Home Blog Page 481

ಜೆಡಿಎಸ್ ಪಕ್ಷಕ್ಕೆ ಜನಬೆಂಬಲ

0

ಕಳೆದ ಭಾರಿಯ ಚುನಾವಣೆಯಲ್ಲಿ ತಾಲ್ಲೂಕಿನ ಜಂಗಮಕೋಟೆ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಸದಸ್ಯರ ಕಾರ್ಯವೈಖರಿ ಕಂಡಿರುವ ಈ ಭಾಗದ ಜನತೆ ಈ ಭಾರಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ಹೇಳಿದರು.
ತಾಲ್ಲೂಕಿನ ತೊಟ್ಟಗಾನಹಳ್ಳಿ ಗ್ರಾಮದಲ್ಲಿ ಜಂಗಮಕೋಟೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ನಳಿನಾ ಮಂಜುನಾಥ್ ಹಾಗೂ ಭಕ್ತರಹಳ್ಳಿ ತಾಲ್ಲೂಕು ಪಂಚಾಯತಿ ಅಭ್ಯರ್ಥಿ ಚಂದ್ರಕಲಾ ಬೈರೇಗೌಡ ಪರ ಮತಯಾಚಿಸಿ ಅವರು ಮಾತನಾಡಿದರು.
ಕಳೆದ ಭಾರಿಯ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಜಂಗಮಕೋಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಂಬದಹಳ್ಳಿ ಸತೀಶ್ ಸಂಸದ ಕೆ.ಎಚ್.ಮುನಿಯಪ್ಪರ ಅಣ್ಣನ ಮಗನಾಗಿದ್ದು ಜಂಗಮಕೋಟೆ ಕ್ಷೇತ್ರವನ್ನು ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಬಹುದಿತ್ತು. ಆದರೆ ಚುನಾವಣೆಯಲ್ಲಿ ಗೆದ್ದು ಹೋದಂತಹ ಅಭ್ಯರ್ಥಿ ಸತೀಶ್ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದಿರಲಿ, ಕನಿಷ್ಠ ಕ್ಷೇತ್ರಕ್ಕೆ ಭೇಟಿಯೂ ನೀಡಿಲ್ಲ ಎಂದರು.
ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದಲ್ಲಿ ಮಾಜಿ ಶಾಸಕ ದಿವಂಗತ ಎಸ್.ಮುನಿಶಾಮಪ್ಪ ನವರ ಅಧಿಕಾರಾವಧಿಯಲ್ಲಿ ಆಗಿರುವಂತಹ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಹಾಲಿ ಶಾಸಕ ಎಂ.ರಾಜಣ್ಣ ನವರು ಗೆದ್ದ ಮೇಲೆ ಮಾಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಮೂಲಕ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಮತ ಯಾಚಿಸುತ್ತಿದ್ದು ಈ ಭಾರಿ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಾಲಗೌಡ, ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೋಟೆ ಚನ್ನೇಗೌಡ, ಮುಖಂಡರಾದ ಎಸ್.ಎನ್.ವೆಂಕಟೇಶಪ್ಪ, ತೊಟ್ಲಗಾನಹಳ್ಳಿ ತ್ಯಾಗರಾಜ್, ಟಿ.ವಿ.ಕೃಷ್ಣಪ್ಪ, ನಾರಾಯಣಸ್ವಾಮಿ, ಬೈರೇಗೌಡ, ಕೆಂಪೇಗೌಡ, ಮಂಜುನಾಥ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕಾಂಗ್ರೆಸ್ ಪಕ್ಷದಿಂದ ಗ್ರಾಮೀಣಾಭಿವೃದ್ಧಿ

0

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಉದ್ಯೋಗಖಾತ್ರಿ (ನರೇಗಾ) ಯೋಜನೆ ಜಾರಿ ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ದೊಡ್ಡದಾಸರಹಳ್ಳಿ ಗ್ರಾಮದಲ್ಲಿ ಬುಧವಾರ ಚೀಮಂಗಲ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗೆ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ಶೇಕಡ ೫೦ ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದು, ೪ ಕೋಟಿ ರೈತರ ಸಾಲ ಮನ್ನಾ ಮಾಡಿದ ಯುಪಿಎ ಸರ್ಕಾರದ ಸಾಧನೆಗಳನ್ನು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ಮನೆ ಮನೆಗೂ ಹೋಗಿ ತಿಳಿಸುವಂತಹ ಕೆಲಸ ಮಾಡಬೇಕು.
ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಅನ್ನಭಾಗ್ಯ ಯೋಜನೆ, ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಅಲ್ಪಸಂಖ್ಯಾತರಿಗಾಗಿ ಶಾದಿಭಾಗ್ಯದಂತಹ ಮಹತ್ತರ ಯೋಜನೆಗಳನ್ನು ಜಾರಿಗೊಳಿಸಿದ್ದು ರಾಜ್ಯ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಈ ಭಾರಿಯ ಚುನಾವಣೆ ಎದಿರುಸುತ್ತಿದ್ದು ಕಾಂಗ್ರೆಸ್ ಪಕ್ಷಕ್ಕೆ ಜನಬೆಂಬಲವಿದೆ ಎಂದರು.
ಮುಖಂಡರಾದ ಆರ್.ಶ್ರೀನಿವಾಸ್, ಡಿ.ವಿ.ವೆಂಕಟೇಶ್, ಚೀಮಂಗಲ ತಾಲ್ಲೂಕು ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ಸಂತೋಷ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಹೊಲಕ್ಕೆ ಹೋಗಿ ಮತಯಾಚನೆ

0

ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಸಿ.ವಿ.ಲೋಕೇಶ್ಗೌಡ ಹೊಲದಲ್ಲಿ ಕೆಲಸ ಮಾಡುವವರ ಬಳಿ ಮತಯಾಚಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನ

0

ಶಿಡ್ಲಘಟ್ಟದ ಮಡಿವಾಳ ಮಾಚಿದೇವ ಸಂಘದ ಕಚೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸಿ.ಬಿ. ಹನುಮಂತಪ್ಪ ಮತಯಾಚಿಸಿದರು. ಶ್ರೀರಾಮಯ್ಯ, ನಾರಾಯಣಸ್ವಾಮಿ, ಪ್ರಕಾಶ್, ದೇವರಾಜ್, ಚನ್ನಕೃಷ್ಣ, ಪಿಳ್ಳಣ್ಣ, ಗಜೇಂದ್ರ, ಶ್ರೀರಾಮರೆಡ್ಡಿ, ನರಸಿಂಹರಾಜು ಹಾಜರಿದ್ದರು.

ಚುನಾವಣಾ ಪ್ರಚಾರ

0

1. ತಾಲ್ಲೂಕಿನ ಕಾಚನಾಯಕನಹಳ್ಳಿ
1. ತಾಲ್ಲೂಕಿನ ಕಾಚನಾಯಕನಹಳ್ಳಿ

1. ಶಿಡ್ಲಘಟ್ಟ ತಾಲ್ಲೂಕಿನ ಕಾಚನಾಯಕನಹಳ್ಳಿಯಲ್ಲಿ ಮಂಗಳವಾರ ಸಿಪಿಐಎಂ ಪಕ್ಷದ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ಸದಾನಂದ ಬೆಂಬಲಿಗರೊಂದಿಗೆ ಮತಯಾಚಿಸಿದರು. ಕುಂದಲಗುರ್ಕಿ ಮುನೀಂದ್ರ, ವೆಂಕಟೇಶಮೂರ್ತಿ, ಬಾಬು, ಮಂಜು, ಮುರಳಿ ಹಾಜರಿದ್ದರು.
 
 
 
 
2. ಲಕ್ಕಹಳ್ಳಿ
2. ಲಕ್ಕಹಳ್ಳಿ

2. ಶಿಡ್ಲಘಟ್ಟ ತಾಲ್ಲೂಕಿನ ಲಕ್ಕಹಳ್ಳಿ ಗ್ರಾಮದಲ್ಲಿ ಮಂಗಳವಾರ ಅಬ್ಲೂಡು ಜಿಲ್ಲಾ ಪಂಚಾಯತಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಂಕ್ಮುನಿಯಪ್ಪ ಹಾಗೂ ಹಂಡಿಗನಾಳ ತಾಲ್ಲೂಕು ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮೀನಾರಾಯಣ ಮತಯಾಚಿಸಿದರು.

ಮಕ್ಕಳು ಬರೆಯಲು ಪ್ರೋತ್ಸಾಹಿಸಿ

0

ಮಕ್ಕಳು ತಮ್ಮ ಭಾವವನ್ನು ಪದಗಳ ಮೂಲಕ ಬರೆಯುವ ವಾತಾವರಣವನ್ನು ಸೃಷ್ಠಿಸಿದಾಗ ಅವರಲ್ಲಿ ಬರೆಯುವ ಆತ್ಮವಿಶ್ವಾಸ ಮೂಡುತ್ತದೆ ಎಂದು ಮುಖ್ಯ ಶಿಕ್ಷಕಿ ಸರಸ್ಪತಮ್ಮ ತಿಳಿಸಿದರು.
ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಕವಿಗದ್ದಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ರಚಿಸಿದ ಕವನಗಳು ಬಾಲ್ಯದ ಭಾವನೆಗಳನ್ನು ತೆರೆದಿಡುತ್ತದೆ. ಕಲಿಯುವ ಮಕ್ಕಳು ಪಠ್ಯದ ಚಟುವಟಿಕೆಗಳಿಗಷ್ಟೇ ಸೀಮಿತವಾಗದೇ ಬಾಲ ಕವಿಗದ್ದಿಗೆಯಂಥಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ರಚನೆಯ ಬಗ್ಗೆ ಹೊಳಹುಗಳು ಸಿಗುತ್ತದೆ. ಹೊಸ ಆಲೋಚನೆಗಳು ಮೂಡುತ್ತವೆ. ಅರ್ಥ ಪೂರ್ಣವಾದ ಸಾಹಿತ್ಯ ಮಕ್ಕಳ ಕವನಗಳ ಮೂಲಕ ಹೊರ ಹೊಮ್ಮಲು ಸಹ ಸಾದ್ಯವಾಗುತ್ತದೆ ಎಂದು ತಿಳಿಸಿದರು.
ಚುಟುಕು ಸಾಹಿತ್ಯ ಪರಿಷತ್ ಉಪಾದ್ಯಕ್ಷ ದೇವರಮಳ್ಳೂರು ಚನ್ನಕೃಷ್ಣ ಮಾತನಾಡಿ, ಪ್ರತಿಯೊಬ್ಬರು ಸುಸಂಸ್ಕೃತ ವ್ಯಕ್ತಿಗಳಾಗಲು ಸಾಹಿತ್ಯದ ಪಾತ್ರ ಬಹು ದೊಡ್ಡದು. ಹಿರಿಯ ಸಾಹಿತಿಗಳ ರಚನೆಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಸಮಾಜ ಸುಧಾರಣೆಯ ಕನಸುಗಳನ್ನು ಸಾಹಿತ್ಯದ ಮೂಲಕ ಮಾಡಬಹುದೆಂದು ತಿಳಿಸಿದರು.
ಕವಿಗದ್ದಿಗೆಯಲ್ಲಿ ಬಾಲ ಕವಿಗಳಾದ ಅನುಷಾ, ಪವಿತ್ರ, ಪುಷ್ಪ, ರಘು, ಹರೀಶ್, ಮಲ್ಲಕಾ, ವರಲಕ್ಷ್ಮಿ, ರಮ್ಯ, ದೀಪ, ಅಕ್ಷಯ ನಮ್ರತ, ದೇವರಾಜು, ನಾಗರತ್ನ, ಪ್ರದೀಪ, ಪುರುಷೋತ್ತಮ, ವೇಣು, ಲಕ್ಷ್ಮಿ, ಮುನಿರಾಜು, ಮಧು ಸ್ವರಚಿತ ಕವನಗಳನ್ನು ವಾಚಿಸಿದರು.
ಚುಟುಕು ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಈಧರೆ ತಿರುಮಲಪ್ರಕಾಶ್, ಶಾಲೆಯ ಸಹ ಶಿಕ್ಷಕರಾದ ಎಂ.ದೇವರಾಜ್, ಡಿ.ಎಸ್ ಶ್ರೀಕಾಂತ್, ಎಚ್.ಆರ್ ಮಂಜುನಾಥ್, ಶಿಕ್ಷಕಿ ತ್ರಿವೇಣಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಚುನಾವಣಾ ಪ್ರಚಾರ

0

1. ಸುಗಟೂರು
1. ಸುಗಟೂರು

1. ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಜಂಗಮಕೋಟೆ ಜಿಲ್ಲಾ ಪಂಚಾಯತಿ ಅಭ್ಯರ್ಥಿ ನಳಿನಾ ಮಂಜುನಾಥ್ ಮತ್ತು ಜಂಗಮಕೋಟೆ ತಾಲ್ಲೂಕು ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ಜೆ.ಎಂ.ವೆಂಕಟೇಶ್ ಸೋಮವಾರ ಮತಯಾಚಿಸಿದರು.
 
 
 
 
2. ಪಲಿಚೆರ್ಲು
2. ಪಲಿಚೆರ್ಲು

 
 
2. ಶಿಡ್ಲಘಟ್ಟ ತಾಲ್ಲೂಕಿನ ಪಲಿಚೆರ್ಲು ಗ್ರಾಮದಲ್ಲಿ ಸೋಮವಾರ ಸಿಪಿಐಎಂ ಪಕ್ಷದ ಹಿರಿಯ ಮುಖಂಡ ಕೆ.ಎಂ.ವೆಂಕಟೇಶಪ್ಪ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ಸದಾನಂದ ಅವರ ಪರವಾಗಿ ಮತಯಾಚಿಸಿದರು. ಕುಂದಲಗುರ್ಕಿ ಮುನೀಂದ್ರ, ವೆಂಕಟೇಶಮೂರ್ತಿ, ಬಾಬು, ಮಂಜು, ಮುರಳಿ ಹಾಜರಿದ್ದರು.
 
 
 
 
 
 
ಹಂಡಿಗನಾಳ
ಹಂಡಿಗನಾಳ

 
 
3. ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಅಬ್ಲೂಡು ಜಿಲ್ಲಾ ಪಂಚಾಯತಿ ಅಭ್ಯರ್ಥಿ ವೆಂಕಟೇಶಪ್ಪ ಮತ್ತು ಹಂಡಿಗನಾಳ ತಾಲ್ಲೂಕು ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ನಾರಾಯಣಸ್ವಾಮಿ ಮತಯಾಚಿಸಿದರು.
 
 

ಜೆಡಿಎಸ್ ಮುಖಂಡರು ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದ್ದಾರೆ

0

ಆನೇಮಡುಗು ಗ್ರಾಮದಲ್ಲಿ ಮತ ಯಾಚಿಸುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಗ್ರಾಮದ ಮೋಹನ್ ಎಂಬ ವ್ಯಕ್ತಿ ಗ್ರಾಮದಲ್ಲಿ ಮತಯಾಚಿಸದಂತೆ ಬೆದರಿಸಿದ್ದಾನೆ. ಹಾಗಾಗಿ ನನಗೆ ರಕ್ಷಣೆ ನೀಡುವುದರ ಜೊತೆಗೆ ಗ್ರಾಮದಲ್ಲಿ ಮುಕ್ತ ಮತದಾನ ನಡೆಯುವಂತೆ ಕ್ರಮ ಜರುಗಿಸಬೇಕು ಎಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿರುವುದಾಗಿ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ವಿ.ಲೋಕೇಶ್ಗೌಡ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಯಾಚಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಫೆಬ್ರುವರಿ ೬ ರ ಶನಿವಾರ ಸಂಜೆ ತಾಲ್ಲೂಕಿನ ಆನೆಮಡುಗು ಗ್ರಾಮದಲ್ಲಿ ಮತಯಾಚನೆ ನಡೆಸುವಾಗ ಸ್ಥಳಕ್ಕೆ ಜೆಡಿಎಸ್ ಅಭ್ಯರ್ಥಿ ಡಾ.ಜಯರಾಮರೆಡ್ಡಿಯವರ ಚಿಕ್ಕಪ್ಪನ ಮಗ ಮೋಹನ್ಎಂಬಾತ ಬಂದು ಇನ್ನು ಸ್ವಲ್ಪ ಹೊತ್ತು ಇಲ್ಲೇ ಇದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಸುವುದರೊಂದಿಗೆ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ.
ಈ ಹಿಂದೆಯೂ ಅದೇ ಗ್ರಾಮದಲ್ಲಿ ಚುನಾವಣೆ ಸಮಯದಲ್ಲಿ ಹಲವಾರು ಭಾರಿ ಗಲಾಟೆಗಳಾಗಿರುವ ನಿದರ್ಶನಗಳಿರುವುದರಿಂದ ನನಗೂ ಹಾಗೂ ನನ್ನ ಕ್ಷೇತ್ರ ವ್ಯಾಪ್ತಿಯ ಆನೇಮಡುಗು ಗ್ರಾಮಸ್ಥರಿಗೆ ರಕ್ಷಣೆ ನೀಡುವುದರೊಂದಿಗೆ ಮುಕ್ತ ಮತದಾನ ಮಾಡಲು ಬೇಕಾದ ಅಗತ್ಯ ಕ್ರಮಗಳನ್ನು ಚುನಾವಣಾಧಿಕಾರಿಗಳು ಕೈಗೊಳ್ಳಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ಮಾತನಾಡಿ, ಗೂಂಡಾಗಿರಿ ಮಾಡಿ ಜನರಿಂದ ಮತ ಪಡೆಯುವ ಇಂತಹವರು ಜನರಿಗೆ ಯಾವ ರೀತಿ ಸೇವೆ ಸಲ್ಲಿಸುತ್ತಾರೆ ಎನ್ನುವುದನ್ನು ಜನರು ಮನಗಾಣಬೇಕು. ಚುನಾವಣೆಯಲ್ಲಿ ಮತಯಾಚಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಅದನ್ನು ತಡೆಯುವುದರೊಂದಿಗೆ ಜೆಡಿಎಸ್ ಮುಖಂಡರು ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದ್ದಾರೆ ಎಂದರು.
ಕೇಂದ್ರದಲ್ಲಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಈ ಭಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ರಮೇಶ್ಬಾಯಿರಿ, ಬಿ.ಸಿ.ನಂದೀಶ್, ದಾಮೋದರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಶಿಡ್ಲಘಟ್ಟ ಕ್ಷೇತ್ರದಲ್ಲಿ ಏರುತ್ತಿರುವ ಚುನಾವಣೆ ಕಾವು

0

ಸಂಕ್ರಾಂತಿ ಕಳೆದ ನಂತರ ಯುಗಾದಿಯವರೆಗೂ ಒಕ್ಕಣೆ ಕಾರ್ಯದಲ್ಲಿ ನಿರತರಿರುವ ರೈತಾಪಿ ಜನರಿಗೆ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆ ಬಿಸಿ ತಟ್ಟಿದೆ. ತಾಲ್ಲೂಕಿನಾದ್ಯಂತ ರಾಜಕೀಯ ಚಟುವಟಿಕೆಗಳು ಬಿರುಸನ್ನು ಪಡೆದುಕೊಂಡಿದ್ದು, ಎಲ್ಲಾ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ತಮ್ಮ ಪಕ್ಷವನ್ನು ಪ್ರತಿನಿಧಿಸುತ್ತಿರುವ ಅಭ್ಯರ್ಥಿಯ ಗೆಲುವಿಗೆ ಸರ್ವ ಪ್ರಯತ್ನಗಳನ್ನೂ ನಡೆಸಿದ್ದಾರೆ.
ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮನೆಮನೆಗೆ ಭೇಟಿ ನೀಡುತ್ತಾ, ತೋಟ, ಹೊಲ ಎಲ್ಲೇ ಇದ್ದರೂ ಮತಯಾಚಿಸುತ್ತಾ, ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರನ್ನು ಮತ ಹಾಕುವಂತೆ ಕೋರುತ್ತಾ ಗೆಲುವಿಗಾಗಿ ತಂತ್ರ ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದಾರೆ.
ವ್ಯಾಟ್ಸಪ್ ಮತ್ತು ಫೇಸ್ಬುಕ್ ಪ್ರಚಾರ: ಮತದಾರರು ಗ್ರಾಮೀಣ ಪ್ರದೇಶದವರಾದರೂ, ಬಹುತೇಕ ಮಂದಿಯ ಬಳಿ ಸ್ಮಾರ್ಟ್ ಫೋನ್ಗಳಿವೆ, ಇಂಟರ್ನೆಟ್ ಸಂಪರ್ಕವಿದೆ. ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ–ಹರಾಜು ಪ್ರಕ್ರಿಯೆ ಪ್ರಾರಂಭವಾಗುತ್ತಿರುವುದರಿಂದ ರೇಷ್ಮೆ ಬೆಳೆಗಾರರು ಸ್ಮಾರ್ಟ್ ಫೋನ್ ಉಪಯೋಗ ಅರಿತಿದ್ದಾರೆ. ಕೆಲವು ಅಭ್ಯರ್ಥಿಗಳು ತಂತ್ರಜ್ಞಾನದ ಪ್ರಯೋಜನವನ್ನೂ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಪ್ರಚಾರದ ವೈಖರಿಯನ್ನು, ತಮ್ಮ ಸಾಧನೆಯನ್ನು, ಪಕ್ಷದ ಸಾಧನೆಯನ್ನು ಮತ್ತು ಭರವಸೆಗಳನ್ನು ವ್ಯಾಟ್ಸಪ್ ಮತ್ತು ಫೇಸ್ಬುಕ್ ಮೂಲಕ ತಿಳಿಸುತ್ತಿದ್ದಾರೆ. ವ್ಯಾಟ್ಸಪ್ ಗ್ರೂಪ್ ಮಾಡಿಕೊಂಡು ಅದರಲ್ಲಿ ಮತ್ತು ಫೇಸ್ಬುಕ್ನಲ್ಲಿ ಪ್ರತಿದಿನ ತಮ್ಮ ಪ್ರಚಾರದ ಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ.
ಕಾಂಗ್ರೆಸ್ನ ಒಗ್ಗಟ್ಟು ಪ್ರದರ್ಶನ: ಇಬ್ಬಾಗವಾದ ಜರಾಸಂಧನ ದೇಹ ಒಗ್ಗೂಡಿದಂತೆ ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ನಡುವಿನ ಮುನಿಸಿನಿಂದ ಒಡೆದಿದ್ದ ಕಾಂಗ್ರೆಸ್ ಪುನಃ ಒಂದಾಗಿದೆ. ಇಬ್ಬರು ಮುಖಂಡರು ಜಂಟಿಯಾಗಿ ಪತ್ರಕಾಗೋಷ್ಠಿ ನಡೆಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುರುಪನ್ನು ಮೂಡಿಸಿದ್ದಾರೆ. ಟಿಕೆಟ್ ಸಿಗದೆ ಅತೃಪ್ತರಾದವರನ್ನೂ ಸಮಾಧಾನಗೊಳಿಸಿ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಮುಖಂಡರು ಮನವೊಲಿಸಿದ್ದಾರೆನ್ನಲಾಗಿದೆ.
ತಾಲ್ಲೂಕಿನ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವವರಲ್ಲಿ ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ವಿನುತಾ ಆರ್ ಶ್ರೀನಿವಾಸ್ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿದ್ದವರು. ಮೊದಲು ಚೀಮಂಗಲ ಕ್ಷೇತ್ರದಿಂದಲೇ ಆಯ್ಕೆಯಾಗಿದ್ದ ಅವರು ಈ ಬಾರಿಯೂ ಅದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಜಿಲ್ಲಾ ಪಂಚಾಯತಿ ಹಾಲಿ ಸದಸ್ಯ ಸತೀಶ್ ಈ ಮೊದಲು ಜಂಗಮಕೋಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಈ ಬಾರಿ ದಿಬ್ಬೂರಹಳ್ಳಿ ಕ್ಷೇತ್ರದಲ್ಲಿ ಪ್ರಯತ್ನ ನಡೆಸಿದ್ದಾರೆ.
ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ವಿವಿಧ ಗ್ರಾಮಗಳಲ್ಲಿ ಪ್ರಚಾರಸಭೆಗಳನ್ನು ನಡೆಸುತ್ತಾ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಶ್ರಮವಹಿಸಿದ್ದಾರೆ.
ಜೆಡಿಎಸ್ ನ  ಆತ್ಮವಿಶ್ವಾಸ: ಜೆಡಿಎಸ್ ಪಕ್ಷದ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಅಭ್ಯರ್ಥಿಗಳು ಜೊತೆಯಾಗಿ ಬೆಂಬಲಿಗರೊಂದಿಗೆ ಮನೆಮನೆ ಬೇಟಿ ನೀಡುತ್ತಾ ಕರಪತ್ರಗಳನ್ನು ನೀಡುತ್ತಾ ಮತಯಾಚಿಸುತ್ತಿದ್ದಾರೆ. ನಮ್ಮ ಪಕ್ಷದ ಚುನಾಯಿತ ಸದಸ್ಯರು ಮತ್ತು ಇತರ ಪಕ್ಷದ ಚುನಾಯಿತ ಸದಸ್ಯರು ಇದುವರೆಗೂ ತಮ್ಮ ಅನುದಾನದಲ್ಲಿ ಯಾವ ರೀತಿಯ ಕೆಲಸಗಳನ್ನು ಮಾಡಿದ್ದಾರೆ ಹಾಗೂ ಅನುದಾನಗಳ ಸದ್ಭಳಕೆ ಮಾಡಿದ್ದಾರೆ ಎಂಬುದನ್ನು ಕರಪತ್ರಗಳ ಮೂಲಕ ಜನರಿಗೆ ತಿಳಿಸುತ್ತಿದ್ದಾರೆ. ಈ ಹಿಂದೆ ಅಬ್ಲೂಡು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಶಾಸಕ ಎಂ.ರಾಜಣ್ಣ ಅವರ ಪತ್ನಿ ಶಿವಲೀಲಾ ರಾಜಣ್ಣ ಚುನಾಯಿತರಾಗಿದ್ದರು. ಜೆಡಿಎಸ್ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಸ್ಪರ್ಧಿಸಿದ್ದಾರೆ. ಶಾಸಕ ಎಂ.ರಾಜಣ್ಣ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಗ್ರಾಮಗಳಲ್ಲಿ ನಡೆಸಿರುವ ಕಾಮಗಾರಿಗಳನ್ನು ವಿವರಿಸುತ್ತಾ ಭರವಸೆಗಳನ್ನು ನೀಡುತ್ತಾ ಕಾರ್ಯಕರ್ತರೊಂದಿಗೆ ಗ್ರಾಮಗಳನ್ನು ಸುತ್ತುತ್ತಿದ್ದಾರೆ.
ಬಿಜೆಪಿಯ ಪ್ರಯತ್ನ: ಬಿಜೆಪಿ ಪಕ್ಷದ ವರ್ಚಸ್ಸು ಕ್ಷೇತ್ರದಲ್ಲಿ ಕ್ಷೀಣವಾಗಿದ್ದರೂ, ನಾಲ್ವರು ಜಿಲ್ಲಾ ಪಂಚಾಯತಿ ಅಭ್ಯರ್ಥಿಗಳು ಮತ್ತು 12 ಮಂದಿ ತಾಲ್ಲೂಕು ಪಂಚಾಯತಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ಸಿ.ವಿ.ಲೋಕೇಶ್ಗೌಡ ನಾಮಪತ್ರ ಸಲ್ಲಿಸಿದ ದಿನದಿಂದಲೇ ತಮ್ಮ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಬಿಜೆಪಿಯ ಸಿ.ವಿ.ಲೋಕೇಶ್ಗೌಡ ವಿಧಾನ ಸಭೆ ಚುನಾವಣೆಗೆ ತಾವೊಮ್ಮೆ ಸ್ಪರ್ಧಿಸಿದ್ದರು. ಬಿಜೆಪಿಯ ವಿವಿಧ ತಾಲ್ಲೂಕು ಪಂಚಾಯತಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲುವ ಉಮ್ಮೇದಿಯಲ್ಲಿ ಪ್ರಯತ್ನವನ್ನು ನಡೆಸಿದ್ದಾರೆ. ಇವರು ಸೆಳೆಯುವ ಮತಗಳು ಚುನಾವಣೆ ಫಲಿತಾಂಶದಲ್ಲಿ ಪರಿಣಾಮ ಬೀರಲಿವೆ.
ಸಿಪಿಐಎಂ, ಸರ್ವೋದಯ ಮತ್ತು ಸಮಾಜವಾದಿ ಪಕ್ಷ: ಸಿ.ಪಿ.ಐ.ಎಂ ಪಕ್ಷದಿಂದ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಸದಾನಂದ ಸ್ಪರ್ಧಿಸಿದ್ದು, ಬಡವರ ಪಕ್ಷ ನಮ್ಮದು, ಬಡವರಿಗಾಗಿ ಹೋರಾಟ ಮಾಡುವವರು ನಾವು ಎನ್ನುತ್ತಾ ಕೆಂಪು ದಿರಿಸಿನೊಂದಿಗೆ ತಮ್ಮ ಪಕ್ಷದ ಸದಸ್ಯರೊಂದಿಗೆ ಮತಯಾಚಿಸುತ್ತಿದ್ದಾರೆ. ಸಾದಲಿಯ ಎಸ್.ಡಿ.ಶ್ರೀನಿವಾಸ್ ದಿಬ್ಬೂರಹಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದಿಂದ ಕಣಕ್ಕಿಳಿದಿದ್ದರೆ, ಸಾದಲಿಯ ಎಸ್.ವಿ.ಶ್ರೀನಿವಾಸ್ ಸಮಾಜವಾದಿ ಪಕ್ಷದಿಂದ ಕಣದಲ್ಲಿದ್ದಾರೆ.
ಜಿದ್ದಾಜಿದ್ದಿ ಪೈಪೋಟಿ: ಹಣ, ಜಾತಿ, ವಿವಿಧ ಆಮಿಷಗಳು ಚುನಾವಣೆಯಲ್ಲಿ ಗ್ರಾಮೀಣರ ಮನವೊಲಿಸಲು ಬಳಸುವುದನ್ನು ತಡೆಯಲು ಚುನಾವಣಾ ಕಮಿಷನ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ, ಮತಗಳಿಕೆಗಾಗಿ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮತಗಳಿಕೆಯಾಗಿ ನಾನಾ ಪ್ರಯತ್ನಗಳನ್ನು ನಡೆಸಿದ್ದಾರೆ.
ತಾಲ್ಲೂಕಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನೇರ ಜಿದ್ದಾಜಿದ್ದಿ ಪೈಪೋಟಿಯಿದೆ. ಗಂಜಿಗುಂಟೆ ಕ್ಷೇತ್ರದಲ್ಲಿ ಜೆಡಿಎಸ್ನ ಹಿರಿಯ ರಾಜಕಾರಣಿ ದಿ.ಮುನಿಶಾಮಪ್ಪ ಅವರ ಪುತ್ರ ಮತ್ತು ಶಾಸಕ ಎಂ.ರಾಜಣ್ಣ ಅವರ ಬಾವಮೈದ ಡಾ.ಎ.ಎಂ.ಜಯರಾಮರೆಡ್ಡಿ ಜೆಡಿಎಸ್ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ನಿಂದ ದೊಡ್ಡತೇಕಹಳ್ಳಿ ಟಿ.ಎಸ್.ಗೋಪಾಲರೆಡ್ಡಿ ಸ್ಪರ್ಧಿಸಿದ್ದಾರೆ. ಇವರ ನಡುವೆ ಬಿಜೆಪಿಯ ಸಿ.ವಿ.ಲೋಕೇಶ್ಗೌಡ ಮತ್ತು ಸಿ.ಪಿ.ಐ.ಎಂ ಪಕ್ಷದ ಸದಾನಂದ ಇದ್ದಾರೆ. ಇವರು ಗಳಿಸುವ ಮತಗಳು ನಿರ್ಣಾಯಕವಾಗಿಲಿದ್ದು, ಕೆಲವೇ ಮತಗಳು ಗೆಲುವನ್ನು ನಿರ್ಧರಿಸುವುದರಿಂದ ಸೋಲುವವರು ತಮ್ಮೊಂದಿಗೆ ಯಾರನ್ನು ಎಳೆದೊಯ್ಯಬಹುದು ಎಂಬುದು ಅಭ್ಯರ್ಥಿಗಳನ್ನು ಕಾಡುತ್ತಿದೆ.

ಭರದಿಂದ ಸಾಗಿದ ಚುನಾವಣಾ ಪ್ರಚಾರ

0

1. ಚೀಮಂಗಲ
1. ಚೀಮಂಗಲ

 
 
1. ಶಿಡ್ಲಘಟ್ಟ ತಾಲ್ಲೂಕಿನ ಬಸವಾಪಟ್ಟಣದಲ್ಲಿ ಭಾನುವಾರ ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ವಿನುತಾ ಆರ್ ಶ್ರೀನಿವಾಸ್ ಕಾಂಗ್ರೆಸ್ ಬೆಂಬಲಿಗರೊಂದಿಗೆ ಮತಯಾಚಿಸಿದರು.
 
 
 
2. ವಲ್ಲಪ್ಪನಹಳ್ಳಿ
2. ವಲ್ಲಪ್ಪನಹಳ್ಳಿ

 
 
2. ಶಿಡ್ಲಘಟ್ಟ ತಾಲ್ಲೂಕಿನ ವಲ್ಲಪ್ಪನಹಳ್ಳಿ ಗ್ರಾಮದಲ್ಲಿ ಕುಂಬಿಗಾನಹಳ್ಳಿ ತಾಲ್ಲೂಕು ಪಂಚಾಯತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ನಾಗಲಕ್ಷ್ಮಮ್ಮ ಪರವಾಗಿ ಪತಿ ಡಿ.ಸಿ.ಮುನಿರಾಜು ಮತಯಾಚಿಸಿದರು.
 
 
 
 
 
 
3. ಬಚ್ಚಹಳ್ಳಿ
3. ಬಚ್ಚಹಳ್ಳಿ

 
 
3. ಶಿಡ್ಲಘಟ್ಟ ತಾಲ್ಲೂಕಿನ ಬಚ್ಚಹಳ್ಳಿ ಗ್ರಾಮಸ್ಥರು ಚಿಕ್ಕಬಳ್ಳಾಪುರದ ಬಳಿ ಚದಲಪುರದಲ್ಲಿ ನಡೆಯುತ್ತಿರುವ ಆಶ್ವತ ನೀರಾವರಿ ಹೋರಾಟದಲ್ಲಿ ಭಾಗಿಯಾಗಲು ಭಾನುವಾರ ನಗರದಲ್ಲಿ ಬೈಕ್ ರ್ಯಾಲಿ ನಡೆಸಿ ತೆರಳಿದರು.
 
 
 
 
 
4. ಕೈವಾರ ಎನ್.ಶ್ರೀನಿವಾಸ್ ಅವರು ಶಾಸಕ ಎಂ.ರಾಜಣ್ಣ ಅವರನ್ನು ಮತಯಾಚಿಸಿದರು
4. ಕೈವಾರ ಎನ್.ಶ್ರೀನಿವಾಸ್ ಅವರು ಶಾಸಕ ಎಂ.ರಾಜಣ್ಣ ಅವರನ್ನು ಮತಯಾಚಿಸಿದರು

 
 
4. ಶಿಡ್ಲಘಟ್ಟದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ಕೈವಾರ ಎನ್.ಶ್ರೀನಿವಾಸ್ ಅವರು ಶಾಸಕ ಎಂ.ರಾಜಣ್ಣ ಅವರನ್ನು ಮತಯಾಚಿಸಿದರು. ಕ.ಸಾ.ಪ ನಿಕಟಪೂರ್ವ ಅಧ್ಯಕ್ಷರಾದ ಹನುಮಂತರಾವ್, ಎಸ್.ವಿ.ನಾಗರಾಜರಾವ್, ಅಮೃತಕುಮಾರ್, ಬಿ.ಆರ್.ಅನಂತಕೃಷ್ಣ, ಮಂಚಿನಬಲೆ ಶ್ರೀನಿವಾಸ್, ವಿ.ಕೃಷ್ಣ ಹಾಜರಿದ್ದರು.
 
 
 

ರಾಷ್ಟ್ರೀಯ ಪಕ್ಷಗಳಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ

0

ಕ್ಷೇತ್ರದಲ್ಲಿ ಶಾಶ್ವತವಾದ ಅಭಿವೃದ್ಧಿ ಕಾರ್ಯ ಮಾಡಲು ಮಾಜಿ ಶಾಸಕ ವಿ.ಮುನಿಯಪ್ಪ ಅಡ್ಡಗಾಲಾಗಿದ್ದಾರೆ. ಕಳೆದ 25 ವರ್ಷಗಳಲ್ಲಿ ಅವರೂ ಅಭಿವೃದ್ಧಿ ಕಾರ್ಯ ಮಾಡದೇ ನಮಗೂ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಶಾಸಕ ಎಂ.ರಾಜಣ್ಣ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೆಎಸ್ಆರ್ಟಿಸಿ ಡಿಪೋಗಾಗಿ ಹನುಮಂತಪುರದ ಬಳಿ ಜಮೀನು ಗುರುತಿಸಿದ್ದಕ್ಕೆ ನ್ಯಾಯಾಲಯದ ಮೂಲಕ ಸ್ಟೇ ತಂದರು, ರೇಷ್ಮೆ ಕಾಲೇಜನ್ನು ಚಿಂತಾಮಣಿಗೆ ನೀಡಿದರು, ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಮಾಜಿ ಶಾಸಕ ದಿ.ಮುನಿಶಾಮಪ್ಪ ಜಮೀನು ನಿಗದಿಪಡಿಸಿದ್ದರು, ಅದನ್ನು ಅವರು ಮಾಡಗೊಡಲಿಲ್ಲ ಎಂದು ಹೇಳಿದರು.
ರಾಷ್ಟ್ರೀಯ ಪಕ್ಷಗಳು ಬಯಲು ಸೀಮೆಯ ಜ್ವಲಂತ ಸಮಸ್ಯೆಯಾದ ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಾ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಮತದಾರರು ದಡ್ಡರಲ್ಲ. ಈ ಬಾರಿಯ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಕ್ಷೇತ್ರದ ಜನ ನೀರಿಗಾಗಿ ಸತತ ಹೋರಾಟ ನಡೆಸಿದ್ದರೂ ರಾಜ್ಯ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದಾಗ ಆ ಪಕ್ಷಕ್ಕೆ ಹೇಗೆ ತಾನೆ ಬೆಂಬಲಿಸುತ್ತಾರೆ.
ಹಾವು ಮುಂಗಸಿಯಂತಿದ್ದ ಕ್ಷೇತ್ರದ ಮಾಜಿ ಸಚಿವರು ಹಾಗು ಸಂಸದರು ಇದೀಗ ಚುನಾವಣೆ ಬಂದಾಗ ಮೇಲ್ನೋಟಕ್ಕೆ ಒಂದಾಗಿರುವ ಹಾಗೆ ನಟಿಸಿದ ಮಾತ್ರಕ್ಕೆ ಕ್ಷೇತ್ರದ ಜನತೆ ಮರಳಾಗುವುದಿಲ್ಲ. ಕ್ಷೇತ್ರದ ಜನತೆ ಬಹಳ ಬುದ್ದಿವಂತರಾಗಿದ್ದು ಕಾಂಗ್ರೆಸ್ ನಾಯಕರಿಬ್ಬರೂ ತಮ್ಮ ತಮ್ಮ ಅಸ್ಥಿತ್ವ ಉಳಿಸಿಕೊಳ್ಳುವ ಸಲುವಾಗಿ ಬಿನ್ನಮತ ಬಿಟ್ಟು ಒಂದಾಗಿದ್ದೇವೆ ಎಂದು ಹೇಳಿದರೂ, ಇವರ ಮೊಸಳೆ ಕಣ್ಣೀರಿಗೆ ಮೋಸ ಹೋಗುವಷ್ಟು ಜನ ದಡ್ಡರಲ್ಲ. ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಅತಿ ಹೆಚ್ಚು ಜೆಡಿಎಸ್ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿ ಮಾಡಲು ಪಕ್ಷದ ಮುಖಂಡರು ಸೇರಿದಂತೆ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದರು.
ಕಳೆದ ಐದು ವರ್ಷಗಳ ಹಿಂದೆ ಜಂಗಮಕೋಟೆ ಜಿಲ್ಲಾ ಪಂಚಾಯಿತಿ ಹಾಗು ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಹೋದ ಸದಸ್ಯರು ಈವರೆಗೂ ಒಮ್ಮೆಯೂ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ ಹಾಗೂ ಯಾವುದೇ ಅಭಿವೃದ್ದಿ ಕಾರ್ಯ ಮಾಡಿಲ್ಲ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಸದಸ್ಯರು ಕೈಗೊಂಡ ಅಭಿವೃದ್ಧಿ ಕಾರ್ಯ ಶೂನ್ಯ. ಜೆಡಿಎಸ್ ಪಕ್ಷದಿಂದ ಆಯ್ಕೆಯಾದ ಸದಸ್ಯರು ತಮಗೆ ಬಂದ ಅನುದಾನವನ್ನು ಸಂಪೂರ್ಣ ಸದ್ಭಳಕೆ ಮಾಡಿಕೊಂಡು ಶಾಶ್ವತ ಕೆಲಸಗಳನ್ನು ಮಾಡಿದ್ದಾರೆ ಎಂದರು.
ತಾವು ಶಾಸಕರಾದ ಮೇಲೆ ಕ್ಷೇತ್ರದಾಧ್ಯಂತ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಉತ್ತಮ ರಸ್ತೆ ಹಾಗು ಅಗತ್ಯವಿರುವ ಎಲ್ಲಾ ಮೂಲಭೂತ ಸವಲತ್ತುಗಳನ್ನು ಪಕ್ಷಾತೀತವಾಗಿ ಮಾಡಿದ್ದು, ಮಾಜಿ ಶಾಸಕ ದಿವಂಗತ ಎಸ್.ಮುನಿಶಾಮಪ್ಪನವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಈ ಭಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಜನರು ಬೆಂಬಲಿಸಲಿದ್ದಾರೆ ಎಂದರು.
ಜೆಡಿಎಸ್ ಪಕ್ಷದ ಅಬ್ಲೂಡು ಕ್ಷೇತ್ರದ ಅಭ್ಯರ್ಥಿ ಬಂಕ್ ಮುನಿಯಪ್ಪ, ಹಂಡಿಗನಾಳ ತಾಲ್ಲೂಕು ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮೀನಾರಾಯಣ, ಮುಖಂಡರಾದ ಆರ್.ಎ.ಉಮೇಶ್, ಕೆ.ಮಂಜುನಾಥ್್, ಜಂಗಮಕೋಟೆ ಮಂಜುನಾಥ್, ಮುನಿರೆಡ್ಡಿ, ಅಫ್ಸರ್ ಪಾಷ, ರಹಮತ್ತುಲ್ಲ ಮತ್ತಿತರರು ಹಾಜರಿದ್ದರು.

ಗೊಬ್ಬರದ `ಗುಂಡಿ'-ಹೇಗಿರಬೇಕು ಗೊತ್ತೇ?

0

ಕೃಷಿ ಪದ್ಧತಿಗಳಲ್ಲಿ ಇದಮಿತ್ಥಂ ಹೇಳುವುದು ಕಷ್ಟ ಎನ್ನುತ್ತಾರೆ. ಬಹುಪಾಲು ನಿಜವೂ ಅಹುದಾದ ಮಾತದು. ಉದಾಹರಣೆಗೆ, ಸಾಗರ ತಾಲ್ಲೂಕಿನ ಅಡಿಕೆ ತೋಟದ ಕೃಷಿ ಕ್ರಮಕ್ಕೂ, ಸಿರ್ಸಿ ಪ್ರದೇಶದ ರೀತಿಗೂ ಹಲವು ವ್ಯತ್ಯಾಸ ಇರುವುದು ಕಂಡುಬರುತ್ತದೆ. ಆದರೆ ಎಲ್ಲ ಕೃಷಿಯೂ ಕೆಲವು ಸಾಮಾನ್ಯ ನಿಯಮಗಳನ್ನು ಅವಲಂಬಿಸಿರುತ್ತದೆ. ಗೋಬರ್ ಗ್ಯಾಸ್ ವ್ಯವಸ್ಥೆ, ಕೊಳೆ ಔಷಧಿ ತಯಾರಿ, ಬೆಳೆ ಸಂಸ್ಕರಣೆ ಮುಂತಾದ ದೃಷ್ಟಾಂತಗಳನ್ನು ಕೊಡಬಹುದು. ಈ ಸಾಲಿನಲ್ಲಿ ಅತ್ಯಗತ್ಯವಾಗಿ ಬೇಕಾದ ಕಾಂಪೋಸ್ಟ್ ಗೊಬ್ಬರದ ಗುಂಡಿಗಳನ್ನೂ ಸೇರಿಸಬಹುದು.
ಗೊಂದಲಗಳು ಬೇಡ. ಮುಂದಿನ ಸಾಲುಗಳನ್ನು ಓದುವುದರಿಂದ ಮೂಡುವ ಆ ಭಾವನೆ ನಂತರದಲ್ಲಿ ಮಾಯವಾಗುತ್ತದೆ. ಮೊತ್ತಮೊದಲಾಗಿ, ಒಂದು ಆದರ್ಶಯುತ ಗೊಬ್ಬರದ ಗುಂಡಿಯ ಮೂಲಭೂತ ಅಂಶವೇ ಅದು `ಗುಂಡಿ’ಯಾಗಿರಬಾರದು ಎನ್ನುವುದು! ಹಿಂದಿನ ಜಮಾನದವರೆಲ್ಲ ನೆಲದಲ್ಲಿ ಮಣ್ಣು ತೆಗೆದು ಗುಂಡಿ ತೋಡಿ ಗೊಬ್ಬರ ಸಂಗ್ರಹಿಸುವ, ಕೊಳೆಯಿಸುವ ತೊಟ್ಟಿಯನ್ನಾಗಿ ಅದನ್ನು ಬಳಸುತ್ತಿದ್ದವರೇ. ಅವರವರ ತಾಕತ್ತು, ಅಗತ್ಯದ ಆಧಾರದಲ್ಲಿ ಗುಂಡಿಯ ವಿಸ್ತಾರ, ಆಳ ನಿರ್ಧಾರವಾಗುತ್ತಿತ್ತು. ವಿಜ್ಞಾನದ ಪ್ರಕಾರ ನೆಲದೊಳಗಿನ ಗೊಬ್ಬರದ ಗುಂಡಿ ತಪ್ಪು ತಪ್ಪು!
ನಿಜಕ್ಕೂ ನೆಲದೊಳಗಿನ ಗೊಬ್ಬರದ ಗುಂಡಿಯಿಂದ ಸಾಧಕಗಳಿಗಿಂತ ಬಾಧಕಗಳೇ ಹೆಚ್ಚು. ಇಂದು ಪ್ರಾಯೋಗಿಕವಾಗಿಯೇ ರುಜುವಾತಾಗಿರುವಂತೆ ನೆಲದ ತಗ್ಗಿನಲ್ಲಿರುವ ಗುಂಡಿಗಿಂತ ನೆಲದ ಮೇಲಿನ ತೊಟ್ಟಿ ಸಮರ್ಪಕ. ಇದರಲ್ಲಿ ಗೊಬ್ಬರ, ಕಚ್ಚಾಪದಾರ್ಥಗಳು ಕಲೆತು, ಕೊಳೆತು, ಕಡೆದು ಕಾಂಪೋಸ್ಟ್ ಆಗುವ ವೇಗ ಹೆಚ್ಚು. ತೊಟ್ಟಿಗೆ ತುಂಬಿದ ಗೊಬ್ಬರದಲ್ಲಿ ಸಲೀಸಾಗಿ ಗಾಳಿ ಪ್ರವೇಶಿಸುವ ಗುಣವೇ ಭೂಮಿ ಮೇಲಿನ ತೊಟ್ಟಿಗಳಲ್ಲಿ ಗೊಬ್ಬರವು ಶೀಘ್ರ ಜೀರ್ಣವಾಗಲು ಕಾರಣ.
ನೆಲದಾಳದ ಗುಂಡಿಯಲ್ಲಿ ಹಲವು ತೊಡಕುಗಳಿವೆ. ಕಾಂಪೋಸ್ಟ್‍ನೊಂದಿಗೆ ಗುಂಡಿಯ ದಡದ ಮಣ್ಣು ಬೆರೆತು ಬಿಡುವುದು ಸಾಮಾನ್ಯ. ವರ್ಷದಿಂದ ವರ್ಷಕ್ಕೆ ಗೊಬ್ಬರದ ಗುಂಡಿಯ ಗಾತ್ರ ಹೆಚ್ಚುತ್ತದೆ ಎಂಬುದನ್ನು ಬಿಟ್ಟರೆ ಕಾಂಪೋಸ್ಟ್‍ನ ಗುಣಮಟ್ಟ ಕುಸಿಯುತ್ತದೆ. ಇನ್ನು ಎರೆಗೊಬ್ಬರ ತಯಾರಿಸಲಂತೂ ಈ ಗುಂಡಿಯ ಗೊಬ್ಬರ ಬಳಸುವುದು ಯುಕ್ತವಲ್ಲ. ಎರೆಹುಳು ಮಣ್ಣು ಮಿಶ್ರಿತ ಕಾಂಪೋಸ್ಟ್‍ನ್ನು ಸಮರ್ಪಕವಾಗಿ ತಿನ್ನುವುದಿಲ್ಲ. ಇದರಿಂದಾಗಿ ಅವುಗಳ ಗಾತ್ರ, ಬೆಳವಣಿಗೆ ಮತ್ತು ವಂಶಾಭಿವೃದ್ಧಿ ಕುಸಿಯುವುದನ್ನು ಕಾಣುತ್ತೇವೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಎರೆ ಗೊಬ್ಬರ ತಯಾರಿಕೆಯ ವೇಗ ಕುಸಿಯುತ್ತದೆ.
ಹೆಚ್ಚು ಮಳೆ ಸುರಿಯುವ ಮಲೆನಾಡು ಪ್ರದೇಶಗಳಲ್ಲ್ಲಿ ಮಳೆಗಾಲದಲ್ಲಿ ಗುಂಡಿಯೊಳಗೆ ನೀರು ತುಂಬುತ್ತದೆ. ಎಷ್ಟೋ ಗುಂಡಿಗಳ ತಳಭಾಗದಿಂದ ನೀರು ಚಿಮ್ಮುವುದೂ ಉಂಟು. ಕಚ್ಚಾ ಗೊಬ್ಬರದಲ್ಲಿ ನೀರು ನಿಂತರೆ ಆ ಗೊಬ್ಬರ ಕೊಳೆಯುವ ಪ್ರಕ್ರಿಯೆಯನ್ನು ನಿಲ್ಲಿಸಿದೆ ಅಂತಲೇ ಅರ್ಥ. ನೀರಿಗೆ ಹೊರಹರಿಯಲು ದಾರಿ ಮಾಡಿಕೊಟ್ಟರೆ ಗೊಬ್ಬರದ ರಸಸಾರವನ್ನು ಹೊರಹಾಕಿದಂತೆ!
ಬಹುಪಾಲು ಕೃಷಿಕರ ಕಾಂಪೋಸ್ಟ್ ತಯಾರಿಕಾ ಘಟಕಗಳು ಬಟ್ಟಬಯಲಿನಲ್ಲಿರುತ್ತವೆ. ವಾಸ್ತವವಾಗಿ ಗೊಬ್ಬರಕ್ಕಿರಲಿ, ಕಾಂಪೋಸ್ಟ್‍ಗಿರಲಿ ನೇರವಾಗಿ ಬಿಸಿಲಿಗೆ ಮೈಯೊಡ್ಡಿ ನಿಂತಿರುವ ಪರಿಸ್ಥಿತಿ ಏನೇನೂ ಒಳ್ಳೆಯದಲ್ಲ. ಗೊಬ್ಬರ ಒಣಗುತ್ತದೆ. ಹಾಗಾಗಿ ಕೊಳೆಯಿಸುವ ಪ್ರಕ್ರಿಯೆಯಲ್ಲಿ ತೊಡಗಬೇಕಾದ ಸೂಕ್ಷ್ಮಾಣುಗಳ ಚಟುವಟಿಕೆ ಮಂದವಾಗುತ್ತದೆ. ಕಚ್ಚಾ ಗೊಬ್ಬರ ಯಾವತ್ತೂ ಆದ್ರ್ರ(ಒದ್ದೆ)ವಾಗಿರಬೇಕು. ಬಿಸಿಲಿನ ನೇರ ಹೊಡೆತ ಬಿದ್ದರೆ ಗೊಬ್ಬರದ ಪೋಷಕಾಂಶಗಳು ಸುಟ್ಟುಹೋಗುತ್ತವೆ.
ಈ ವಿಚಾರದಲ್ಲಿ ಸ್ಪಷ್ಟ ಸಲಹೆಯೆಂದರೆ, ಗುಂಡಿ-ತೊಟ್ಟಿಗಳಲ್ಲಿ ಬಿಸಿಲು ತಾಕದಂತಿರಲು ಮತ್ತು ಮಳೆ ನೀರು ಬೀಳದಿರಲು ಅದಕ್ಕೂ ತಲೆ ಮೇಲೊಂದು ಸೂರು ಅತ್ಯವಶ್ಯಕ. ತುಂಬ ಶಿಸ್ತು ಬದ್ಧ ವ್ಯವಸ್ಥೆಯೇ ಬೇಕೆಂದೇನಿಲ್ಲ. ಸೋಗೆಯ ಮಾಡು, ಪ್ಲಾಸ್ಟಿಕ್‍ನ ಮೇಲ್ಛಾವಣಿ…. ಯಾವುದಾದರೂ ಆದೀತು.
ಇನ್ನಾದರೂ ನಾವು ನೆಲದೊಳಗಿನ ಗುಂಡಿಗಳ ಜಮಾನದಿಂದ ತೊಟ್ಟಿಗಳ ಯುಗಕ್ಕೆ ಮುನ್ನಡೆಯುವುದು ಸಮರ್ಥನೀಯ. ಆರು ಅಡಿ ಉದ್ದ ಹಾಗೂ ಒಂದಡಿ ಅಗಲದ ಕಲ್ಲು ಚಪ್ಪಡಿಗಳನ್ನು ಆಯತಾಕಾರದಲ್ಲಿ ನೆಟ್ಟು ಸರಳ ತೊಟ್ಟಿಯನ್ನು ತಯಾರಿಸಿಕೊಳ್ಳಬಹುದು. ನೆಲದೊಳಗೆ ಒಂದಡಿ ಹುಗಿದಿರಬೇಕು ಮತ್ತು ಚಪ್ಪಡಿಗಳನ್ನು ತಂತಿ ಅಥವಾ ದಬ್ಬೆ ಬಳಸಿ ಕಟ್ಟಿರಬೇಕು. ತೆಳ್ಳನೆಯ ಬೇಲಿ ಕಲ್ಲು ಕಂಬಗಳನ್ನು ಹತ್ತಿರ ಹತ್ತಿರ ನೆಡುವುದರಿಂದಲೂ ಮಾದರಿಯೆನಿಸುವಂತ ತೊಟ್ಟಿಯನ್ನು ರಚಿಸಬಹುದು.
ಯಾವುದೇ ಕಾಂಪೋಸ್ಟ್ ತಯಾರಿಕಾ ಘಟಕಕ್ಕೆ ಅಗತ್ಯ ಬಿದ್ದಾಗಲೆಲ್ಲ ಮೇಲಿನಿಂದ ನೀರು ಸಿಂಪಡಿಸುವಂತಿರಬೇಕು. ಒಟ್ಟಾರೆ ಗೊಬ್ಬರದ ಹಸಿ ಅಂಶವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ತೆಳು ಪ್ರಮಾಣದಲ್ಲಿ ಸುಣ್ಣವನ್ನು ಬಳಸುವುದರಿಂದ ಕಾಂಪೋಸ್ಟ್ ಆಗುವ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಬಹುದು. ಪ್ರಾಯೋಗಿಕವಾಗಿ ಈ ಕ್ರಮ ಯಶಸ್ವಿಯೆಂಬುದು ಹಲವರ ಸ್ವಾನುಭವ. ಆದರೆ ಹೆಚ್ಚು ಪ್ರಮಾಣದಲ್ಲಿ ಸುಣ್ಣವನ್ನು ಬಳಸುವುದರಿಂದ ಗೊಬ್ಬರದಲ್ಲಿರುವ ಪೋಷಕಾಂಶಗಳು ನಷ್ಟವಾಗುತ್ತವೆ ಎಂಬ ಮಾತೂ ಇದೆ. ಬಹುಷಃ ಹಸಿ ಸೊಪ್ಪು ಕೊಚ್ಚಿ ಕಾಂಪೋಸ್ಟ್ ತಯಾರಿಸುವಾಗ ಮಾತ್ರ ಸೊಪ್ಪಿನ ಪ್ರತಿ ಪದರದ ಮೇಲೆ ತೆಳುವಾಗಿ ಸುಣ್ಣ ಬಳಸುವುದರಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು.
ಗೊಬ್ಬರದ ಗುಂಡಿ ಎಂಬ ಒಂದೇ ಕಾರಣಕ್ಕೆ ನಾವು ಅದಕ್ಕೆ ನಮಗೆ ಬೇಡದ ಎಲ್ಲ ಪದಾರ್ಥಗಳನ್ನು ಅದರಲ್ಲಿ ತುಂಬುತ್ತೇವೆ. ಪ್ಲಾಸ್ಟಿಕ್ ತ್ಯಾಜ್ಯಗಳು, ಕೊಳೆಯದ ವಸ್ತುಗಳನ್ನು ಬೇರೆಯಾಗಿಯೇ ಸಂಗ್ರಹಿಸಬೇಕು. ಇಲ್ಲದಿದ್ದರೆ ನಿಮ್ಮದೇ ತೋಟಕ್ಕೆ ಇವುಗಳಿಂದ ಹಾನಿಯಾದೀತು. ಗಾಜು, ಪಿಂಗಾಣಿಯ ಚೂರುಗಳು ನಿಮ್ಮ ಕೈಕಾಲು ಗಾಯಕ್ಕೆ ಮೂಲವಾದೀತು.
ಖಂಡಿತವಾಗಿಯೂ ಗೊಬ್ಬರದ ಸಂಗ್ರಹಕ್ಕೆ ಬಚ್ಚಲಿನ ಬೂದಿಯನ್ನು ಹಾಕಬಹುದು. ಬೂದಿ ಕೊಳೆಯುವ ಪದಾರ್ಥ ಅಲ್ಲವಾದರೂ ಕಾಂಪೋಸ್ಟ್‍ನೊಂದಿಗೆ ಬೆರೆತರೆ ಒಳ್ಳೆಯದೆ. ಮುಖ್ಯವಾಗಿ, ಅತಿ ಹೆಚ್ಚಿನ ಪೊಟ್ಯಾಷ್ ಇರುವ ಬೂದಿ ಒಟ್ಟಾರೆ ಕಾಂಪೋಸ್ಟ್‍ನ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂಬುದು ಸತ್ಯ. ಒಂದೇ ಮಾತೆಂದರೆ, ತೊಟ್ಟಿಯ ಒಂದೇ ಕಡೆಯಲ್ಲಿ ಬೂದಿ ಹಾಕದೆ ಎಲ್ಲ ಭಾಗದಲ್ಲೂ ಸಮಾನವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳುವುದು ಕ್ಷೇಮ.
ದುರಂತವೆಂದರೆ, ಇವತ್ತಿಗೂ ರೈತರು ಗೊಬ್ಬರದ ತಯಾರಿಕ ಘಟಕ ಅರ್ಥಾತ್ `ಗೊಬ್ಬರ ಗುಂಡಿ’ಗೆ ಅತ್ಯಂತ ಕಡಿಮೆ ಪ್ರಾಧಾನ್ಯತೆಯನ್ನು ಕೊಡುತ್ತಾರೆ. ಫಲಿತಾಂಶ ಕಣ್ಣ ಮುಂದೆ…… ಇಳುವರಿಯು ಬೆಳೆಗೆ ಹೆಡಿಗೆ ಹೆಡಿಗೆ ಗೊಬ್ಬರ ಕೊಟ್ಟೂ ಕಡಿಮೆ!!
-ಮಾ.ವೆಂ.ಸ.ಪ್ರಸಾದ್

ಉಚಿತ ಕಂಪ್ಯೂಟರ್ ತರಬೇತಿ

0

ಸಿ.ಎಂ.ಟಿ ಕಂಪ್ಯೂಟರ್ ಎಜುಕೇಷನ್ ಮತ್ತು ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ವತಿಯಿಂದ ತಾಲ್ಲೂಕಿನಲ್ಲಿ ಎಸ್ಎಸ್ಎಲ್ಸಿ ಉತ್ತೀರ್ಣರಾದ ಒಕ್ಕಲಿಗ ಜನಾಂಗದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಅಂಕಪಟ್ಟಿ, 2 ಭಾವಚಿತ್ರಗಳು ಮತ್ತು ಜಾತಿ ಪ್ರಮಾಣಪತ್ರದೊಂದಿಗೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರವಿರುವ ಸಿ.ಎಂ.ಟಿ ಕಂಪ್ಯೂಟರ್ ತರಬೇತಿ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕ ಫೆಬ್ರುವರಿ 12 ಇದ್ದು, ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಕಾರ್ಯದರ್ಶಿ ಸಿ.ಎಂ.ಟಿ.ರಮೇಶ್ (9880943159) ಸಂಪರ್ಕಿಸಲು ಕೋರಲಾಗಿದೆ.

ಉಚಿತ ಆರೋಗ್ಯ ತಪಾಸಣಾ ಶಿಬಿರ

0

ನಗರದ ಮಾನಸ ಆಸ್ಪತ್ರೆ ಮತ್ತು ಆರ್.ಚಂದ್ರು ಅಭಿಮಾನಿಗಳ ಬಳಗ ಭಾನುವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದಾರೆ. ಜನರು ಇದರ ಪ್ರಯೋಜನವನ್ನು ಪಡೆಯುವಂತೆ ಸಂಘಟಕರು ಕೋರಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ

0

ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿ ಸ್ಥಾನಕ್ಕೆ ಸ್ಪರ್ಧಿಸಿರುವ ಸಿಪಿಐಎಂ ಅಭ್ಯರ್ಥಿ ಸದಾನಂದ ಮತಯಾಚಿಸಿದರು. ಕುಂದಲಗುರ್ಕಿ ಮುನೀಂದ್ರ, ವೆಂಕಟೇಶ್, ಖಲೀಲ್, ನವೀನ್, ಬಾಬು, ಮಂಜುನಾಥ್ ಹಾಜರಿದ್ದರು.

ಚೀಮಂಗಲದಲ್ಲಿ ಚುನಾವಣೆ ಪ್ರಚಾರ
ಚೀಮಂಗಲದಲ್ಲಿ ಚುನಾವಣೆ ಪ್ರಚಾರ

ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಜಿಲ್ಲಾ ಪಂಚಾಯತಿ ಸ್ಥಾನಕ್ಕೆ ಸ್ಪರ್ಧಿಸಿರುವ ಜೆಡಿಎಸ್ ಪಕ್ಷದ ತನುಜ ರಘು ಮತಯಾಚಿಸಿದರು. ಭಕ್ತರಹಳ್ಳಿ ಗೋಪಾಲ ಗೌಡ, ವೆಂಕಟೇಶ, ಚನ್ನೇಗೌಡ, ಕೇಶವ ಮೂರ್ತಿ, ಮುನಿರಾಜು,ನಾರಾಯಣಸ್ವಾಮಿ, ಮುರಳಿ, ಆಂಜಿನಪ್ಪ, ದೇವರಾಜು ಹಾಜರಿದ್ದರು.
ಭಕ್ತರಹಳ್ಳಿ ಗ್ರಾಮದಲ್ಲಿ ಚುನಾವಣೆ ಪ್ರಚಾರ
ಭಕ್ತರಹಳ್ಳಿ ಗ್ರಾಮದಲ್ಲಿ ಚುನಾವಣೆ ಪ್ರಚಾರ

 
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಜಿಲ್ಲಾ ಪಂಚಾಯತಿ ಅಭ್ಯರ್ಥಿ ನಿರ್ಮಲ ಮುನಿರಾಜು ಮತ್ತು ತಾಲ್ಲೂಕು ಪಂಚಾಯತಿ ಅಭ್ಯರ್ಥಿ ಕವಿತಾ ಚಿದಾನಂದಮೂರ್ತಿ ಅವರ ಪರವಾಗಿ ಮತಯಾಚಿಸಿದರು. ಬಿ.ವಿ.ಮುನೇಗೌಡ, ಎಂ.ವೆಂಕಟಮೂರ್ತಿ, ಎಸ್.ನಾರಾಯಣಸ್ವಾಮಿ, ಬಿ.ವಿ.ಕೃಷ್ಣಪ್ಪ, ಬಿ.ಕೆ.ಮುನಿರಾಜು, ರಾಮಮೂರ್ತಿ, ರಾಮಚಂದ್ರಪ್ಪ, ಪುಟ್ಟಮೂರ್ತಿ ಹಾಜರಿದ್ದರು.
ಪಲಿಚೆರ್ಲು ಗ್ರಾಮ ಚುನಾವಣೆ ಪ್ರಚಾರ
ಪಲಿಚೆರ್ಲು ಗ್ರಾಮ ಚುನಾವಣೆ ಪ್ರಚಾರ

 
ಶಿಡ್ಲಘಟ್ಟ ತಾಲ್ಲೂಕಿನ ಪಲಿಚೆರ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಬಹಳ್ಳಿ ಗ್ರಾಮದಲ್ಲಿ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಜಯರಾಮರೆಡ್ಡಿ ಮತಯಾಚಿಸಿದರು. ಪಲಿಚೇರ್ಲು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಟಿ.ಎಂ.ದೇವರಾಜು, ಸದಸ್ಯ ಮುನಿಯಪ್ಪ, ಸೋಮಶೇಖರ್, ಪ್ರಭು ಹಾಜರಿದ್ದರು.
ಜಂಗಮಕೋಟೆಯಲ್ಲಿ ಚುನಾವಣೆ ಪ್ರಚಾರ
ಜಂಗಮಕೋಟೆಯಲ್ಲಿ ಚುನಾವಣೆ ಪ್ರಚಾರ

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಕ್ಷೇತ್ರದಲ್ಲಿ ಶಾಸಕ ಎಂ.ರಾಜಣ್ಣ ಚುನಾವಣೆ ಪ್ರಚಾರ ನಡೆಸಿದರು. ಜಂಗಮಕೋಟ ಜಿಲ್ಲಾ ಪಂಚಾಯತಿ ಅಭ್ಯರ್ಥಿ ನಳಿನಾ ಮಂಜುನಾಥ್, ತಾಲ್ಲೂಕು ಪಂಚಾಯತಿ ಅಭ್ಯರ್ಥಿ ಜೆ.ಎಂ.ವೆಂಕಟೇಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ರೆಹಮತ್ಜಾನ್, ಮಾಜಿ ಅಧ್ಯಕ್ಷ ನಜೀರ್ಸಾಬ್, ಮುಖಂಡರಾದ ಚಂದ್ರೇಗೌಡ, ಮುನಾವರ್, ನಂಜೇಗೌಡ ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ  ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೀತಾ ಶಂಕರ್ ಹಾಗೂ ತಾಲ್ಲೂಕು ಪಂಚಾಯತಿ ಅಭ್ಯರ್ಥಿ ಅರಿಕೆರೆ ಜಿ.ಮುನಿರಾಜು ಪರ ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ಮತಯಾಚಿಸಿದರು. ಶಂಕರ್ ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೀತಾ ಶಂಕರ್ ಹಾಗೂ ತಾಲ್ಲೂಕು ಪಂಚಾಯತಿ ಅಭ್ಯರ್ಥಿ ಅರಿಕೆರೆ ಜಿ.ಮುನಿರಾಜು ಪರ ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ಮತಯಾಚಿಸಿದರು. ಶಂಕರ್ ಹಾಜರಿದ್ದರು.

ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ ಅವರಿಂದ ಮತಯಾಚನೆ

0

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪರವಾದ ಕಾರ್ಯಕ್ರಮಗಳು ಈ ಬಾರಿಯ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಗಂಗಾದೇವಿ ದೇವಾಲಯದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿ, ಜಂಗಮಕೋಟೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ಪಿ.ನಿರ್ಮಲಾಮುನಿರಾಜು ಹಾಗೂ ಮೇಲೂರು ತಾಲ್ಲೂಕು ಪಂಚಾಯತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಅವರ ಪರವಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಜಂಗಮಕೋಟೆ ಜಿಲ್ಲಾ ಪಂಚಾಯತಿ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ದೆ ನಡೆಸುತ್ತಿರುವ ಅಭ್ಯರ್ಥಿ ಸ್ಥಳೀಯರಾಗಿದ್ದು, ವಿರೋಧ ಪಕ್ಷದವರು, ಕೇವಲ ಸ್ವಾರ್ಥಕ್ಕಾಗಿ ಕ್ಷೇತ್ರದ ಹೊರಗಿನಿಂದ ಅಭ್ಯರ್ಥಿಯನ್ನು ಸ್ಪರ್ದೆಗೆ ನಿಲ್ಲಿಸಿದ್ದಾರೆಯೆ ಹೊರತು, ಈ ಭಾಗದ ಅಭಿವೃದ್ಧಿಗಾಗಿ ಅಲ್ಲ. ಆದ್ದರಿಂದ ಈ ಭಾಗದ ಮತದಾರರು ಸ್ಥಳೀಯರನ್ನು ಬೆಂಬಲಿಸಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು.
ರಾಜ್ಯದಲ್ಲಿನ ಸರ್ಕಾರ, ಬಡವರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಸರ್ಕಾರದ ಎಲ್ಲಾ ಯೋಜನೆಗಳು ನೇರವಾಗಿ ಬಡವರ ಮನೆಬಾಗಿಲಿಗೆ ತಲುಪಿಸುವಂತೆ ಮಾಡಲು ಆಡಳಿತ ಯಂತ್ರವನ್ನು ಸಜ್ಜುಗೊಳಿಸಲಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬ ಬಡವರು ನೆಮ್ಮದಿಯಿಂದ ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ರಚನೆ ಮಾಡಲಾದ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳು ಇಂದು ಹೆಚ್ಚು ಸಬಲರಾಗುತ್ತಿದ್ದಾರೆ. ಇಂತಹ ಅನೇಕ ಯೋಜನೆಗಳ ಮೂಲಕ ಸಾಮಾನ್ಯ ಜನರೂ ಕೂಡಾ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತಿದ್ದು, ಈ ಎಲ್ಲಾ ಸರ್ಕಾರದ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡಿರುವ ಜನರು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದರು.
ಅಭ್ಯರ್ಥಿಗಳಾದ ಪಿ.ನಿರ್ಮಲಾಮುನಿರಾಜು, ಗಂಗನಹಳ್ಳಿ ಶಿವಾನಂದ, ಮಾಜಿ ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ರಾಮಕೃಷ್ಣಪ್ಪ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸುಬ್ರಮಣಿ, ಬಿ.ಸಿ.ವೆಂಕಟೇಶಪ್ಪ, ಮುನಿಯಪ್ಪ, ಮುರಳಿ, ನಟರಾಜು, ಮಯೂರ, ಮಳ್ಳೂರು ನಾಗರಾಜ್, ಸಿ.ಎಂ.ಮುನಿಯಪ್ಪ, ಮುನಿರಾಜು, ಎಂ.ಎಂ.ಸ್ವಾಮಿ, ಮಳ್ಳೂರು ಗ್ರಾಮ ಪಂಚಾಯತಿ ಸದಸ್ಯ ರವಿಕುಮಾರ್, ಎಂ.ಡಿ.ಚಂದ್ರಪ್ಪ, ಗೋವಿಂದಪ್ಪ, ನಿಶಾಂತ್, ನಾರಾಯಣಸ್ವಾಮಿ, ಜೋಗಪ್ಪ, ಶ್ರೀನಿವಾಸ್, ರೆಡ್ಡಪ್ಪ, ವೆಂಕಟರಾಯಪ್ಪ, ಮುನೇಗೌಡ, ಗಿರೀಶ್, ನರಸಿಂಹಮೂರ್ತಿ, ಅಣ್ಣೆಪ್ಪ, ಎಂ.ರಾಮಪ್ಪ, ಜಿ.ವಿ.ಸುರೇಶ್, ವೆಂಕಟರಾಯಪ್ಪ, ಕರಗಪ್ಪ, ಜಿ.ಕೆ.ಶಿವಾನಂದ, ಮತ್ತಿತರರು ಹಾಜರಿದ್ದರು.

ಪ್ರತಿಯೊಂದು ಗ್ರಾಮದಲ್ಲೂ ಕನ್ನಡದ ಕಾರ್ಯಕ್ರಮ

0

ಸಾಹಿತ್ಯದ ಪರಿಚಾಲಕನಾಗಿ ಪ್ರತಿಯೊಂದು ಗ್ರಾಮದಲ್ಲೂ ಕನ್ನಡದ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶವನ್ನು ಹೊಂದಿದ್ದು, ಕನ್ನಡ ಬಂಧುಗಳ ಪ್ರೋತ್ಸಾಹ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ಕೈವಾರ ಎನ್.ಶ್ರೀನಿವಾಸ್ ತಿಳಿಸಿದರು.
ನಗರದ ನಗರೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆಸಿದ ಕ.ಸಾ.ಪ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಜಾತಿ, ವೃತ್ತಿ, ಧರ್ಮ, ಮೇಲು ಕೀಳೆಂಬ ಬೇಧವಿಲ್ಲದೆ ಕನ್ನಡ ಸೇವೆಯನ್ನು ಕರ್ತವ್ಯದಂತೆ ಕ.ಸಾ.ಪ ಇದುವರೆಗೂ ನಡೆದುಕೊಂಡು ಬಂದಿದ್ದು, ಮುಂದೆಯೂ ಈ ಬದ್ಧತೆ ಮುಂದುವರೆಯಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ, ಮುಂತಾದ ಹಲವು ಆಶೋತ್ತರಗಳನ್ನು ಬೆನ್ನಿಗೆ ಕಟ್ಟಿಕೊಂಡು ಮುಂದುವರೆದಿದ್ದೇನೆ. ಇಪ್ಪತ್ತು ಅಂಶಗಳ ಆಶೋತ್ತರಗಳನ್ನು ಕನ್ನಡ ಬಂಧುಗಳ ಮುಂದಿಟ್ಟಿದ್ದೇನೆ. ಎಲ್ಲರ ಸಹಕಾರದಿಂದ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ಮಾಡುವ ಹಂಬಲವಿದೆ ಎಂದು ಹೇಳಿದರು.
ಸಾಹಿತಿ ಗೋಪಾಲಗೌಡ ಕಲ್ವಮಂಜರಿ ಮಾತನಾಡಿ, ಕ.ಸಾ.ಪ ಗೆ ಸೇವೆ ಸಲ್ಲಿಸುವವರು ಬಹು ಮುಖ್ಯವಾಗಿ ವಚನಕ್ಕೆ ಬದ್ಧರಾಗಿರಬೇಕು. ಕನ್ನಡ ಸೇವೆಯಲ್ಲಿ ಜಾತಿ, ಧರ್ಮ ಮತ್ತು ರಾಜಕೀಯ ಬೆರೆಸಬಾರದು. ಕನ್ನಡ ಸೇವೆಗೆ ಮುಂದಾಗುವ ಯುವಕರು ಮತ್ತು ಉತ್ಸಾಹಿಗಳಿಗೆ ಪ್ರೋತ್ಸಾಹವನ್ನು ನೀಡುವುದು ಹಿರಿಯರ ಕರ್ತವ್ಯ ಎಂದು ಹೇಳಿದರು.
ಕ.ಸಾ.ಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್ ಮಾತನಾಡಿ, ಕ.ಸಾ.ಪ ಮೂಲಕ ನಡೆಸಿರುವ ವಿವಿಧ ಕಾರ್ಯಕ್ರಮಗಳು ಪಾರದರ್ಶಕವಾಗಿವೆ. ಎಲ್ಲಾ ಲೆಕ್ಕಪತ್ರಗಳನ್ನು ಒಪ್ಪಿಸಲಾಗಿದೆ. ಆದರೂ ಹಣ ದುರುಪಯೋಗ ಮಾಡಿದ್ದಾರೆಂಬ ಇಲ್ಲಸಲ್ಲದ ಆರೋಪಗಳನ್ನು ಕೆಲವರು ಮಾಡುತ್ತಿರುವುದು ದುರಂತ ಎಂದು ಹೇಳಿ ಲೆಕ್ಕಪತ್ರಗಳ ವಿವರಗಳನ್ನು ಪ್ರದರ್ಶಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕ.ಸಾ.ಪ ಸದಸ್ಯರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ಕೈವಾರ ಎನ್.ಶ್ರೀನಿವಾಸ್ ಅವರಿಗೆ ಬೆಂಬಲವನ್ನು ಸೂಚಿಸಿದರು.
ಸಾಹಿತಿ ಕಾಗತಿ ವೆಂಕಟರತ್ನಮ್, ಯಲುವಳ್ಳಿ ಸೊಣ್ಣೇಗೌಡ, ಅಮೃತಕುಮಾರ್, ಬಿ.ಆರ್.ಅನಂತಕೃಷ್ಣ, ಅಪ್ಪೇಗೌಡನಹಳ್ಳಿ ತ್ಯಾಗರಾಜ್, ಮಂಚಿನಬಲೆ ಶ್ರೀನಿವಾಸ್, ವಿ.ಕೃಷ್ಣ, ಕೆ.ಎಂ.ವಿನಾಯಕ, ಮಂಜುನಾಥ್, ನಾಗರಾಜ್, ಜೆ.ಎಸ್.ವೆಂಕಟಸ್ವಾಮಿ, ಡಾ.ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮತಗಟ್ಟೆ ಸಿಬ್ಬಂದಿಗೆ ತರಬೇತಿ

0

ಮುಂಬರುವ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಯ ಹಿನ್ನಲೆಯಲ್ಲಿ ಫೆಬ್ರುವರಿ ೮ ರಂದು ಚುನಾವಣಾ ಮತಗಟ್ಟೆ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಕೆ.ಎಂ.ಮನೋರಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಿರುವ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಕಡ್ಡಾಯವಾಗಿ ಸಭೆಯಲ್ಲಿ ಪಾಲ್ಗೊಳ್ಳುವುದು. ಒಂದು ವೇಳೆ ಯಾವುದೇ ಸಿಬ್ಬಂದಿ ಅಥವಾ ಮತಗಟ್ಟೆ ಅಧಿಕಾರಿಗಳು ಸಭೆಗೆ ಬಾರದೇ ಗೈರು ಹಾಜರಾದ ಪಕ್ಷದಲ್ಲಿ ಅಂತಹವರ ಮೇಲೆ ಚುನಾವಣಾ ಆಯೋಗದ ನಿಯಮದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

‘ಪ್ರಜಾವಾಣಿ’ ಲೇಖನಗಳ ಪ್ರದರ್ಶನ

0

ಒಳ್ಳೆಯ ಪುಸ್ತಕ ಒಬ್ಬ ಉತ್ತಮ ಸ್ನೇಹಿತನಂತೆ. ದಿನಪತ್ರಿಕೆಯಲ್ಲಿನ ವಿಷಯ ಸಂಗ್ರಹವನ್ನು ಕ್ರೋಕರಿಸಿಟ್ಟುಕೊಳ್ಳುವ ಮೂಲಕ ಮಾಹಿತಿ ಕೋಶವನ್ನು ತಯಾರಿಸಿಟ್ಟುಕೊಳ್ಳಬಹುದು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ ತಿಳಿಸಿದರು.
ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಿಕ್ಷಕ ದೇವರಾಜ್ ಅವರು ‘ಪ್ರಜಾವಾಣಿ’ ಲೇಖನಗಳ ಪುಸ್ತಕ ರೂಪದ ಸಂಗ್ರಹದ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೆಗಳನ್ನು ಓದಿ ಹಳೆಯದಾದ ನಂತರ ರದ್ದಿಗೆ ಹಾಕಿಬಿಡುತ್ತೇವೆ. ಆದರೆ ಶಿಕ್ಷಕ ದೇವರಾಜ್ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗುವ ಉತ್ತಮ ಲೇಖನಗಳನ್ನು ಸಂಗ್ರಹಿಸಿ, ಅಚ್ಚುಕಟ್ಟಾಗಿ ವಿಭಾಗಿಸಿ ಪುಸ್ತಕದ ರೀತಿಯಲ್ಲಿ ಅಂಟಿಸಿಟ್ಟಿದ್ದಾರೆ. ಇದರಿಂದಾಗಿ ಹಲವಾರು ಉಪಯುಕ್ತ ಮಾಹಿತಿಗಳು, ಚಿತ್ರಗಳು, ವಿವರಗಳು ಒಂದೆಡೆ ಸಿಗುವಂತಿದೆ. ಪತ್ರಿಕೆಗಳನ್ನು ಹೀಗೂ ಸದುಪಯೋಗ ಮಾಡಿಕೊಳ್ಳಬಹುದೆಂದು ಮಕ್ಕಳಿಗೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
‘ಪ್ರಜಾವಾಣಿ’ ಪತ್ರಿಕೆಯ ದೇವಾಲಯ ದರ್ಶನ, ವಿಜ್ಞಾನ ವಿಶೇಷ, ಬಾಲ ಬುತ್ತಿ, ಪುರಾಣ ಪದ, ವಿಸ್ಮಯ ಜಗತ್ತು, ಸಾಧಕರು, ತಾಲ್ಲೂಕು ವಿಶೇಷ ಸುದ್ದಿ, ಜಿಲ್ಲಾ ವಿಶೇಷ ಸುದ್ದಿ, ನಮ್ಮ ಕ್ಯಾಂಪಸ್, ಮಳೆ ಅಬ್ಬರ, ದುರಂತಗಳ ಸರಮಾಲೆ, ನಮ್ಮೂರು ನಮ್ಮಜಿಲ್ಲೆ, ಚಿತ್ರ ಸ್ವಾರಸ್ಯ, ಕ್ರೀಡಾ ವಿಶೇಷ, ಪುಟ್ಟಿ ರಾಮನ್ ಚಿತ್ರ ಸರಣಿ ಹೀಗೆ ಹಲವಾರು ವಿಷಯಗಳ ಸಂಗ್ರಹವನ್ನು ಶಿಕ್ಷಕ ದೇವರಾಜ್ ಪ್ರದರ್ಶಿಸಿದ್ದರು.
ಮುಖ್ಯ ಶಿಕ್ಷಕಿ ಸರಸ್ವತಮ್ಮ, ಸಹಶಿಕ್ಷಕರಾದ ಗಣೇಶ್ಬಾಬು, ಮಂಜುನಾಥ್, ತ್ರಿವೇಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ರೈತ ಸಂಘದ ಬೈಕ್ ರ್ಯಾಲಿ

0

ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲವಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನಗರ ಘಟಕದ ಸದಸ್ಯರು ಬುಧವಾರ ನಗರದಲ್ಲಿ ಘೋಷಣೆಗಳನ್ನು ಕೂಗುತ್ತಾ ಬೈಕ್ ರ್ಯಾಲಿ ನಡೆಸಿದರು.
ನಗರದ ಉಲ್ಲೂರುಪೇಟೆಯ ವಿಜಯನಗರ ಹೆಬ್ಬಾಗಿಲ ಬಳಿ ಸೇರಿದ ಪ್ರತಿಭಟನಾಕಾರರು ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ಚಿಕ್ಕಬಳ್ಳಾಪುರದ ಬಳಿಯ ಚದಲಪುರದಲ್ಲಿ ಶಾಶ್ವತ ನೀರಾವರಿಗಾಗಿ ನಡೆಯುತ್ತಿರುವ ಅನಿರ್ಧಿಷ್ಠಾವಧಿ ಧರಣಿಯು 136 ನೇ ದಿನಕ್ಕೆ ಕಾಲಿಟ್ಟಿದ್ದು, ನಗರದ ಸುತ್ತಮುತ್ತಲಿನ ರೈತ ಬಾಂಧವರು ಅವರಿಗೆ ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಳ್ಳಲು ತೆರಳಿದರು.
ನಾರಾಯಣಸ್ವಾಮಿ, ವೇಣುಗೋಪಾಲ್, ರಾಮಚಂದ್ರಪ್ಪ, ಅಬ್ಲೂಡು ಆರ್.ದೇವರಾಜ್, ಏಜಾಜ್ ಪಾಷ, ತಾದೂರು ಮಂಜುನಾಥ್, ರಾಮಕೃಷ್ಣಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.