಗಿ ಆಡಳಿತ ನಡೆಸುತ್ತಿಲ್ಲ. ಒಂದು ಕೋಮಿನವರನ್ನು ಓಲೈಸುವ ಕೆಲಸ ಮಾಡುತ್ತಿದೆ. ಇದರಿಂದಾಗಿಯೆ ರಾಜ್ಯದಲ್ಲಿ ಜಾತಿ ಜಾತಿ ಮತ್ತು ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ, ಬೆಂಕಿ ಇಡುವ ಕೆಲಸ ಕೆಲವರಿಂದ ಆಗುತ್ತಿದೆ ಎಂದು ದೂರಿದರು.

ಬುರುಡೆ ತಂದ ಅನಾಮಿಕನಿಗೆ ಆಗಲೇ ಮಂಪರು ಪರೀಕ್ಷೆ ಮಾಡಿಸಿ ಸತ್ಯಾಂಶವನ್ನು ಬಯಲಿಗೆ ಎಳೆಯುವುದನ್ನು ಬಿಟ್ಟು ಅವನು ಹೇಳಿದ ಕಡೆಯೆಲ್ಲಾ ದೊಡ್ಡ ದೊಡ್ಡ ಗುಂಡಿ ತೋಡಿ ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತಂದ ಅದೇ ಸರ್ಕಾರವು ಅನಾಮಿಕ ಹೇಳಿದ ಅಂತ ಒಂದು ಮಸೀದಿ ಕ್ಷೇತ್ರದಲ್ಲಿ ಗುಂಡಿ ತೆಗೆಯುವ ಧೈರ್ಯ ತೋರುತ್ತಾ ಎಂದು ಪ್ರಶ್ನಿಸಿದರು.

ಇದಿಷ್ಟೆ ಅಲ್ಲ ಯೂಟ್ಯೂಬರ್ ಸಮೀರ್ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಇಲ್ಲ ಸಲ್ಲದ ವಿಷಯಗಳನ್ನು ಹಾಕಿ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವಂತ ವಿಡಿಯೋವನ್ನು ಹಾಕಿದಾಗ ಅದನ್ನು ವಿರೋಧಿಸಿ ಪ್ರಶ್ನಿಸುವುದನ್ನು ಬಿಟ್ಟು ಟಿವಿ, ಮೊಬೈಲ್, ಯೂಟ್ಯೂಬ್‌ ನಲ್ಲಿ ನೋಡಿಕೊಂಡು ಸುಮ್ಮನೇ ಕೂತ ಹಿಂದೂಗಳೆ ಮುಂದೊಂದು ದಿನ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಮಾಜದಲ್ಲಿ ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ವಿಷದ ಬೀಜ ಬಿತ್ತುವ ಯಾರೇ ಆಗಿರಲಿ, ಅದು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಆಗಿರಲಿ ಅದು ಉಗ್ರಗಾಗಿ ದುಷ್ಕೃತ್ಯಕ್ಕೆ ಸಮಾನ. ಅಂತಹವರನ್ನು ನಡು ಬೀದಿಯಲ್ಲಿ ಗುಂಡಿಕ್ಕಿ ಕೊಲ್ಲಬೇಕು. ಎಲ್ಲರಿಗೂ ದೇಶ ಮುಖ್ಯವಾಗಬೇಕು ಎಂದರು.

ಧರ್ಮಸ್ಥಳ ವಿರುದ್ದ ನಡೆದ ಷಡ್ಯಂತ್ರದ ಹಿಂದೆ ದೇಶ ವಿದೇಶಗಳಲ್ಲಿ ನೆಲೆಸಿದ ದೇಶ ವಿರೋಧಿ, ಧರ್ಮ ವಿರೋಧಿಗಳ ಕೈವಾಡವಿದ್ದು ಎನ್‌.ಐ.ಎಗೆ ತನಿಖೆಯನ್ನು ವಹಿಸಬೇಕು. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕ್ರಮವನ್ನು ಜರುಗಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಶಾಸಕ ಎಂ.ರಾಜಣ್ಣ, ಡಾ.ಸತ್ಯನಾರಾಯಣರಾವ್, ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಯುವ ಸೇನೆ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಹಿತ್ತಲಹಳ್ಳಿ ಗೋಪಾಲಗೌಡ ಮಾತನಾಡಿದರು. ತಹಶೀಲ್ದಾರ್ ಗಗನ ಸಿಂಧು ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸುವುದಾಗಿ ಭರವಸೆ ನೀಡಿದರು.

ಮುಖಂಡರಾದ ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ಕನಕಪ್ರಸಾದ್, ಬಿ.ಸಿ.ನಂದೀಶ್, ಹಿತ್ತಲಹಳ್ಳಿ ಸುರೇಶ್, ಡಿ.ಸಿ.ರಾಮಚಂದ್ರ, ಪಲಿಚೇರ್ಲು ಸೋಮಶೇಖರ್, ರೂಪಸಿ ರಮೇಶ್, ಆನೆಮಡಗು ಮುರಳಿ, ಸದ್ದಹಳ್ಳಿ ಗೋಪಿನಾಥ್ ಸೇರಿದಂತೆ ಆರ್‌.ಎಸ್‌.ಎಸ್, ಭಜರಂಗದಳ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಧರ್ಮಸ್ಥಳ ಯೋಜನಾ ಸಂಘ ಸೇರಿದಂತೆ ಹಿಂದೂ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಸಾರ್ವಜನಿಕ ಆಸ್ಪತ್ರೆಗೆ ಔಷಧಿಗಳ ಕೊಡುಗೆ

0
MAllur Puvvada Foundation Hospital Medicine Donation

Mallur, Sidlaghatta : ರೈತರು, ಗ್ರಾಮಸ್ಥರು ಮತ್ತು ನಾಗರಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡುವ ಜತೆಗೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಯೂ ಗಮನ ಹರಿಸಿ, ಉತ್ತಮ ಬದುಕು ರೂಪಿಸಿ ಎಂದು ಮಳ್ಳೂರು ಪುವ್ವಾಡ ಫೌಂಡೇಷನ್‌ ನ ಡಾ.ಸಂದೀಪ್ ಪುವ್ವಾಡ ತಿಳಿಸಿದರು.

ತಾಲ್ಲೂಕಿನ ಮಳ್ಳೂರು ಪುವ್ವಾಡ ಫೌಂಡೇಷನ್ ಮತ್ತು ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದ ವತಿಯಿಂದ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಿರುವ ಸುಮಾರು 4 ಲಕ್ಷ ರೂ ಮೌಲ್ಯದ ಔಷಧಿಗಳನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

ನಮ್ಮಲ್ಲಿ ಅನೇಕ ಮಂದಿ ಆರೋಗ್ಯದ ಬಗ್ಗೆ ಸರಿಯಾಗಿ ಗಮನ ಹರಿಸದೆ ದುಡಿದು ಸಂಪಾದನೆ ಮಾಡುವುದಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಆರೋಗ್ಯ ಕಾಪಾಡಿಕೊಳ್ಳದೆ ಸಂಪಾದಿಸಿದ ಹಣದಿಂದ ಆರೋಗ್ಯವನ್ನು ಕೊಳ್ಳಲು ಆಗುವುದಿಲ್ಲ ಎಂಬುದನ್ನು ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳಿ ಎಂದರು.

ಯಾವುದೇ ವ್ಯಕ್ತಿ ತಮಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಡ ಮಾಡಬೇಡಿ, ನಿರ್ಲಕ್ಷ್ಯವನ್ನೂ ಮಾಡಬೇಡಿ. ಮುಖ್ಯವಾಗಿ ಸ್ವಯಂ ಚಿಕಿತ್ಸೆಗೆ ಮುಂದಾಗಬೇಡಿ ಎಂದು ಮನವಿ ಮಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧವಾದ ಪ್ರಗತಿ ಆಗಿದೆ.

ಯಾವುದೇ ರೋಗವಾಗಲಿ ಆರಂಭದಲ್ಲೆ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಎಂತಹ ರೋಗವನ್ನಾದರೂ ಆರಂಭದಲ್ಲೆ ವಾಸಿ ಮಾಡಿಕೊಳ್ಳಬಹುದು ಎಂದರು.

ಪುವ್ವಾಡ ಫೌಂಡೇಷನ್ ಮತ್ತು ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದಿಂದ ಸಾರ್ವಜನಿಕ ಅಸ್ಪತ್ರೆಗೆ ಸುಮಾರು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಔಷಧಿಗಳನ್ನು ಕೊಡುಗೆಯಾಗಿ ನೀಡಿದರು. ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್ ಔಷಧಿಗಳನ್ನು ಸ್ವೀಕರಿಸಿದರು.

ಎಚ್.ಡಿ.ದೇವೇಗೌಡ ಜಯಪ್ರಕಾಶ್ ನಾರಾಯಣ್ ಟ್ರಸ್ಟ್‌ ನ ಬಿ.ಎನ್.ಸಚಿನ್ ಮಾತನಾಡಿ, ಪುವ್ವಾಡ ಫೌಂಡೇಷನ್ ಮತ್ತು ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಪ್ರತಿ ಭಾನುವಾರ ನಾನಾ ರೀತಿಯ ಉಚಿತ ಆರೋಗ್ಯ ತಪಾಸಣೆ ಮತ್ತು ಔಷದೋಪಚಾರ ಶಿಬಿರ ನಡೆಯಲಿದ್ದು ಸುತ್ತ ಮುತ್ತಲಿನ ಅನೇಕರಿಗೆ ಇದರಿಂದ ಅನುಕೂಲ ಆಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರತೆ ಇರುವ ಹಲವು ರೀತಿಯ ಔಷಧಿಗಳನ್ನು ಕೊಡುಗೆಯಾಗಿ ನೀಡುತ್ತಿದ್ದು ಇದರ ಸದುಪಯೋಗ ಅಗತ್ಯ ಇರುವ ಎಲ್ಲ ಅರ್ಹರಿಗೂ ಸಿಗಲಿ ಎಂದು ಆಶಿಸಿದರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್, ಎಚ್.ಡಿ.ದೇವೇಗೌಡ ಜಯಪ್ರಕಾಶ್ ನಾರಾಯಣ್ ಟ್ರಸ್ಟ್‌ ನ ಬಿ.ಎನ್.ಸಚಿನ್, ಪುವ್ವಾಡ ಫೌಂಡೇಷನ್ ಮತ್ತು ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದ ಕಲಾವತಿವೀರಕುಮಾರ್, ಡಾ.ಸಂದೀಪ್ ಪುವ್ವಾಡ, ಡಾ.ಪ್ರಿಯಾಂಕ, ಡಾ.ಸತ್ಯವಂಶಿಕೃಷ್ಣ, ಡಾ.ವಿಶ್ಮ ಪ್ರಭು, ಡಾ.ಮಂಜುನಾಥ್, ಸ್ವಯಂಸೇವಕರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವವರಿಗೆ ಶಿಕ್ಷೆ ಆಗಲಿ

0
Sidlaghatta BJP Urge Punishment for peace violators

Sidlaghatta : ಈ ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯೆ ಹಾಗೂ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಸಾಮರಸ್ಯವನ್ನು ಹಾಳು ಮಾಡುವವರು ಯಾರೇ ಆಗಿರಲಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವವರಿಗೆ ಎಚ್ಚರಿಕೆ ಸಂದೇಶ ನೀಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಒತ್ತಾಯಿಸಿದರು.

ನಗರದ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಭಾರತ ಹಿಂದೂ ರಾಷ್ಟ್ರವಾದರೂ ಇಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಇನ್ನಿತರೆ ಎಲ್ಲ ಧರ್ಮದವರೂ ಸಾಮರಸ್ಯದಿಂದ ಕೂಡಿ ಬಾಳುತ್ತಿದ್ದು ನಮ್ಮ ನಮ್ಮ ನಡುವೆ ವಿಷ ಬೀಜ ಬಿತ್ತುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ದಕ್ಷಿಣ ಭಾರತದಲ್ಲೇ ಧರ್ಮಸ್ಥಳ ಕ್ಷೇತ್ರವು ಹಿಂದೂಗಳ ಪಾಲಿಗೆ ಪವಿತ್ರವಾದ ಧಾರ್ಮಿಕ ಕೇಂದ್ರವಾಗಿದೆ. ಧರ್ಮಸ್ಥಳದ ಪವಿತ್ರತೆ, ಹಾಗೂ ಪ್ರಸಿದ್ದಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಕೆಲವರು ಷಡ್ಯಂತ್ರ ರೂಪಿಸಿದ್ದು ಬುರುಡೆ ನಾಟಕ ಆಡಿದ್ದಾರೆ. ಸಮೀರ್ ಎಂಬಾತ ಯೂಟ್ಯೂಬ್ ಮೂಲಕ ಇಲ್ಲ ಸಲ್ಲದ ವಿಡಿಯೋಗಳನ್ನು ಹರಿಬಿಟ್ಟು ಧರ್ಮಸ್ಥಳದ ವಿರುದ್ದ ಪ್ರಚೋದನೆ ಮಾಡಿದ್ದಾನೆ.

ರಾಜ್ಯ ಸರ್ಕಾರವು ಬುರುಡೆ ಬಿಟ್ಟ ಚನ್ನಯ್ಯ, ಯೂಟ್ಯೂಬ್ ಸಮೀರ್‍ ನ ಹಿನ್ನಲೆಯನ್ನು ತನಿಖೆ ಮಾಡಿ ಮಂಪರು ಪರೀಕ್ಷೆ ಮೂಲಕ ಅವರ ಹಿನ್ನಲೆ ಅರಿತು ಸತ್ಯಾಸತ್ಯತೆ ತಿಳಿದ ನಂತರ ತನಿಖೆಗೆ ಇಳಿಯಬೇಕಿತ್ತು. ಆದರೆ ಅದು ಬಿಟ್ಟು ಸರ್ಕಾರವು ಕೂಡ ಆತುರ ಪಟ್ಟು ಅಸಂಖ್ಯಾತ ಭಕ್ತರ ಮನಸಿಗೆ ನೋವಾಗುವಂತೆ ಮಾಡಿದೆ ಎಂದು ಬೇಸರ ಹೊರ ಹಾಕಿದರು.

ಧರ್ಮಸ್ಥಳ ದೇವಾಲಯದ ವಿರುದ್ದ ನಡೆದಿರುವ ಷಡ್ಯಂತ್ರದ ಹಿಂದೆ ಕೇರಳ, ವಿದೇಶದ ಕೆಲವರು ನೆರಳು ಇದ್ದು, ಹಣದ ವಹಿವಾಟು ಕೂಡ ನಡೆದಿದೆ. ಎಸ್‍.ಐ.ಟಿಯಿಂದ ತನಿಖೆ ಪರಿಪೂರ್ಣವಾಗದು ಮತ್ತು ಧರ್ಮಸ್ಥಳ ಕ್ಷೇತ್ರಕ್ಕೆ ಅಂಟಿದ ಕಳಂಕವೂ ಹೋಗದು ಎಂದ ಅವರು ಈ ಷಡ್ಯಂತ್ರದ ಹಿಂದಿರುವ ಖೂಳರ ಬಗ್ಗೆ ತನಿಖೆಯನ್ನು ಎನ್‍.ಐ.ಎಗೆ ವಹಿಸಬೇಕೆಂದು ಆಗ್ರಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಿ.ಮುರಳಿ, ಚಿಂತಾಮಣಿ ಮಂಡಲ ಅಧ್ಯಕ್ಷ ರಾಜಣ್ಣ, ಮುಖಂಡರಾದ ಕಂಬದಹಳ್ಳಿ ಸುರೇಂದ್ರಗೌಡ, ಕನಕ ಪ್ರಸಾದ್, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಜಗದೀಶ್, ಒಕ್ಕಲಿಗರ ಯುವ ವೇದಿಕೆ ಸೇನೆ ಅಧ್ಯಕ್ಷ ಜೆ.ವಿ.ವೆಂಕಟಸ್ವಾಮಿ, ರಾಮಕೃಷ್ಣಪ್ಪ, ಮಂಜುಳಮ್ಮ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಬಯಲುಸೀಮೆಗೆ ಬಂದ ಅಪರೂಪದ ಕಿತ್ತಳೆ ಬಣ್ಣದ ಅಣಬೆ

0
Agaricus trisulphuratus Orange Mushroom

Appegowdanahalli, Sidlaghatta : ಪಶ್ಚಿಮ ಘಟ್ಟ, ಉಷ್ಣವಲಯದ ದೇಶಗಳಲ್ಲಿ ಕಂಡುಬರುವ ಅಪರೂಪದ ಅಣಬೆಯೊಂದು ಬಯಲುಸೀಮೆಯ ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಪತ್ತೆಯಾಗಿದೆ.

ಅಪ್ಪೇಗೌಡನಹಳ್ಳಿಯ ರೈತ ಎ.ಎಂ.ತ್ಯಾಗರಾಜ್ ಅವರ ತೋಟದಲ್ಲಿ ಈ ಪುಟ್ಟ ಗಾತ್ರದ ಕಿತ್ತಳೆ ಬಣ್ಣದ ಅಣಬೆ, ನೆಲದಿಂದ ಮೇಲೆದ್ದಿರುವುದು ಅಚ್ಚರಿ ತಂದಿದೆ.

ಅಗಾರಿಕಸ್ ಟ್ರೈಸಲ್ಫುರಾಟಸ್ ಎಂಬ ವೈಜ್ಞಾನಿಕ ಹೆಸರಿನ ಈ ಅಣಬೆಯನ್ನು ಇಂಗ್ಲಿಷಿನಲ್ಲಿ ಸ್ಕೇಲಿ ಟ್ಯಾಂಗರಿನ್ ಮಶ್ರೂಮ್ ಅಥವಾ ಸ್ಕೇಲಿ ಟ್ಯಾಂಗರಿನ್ ಶಿಲೀಂಧ್ರ ಎನ್ನುವರು. ಕಿತ್ತಳೆ ಬಣ್ಣದ ಅಣಬೆಯ ಮೇಲೆ ತ್ರಿಕೋನಾಕಾರದ ಪುಟ್ಟಪುಟ್ಟ ಹುರುಪೆ ರೀತಿಯ ಮಡತೆಗಳು ಮೂಡಿರುತ್ತವೆ.

ಈ ಅಣಬೆಯು ಸಾವಯವವಾಗಿ ಸಮೃದ್ಧವಾಗಿರುವ ಮಣ್ಣಿನಲ್ಲಿ ಅಥವಾ ಚೆನ್ನಾಗಿ ಕೊಳೆತ ಮರದ ಬುಡಗಳಲ್ಲಿ ಬೆಳೆಯುತ್ತದೆ. ಇದು ಸಾಮಾನ್ಯವಾಗಿ ಹುಲ್ಲಿನಿಂದಾವೃತವಾದ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ. ಕೀನ್ಯಾ, ಥೈಲ್ಯಾಂಡ್, ಮಲೇಷ್ಯಾ, ಆಸ್ಟ್ರೇಲಿಯ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿನ ಉಷ್ಣವಲಯ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಈ ಅಣಬೆ ಪ್ರಭೇದಗಳು ಕಾಣಸಿಗುತ್ತವೆ. ನಮ್ಮ ಪಶ್ಚಿಮ ಘಟ್ಟಗಳಲ್ಲಿಯೂ ಇವು ಕಂಡುಬರುತ್ತವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

“ಸಾಮಾನ್ಯವಾಗಿ ಬಿಳಿ ಬಣ್ಣದ ಅಣಬೆಗಳು ನಮಗೆ ಪರಿಚಿತ. ನಮ್ಮ ಭಾಗದಲ್ಲಿ ಕಾಣಿಸುತ್ತವೆ. ಆದರೆ ಕೇಸರಿ ಬಣ್ಣದ ಈ ರೀತಿಯ ಅಣಬೆಯನ್ನು ನಮ್ಮ ತೋಟದಲ್ಲಿ ನೋಡಿದ್ದು ಇದೇ ಮೊದಲ ಬಾರಿ. ಸೋಜಿಗವೆನಿಸಿತು” ಎನ್ನುತ್ತಾರೆ ರೈತ ತ್ಯಾಗರಾಜ್.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-24/08/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 24/08/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 324
Qty: 17138 Kg
Mx : ₹ 690
Mn: ₹ 422
Avg: ₹ 609

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 06
Qty: 473 Kg
Mx : ₹ 779
Mn: ₹ 699
Avg: ₹ 741

Sidlaghatta WhatsApp Channel Group

For Daily Updates WhatsApp ‘HI’ to 7406303366

ಗೊರಮಿಲ್ಲಹಳ್ಳಿ MPCS ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ

0
Sidlaghatta Gormaillahalli MPCS Election

Goramillahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗೊರಮಿಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಹನುಮಕ್ಕ ಮತ್ತು ಉಪಾಧ್ಯಕ್ಷರಾಗಿ ಗಂಗರಾಜು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶನಿವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಅವಿರೋಧ ಆಯ್ಕೆ ಸುಗಮವಾಗಿ ನಡೆಯಿತು. ಚುನಾವಣಾಧಿಕಾರಿ ಎಂ ಮಂಜುನಾಥ್ ಇಬ್ಬರ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಜಿ.ಎನ್,ಶಿವಣ್ಣ, ಬಿ ದಾಸಪ್ಪ,ಗಂಗರತ್ನಮ್ಮ, ಚಿಕ್ಕನರಸಪ್ಪ, ವೆಂಕಟರಾಯಪ್ಪ, ದಾಸಪ್ಪ,ರತ್ನಮ್ಮ, ಅಂಗಡಿ ದಾಸಪ್ಪ,ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಎನ್. ವೆಂಕಟೇಶ್ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ರೇಷ್ಮೆ ರೈತ ಉತ್ಪಾದಕರ ಕಂಪನಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

0
Jangamakote sericultre farmer producer company annual meet

Jangamakote, sidlaghatta : ರೈತರು ಕೇವಲ ಬೆಳೆಗಳನ್ನು, ಫಸಲನ್ನು ಬೆಳೆಯುವುದರತ್ತ ಮಾತ್ರ ಗಮನ ಕೊಟ್ಟರೆ ಸಾಲದು. ಬದಲಿಗೆ ಮಾರುಕಟ್ಟೆಯ ತಂತ್ರಗಳನ್ನು ಅರಿತು ಬೇಡಿಕೆಯನುಸಾರ ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಬೇಕೆಂದು ಜಂಗಮಕೋಟೆ ರೇಷ್ಮೆ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಭಕ್ತರಹಳ್ಳಿ ಚಿದನಂದಮೂರ್ತಿ ರೈತರಿಗೆ ತಿಳಿಸಿದರು.

ತಾಲ್ಲೂಕಿನ ಜಂಗಮಕೋಟೆಯಲ್ಲಿ ನಡೆದ ಜಂಗಮಕೋಟೆ ರೇಷ್ಮೆ ರೈತ ಉತ್ಪಾದಕರ ಕಂಪನಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ರೈತರು ಸಾಷಕ್ಟು ಸಮಸ್ಯೆಗಳ ನಡುವೆಯೂ ಉತ್ತಮವಾದ ಫಸಲು, ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಮಾರುಕಟ್ಟೆ ತಂತ್ರಗಳನ್ನು ಅರಿಯುವಲ್ಲಿ ಎಡವುತ್ತಿದ್ದು ನಿರೀಕ್ಷೆಯಂತೆ ಲಾಭಗಳಿಸಲು ಸಾಧ್ಯವಾಗುತ್ತಿಲ್ಲ ಇಲ್ಲವೇ ನಷ್ಟ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಕಂಪನಿಯಲ್ಲಿ ಸಧ್ಯಕ್ಕೆ 1100 ಮಂದಿ ರೈತರು ಷೇರುದಾರರಾಗಿದ್ದು ಇನ್ನೂ 400 ಮಂದಿ ರೈತರನ್ನು ಷೇರುದಾರರನ್ನಾಗಿಸಲಾಗುವುದು. 2024-25ನೇ ಹಣಕಾಸು ವರ್ಷದಲ್ಲಿ ನಮ್ಮ ಕಂಪನಿಯಲ್ಲಿ 44 ಲಕ್ಷ ರೂ.ಗಳಷ್ಟು ಕೃಷಿ ಪರಿಕರಗಳ ವಹಿವಾಟು ನಡೆಸಿ ಲಾಭದಾಯಕವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೃಷಿ, ರೇಷ್ಮೆ, ತೋಟಗಾರಿಕೆ ಬೇಸಾಯ ನಡೆಸಲು ಅಗತ್ಯವಾದ ಎಲ್ಲ ರೀತಿಯ ರಸಗೊಬ್ಬರ ಇನ್ನಿತರೆ ಪರಿಕರಗಳನ್ನು ಮಾರುಕಟ್ಟೆಗಿಂತಲೂ ಕಡಿಮೆ ಬೆಲೆಗೆ ರೈತರಿಗೆ ನೀಡಲಾಗುತ್ತಿದ್ದು ರೈತರ ಬೇಡಿಕೆಯಿಂದ ಇನ್ನೂ ಒಂದಷ್ಟು ಪರಿಕರಗಳನ್ನು ಮುಂದಿನ ದಿನಗಳಲ್ಲಿ ತಂದು ಮಾರಾಟ ಮಾಡಲಾಗುವುದು ಎಂದು ವಿವರಿಸಿದರು.

ರೈತರಿಗೆ ಕಾಲ ಕಾಲಕ್ಕೆ ತಜ್ಞರು, ವಿಜ್ಞಾನಿಗಳು, ಅಧಿಕಾರಿಗಳನ್ನು ಕರೆಸಿ ಸೂಕ್ತ ತರಬೇತಿ ಮಾರ್ಗದರ್ಶನ ನೀಡುವ ಕೆಲಸವನ್ನು ಕಂಪನಿಯಿಂದ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ರೈತರಿಗೆ ಇನ್ನಷ್ಟು ನೆರವು ನಿಡುವ ಕೆಲಸ ಮಾಡಲು ಈಗಾಗಲೆ ಕ್ರಿಯಾ ಯೋಜನೆ ರೂಪಿಸಿದ್ದು ನಿಮ್ಮೆಲ್ಲರ ಸಹಕಾರ ಇನ್ನಷ್ಟು ಬೇಕಿದೆ ಎಂದು ಕೋರಿದರು.

2024-25ನೇ ಹಣಕಾಸು ವರ್ಷದ ಲೆಕ್ಕ ಪತ್ರಗಳನ್ನು ಮಂಡಿಸಿ 2025-26ನೇ ಸಾಲಿನ ಯೋಜನಾ ವರದಿ ಮತ್ತು ಅಂದಾಜು ವೆಚ್ಚಕ್ಕೆ ಅನುಮೋದನೆ ಪಡೆಯಲಾಯಿತು.

ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಡಾ.ಪರಮೇಶ್ವರ ನಾಯಕ, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಬಿ.ವಿ.ಮುನೇಗೌಡ, ರೇಷ್ಮೆ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ, ಮಂಡ್ಯದ ವಿಕಸನ ಸಂಸ್ಥೆಯ ಕೆಂಪಯ್ಯ, ಕಂಪನಿ ಸಿಇಒ ಬಿ.ಆರ್.ಸುರೇಶ್, ನಿರ್ದೇಶಕರುಗಳಾದ ತಮ್ಮಣ್ಣ, ಮಂಜುನಾಥಗೌಡ, ನಾರಾಯಣಸ್ವಾಮಿ, ಜಯರಾಂ, ಕುಮಾರ್, ಮಂಜುನಾಥ್, ಮುರಳೀಧರ್, ಜಿ.ಸಿ.ಪ್ರಕಾಶ್, ಮುನಿರಾಜು, ಸರಿತಾಗಂಗಾಧರ್ ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

error: Content is protected !!