Home Blog Page 464

ಅಗ್ನಿಶಾಮಕ ವಾಹನಗಳ ನಿಲ್ದಾಣ

0

ನಗರದ ತಾಲ್ಲೂಕು ಕಛೇರಿಯ ಪಕ್ಕದಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿರುವ ಅಗ್ನಿಶಾಮಕ ಠಾಣೆಯ ವಾಹನಗಳ ನಿಲುಗಡೆ ಜಾಗವು ಈಗ ಖಾಸಗಿ ವ್ಯಕ್ತಿಗಳ ಕಾರು ಪಾರ್ಕಿಂಗ್ ಜಾಗವಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.
ನಗರದ ತಾಲ್ಲೂಕು ಕಛೇರಿಯ ಪಕ್ಕದಲ್ಲೆ ಇರುವ ಹಳೆಯ ತಾಲ್ಲೂಕು ಕಚೇರಿಯ ಕಟ್ಟಡಲ್ಲಿ ಕೆಲ ಕಾಲ ನ್ಯಾಯಾಲಯವನ್ನಾಗಿ ಮಾಡಿಕೊಳ್ಳಲಾಗಿತ್ತು, ನಂತರ ನೂತನ ನ್ಯಾಯಾಲಯದ ಕಟ್ಟಡ ಉದ್ಘಾಟನೆಗೊಂಡ ನಂತರ, ಹಳೇಯ ಕಟ್ಟಡವನ್ನು ತಾತ್ಕಾಲಿಕವಾಗಿ ಅಗ್ನಿಶಾಮಕ ಠಾಣೆಗೆ ಬಳಕೆ ಮಾಡಿಕೊಳ್ಳಲು ತೀರ್ಮಾನ ಮಾಡಿಕೊಂಡು, ಮುಂಭಾಗದಲ್ಲಿದ್ದ ಬೃಹತ್ ಗಾತ್ರದ ಮರಗಳನ್ನು ಕಡಿದು ತೆರವುಗೊಳಿಸಿ, ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಶೆಡ್ ನಿರ್ಮಾಣ ಮಾಡಲಾಗಿದೆ. ನೆಲಕ್ಕೆ ಕಾಂಕ್ರೀಟ್‌ನ್ನು ಹಾಕಲಾಗಿದೆ. ತಾಲ್ಲೂಕು ಕಚೇರಿ, ತೋಟಗಾರಿಕೆ ಇಲಾಖೆ, ತಾಲ್ಲೂಕು ಪಂಚಾಯತಿ, ಕೃಷಿ ಇಲಾಖೆ ಹಾಗೂ ಪೊಲೀಸ್ ಠಾಣೆಗಳಿಗೆ ಬರುವಂತಹ ಜನರ ಕಾರುಗಳ ನಿಲುಗಡೆಯ ಜಾಗವಾಗಿ ಮಾರ್ಪಟ್ಟಿದೆ. ಇದುವರೆಗೂ ಅಗ್ನಿಶಾಮಕ ವಾಹನಗಳು ಬರಲಿಲ್ಲವೆಂದು ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು, ಈ ಕಡೆಗೆ ಗಮನಹರಿಸಿ, ಶೆಡ್‌ನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜನರ ಒತ್ತಾಯವಾಗಿದೆ.

ನೆಹರೂ ಕ್ರೀಡಾಂಗಣದಲ್ಲಿ ಸಮಾನ ಮನಸ್ಕ ಕ್ರೀಡಾಸಕ್ತರಿಂದ ಸ್ವಚ್ಚತಾ ಅಭಿಯಾನ

0

ಪ್ರತಿಯೊಬ್ಬ ನಾಗರಿಕರಲ್ಲಿ ಸಮಾಜಿಕ ಬದ್ಧತೆ, ಕಾಳಜಿ ಮೂಡಿದಾಗ ಮಾತ್ರ, ಪರಿವರ್ತನೆಯನ್ನು ತರಲು ಸಾಧ್ಯವಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಕಸವನ್ನು ಸ್ವಚ್ಚಗೊಳಿಸಲು ಮುಂದಾಗಿದ್ದ ನಗರದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸಮಾನ ಮನಸ್ಕರ ತಂಡದೊಂದಿಗೆ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ, ಪ್ರತಿಯೊಬ್ಬ ನಾಗರಿಕರಲ್ಲಿ ಅರಿವು ಮೂಡಿಸಬೇಕಾದಂತಹ ಅನಿವಾರ್ಯತೆ ಇದೆ, ಎಲ್ಲರೂ ಜಾಗೃತರಾದರೆ, ಸಮಾಜದಲ್ಲಿ ಮಾರಕವಾದ ರೋಗಗಳು ಹರಡುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಈಗಾಗಲೇ ಕ್ರೀಡಾಂಗಣದ ಸುತ್ತಮುತ್ತಲಿನ ಮನೆಗಳಲ್ಲಿನ ಜನರು ಕಸವನ್ನು ತಂದು ಕ್ರೀಡಾಂಗಣದೊಳಗೆ ಸುರಿಯುತ್ತಿರುವುದರಿಂದ ಇಲ್ಲಿಗೆ ಬರುವಂತಹ ಕ್ರೀಡಾಪಟುಗಳು, ವಾಯುವಿಹಾರಿಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಕೇಳಿಬಂದಿದ್ದು, ಕ್ರೀಡಾಂಗಣದಲ್ಲಿ ಸ್ವಚ್ಚತೆಯನ್ನು ಕಾಪಾಡುವಂತೆ ನಗರಸಭೆಯವರಿಗೆ ಸೂಚನೆ ನೀಡಲಾಗಿದೆ.
ಈಗಾಗಲೇ ಸಮಾನ ಮನಸ್ಕರ ತಂಡ ಸ್ವಚ್ಚತೆಯಲ್ಲಿ ತೊಡಗಿಸಿಕೊಂಡಿರುವುದು ಅನೇಕ ಮಂದಿಗೆ ಸ್ಪೂರ್ತಿಯಾಗಲಿದೆ, ಕ್ರೀಡಾಂಗಣದಲ್ಲಿ ಯಾವುದೇ ಅಹಿತಕರ ಚಟುವಟಿಕೆಗಳಿಗೆ ಅವಕಾಶವಿಲ್ಲದಂತೆ ಪೊಲೀಸರನ್ನು ನೇಮಕ ಮಾಡಿ, ಗಸ್ತು ತಿರುಗುವಂತೆ ಸೂಚನೆ ನೀಡಲಾಗುತ್ತದೆ ಎಂದರು.
ನಗರಸಭಾ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸರ್ಕಾರಿ ನೌಕರರು, ಹಾಗೂ ಕ್ರೀಡಾಪಟುಗಳು, ಮಕ್ಕಳು ಮತ್ತಿತರರು ಈ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು.

ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಇ–ಹರಾಜು ನಿಲ್ಲಿಸುವಂತೆ ಕೆಲವರ ಪ್ರತಿಭಟನೆ: ನಿರಾತಂಕವಾಗಿ ನಡೆದ ಇ–ಹರಾಜು

0

ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಪ್ರಾರಂಭವಾಗಿರುವ ಇ–ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ, ಕೆಲವು ಮಂದಿ ಮಾರುಕಟ್ಟೆಯ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಇ–ಹರಾಜು ಪ್ರಾರಂಭ ಮಾಡಿರುವುದರಿಂದ ರೀಲರುಗಳು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ, ಹಳೆಯ ಪದ್ಧತಿಯಲ್ಲಿ ಹರಾಜು ನಡೆಯುತ್ತಿದ್ದಾಗ, ಬೆಳಿಗ್ಗೆ ೧೨ ಗಂಟೆಗೆ ಹರಾಜು ಮುಗಿಸಿಕೊಂಡು, ರೈತರಿಗೆ ಕೊಡಬೇಕಾದಂತಹ ಹಣವನ್ನು ಪಾವತಿ ಮಾಡಿ, ನೂಲು ಬಿಚ್ಚಾಣಿಕೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದೇವು. ಆದರೆ ಮಾರುಕಟ್ಟೆಯಲ್ಲಿ ಈಗ ಮೂರು ಬಾರಿ ಹರಾಜು ಮಾಡುತ್ತಿರುವುದರಿಂದ ರೀಲರುಗಳಿಗೆ ಕಷ್ಟವಾಗುತ್ತಿದೆ, ಕೆಲವು ಮಂದಿ ಅನಕ್ಷರಸ್ಥ ರೀಲರುಗಳು ಇ–ಹರಾಜಿನಲ್ಲಿ ಮೊಬೈಲ್‌ಗಳ ಮೂಲಕ ಬಿಡ್ ನೀಡಲು ಸಾಧ್ಯವಾಗುತ್ತಿಲ್ಲ, ರೈತರಿಗೂ ತೊಂದರೆಯಾಗುತ್ತಿದೆ, ರಾಮನಗರ, ಕೊಳ್ಳೆಗಾಲಗಳಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ಸಮಜಾಯಿಶಿ ನೀಡುತ್ತಿದ್ದಾರೆ, ಆದರೆ ಅವು ಚಿಕ್ಕ ಮಾರುಕಟ್ಟೆಗಳು, ಇಲ್ಲಿ ಈ ರೀತಿಯ ವ್ಯವಸ್ಥೆಯಿಂದ ಯಶಸ್ಸು ಸಾಧ್ಯವಾಗುವುದಿಲ್ಲ, ಹರಾಜು ಪ್ರಾರಂಭ ಮಾಡುವ ಮುಂಚೆ ಯಾವುದೇ ರೀಲರುಗಳನ್ನು ಕರೆದುಕೊಂಡು ಈ ಬಗ್ಗೆ ಮಾಹಿತಿ ನೀಡಿಲ್ಲವೆಂದು ಅವರು ಆರೋಪಿಸಿದರು.
ಕೆಲ ಮಂದಿ ಮಾರುಕಟ್ಟೆಯ ಹೊರಗೆ ಇ–ಹರಾಜು ಬೇಡವೆಂದು ಘೋಷಣೆ ಕೂಗುತ್ತಿರುವಾಗ ಮಾರುಕಟ್ಟೆಯ ಒಳಗೆ ಇ–ಹರಾಜಿನ ಪದ್ಧತಿಯಲ್ಲಿಯೇ ಹರಾಜು ಪ್ರಕ್ರಿಯೇ ಯಾವುದೇ ಗೊಂದಲವಿಲ್ಲದೆ ನಡೆದಿತ್ತು. ರೀಲರುಗಳು ಗೂಡು ಕೊಳ್ಳುವುದು ನಿರಾತಂಕವಾಗಿ ಸಾಗಿತ್ತು.
ಸ್ಥಳಕ್ಕೆ ಬೇಟಿ ನೀಡಿದ ಪೊಲೀಸ್ ಸರ್ಕಲ್‌ ಇನ್ಸ್‌ಪೆಕ್ಟರ್‌ ಟಿ.ಸಿ. ವೆಂಕಟೇಶ್, ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದವರೊಂದಿಗೆ ಸಮಾಲೋಚನೆ ನಡೆಸಿದರು. ನಿಮಗೆ ತೊಂದರೆಯಾಗಿದ್ದರೆ, ಸಂಬಂಧಪಟ್ಟ ಇಲಾಖೆಯ ಆಯುಕ್ತರಿಗೆ ದೂರು ಕೊಟ್ಟು ಸಮಸ್ಯೆ ಬಗೆಹರಿಸಿಕೊಳ್ಳಿ, ಇಲ್ಲವೇ, ಪ್ರತಿಭಟನೆಯ ಮೂಲಕ ಸಮಸ್ಯೆಯನ್ನು ಇತ್ಯರ್ಥ ಪಡಿಸಿಕೊಳ್ಳುವುದಿದ್ದರೆ, ಒಂದು ದಿನವನ್ನು ನಿಗದಿಪಡಿಸಿ, ಪೊಲೀಸ್ ಇಲಾಖೆಗೂ ಮಾಹಿತಿಯನ್ನು ನೀಡಿದರೆ, ಸೂಕ್ತ ಬಂದೋ ಬಸ್ತ್ ಮಾಡಿ, ರಕ್ಷಣೆ ನೀಡಬೇಕಾಗುತ್ತದೆ. ಈ ರೀತಿ ಏಕಾಏಕಿಯಾಗಿ ಪ್ರತಿಭಟನೆಗೆ ಅವಕಾಶವಿಲ್ಲವೆಂದು ತಿಳಿಸಿದ ನಂತರ ಪ್ರತಿಭಟನೆ ಕೈಬಿಟ್ಟು, ಉಪನಿರ್ದೇಶಕರೊಂದಿಗೆ ಚರ್ಚೆ ನಡೆಸಲು ಪ್ರತಿಭಟನಾಕಾರರು ಮುಂದಾದರು.
ಇದೇ ವೇಳೆ ರೀಲರ್ ರಾಮಕೃಷ್ಣಪ್ಪ ಮಾತನಾಡಿ, ಇ–ಹರಾಜು ಪ್ರಾರಂಭ ಮಾಡುವ ಮುನ್ನ ರೇಷ್ಮೆ ಇಲಾಖೆಯ ಆಯುಕ್ತರು ರೈತರು ಹಾಗೂ ರೀಲರುಗಳನ್ನು ಸಭೆ ಕರೆದು ಇದರ ಬಗ್ಗೆ ಚರ್ಚೆ ಮಾಡಿದಾಗ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಲಿಲ್ಲ. ಪ್ರಾರಂಭವಾಗಿ, ತಾಂತ್ರಿಕ ದೋಷಗಳು ಕಂಡು ಬಂದು, ಸ್ಥಗಿತಗೊಳಿಸಿದ್ದಾಗಲೂ ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ. ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಭೇಟಿ ನೀಡಿದಾಗಲೂ ಯಾರೂ ಚಕಾರವೆತ್ತಲಿಲ್ಲ. ಬದಲಿಗೆ ಇದರಿಂದ ಅನೇಕ ಉಪಯೋಗಗಳಿವೆ ಎಂದೇ ಹೇಳಿದರು. ಈಗ ಎರಡನೇ ಬಾರಿಗೆ ಪ್ರಾರಂಭವಾದ ನಂತರ ಕೆಲವರು ಎಚ್ಚೆತ್ತುಕೊಂಡಿದ್ದಾರೆ. ಪ್ರಾರಂಭ ಮಾಡಿರುವುದನ್ನು ಹಂತ ಹಂತವಾಗಿ ಉನ್ನತೀಕರಣ ಮಾಡಲು ಎಲ್ಲರೂ ಸಹಕಾರ ನೀಡಿ. ನಮಗೆ ಸಿಗಬೇಕಾದಂತಹ ಸೌಲಭ್ಯಗಳಿಗಾಗಿ ಸರ್ಕಾರದೊಂದಿಗೆ ಹೋರಾಟ ಮಾಡೊಣ. ಕೆಲವು ಮಂದಿ ಸ್ವಯಂ ಘೋಷಿತವಾಗಿ ರೀಲರ್‌ಗಳ ಸಂಘದ ಅಧ್ಯಕ್ಷರಾಗಿದ್ದಾರೆ, ಅವರಿಗೆ ತೋಚಿದಂತೆ ಮಾಡಿಕೊಳ್ಳಲಿ, ನಾವು ಸಂಘಟಿತರಾಗಿ ಹೋರಾಟ ಮಾಡೋಣವೆಂದರು.

ಖಾಸಗಿ ಶಾಲೆಗಳಲ್ಲಿ ದಾಖಲಾತಿ ಶುಲ್ಕಕ್ಕೆ ಕಡಿವಾಣ ಬೇಕು

0

ತಾಲ್ಲೂಕಿನ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಶುಲ್ಕವು ಸರ್ಕಾರಿ ಸುತ್ತೋಲೆಗಿಂತಲೂ ಹಲವು ಪಟ್ಟು ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಆಗುವ ವಂಚನೆಯನ್ನು ತಡೆಗಟ್ಟಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೆಲವರು ಪೋಷಕರು ಮನವಿ ಮಾಡಿದ್ದಾರೆ.
ರೇಷ್ಮೆ ಗುಡಿಕೈಗಾರಿಕೆಯನ್ನು ನಂಬಿರುವವರು ರೇಷ್ಮೆ ಬೆಲೆಯ ಏರುಪೇರಿನಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಯಾವುದೇ ವ್ಯಾಪಾರ ವ್ಯವಹಾರ ಸುಸೂತ್ರವಾಗಿ ನಡೆಯುತ್ತಿಲ್ಲ. ರೈತರೂ ಆರ್ಥಿಕವಾಗಿ ಕಷ್ಟದಲ್ಲಿದ್ದಾರೆ. ಇಂಥಹ ಸಮಯದಲ್ಲಿ ಮಕ್ಕಳನ್ನು ಶಾಲೆಗೆ ದಾಖಲು ಮಾಡುವಾಗ ಖಾಸಗಿ ಶಾಲೆಗಳವರು ಕೇಳುವ ಹಣ ಕೊಡಲಾಗದೆ ಸಾಲಕ್ಕೆ ತುತ್ತಾಗುವಂತಾಗಿದೆ. ಪ್ರತಿಬಾರಿಯೂ ಶುಲ್ಕವನ್ನು ಹೆಚ್ಚಿಸುವ ಶಿಕ್ಷಣ ಸಂಸ್ಥೆಗಳು ಈ ಬಾರಿ ಮಾತ್ರ ಊಹಿಸಲೂ ಆಗದಂತೆ ಶುಲ್ಕವನ್ನು ಏರಿಸಿಟ್ಟಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಖಾಸಗಿ ಶಾಲೆಗಳ ಮೋಸಕ್ಕೆ ಕಡಿವಾಣ ಹಾಕಿ ನಾಗರಿಕರಿಗೆ ಸಹಾಯ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಬಿ.ಅಮ್ಜದ್‌ಪಾಷ, ನಫೀಜ್‌, ಮಕ್ಸೂದ್‌, ಅಬ್ದುಲ್‌ ಅಲಿ, ಜಾಬೀರ್‌, ಜಬಿ ಮತ್ತಿತರರು ಸಹಿ ಮಾಡಿ ಮನವಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಿದ್ದಾರೆ.

ಕೃಷಿ ವಸ್ತು ಪ್ರದರ್ಶನ: ಸಾವಯವ ಕೃಷಿ ಉತ್ಪನ್ನಗಳ ಪ್ರದರ್ಶನ

0

ಕೃಷಿ ಇಲಾಖೆಯು ರೈತರ ಏಳಿಗೆಗೆ ಸಾಕಷ್ಟು ಯೊಜನೆಗಳನ್ನು ಜಾರಿಗೆ ತಂದಿದೆ. ಕೃಷಿ ಭಾಗ್ಯ ಇನ್ನಿತರೆ ಯೋಜನೆಗಳು ಕೃಷಿ ವಲಯದ ಅಭಿವೃದ್ಧಿಗೆ ಪೂರಕವಾಗಿದ್ದು ಅಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಎಂ.ರಾಜಣ್ಣ ಮನವಿ ಮಾಡಿದರು.
ನಗರದ ರೇಷ್ಮೆ ಇಲಾಖೆಯ ಆವರಣದಲ್ಲಿ ಶುಕ್ರವಾರ ಕಸಬಾ ಹೋಬಳಿ ಮಟ್ಟದ ಕೃಷಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಕೃಷಿ ಇಲಾಖೆಯಿಂದ ನಡೆಯುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಿಳಿಯದ ಹೊಸ ಸಂಗತಿಗಳನ್ನು, ಕೃಷಿಯಲ್ಲಿನ ನೂತನ ಆವಿಷ್ಕಾರಗಳ ಬಗ್ಗೆ ತಿಳಿದು ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದಿಸಿ ಅಧಿಕ ಲಾಭಗಳಿಸುವ ಕೆಲಸ ಆಗಬೇಕಿದೆ ಎಂದರು.
ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಮಾವು, ಸಫೋಟ, ಬಜ್ಜಿ ಮೆಣಸು, ಸೌತೆಕಾಯಿ ಮುಂತಾದ ತರಕಾರಿ, ಸಜ್ಜೆ, ರಾಗಿ ಮೊದಲಾದ ಕಾಳುಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುವೈಧ್ಯಕೀಯ, ಮೀನುಗಾರಿಕೆ ಇಲಾಖೆಯ ಯೋಜನೆಗಳ ಬಗ್ಗೆ ಈ ಸಂದರ್ಭದಲ್ಲಿ ಅರಿವು ಮೂಡಿಸಲಾಯಿತು. ರೈತರೊಂದಿಗೆ ಕೃಷಿ ತಜ್ಞರ ಸಂವಾದ ನಡೆಯಿತು.
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ನಿರ್ಮಲಮುನಿರಾಜು, ಸದಸ್ಯರಾದ ಬಂಕ್‌ಮುನಿಯಪ್ಪ, ತನುಜಾರಘು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ್, ಎಚ್‌.ಜಿ.ಗೋಪಾಲಗೌಡ, ಕೃಷಿ, ರೇಷ್ಮೆ, ತೋಟಗಾರಿಕೆ ಅಧಿಕಾರಿಗಳು ಹಾಜರಿದ್ದರು.

ರೈತ ಸಮಾವೇಶಕ್ಕೆ ಪ್ರಯಾಣ

0

ಶಿಡ್ಲಘಟ್ಟದಲ್ಲಿ ಶುಕ್ರವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಬೆಂಗಳೂರಿನಲ್ಲಿ ನಡೆಯುವ ರೈತ ಸಮಾವೇಶಕ್ಕೆ ಬಸ್‌ನಿಲ್ದಾಣದ ಬಳಿಯಿಂದ ತೆರಳಿದರು. ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್‌, ನಗರಘಟಕ ಅಧ್ಯಕ್ಷ ನಾರಾಯಣಸ್ವಾಮಿ, ವೈ.ರಾಮಕೃಷ್ಣಪ್ಪ, ಕೆ.ವೇಣುಗೋಪಾಲ್‌, ಪಿ.ವಿ.ದೇವರಾಜ್‌, ಹರೀಶ್‌, ಅಶ್ವತ್ಥ್‌ ಮತ್ತಿತರರು ಹಾಜರಿದ್ದರು.

0

ಶಿಡ್ಲಘಟ್ಟದಲ್ಲಿ ಶುಕ್ರವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ತಾಲ್ಲೂಕಿನಲ್ಲಿರುವ ಖಾಸಗಿ ಶಾಲೆಗಳು ಸರ್ಕಾರದ ಆದೇಶಕ್ಕಿಂತ ಹೆಚ್ಚು ಹಣವನ್ನು ಪೋಷಕರಿಂದ ವಸೂಲಿ ಮಾಡುವುದನ್ನು ತಡೆಯಬೇಕೆಂದು ಕೋರಿದರು. ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್‌, ಪ್ರತೀಶ್‌, ಜೆ.ಎಸ್‌.ವೆಂಕಟಸ್ವಾಮಿ, ಪುರುಷೋತ್ತಮ್‌ ಮತ್ತಿತರರು ಹಾಜರಿದ್ದರು.

ಎಂ.ಟೆಕ್‌ (ಟ್ರಾನ್ಸ್‌ಪೋರ್ಟೇಷನ್‌ ಎಂಜಿನಿಯರಿಂಗ್‌) ನಲ್ಲಿ ಪ್ರಥಮ ಸ್ಥಾನ

0

ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿಯ ಎಂ.ಪಿ.ಸಿ.ಎಸ್‌ ಅಧ್ಯಕ್ಷ ಡಿ.ಪಿ.ನಾಗರಾಜ್‌ ಅವರ ಮಗಳು ಡಿ.ಎನ್‌.ನಂದಿನಿ ಎಂ.ಟೆಕ್‌ (ಟ್ರಾನ್ಸ್‌ಪೋರ್ಟೇಷನ್‌ ಎಂಜಿನಿಯರಿಂಗ್‌) ನಲ್ಲಿ ಪ್ರಥಮ ರ್ಯಾಂಧಕ್‌ ಪಡೆದಿದ್ದು, ಶುಕ್ರವಾರ ರಾಜ್ಯಪಾಲರಾದ ವಜುಭಾಯಿ ಆರ್‌.ವಾಲಾ ಸ್ನಾತಕೋತ್ತರ ಪ್ರಮಾಣಪತ್ರವನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಪ್ರಧಾನ ಮಾಡಿದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ

0

ಶಿಡ್ಲಘಟ್ಟ ತಾಲ್ಲೂಕಿನ ಅಂಕತಟ್ಟಿ ಗೇಟ್‌ ಬಳಿಯ ವಿದ್ಯಾದ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಎಚ್‌.ಆರ್‌.ರಚನಾ ಅವರನ್ನು ಕ.ಸಾ.ಪ ವತಿಯಿಂದ ಪುರಸ್ಕರಿಸಿ ನಗದು ಬಹುಮಾನವನ್ನು ನೀಡಲಾಯಿತು. ಕ.ಸಾ.ಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ, ಜಂಗಮಕೋಟೆ ಹೋಬಳಿ ಅಧ್ಯಕ್ಷ ಆರ್‌.ಎ.ಉಮೇಶ್‌, ಗೌರವ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಪ್ರಧಾನ ಸಂಚಾಲಕ ಸುದರ್ಶನ್, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜೆ.ಎಸ್‌.ರಾಮಚಂದ್ರಪ್ಪ, ನಿರ್ದೇಶಕ ಕೇಶವಪ್ಪ, ಪ್ರಾಂಶುಪಾಲ ಕೆ.ಜಿ.ನಾಗರಾಜು, ಉಪನ್ಯಾಸಕರಾದ ಕೆ.ಎಂ.ದೇವರಾಜ್‌, ಟಿ.ವೆಂಕಟೇಶ್‌, ಕೆ.ಎಂ.ರಾಮಾಂಜಪ್ಪ, ಎಸ್‌.ಪಿ.ವೆಂಕಟೇಶ್‌ ಹಾಜರಿದ್ದರು.

ಹುಟ್ಟಿದ ಊರಿಗೆ ಕೀರ್ತಿ ತರಬೇಕು

0

ರೈತ, ಶಿಕ್ಷಕ ಮತ್ತು ಸೈನಿಕರಿಗೆ ಸಮಾಜ ಋಣಿಯಾಗಿರಬೇಕು. ಹುಟ್ಟಿದ ಊರಿಗೆ ಕೀರ್ತಿ ತರಬೇಕು ಮತ್ತು ತಂದೆತಾಯಿಯರಿಗೆ ಗೌರವ ಸಿಗುವಂತೆ ಬದುಕುವುದೇ ಸಾರ್ಥಕ ಜೀವನ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಸಿ.ಆರ್‌.ವಂದನಾ ಮತ್ತು ಬಿ.ಎನ್‌.ವರ್ಷ ಹಾಗೂ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿರುವ ಎಂ.ತನುಶ್ರೀ ಅವರನ್ನು ಕ.ಸಾ.ಪ ವತಿಯಿಂದ ಪುರಸ್ಕರಿಸಿ ಅವರು ಮಾತನಾಡಿದರು.
ವಿದ್ಯೆ ಕದಿಯಲಾಗದ ಆಸ್ತಿ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟಷ್ಟೂ ಮುಂದಿನ ಜೀವನದಲ್ಲಿ ಸುಖವಾಗಿರಬಹುದು. ತಲೆತಗ್ಗಿಸಿ ಪುಸ್ತಕವನ್ನು ಓದಿದಲ್ಲಿ ಅದರಿಂದ ಲಭಿಸುವ ಜ್ಞಾನ ತಲೆಯೆತ್ತುವಂತೆ ಮಾಡುತ್ತದೆ. ಪ್ರತಿಯೊಬ್ಬರೂ ಕನ್ನಡ ಸಾಹಿತ್ಯವನ್ನು ಓದಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಂಗಮಕೋಟೆ ಹೋಬಳಿ ಅಧ್ಯಕ್ಷ ಆರ್‌.ಎ.ಉಮೇಶ್‌ ಮಾತನಾಡಿ, ನಮ್ಮ ಗ್ರಾಮೀಣ ಮಕ್ಕಳು ಕನ್ನಡದ ವಿಷಯದಲ್ಲಿ ಶೇಕಡಾ ನೂರರಷ್ಟು ಅಂಕ ಗಳಿಸಿರುವುದು ಹೆಮ್ಮೆಯ ಸಂಗತಿ. ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ, ಕಾಳಜಿ ಸದಾ ಇರಲಿ. ತಾಂತ್ರಿಕ ಶಿಕ್ಷಣಕ್ಕಾಗಿ ಮುಂದೆ ಇಂಗ್ಲೀಷ್‌ ಭಾಷೆಯ ಮೂಲಕ ಕಲಿಕೆ ನಡೆಸಿದರೂ ತಾಯಿ ನುಡಿಗೆ ಹೆಚ್ಚಿನ ಆದ್ಯತೆಯನ್ನು ಕೊಡಿ. ಪರಿಸರ ಸಂರಕ್ಷಣೆಯ ಕಾಳಜಿ ಇರಲಿ. ಸಾಧ್ಯವಾದಷ್ಟು ಸಸಿಗಳನ್ನು ನೆಟ್ಟು ಭವಿಷ್ಯಕ್ಕಾಗಿ ಹಸಿರನ್ನು ಕೊಡುಗೆಯಾಗಿ ನೀಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿಡ್ಲಘಟ್ಟ ತಾಲ್ಲೂಕು ಹಾಗೂ ಜಂಗಮಕೋಟೆ ಹೋಬಳಿ ಘಟಕದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ತಲಾ ಐನೂರು ರೂಗಳನ್ನು ನೀಡಿ ಪುರಸ್ಕರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ, ಗೌರವ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಪ್ರಧಾನ ಸಂಚಾಲಕ ಸುದರ್ಶನ್, ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಕುಮಾರ್‌, ಉಪನ್ಯಾಸಕರಾದ ಲೋಕೇಶ್‌, ಸುರೇಂದ್ರ, ಭಾರತಿ, ಪುರಸ್ಕೃತ ವಿದ್ಯಾರ್ಥಿಗಳ ಪೋಷಕರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಸಿಗಳನ್ನು ನೆಡುವ ಕಾರ್ಯಕ್ರಮ

0

ಶಿಡ್ಲಘಟ್ಟ ತಾಲ್ಲೂಕಿನ ಮಿತ್ತನಹಳ್ಳಿಯಿಂದ ವೆಂಕಟಾಪುರ ಮುಖ್ಯ ರಸ್ತೆಯ ಬದಿಯಲ್ಲಿ ವೆಂಕಟಾಪುರ ಗ್ರಾಮ ಪಂಚಾಯತಿ ವತಿಯಿಂದ ಸುಮಾರು 400 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ರಘುನಾಥ್‌, ಉಪಾಧ್ಯಕ್ಷ ಚಂದ್ರೇಗೌಡ, ಸದಸ್ಯರಾದ ಹರೀಶ್‌, ನಾಗೇಶ್‌, ದೇವರಾಜ್ ಪಿ.ಡಿ.ಓ ಕಾತ್ಯಾಯಿನಿ ಹಾಜರಿದ್ದರು.

ಸೊಪ್ಪುಗುಟುರ ಹಕ್ಕಿ

0

ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟದಿಂದ ಚಿಂತಾಮಣಿ ರಸ್ತೆಗಳ ಬದಿಯಲ್ಲಿ ಹಲವಾರು ಅತ್ತಿ, ಗೋಣಿ, ಆಲ, ನೇರಳೆ ಮುಂತಾದ ಮರಗಳು ರಸ್ತೆ ಅಗಲೀಕರಣಕ್ಕಾಗಿ ಬಲಿಯಾಗುತ್ತಿರುವುದರಿಂದ, ಇನ್ನೂ ಕಡಿಯದೆ ಉಳಿದ ಗೋಣಿ ಮರವೊಂದರಲ್ಲಿ ಹಣ್ಣು ತಿನ್ನುತ್ತಿರುವ ಸೊಪ್ಪುಗುಟುರ ಹಕ್ಕಿ ಮುಂದಿನ ದಿನಗಳಲ್ಲಿ ನಮ್ಮ ಭಾಗದಲ್ಲಿ ವಿರಳವಾಗಬಹುದು.

ಜಂಗಮಕೋಟೆ ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಸಂಘ ಕಾಂಗ್ರೆಸ್ ವಶ

0

ತಾಲ್ಲೂಕಿನ ಜಂಗಮಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ೬ ಅಭ್ಯರ್ಥಿಗಳು ಜೆ.ಡಿ.ಎಸ್ ಬೆಂಬಲಿತ ಮೂವರು ಅಭ್ಯರ್ಥಿಗಳು, ಕಾಂಗ್ರೆಸ್ ಬಂಡಾಯ ಒಬ್ಬರು, ಗೆಲ್ಲುವ ಮೂಲಕ, ಸಹಕಾರ ಸಂಘವು ಕಾಂಗ್ರೆಸ್ ವಶವಾಗಿದೆ.
ಈಚೆಗೆ ನಡೆದ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ವೈ.ಬಿ.ಗಣೇಶ್, ಎಚ್.ಎಂ.ಮಂಜುನಾಥಗೌಡ, ಜೆ.ಎನ್.ಹನುಮಂತಪ್ಪ, ಮಹಿಳಾ ಮೀಸಲು ಸಾಲಗಾರರ ಕ್ಷೇತ್ರದಿಂದ ಮುನಿರತ್ನಮ್ಮ, ಎಂ.ಮಂಜುಳ, ಸಾಲಗಾರರ ಹಿಂದುಳಿದ ಮೀಸಲು ಎ ವರ್ಗದಿಂದ ಕೆ.ಎನ್.ಮುನಿರಾಜು ಕಾಂಗ್ರೆಸ್ ಬೆಂಬಲಿತರಾಗಿ ಆಯ್ಕೆಯಾಗಿದ್ದಾರೆ. ಠೇವಣಿದಾರರ ಕ್ಷೇತ್ರದಿಂದ ಎ.ಪಿ.ಮುನೇಗೌಡ ಲಾಟರಿ ಮೂಲಕ ಆಯ್ಕೆಯಾದರೆ, ಸಾಲಗಾರರಲ್ಲದ ಕ್ಷೇತ್ರದಿಂದ ಜೆ.ಡಿ.ಎಸ್ ಬೆಂಬಲಿತ ಬಿ.ಎಂ.ರಘುನಾಥ್, ಸಾಲಗಾರರ ಕ್ಷೇತ್ರ ಪರಿಶಿಷ್ಟ ಜಾತಿ/ವರ್ಗ ಮೀಸಲು ಕ್ಷೇತ್ರದಿಂದ ಜೆ.ಎಂ.ವೆಂಕಟೇಶ್, ಸಾಲಗಾರರ ಹಿಂದುಳಿದ ಮೀಸಲು ಎ ವರ್ಗದಿಂದ ಜೆ.ಎನ್.ಶ್ರೀನಿವಾಸ್‌ರವರುಗಳು ಆಯ್ಕೆಯಾಗಿರುವರು.
ಚುನಾವಣಾಧಿಕಾರಿಗಳಾಗಿ ಡಿ.ವಿ.ಮಂಜುನಾಥ್‌ರಾವ್, ವ್ಯವಸ್ಥಾಪಕರಾದ ನಾಗರಾಜು, ಚುನಾವಣಾ ಕಾರ್ಯನಿರ್ವಹಿಸಿದ್ದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದಿರುವ ಶಿಡ್ಲಘಟ್ಟ ತಾಲ್ಲೂಕಿನ ವಿದ್ಯಾರ್ಥಿಗಳು.

0

ಮಳ್ಳೂರು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು
ವಾಣಿಜ್ಯ ವಿಭಾಗ: 1. ಎಂ.ತನುಶ್ರೀ 581(96.83%), 2. ಡಿ.ಮಧುಶ್ರೀ 553(92.16%), 3. ಎಂ.ಶ್ರೀಲಕ್ಷ್ಮಿ 546(91%).
ವಿಜ್ಞಾನ ವಿಭಾಗ: 1. ಬಿ.ಎಸ್.ಕಿರಣ್ 570(95%), 2. ವಿ.ಜಿ.ಲಾವಣ್ಯ 569(94.83%), 3.ಡಿ.ಎಂ.ಮೇಘನಾ 553(92.16%).
ಕಲಾ ವಿಭಾಗ: 1. ಎನ್.ಆನಂದಕುಮಾರ್ 498(83%).
ವಿದ್ಯಾದ್ರಿ ಪದವಿ ಪೂರ್ವ ಕಾಲೇಜು, ಅಂಕತಟ್ಟಿ ಗೇಟ್
ವಿಜ್ಞಾನ ವಿಭಾಗ: 1. ಎಚ್.ಆರ್.ರಚನಾ 583(97.17%), 2. ಆರ್.ಬಿ.ಸತ್ಯಶ್ರೀ 579(96.5%), 3. ಜಿ.ಪ್ರಕಾಂತ್ ಕುಮಾರ್ 576(96%), 4. ಎಂ.ಅಮೂಲ್ಯ 574(95.67%), 5. ಬಿ.ಪ್ರಜ್ವಲ್ ಕುಮಾರ್ 569(94.83%), 6. ಎಂ.ಶಾಲಿನಿ 566(94.33%), 7. ಎಚ್.ಎಂ.ಚೇತನ್ 564(94%), 8. ಎನ್.ಲಾವಣ್ಯ 564(94%), 9. ಡಿ.ಸಿ.ಆಕಾಶ್ 562(93.67%), 10. ಕೆ.ವಿ.ಭೂಮಿಕಾ 562(93.67%).

ಶಿಡ್ಲಘಟ್ಟದ ಫಿಲೇಚರ್ ಗಳ ಬದಲಾವಣೆಗೆ ಉತ್ಸುಕರಾದ ವಿಜ್ಞಾನಿಗಳು

0

ಹಲವು ದಶಕಗಳಿಂದ ರೇಷ್ಮೆ ತಯಾರಿಸುತ್ತಿರುವ ಶಿಡ್ಲಘಟ್ಟದ ಫಿಲೇಚರ್ಗಳಲ್ಲಿ ಯಾವುದೇ ಗುರುತರವಾದ ಬದಲಾವಣೆಗಳನ್ನು ತರಲಾಗಿಲ್ಲ. ರೇಷ್ಮೆ ನೂಲು ಬಿಚ್ಚಾಣಿಕಾ ಘಟಕಗಳನ್ನು ನಡೆಸುವ ರೀಲರುಗಳಿಂದ ಮಾಹಿತಿ ಪಡೆದು ಈ ಬಗ್ಗೆ ಸಂಶೋಧನೆ ನಡೆಸುತ್ತೇವೆ ಎಂದು ತಲಘಟ್ಟಪುರದ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿಗಳಾದ ಎ.ಜಿ.ಶಂಕರ್ ಮತ್ತು ರವೀಂದ್ರ ಬಂಡಿವಾಡ ತಿಳಿಸಿದರು.
ನಗರದ ವಿವಿಧ ರೇಷ್ಮೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಿದ ವಿಜ್ಞಾನಿಗಳು ವಿವಿಧ ರೀಲರುಗಳೊಂದಿಗೆ ರೇಷ್ಮೆ ತಯಾರಿಕಾ ಘಟಕಗಳನ್ನು ಹೇಗೆ ಉನ್ನತೀಕರಣಗೊಳಿಸಬಹುದು ಎಂದು ಚರ್ಚಿಸಿದರು.
ಶಿಡ್ಲಘಟ್ಟದಲ್ಲಿ ರೇಷ್ಮೆ ಗೂಡಿನಿಂದ ಕಚ್ಚಾ ರೇಷ್ಮೆಯನ್ನು ತಯಾರಿಸುವ ಘಟಕಗಳನ್ನು ಫಿಲೇಚರ್ಗಳೆನ್ನುತ್ತಾರೆ. ಅದರ ಪೂರ್ವ ನಾಮ ಇಟಾಲಿಯನ್ ಮಾದರಿ ಕಾಟೇಜ್ ಬೇಸನ್ ಎಂದು. ಈ ಪದ್ಧತಿಯಲ್ಲಿ ಬದಲಾವಣೆಗಳನ್ನು ತಂದಲ್ಲಿ ಸಾಕಷ್ಟು ಹಣ ಉಳಿತಾಯವಾಗುತ್ತದೆ. ಆರೋಗ್ಯವೂ ಸುಧಾರಿಸುತ್ತದೆ ಎಂದು ಹೇಳಿದರು.

ಶಿಡ್ಲಘಟ್ಟದ ರೇಷ್ಮೆ ನೂಲು ಬಿಚ್ಚಾಣಿಕಾ ಘಟಕದಲ್ಲಿ ವಿಜ್ಞಾನಿ ರವೀಂದ್ರ ಬಂಡಿವಾಡ ಉನ್ನತೀಕರಣಗೊಳಿಸಲು ಈಗಿನ ಪದ್ಧತಿಯ ಅಳತೆಗಳನ್ನು ತೆಗೆದುಕೊಂಡರು.
ಶಿಡ್ಲಘಟ್ಟದ ರೇಷ್ಮೆ ನೂಲು ಬಿಚ್ಚಾಣಿಕಾ ಘಟಕದಲ್ಲಿ ವಿಜ್ಞಾನಿ ರವೀಂದ್ರ ಬಂಡಿವಾಡ ಉನ್ನತೀಕರಣಗೊಳಿಸಲು ಈಗಿನ ಪದ್ಧತಿಯ ಅಳತೆಗಳನ್ನು ತೆಗೆದುಕೊಂಡರು.

ಈ ಸಂದರ್ಭದಲ್ಲಿ ಹಾಜರಿದ್ದ ರೀಲರುಗಳು ಹಲವು ಸಲಹೆಗಳನ್ನು ನೀಡಿದರು. ಮೋಟರ್ ಅಳವಡಿಕೆಗೆ ಸಾಕಷ್ಟು ಸ್ಥಳ ಹಾಗೂ ಹಣ ವ್ಯಯವಾಗುತ್ತದೆ. ಈಗಿರುವ ಪದ್ಧತಿಯನ್ನು ಬದಲಾಯಿಸಿ ಟ್ವಿಸ್ಟಿಂಗ್ ಘಟಕಗಳಲ್ಲಿಯ ಮಾದರಿಯಂತೆ ಬಾಕ್ಸ್ ಪದ್ಧತಿಯಲ್ಲಿ ರೂಪಿಸಿದಲ್ಲಿ ಅನುಕೂಲವಾಗುತ್ತದೆ. ರೀಲಿಂಗ್ ಕೆಲಸ ಮಾಡುವವರು ಕುಳಿತುಕೊಳ್ಳುವ ಸ್ಟೂಲನ್ನು ತಿರುಗುವ ರೀತಿಯಲ್ಲಿ ರೂಪಿಸಿದಲ್ಲಿ ಕೆಲಸ ಮಾಡಲು ಸುಲಭವಾಗುತ್ತದೆ. ರೇಷ್ಮೆ ರಾಟೆಯ ಕೆಳಗಡೆ ಕೆಂಡವನ್ನು ಹಾಕಿಟ್ಟು ರೇಷ್ಮೆಯನ್ನು ಒಣಗಿಸುವ ರೀತಿಯನ್ನು ಬದಲಾಯಿಸಿ. ಕುಕ್ಕಿಂಗ್ ಮಾಡುವ ಒಲೆಯ ಬಿಸಿಯನ್ನು ಬಳಸಿಕೊಂಡು ಪೈಪ್ ಮೂಲಕ ಹಾಯಿಸಿ ಮಲ್ಟಿ ಎಂಡ್ನಲ್ಲಿ ರೂಪಿಸಿರುವಂತೆ ಇಲ್ಲಿಯೂ ರೂಪಿಸಿ. ಇದರಿಂದ ಹುಣಸೆ ಸೌದೆಗಾಗಿ ವ್ಯಯಿಸುವ ಸಾವಿರಾರು ರೂಗಳು ಉಳಿತಾಯವಾಗುತ್ತದೆ. ಪುಲ್ಲಿಗಳಿಂದ ರಾಟೆಗೆ ಸಾಗುವ ರೇಷ್ಮೆ ದಾರದ ದೂರವನ್ನು ವೈಜ್ಞಾನಿಕವಾಗಿ ಸ್ಥಿರಗೊಳಿಸಿ. ಎರಡು ಬೇಸನ್ಗಳ ಒಂದು ಟೇಬಲ್ ಕಟ್ಟಿಸಲು ಸುಮಾರು 3 ಸಾವಿರ ರೂಗಳಾಗುತ್ತದೆ. ಇದರ ಬದಲು ಕಬ್ಬಿಣದ ಸ್ಟಾಂಡ್ ವೈಜ್ಞಾನಿಕವಾಗಿ ರೂಪಿಸಿಕೊಡಿ. ರೀಲಿಂಗ್ ಬೇಸನ್ ಮುಂದೆ ಇರುವ ಕುಕ್ಕಿಂಗ್ ಬೇಸನ್ ಕಟ್ಟಿಸುವ ಬದಲಿಗೆ ಬೇರೆಡೆ ಮಾಡಿದಲ್ಲಿ ಸಾಕಷ್ಟು ಉಪಯೋಗಗಳಿವೆ. ರೀಲಿಂಗ್ ಬೇಸನ್ಗೆ ಕೂಡ ನೀವು ಹೊಸ ರೂಪ ಕೊಟ್ಟಲ್ಲಿ ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.
ರೀಲರುಗಳ ಸಲಹೆಯನ್ನು ಪಡೆದು ರೇಷ್ಮೆ ಘಟಕಗಳಿಗೆ ಭೇಟಿ ನೀಡಿದ ವಿಜ್ಞಾನಿಗಳು ಅಲ್ಲಿ ಕೆಲಸ ಮಾಡುವವರಿಂದಲೂ ಸಮಸ್ಯೆಗಳನ್ನು ಕೇಳಿ ಮಾಹಿತಿ ಪಡೆದರು.
ರೇಷ್ಮೆ ನೂಲು ಬಿಚ್ಚಾಣಿಕೆದಾರರಾದ ಡಿ.ಎಂ.ಜಗದೀಶ್ವರ್, ಎಸ್.ಸಮೀವುಲ್ಲಾ, ಎ.ಆರ್.ಅಬ್ದುಲ್ ಅಜೀಜ್, ಜಿ.ರೆಹಮಾನ್, ಅನಂತಪದ್ಮನಾಭ, ಎಸ್.ಡಿ.ಸಲೀಂ, ಮಹಬೂಬ್ಪಾಷ, ಜೋಹರ್ಪಾಷ, ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕರಾದ ಎಚ್.ಆರ್.ಪ್ರಭಾಕರ್, ಮಯ್ನುದ್ದೀನ್, ಸಹಾಯಕ ನಿರ್ದೇಶಕರಾದ ನರಸಿಂಹಮೂರ್ತಿ, ಶಶಿಧರ್, ವಿಸ್ತರಣಾಧಿಕಾರಿಗಳಾದ ರಾಮಕುಮಾರ್, ಕೃಷ್ಣಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

ಒಕ್ಕೂಟಗಳ ರಚನೆಯ ಮೂಲಕ ಸ್ವಸಹಾಯ ಸಂಘಗಳ ಬಲವರ್ಧನೆ

0

ಸ್ತ್ರೀ ಶಕ್ತಿ ಸಂಘದ ಸದಸ್ಯರು ಪರಸ್ಪರ ಸಹಕಾರ ನೀಡುತ್ತಾ, ಸಹಾಯ ಮಾಡುವ ಮೂಲಕ ಆರ್ಥಿಕವಾಗಿ ಮುಂದುವರೆಯುವುದರೊಂದಿಗೆ ಸಂಘದ ಯಶಸ್ಸಿಗೆ ಶ್ರಮಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕ ಆನಂದಸುವರ್ಣ ಹೇಳಿದರು.
ತಾಲೂಕಿನ ವೈ ಹುಣಸೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿಡ್ಲಘಟ್ಟ ವಲಯ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ನೂತನ ಒಕ್ಕೂಟಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿರುವ ನಿರ್ಗತಿಕ ಮಾಸಾಶನ, ಜೀವ ಭದ್ರತಾ ವಿಮೆ, ಸುಜ್ಞಾನನಿಧಿ ಶಿಷ್ಯವೇತನ ದಂತಹ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಸ್ತ್ರೀ ಶಕ್ತಿ ಸಂಘದ ಸದಸ್ಯರು ನಾಗರಿಕರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದರು.
ಇದೀಗ ತಾಲ್ಲೂಕಿನ ಶೀಗೆಹಳ್ಳಿ, ಕೊತ್ತನೂರು ಹಾಗು ದೊಡ್ಡದಾಸೇನಹಳ್ಳಿಯಲ್ಲಿ ಒಕ್ಕೂಟಗಳ ಉದ್ಘಾಟನೆ ನೆರವೇರಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಒಕ್ಕೂಟಗಳ ಸ್ಥಾಪನೆ ಮಾಡಲಾಗುವುದು. ಒಕ್ಕೂಟಗಳ ಉದ್ದೇಶ ಸ್ತ್ರೀ ಶಕ್ತಿ ಸಂಘಗಳ ಬಲವರ್ಧನೆ, ಮಹಿಳೆಯರಿಗೆ ನಾಯಕತ್ವ ನೀಡುವುದು ಹಾಗೂ ಆ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವುದಾಗಿದೆ ಎಂದರು.
ಕೊತ್ತನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಧಮ್ಮರವಿ, ಒಕ್ಕೂಟಗಳ ಅಧ್ಯಕ್ಷೆಯರಾದ ಸುಕನ್ಯಾ, ಶಾರದಮ್ಮ, ಆರತಿ, ಗ್ರಾಮಾಭಿವೃದ್ಧಿ ಸಂಸ್ಥೆಯ ವಲಯ ಮೇಲ್ವಿಚಾರಕಿ ಮಮತಾ, ತಾಲ್ಲೂಕು ಯೋಜನಾಧಿಕಾರಿ ಯೋಗೀಶ್ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

ಜೂನ್ ೨ರಂದು ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಿ

0

ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಸರಿಸಮಾನವಾಗಿ ವೇತನ ಭತ್ಯೆಗಳನ್ನು ನೀಡಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಸರ್ಕಾರಿ ನೌಕರರ ಸಂಘವು, ಜೂನ್ ೨ ರಂದು ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರು ಹಾಜರಿಯಾಗುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದೆ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜರಾವ್ ಹೇಳಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಗುರುವಾರ ಉಪನಿರ್ದೇಶಕರ ಕಛೇರಿಯಲ್ಲಿ ಮಾತನಾಡಿದ ಅವರು, ನೆರೆಯ ತೆಲಂಗಾಣ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ನೀಡುವಂತೆ ವೇತನ ಭತ್ಯೆಯನ್ನು ನೀಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಹಲವು ಬಾರಿ ಮನವಿಗಳನ್ನು ಸಲ್ಲಿಸಲಾಗಿತ್ತು. ಮೈಸೂರಿನ ಸಮಾವೇಶದಲ್ಲಿ ಮತನಾಡಿದ್ದ ಮುಖ್ಯಮಂತ್ರಿಗಳು, ಈ ವಿಚಾರವನ್ನು ಪರಿಗಣಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಪರಿಗಣಿಸಿಲ್ಲ, ಕೇಂದ್ರ ಸರ್ಕಾರದ ೭ ನೇ ಆಯೋಗವು ತನ್ನ ಶಿಫಾರಸ್ಸುಗಳನ್ನು ಸಲ್ಲಿಸಿ, ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳಲ್ಲಿ ಕನಿಷ್ಟ ೨೩.೫೫ ರಷ್ಟು ಹೆಚ್ಚಳವನ್ನು ಮಾಡಲು ಶಿಫಾರಸ್ಸು ಮಾಡಿರುತ್ತದೆ. ಆದರೆ ಸರ್ಕಾರಿ ನೌಕರರ ಸಂಘಟನೆಗಳು ೭ ನೇ ವೇತನ ಆಯೋಗವು ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗೆ ಕೈಗೊಂಡ ಮಾನದಂಡ ಅವೈಜ್ಞಾನಿಕವಾಗಿ ಕೂಡಿದ್ದು, ನೌಕರರಿಗೆ ಅನ್ಯಾಯವಾಗಿರುವುದರಿಂದ ಎಲ್ಲಾ ನೌಕರರು ಜೂನ್ ೨ ರಂದು ಗೈರುಹಾಜರಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ರೇಷ್ಮೆಗೂಡು ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ಮಾತನಾಡಿ, ಜೂನ್ ೨ ರಂದು ಸರ್ಕಾರಿ ನೌಕರರ ಸಂಘದ ವತಿಯಿಂದ ಕರೆ ನೀಡಿರುವ ಸಾಮೂಹಿಕ ಗೈರುಹಾಜರಿಗೆ ಮಾರುಕಟ್ಟೆಯ ಅಧಿಕಾರಿಗಳು ಸಹಕಾರ ನೀಡುತ್ತಿರುವುದರಿಂದ ಅಂದು ರೈತರು ಗೂಡನ್ನು ತರದಂತೆ ಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡಲಾಗುತ್ತದೆ ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ಎನ್.ಸುಬ್ಬಾರೆಡ್ಡಿ, ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ಅಕ್ಕಲರೆಡ್ಡಿ. ಎಸ್.ಎಂ, ಖಜಾಂಚಿ ಆರ್. ಕೇಶವರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಗೌರವ ಅಧ್ಯಕ್ಷ ಸಿ.ಎಂ.ಮುನಿರಾಜು, ಶ್ರೀರಾಮಯ್ಯ, ನರೇಂದ್ರಬಾಬು, ಲಲಿತಮ್ಮ, ಪದ್ಮಾವತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅರ್ಹರಿಗೆ ಸರ್ಕಾರದ ಸೌಲತ್ತುಗಳು ತಲುಪಲಿ

0

ಸರ್ಕಾರದ ಸೌಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸವನ್ನು ಮಾಡಬೇಕು ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಹೇಳಿದರು.
ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿನ ಬಹುತೇಕ ರೈತರು ಹಾಗೂ ನಾಗರಿಕರಿಗೆ ಸರ್ಕಾರಿ ಸೌಲತ್ತುಗಳ ಬಗ್ಗೆ ಮಾಹಿತಿಯಿರುವುದಿಲ್ಲ. ಕೆಲವು ಮಂದಿ ಮಧ್ಯವರ್ತಿಗಳ ಮುಖಾಂತರವೇ ಸೌಲಭ್ಯಗಳು ವಿತರಣೆಯಾಗುತ್ತಿರುವುದು ಕೇಳಿ ಬರುತ್ತಿದ್ದು, ಪ್ರತಿಯೊಂದು ಇಲಾಖೆಯಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸ್ಥಳೀಯ ಗ್ರಾಮ ಪಂಚಾಯತಿಗಳಲ್ಲಿ ನಡೆಯುವಂತಹ ಗ್ರಾಮಸಭೆಗಳಲ್ಲಿ ಭಾಗವಹಿಸಿ ಜನರಿಗೆ ಮಾಹಿತಿ ನೀಡಬೇಕು. ವಾರ್ಷಿಕವಾಗಿ ನೀಡಿರುವ ನಿರ್ಧಿಷ್ಟವಾದ ಗುರಿಯನ್ನು ಮುಟ್ಟಿ ತಾಲ್ಲೂಕಿಗೆ ಬರುವಂತಹ ಅನುದಾನಗಳು ಸಮರ್ಪಕವಾಗಿ ಸದ್ಬಳಕೆಯಾಗಬೇಕಾದರೆ, ಅಧಿಕಾರಿಗಳ ಸಹಕಾರ ಬಹಳ ಮುಖ್ಯವಾಗಿ ಬೇಕು ಎಂದರು.
ತಾಲ್ಲೂಕಿನಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿಕೊಂಡಿರುವ ಸರ್ಕಾರಿ ಶಾಲೆಗಳಲ್ಲಿನ ಟಾಪ್ ೧೦ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳನ್ನು ವಿತರಣೆ ಮಾಡಲಾಗುತ್ತದೆ. ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಯೋಜನೆಯಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಡುಗೆ ಸಿಬ್ಬಂದಿಗೆ ಸಹಕಾರಿಯಾಗುವಂತೆ ಫೈರ್ ಸೇಪ್ಟಿಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಉಪಾಧ್ಯಕ್ಷ ಎಚ್. ನರಸಿಂಹಯ್ಯ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಚತೆಯಿಲ್ಲದೆ, ಆಸ್ಪತ್ರೆಗೆ ಬರುವಂತಹ ರೋಗಿಗಳಿಂದ ಅನೇಕ ದೂರುಗಳು ಕೇಳಿ ಬರುತ್ತಿದ್ದು, ಸ್ವಚ್ಚತೆಯನ್ನು ಕಾಪಾಡಿಕೊಳ್ಳುವಂತೆ ಆಸ್ಪತ್ರೆಯ ವೈದ್ಯರಿಗೆ ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಮಾತನಾಡಿ, ಜಂಗಮಕೋಟೆ ಹೋಬಳಿಯ ಮೇಲೂರು ಭಾಗದಲ್ಲಿ ಪದೇ ಪದೇ ಆಲಿಕಲ್ಲಿನ ಮಳೆಯಾಗಿ ದ್ರಾಕ್ಷಿ ಬೆಳೆಗಳು ಅಪಾರ ಪ್ರಮಾಣದಲ್ಲಿ ನಷ್ಟವಾಗಿದ್ದು, ತೋಟಗಾರಿಕೆಯ ದ್ರಾಕ್ಷಿ ಬೆಳೆಗಳು ಸೇರಿದಂತೆ ಎಲ್ಲಾ ಬೆಳೆಗಳಿಗೆ ರೈತರು ಬೆಳೆವಿಮೆ ಮಾಡಿಸಿಕೊಳ್ಳಲು ಅವಕಾಶವಿದೆ, ರೈತರು ಶೇ. ೫ ರಷ್ಟು ಮಾತ್ರ ವಿಮೆ ಹಣವನ್ನು ಕಟ್ಟಬೇಕಾಗಿದ್ದು, ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ರೈತರಿಗೆ ಹನಿನೀರಾವರಿಗೆ ಶೇ. ೯೦ ರಷ್ಟು ಸಹಾಯಧನ ನೀಡಲಾಗುತ್ತಿದ್ದು, ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಎಇಇ ಶಿವಾನಂದ, ಬೆಸ್ಕಾಂ ಇಲಾಖೆ ಎಇಇ ಬೈರೇಗೌಡ, ರೇಷ್ಮೆ ಇಲಾಖೆ ಸಹಾಯಕ ನಿರ್ದೆಶಕ ಎಂ.ಸಿ.ಚಂದ್ರಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಸಿ.ದೇವೇಗೌಡ, ಕೈಗಾರಿಕೆ ಇಲಾಖೆಯ ಶಾಜೀಯಾಖಾನಮ್ ಮೊದಲಾದ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವಿವಿಧ ವಿಷಯಗಳಲ್ಲಿ ಶೇಕಡಾ ನೂರರಷ್ಟು ಅಂಕ ಪಡೆದ ವಿದ್ಯಾರ್ಥಿಗಳು

0

ತಾಲ್ಲೂಕಿನ ಮಳ್ಳೂರು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೆಲವರು ಕೆಲ ವಿಷಯಗಳಲ್ಲಿ ಶೇಕಡಾ ನೂರರಷ್ಟು ಅಂಕಗಳನ್ನು ಗಳಿಸಿದ್ದಾರೆ.
ಸಿ.ಆರ್.ವಂದನಾ ಮತ್ತು ಬಿ.ಎಸ್.ವರ್ಷ ಕನ್ನಡದಲ್ಲಿ 100, ಬಿ.ಎಸ್.ಕಿರಣ್ ಜೀವಶಾಸ್ತ್ರದಲ್ಲಿ 100, ಡಿ.ಮಧುಶ್ರೀ, ಎಂ.ವಿ.ಪದ್ಮಶ್ರೀ, ಎಚ್.ಶಾಲಿನಿ, ಎಂ.ಶಂಕರ್ ಮತ್ತು ಎಚ್.ಟಿ.ಮಲ್ಲಿಕಾ ಬಿಸಿನೆಸ್ ಸ್ಟಡೀಸ್ನಲ್ಲಿ 100, ಡಿ.ಎಂ.ಮೇಘನಾ ಭೌತಶಾಸ್ತ್ರದಲ್ಲಿ 100 ಅಂಕಗಳನ್ನು ಪಡೆದಿದ್ದರೆ, ಎಂ.ತನುಶ್ರೀ ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ ಮತ್ತು ಕಂಪ್ಯೂಟರ್ ಸೈನ್ಸ್ ಮೂರು ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದಿರುವ ಶಿಡ್ಲಘಟ್ಟ ತಾಲ್ಲೂಕಿನ ವಿದ್ಯಾರ್ಥಿಗಳು.

0

ಡಾಲ್ಫಿನ್ ವಿದ್ಯಾಸಂಸ್ಥೆ, ಶಿಡ್ಲಘಟ್ಟ
1. ಮುಸ್ಕಾನ್ ತಸ್ಮಿಯಾ, ೫೫೯ (೯೩.೧೬ %), 2. ಶಾಗುಫ್ತಾ ೫೪೯ (೯೧.೫ %), 3. ವಿಭಾ.ಕೆ.ಎನ್. ೫೩೭ (೮೯.೫ %), 4. ಪವಿತ್ರ ೫೨೬ (೮೭.೬೬ %), 5. ನುಸರತ್ ಭಾನು ೫೨೫ (೮೭.೫ %)
ಬಿ.ಜಿ.ಎಸ್.ವಿದ್ಯಾಸಂಸ್ಥೆ. ಹನುಮಂತಪುರ.
1. ಸರ್ವೇಶ್ಕುಮಾರ್, ೫೬೫ (೯೪.೧೬%), 2. ಹರೀಶ್ಕುಮಾರ್.ಪಿ. ೫೬೨ (೯೪%), 3. ಮೇಘಶ್ರೀ.ಜಿ. ೫೫೧ (೯೨%), 4. ಮಧುಸೂದನ್.ಪಿ.ಆರ್. ೫೪೫ (೯೧%), 5. ವಿಶ್ವಾಸ್ಗೌಡ.ಸಿ. ೫೪೫ (೯೧%)