Home Blog Page 496

ಬೆಸ್ತರ ಸಂಘದಿಂದ ಬೈಕ್ ರ್ಯಾಲಿ

0

ತಾಲ್ಲೂಕಿನ ಬೆಸ್ತರ ಸಂಘದಿಂದ ಬುಧವಾರ ಶಾಶ್ವತ ಹೋರಾಟಕ್ಕೆ ಬೆಂಬಲಿಸಿ ಬೈಕ್ ರ್ಯಾಲಿ ನಡೆಸಿ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು.
ಚಿಕ್ಕಬಳ್ಳಾಪುರದ ಚದಲಪುರದ ಬಳಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲಿಸಿ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಬಯಲುಸೀಮೆಯ ನಮ್ಮ ಭಾಗದ ಜನರಿಗೆ ನೀರಿನ ಅಭಾವ ಬಹಳಷ್ಟಿದ್ದು, ಸಾವಿರಾರು ಅಡಿ ಕೊಳವೆ ಬಾವಿಯನ್ನು ಕೊರೆದರೂ ನೀರು ಸಿಗದಂತಾಗಿದೆ. ಶಾಶ್ವತ ನೀರಾವರಿ ಜಾರಿಯಾಗದಿದ್ದಲ್ಲಿ ಜನರು ಹಾಗೂ ಜಾನುವಾರುಗಳು ಸಂಕಷ್ಟವನ್ನೆದುರಿಸಲಿದ್ದಾರೆ. ಈ ಕೂಡಲೇ ಸರ್ಕಾರ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಬೆಸ್ತರ ಸಂಘದ ವತಿಯಿಂದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ, ಚಿಕ್ಕಬಳ್ಳಾಪುರದ ಚದಲಪುರದ ಬಳಿಗೆ ಬೈಕ್ ರ್ಯಾಲಿ ಮೂಲಕ ತೆರಳಿದರು.
ಬೆಸ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಜಯರಾಮ್, ತಾಲ್ಲೂಕು ಅಧ್ಯಕ್ಷ ಬಾಲಾಜಿ ಕೃಷ್ಣಮೂರ್ತಿ, ಲಕ್ಷ್ಮೀನಾರಾಯಣ, ನ್ಯಾತಪ್ಪ, ಮುರಳಿ, ಎಚ್.ಎನ್.ಗೋಪಾಲ್, ಮೋಹನ್ಕುಮಾರ್, ನಾರಾಯಣಸ್ವಾಮಿ, ವೆಂಕಟರಾಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನಗರದ ನಾಲ್ವರು ಕರಾಟೆಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

0

ನಗರದ ನಾಲ್ವರು ವಿದ್ಯಾರ್ಥಿಗಳು ಗುಜರಾತ್ನ ಸೂರತ್ನಲ್ಲಿ ನಡೆಯಲಿರುವ ಏಳನೇ ಅಕ್ಷಯ್ಕುಮಾರ್ ಇನ್ವಿಟೇಷನಲ್ ಕೂಡೋ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ.
ಜಯಸಿಂಹ, ಟಿ.ಎನ್.ಹೇಮಂತ್, ಓಂ ದೇಶಮುದ್ರೆ ಮತ್ತು ಸಮೀರ್ಪಾಷ ರಾಷ್ಟ್ರಮಟ್ಟದಲ್ಲಿ ನಡೆಯುವ ಕೂಡೋ ಚಾಂಪಿಯನ್ಶಿಪ್ಗೆ ಆಯ್ಕೆಯಾದ ಕರಾಟೆಪಟುಗಳಾಗಿದ್ದಾರೆ ಎಂದು ಕೂಡೋ ಅಸೋಸಿಯೇಷನ್ ಆಫ್ ಕರ್ನಾಟಕದ ರಾಜ್ಯ ಅಧ್ಯಕ್ಷ ಜಬೀವುಲ್ಲಾ ತಿಳಿಸಿದ್ದಾರೆ.
ಸೂರತ್ನ ಎ ಸಿ ಡೋಮ್ನಲ್ಲಿ ನವೆಂಬರ್ 5 ರಿಂದ 8 ರವರೆಗೂ ನಡೆಯುವ ಕೂಡೋ ಚಾಂಪಿಯನ್ಶಿಪ್ಗೆ ಜಿಲ್ಲೆಯಿಂದ ಇಬ್ಬರು ತರಬೇತುದಾರರೂ ಸೇರಿದಂತೆ 18 ಮಂದಿ ತೆರಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಬಸವ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ರಾಜಕೀಯ

0

ತಾಲ್ಲೂಕಿನ ಬಹುತೇಕ ಕಾಂಗ್ರೆಸ್ ಆಡಳಿತವಿರುವ ಗ್ರಾಮ ಪಂಚಾಯತಿಗಳಲ್ಲಿ ಬಸವ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯು ಏಕಪಕ್ಷೀಯವಾಗಿ ನಡೆದಿದೆ. ಬಡವರಿಗೆ ಅನ್ಯಾಯವಾಗಿದೆ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ತಾಲ್ಲೂಕು ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಬಸವ ವಸತಿ ಯೋಜನೆಯಡಿ 49 ಮನೆಗಳು ಮಂಜೂರಾಗಿವೆ. ಶಾಸಕರ ಅನುದಾನದಲ್ಲಿ 30 ಮನೆ ಮತ್ತು ಇಂದಿರಾ ಆವಾಸ್ ಯೋಜನೆಯಡಿ 19 ಮನೆಗಳು ಮಂಜೂರಾಗಿವೆ. ಯಾವುದೇ ವಾರ್ಡ್ ಸಭೆ ನಡೆಸದೆ ಏಕಪಕ್ಷೀಯವಾಗಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ತೀರ್ಮಾನಿಸಿ ಫಲಾನುಭವಿಗಳ ಆಯ್ಕೆ ಮಾಡಿದ್ದಾರೆ. ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಸ್ಥಾನಗಳು, ಜೆಡಿಎಸ್ ಬೆಂಬಲಿತ 7 ಸ್ಥಾನಗಳಿವೆ. ಜೆಡಿಎಸ್ ಬೆಂಬಲಿತ ಸದಸ್ಯರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಹೆಚ್ಚು ಮನೆಗಳನ್ನು ಮಂಜೂರು ಮಾಡುವ ಮೂಲಕ ಪಕ್ಷಪಾತ ಧೋರಣೆಯನ್ನು ಅನುಸರಿಸಿದ್ದಾರೆ. ನಿಜವಾದ ನಿವೇಶನ ರಹಿತ ಫಲಾನುಭವಿಗಳಿಗೆ ಸಿಗಬೇಕಾದ ಉದ್ದೇಶವಿರುವ ಸರ್ಕಾರದ ಯೋಜನೆಯನ್ನು ರಾಜಕೀಯ ದುರುದ್ದೇಶಕ್ಕೆ ಬಲಿಯಾಗಿರುವುದು ದುರ್ಧೈವ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ದೂರಿದರು.
ವಸತಿ ಯೋಜನೆಯ ಜಾಗೃತಿ ಸಮಿತಿ ಸಭೆಯನ್ನು ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಶಾಸಕ ಎಂ.ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಬೇಕಿತ್ತು. ಆದರೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ತಾಲ್ಲೂಕು ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರಿಂದಾಗಿ ಸಭೆಯು ಮುಂದೂಡಲ್ಪಟ್ಟಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ರಾಜೀನಾಮೆ ನೀಡಬೇಕು. ಕಾರ್ಯದರ್ಶಿ ನಾಗರಾಜಯ್ಯ ಅವರನ್ನು ಅಮಾನತ್ತು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಗೀತ ಚಿಕಿತ್ಸೆ – ಒಂದು ಪರಿಚಯ

0

‘ಸಂಗೀತ’ ಎಂಬುದು ಎಲ್ಲರಿಗೂ ಆಹ್ಲಾದಕರವೆಂದೆನಿಸುವ ಧ್ವನಿ ವಿಶೇಷ ಹಾಗೂ ವಿದ್ಯೆ, ಸಂಗೀತ ಕಲೆ ಕೂಡ. ಎಲ್ಲಾ ಭಾರತೀಯ ಕಲೆ/ವಿದ್ಯೆಗಳಿಗೆ ತಮ್ಮದೇ ಆದಂತಹ ವ್ಯಾಪ್ತಿ (Dimensions) ಇದೆ. ಎಲ್ಲಾ ಕಲೆಗಳೂ ಕೂಡ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆ ಜೊತೆಗೇ ಸಾಮಾಜಿಕ ಹಿತ ಎರಡನ್ನೂ ಉಂಟು ಮಾಡುತ್ತದೆ. ಚಿತ್ರಗಾರನಿಂದ ರೂಪಿತವಾದಂತಹ ಚಿತ್ರ ಅವನ ಸೃಜನಶೀಲತೆ, ಬೌದ್ಧಿಕ ವಿಕಾಸ, ಆತ್ಮ ಸಂತೃಪ್ತಿಗಳನ್ನು ಉದ್ದೀಪನಗೊಳಿಸಿದರೆ ಅದೇ ಚಿತ್ರವು ನೋಡುಗನಿಗೆ ಸ್ಫೂರ್ತಿದಾಯಕ, ಮನೋಲ್ಲಾಸಕರ ಹಾಗೂ ರಂಜಕ. ಅಂತೆಯೇ ಸಂಗೀತ ಶಾಸ್ತ್ರವೂ ಕೂಡ ಹಾಡುಗ ಕೇಳುಗರ ಮೇಲೆ ತನ್ನದೇ ಆದಂತಹ ಪ್ರಭಾವವನ್ನು ಬೀರುತ್ತದೆ.
ಸಂಗೀತಕ್ಕೆ ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ, ಆಧ್ಯಾತ್ಮಿಕ ಮೌಲ್ಯಗಳಿರುವಂತೆಯೇ ಚಿಕಿತ್ಸಾ ಮೌಲ್ಯ ಕೂಡ ಇದೆ. ಮನುಷ್ಯನ ವಿವಿಧ ಘಟಕಗಳಾದ ಶರೀರ ಇಂದ್ರಿಯ ಮನಸ್ಸು, ಆತ್ಮಗಳಲ್ಲಿ ಸಮತೆಯನ್ನು ಕಾಪಾಡುವ ವಿಧಾನಕ್ಕೆ ‘ಚಿಕಿತ್ಸೆ’ ಎಂಬುದಾಗಿ ಆಯುರ್ವೇದ ಶಾಸ್ತ್ರದಲ್ಲಿ ಹೇಳಲಾಗಿದೆ. ಚಿಕಿತ್ಸೆ ಎಂದರೆ ಕೇವಲ ರೋಗವನ್ನು ನಿವಾರಣೆ ಮಾಡುವುದಷ್ಟೇ ಅಲ್ಲ, ರೋಗ ನಿವಾರಣೆಯ ನಂತರ ಮನುಷ್ಯನ ಉಳಿದೆಲ್ಲಾ ಘಟಕಗಳನ್ನೂ ಸುಸ್ಥಿತಿಯಲ್ಲಿಡುವ ವೈಜ್ಞಾನಿಕವಾದ ವಿಧಾನವೇ ‘ಚಿಕಿತ್ಸೆ’. ಸಂಗೀತವೆಂಬುದು ಮನುಜನ ಎಲ್ಲಾ ಘಟಕಗಳ ಮೇಲೆಯೂ ಪ್ರಭಾವವನ್ನು ಬೀರಿ ಶರೀರ, ಇಂದ್ರಿಯ, ಮನಸ್ಸು, ಆತ್ಮಗಳ ಕ್ರಿಯಾ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಸಂಗೀತದಲ್ಲಿರುವ ಸಪ್ತಸ್ವರಗಳಾದ ‘ಸರಿಗಮಪದನಿ’ ಎಂಬುದು ನಮಗೆಲ್ಲಾ ತಿಳಿದ ವಿಚಾರವೇ. ‘ಸರಿ’ ಎಂದರೆ ದೋಣಿ; ‘ಗಮ’ ಎಂದರೆ ಕೊಡುವುದು ಎಂಬುದಾಗಿ ಉಪನಿಷತ್ ಗಳಲ್ಲಿ ಹೇಳಲ್ಪಟ್ಟಿದೆ. ಮನುಷ್ಯನ ವಿಕಾಸಕ್ಕೆ ಎಲ್ಲೆಯಿಲ್ಲ. ‘ಜೀವನದಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆಯುವಂತಾಗಲಿ’ ಎಂಬಂತಹ ಆಶಯ ಈ ಸಪ್ತಸ್ವರಗಳಲ್ಲಿ ಬಿಂಬಿತವಾಗಿದೆ. ಧನಾತ್ಮಕವಾದಂತಹ ಆಲೋಚನೆಯನ್ನು ಸಪ್ತಸ್ವರಗಳು ಮೂಡಿಸುತ್ತವೆ. ಇಂತಹ ಧನಾತ್ಮಕವಾದಂತಹ ಆಲೋಚನೆಯೇ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆ ಹಾಗೂ ಆರೋಗ್ಯಕ್ಕೆ ಮೂಲಾಧಾರ.
ಆಯುರ್ವೇದದ ಗ್ರಂಥವಾದ ಚರಕ ಸಂಹಿತೆಯಲ್ಲಿ ‘ಗೀತವಾದಿತ್ರ ಶ್ರವಣ’ ಅಂದರೆ ಸುಮಧುರ ಗಾಯನ ಶ್ರವಣ, ಆಹ್ಲಾದಕರ ಸಂಗೀತ ವಾದ್ಯ ಶ್ರವಣವೆಂಬುದು ಒಂದು ಚಿಕಿತ್ಸಾ ವಿಧಾನವಾಗಿ ಉಲ್ಲೇಖಿಸಲ್ಪಟ್ಟಿದೆ. ಆಚಾರ್ಯ ಚರಕರು “ಸತ್ವಾವಜಯ” ಎಂಬಂತಹ ವಿಶೇಷವಾದ ಚಿಕಿತ್ಸಾ ಕ್ರಮವನ್ನು ಉಲ್ಲೇಖಿಸಿದ್ದಾರೆ. ಮನಸ್ಸಿಗೆ ಅಹಿತಕರವೆಂದೆನಿಸುವ ಪರಿಸ್ಥಿತಿಯನ್ನು ಎದುರಿಸಿ ಮಾನಸಿಕ ಸ್ವಾಸ್ಥ್ಯತೆಯನ್ನು ಕಾಪಾಡಿಕೊಳ್ಳುವಲ್ಲಿ ಸಹಾಯಕವಾಗುವ ಚಿಕಿತ್ಸಾ ಕ್ರಮವು ‘ಸತ್ವಾವಜಯ ಚಿಕಿತ್ಸೆ’ ಎಂದೆನಿಸಿದೆ. ವ್ಯಕ್ತಿಯ ಮನೋಬಲವನ್ನು ಹೆಚ್ಚಿಸುವಲ್ಲಿ ಇದು ಸಹಕಾರಿ. ಸಂಗೀತ ಚಿಕಿತ್ಸೆಯೂ ಕೂಡ ಮನೋಬಲವನ್ನು ಹೆಚ್ಚಿಸುವಲ್ಲಿ ಸಹಕಾರಿ.
“ಗೀತಂ ವಾದ್ಯಂ ತಥಾನೃತ್ತಂ ತ್ರಯಂ ಸಂಗೀತಮುಚ್ಯತೆ||” ಎಂಬುದಾಗಿ ಸಂಗೀತ ಗ್ರಂಥವಾದ ಸಂಗೀತ ರತ್ನಾಕರದಲ್ಲಿ ಉಲ್ಲೇಖಿಸಲ್ಪಟ್ಟಿದೆ. ರಾಗ, ತಾಳ, ಭಾವ, ಸಾಹಿತ್ಯಗಳ ಸಂಗಮವೇ ಸಂಗೀತ. ತಾಳವು ಶರೀರದ ಎಲ್ಲಾ ಅವಯವಗಳ ಸ್ಪಂದನವನ್ನು ಸರಿಗೊಳಿಸಿದರೆ, ರಾಗ, ಭಾವಗಳು ಮನಸ್ಸನ್ನು ಶಾಂತಗೊಳಿಸುತ್ತವೆ. ಸಾಹಿತ್ಯವು ಧನಾತ್ಮಕ ಬುದ್ಧಿಯನ್ನು ಪ್ರಚೋದಿಸುತ್ತದೆ.
ಸಂಗೀತ ಚಿಕಿತ್ಸೆಯ ಮೂಲ ಸಿದ್ಧಾಂತವೆಂದರೆ ‘ಇಂತಹ ರೋಗಿಗೆ ಇಂತಹ ರಾಗ’ ಎಂದೇ ಹೊರತು ‘ಇಂತಹ ರೋಗಕ್ಕೆ ಇಂತಹ ರಾಗ’ ವೆಂದಲ್ಲ. ಎಲ್ಲಾ ಭಾರತೀಯ ವೈದ್ಯ ಸಿದ್ಧಾಂತಗಳು ‘ವ್ಯಕ್ತಿನಿಷ್ಠ’ ಒಂದೇ ವ್ಯಾಧಿ ಅನೇಕ ಮಂದಿಯಲ್ಲಿ ಅನೇಕ ರೀತಿಯಲ್ಲಿ ವ್ಯಕ್ತವಾಗುತ್ತದೆ. ರೋಗದ ತೀವ್ರತೆಯೂ ಭಿನ್ನ, ಅಂತೆಯೇ ಚಿಕಿತ್ಸೆಯನ್ನೂ ರೋಗಿಗೆ ನೀಡಬೇಕೇ ವಿನ: ರೋಗಕ್ಕಲ್ಲ. ಹಾಗಾಗಿ ರೋಗಿಯಲ್ಲಿ ರೋಗದ ಕಾರಣಗಳನ್ನು ಹುಡುಕಿ ರೋಗದ ತೀವ್ರತೆಯನ್ನು ಅರಿತು, ರೋಗಿಗೆ ಹೊಂದುವಂತಹ ರಾಗ, ಸಂಗೀತ ವಿಧಾನದ ಮೂಲಕ ಚಿಕಿತ್ಸೆ ಮಾಡಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿರುವ ಹಾಗೂ 75% ಜನ ಅನುಭವಿಸುತ್ತಿರುವ ಮನೋ ಶಾರೀರಿಕ ವ್ಯಾಧಿಗಳು (Psychosomatic Diseases) ಹಾಗೂ ಮಾನಸಿಕ ಒತ್ತಡ (Tension) ಗಳಂತಹ ತೊಂದರೆಗಳಲ್ಲಿ ಖಂಡಿತವಾಗಿಯೂ ಸಂಗೀತ ಚಿಕಿತ್ಸೆಯು ರಾಮಬಾಣವೇ ಸರಿ.
ಪ್ರಾಚೀನ ಕಾಲದಲ್ಲಿ ಕುಟುಂಬದವರೆಲ್ಲಾ ಸೇರಿ ಮುಸ್ಸಂಜೆಯ ಸಮಯದಲ್ಲಿ ಭಜನೆ ಮಾಡುವ ಪರಿಪಾಠವಿತ್ತು. ಭಜನೆಯೆಂಬುದು ತಾಳ, ರಾಗ ಪ್ರಧಾನವಾದ ಸಂಗೀತ ವಿಧಾನವಾಗಿದ್ದು ಮೆದುಳಿನ ಬೆಳವಣಿಗೆಗೆ ಸಹಕಾರಿ. ತಾಳವನ್ನು ನಿಯಂತ್ರಿಸುವ ಮೆದುಳಿನ ಎಡಭಾಗ, ರಾಗದ ಭಾವವನ್ನು ನಿಯಂತ್ರಿಸುವ ಮೆದುಳಿನ ಬಲಭಾಗಗಳು ಭಜನಾ ವಿಧಾನದಿಂದ ಉತ್ತೇಜನ ಹೊಂದಿ, ತನ್ಮೂಲಕ ವ್ಯಕ್ತಿಯ ವಿಕಾಸಕ್ಕೆ ಸಹಕಾರಿಯಾಗುತ್ತದೆ.
ಇಂತಹ ‘ಪರಿಪೂರ್ಣತೆ’ ಗೆ ಪೂರಕವಾಗಿರುವ ಸಂಗೀತವನ್ನು ನಾವು ಅರಿಯೋಣ, ಕಲಿಯೋಣ, ಅದರಿಂದ ಆರೋಗ್ಯದ ಮಟ್ಟವನ್ನೂ ಹೆಚ್ಚಿಸಿಕೊಳ್ಳೋಣ, ಸುಧಾರಿಸಿಕೊಳ್ಳೋಣ, ರೋಗವನ್ನೂ ನಿವಾರಣೆ ಮಾಡಿಕೊಳ್ಳೋಣ, ವಿಕಾಸದ ಉತ್ತುಂಗಕ್ಕೇರೋಣ ||ಸರ್ವೇ ಜನಾ: ಸುಖಿನೋ ಭವಂತು||
ಡಾ. ಶ್ರೀವತ್ಸ.

ಜತ್ರೋಫಾ – ಸೋತಿತು ಏಕೆ?

0

ಆಗಷ್ಟೇ ವೆನಿಲ್ಲಾ ರೈತರನ್ನು ನಿರಾಶೆಗೊಳಿಸಿತ್ತು. ಒಂದೆಡೆ ಅದರ ಬೆಲೆ ಮೂರೂವರೆ ಸಾವಿರದಿಂದ ನೂರಾ ಹತ್ತು-ಇಪ್ಪತ್ತಕ್ಕೆ ಇಳಿದಿತ್ತು. ಜೊತೆಗೆ ಗುಣಪಡಿಸಲಾಗದ ವಿಲ್ಟ್ ಯಾ ಕೊಳೆ ರೋಗವೊಂದು ವೆನಿಲ್ಲಾ ಬಳ್ಳಿಗಳನ್ನು ನಾಶಪಡಿಸತೊಡಗಿತ್ತು. ಆಗ ಅಬ್ಬರದೊಂದಿಗೆ ಆಗಮಿಸಿದ ಜತ್ರೋಫಾ ರೈತರಲ್ಲಿ ಮತ್ತೆ ಹೊಸ ಆಸೆ ಹುಟ್ಟಿಸಿತ್ತು. ಆ ಮಟ್ಟಿಗಾದರೂ ಜತ್ರೋಫಾಗೆ ಥ್ಯಾಂಕ್ಸ್ ಹೇಳಬೇಕು. ರೈತರ ಆತ್ಮಹತ್ಯೆಗಳ ಸಂಖ್ಯೆಯನ್ನು ಅದು ಕಡಿಮೆಗೊಳಿಸಿರಲೇಬೇಕು!
ಬಹುಸಂಖ್ಯಾತ ರೈತರಿಗೆ ಜತ್ರೋಫಾ ಹೆಸರು ಹೊಸದಾದರೂ ಗಿಡ ಚಿರಪರಿಚಿತವಾಗಿತ್ತು. ಮಲೆನಾಡು ಭಾಗದಲ್ಲಿ ಕಳ್ಳಿ ಎಂಬ ಬೇಲಿಸಾಲಿನ ಈ ಗಿಡ ಬೆಳೆಸುವುದು ಸುಲಭ ಎನ್ನಿಸಿತ್ತು. ಪೂರಕವಾಗಿ ಜತ್ರೋಫಾಗೆ ಸಿಕ್ಕ ಪ್ರಚಾರವೂ ಅದೇ ನಿಟ್ಟಿನಲ್ಲಿತ್ತು. ಎಲ್ಲ ಮಾದರಿಯ ಭೂಮಿಯಲ್ಲಿ ಬೆಳೆಯಲು ಯೋಗ್ಯ, ಬದುಕಲು ಬೆಳೆಯಲು ಬಾಹ್ಯ ನೀರೇ ಬೇಡ. ನೆಟ್ಟರೆ ಸಾಕು, ಆರೈಕೆ ಬೇಡ ಎಂದೇ ವ್ಯಾಖ್ಯಾನಿಸಲಾಗಿತ್ತು. ನಿಜಕ್ಕಾದರೆ, ಈ ಮಾತು ಬೀಜಕ್ಕೆ ಮಾತ್ರ ಅನ್ವಯವಾಗುತ್ತಿತ್ತು!
ಜತ್ರೋಫಾದ್ದು ಮೃದು ಕಾಂಡ. ಇದು ಭರ್ಜರಿ ಮಳೆಯನ್ನಾಗಲೀ, ಬಿರು ಬೇಸಿಗೆಯನ್ನಾಗಲಿ ತಾಳುವಂತದಲ್ಲ. ಮೊದಲ ನಾಲ್ಕು ವರ್ಷವಂತೂ ನೀರಿನ ಒತ್ತಾಯ ಬೇಕೇ ಬೇಕು. ರಕ್ಷಣೆ ಬೇಕು. ಜಾನುವಾರುಗಳು ತಿನ್ನಲಾರವು ಎಂಬುದು ಸತ್ಯವಾದರೂ ಅವುಗಳ ಓಡಾಟಕ್ಕೆ ಸಿಕ್ಕ ಗಿಡಗಳು ನಲುಗಿದ ಉದಾಹರಣೆ ಹಲವು. ಹಾಗಾಗಿ ಬೇಲಿ ಅನಿವಾರ್ಯ. ಜತ್ರೋಫಾದಿಂದ ಕೂಡ ಸೂಚಿತ ಮಟ್ಟದ ಇಳುವರಿ ಪಡೆಯಲು ಗೊಬ್ಬರದ ಬೆಂಬಲವೂ ಬೇಕು. ಅಂದ ಮೇಲೆ ಖರ್ಚೇ ಇಲ್ಲದ ಬೆಳೆ ಎಂಬ ಮಾತು ಮಿಥ್ಯೆಯಾಗಿ ಜತ್ರೋಫಾ ಕೃಷಿಯೂ ಬಂಡವಾಳ ಬಯಸುತ್ತದೆ ಎಂದಾಯಿತು. ರೈತ ಮುನ್ನುಗ್ಗಲು ಹೆದರುವಂತಾಯಿತು. ಅಷ್ಟಕ್ಕೂ ಜತ್ರೋಫಾ ಬೀಜದ ಮಾರುಕಟ್ಟೆ ದರ ಇವತ್ತಿಗೂ ನಿಗದಿಯಾಗಿಲ್ಲ!
ಸುಮ್ಮನೆ ಇನ್ನೊಂದು ಅಂಕಿಅಂಶವನ್ನು ಪರಿಶೀಲಿಸಿ. 2006-07ರ ಸಾಲಿನಲ್ಲಿ ಸರಿಸುಮಾರು 52.33 ಮಿಲಿಯನ್ ಮೆಟ್ರಿಕ್ ಟನ್ ಪೆಟ್ರೋ-ಡೀಸೆಲ್ ದೇಶದಲ್ಲಿ ಬಳಕೆಯಾಗಿದೆ. ಇದರೊಂದಿಗೆ ಶೇಕಡಾ ಒಂದರಷ್ಟು ಜತ್ರೋಫಾ ತೈಲವನ್ನು ಬೆರೆಸಬೇಕೆಂದರೂ 6,27,960 ಎಕರೆ ಭೂಪ್ರದೇಶದ ಜತ್ರೋಫಾ ಇಳುವರಿಯ ಅಗತ್ಯವಿದೆ!
ಜತ್ರೋಫಾ ತನ್ನ ಮೂರನೇ ವರ್ಷದಿಂದ ಪರಮಾವಧಿ ಬೆಳೆ ಅರ್ಥಾತ್ ಎಕರೆಗೆ 2,500 ಕೆ.ಜಿ. ದೊರಕಿಸಿಕೊಡುತ್ತದೆ ಎಂಬುದು ಒಂದು ಅಂದಾಜು. ಆದರೆ ಈ ಮೂರು ವರ್ಷಕ್ಕೆ ಶೇ. ಒಂದರ ಪ್ರಮಾಣದ ತೈಲಕ್ಕಾಗಿ ಜತ್ರೋಫಾ ಕೃಷಿಗೆ ತೊಡಗಿಸಬೇಕಾದ ಬಂಡವಾಳ ರೂ.628 ಕೋಟಿ! ಮುಖ್ಯವಾಗಿ ಗಮನಿಸಬೇಕಾದುದೆಂದರೆ, ಇದು ತೈಲ ಬೀಜ ತೆಗೆಯಲು ಮಾಡುವ ಖರ್ಚು. ಸಂಸ್ಕರಣೆಯ ಬಾಬತ್ತಿನದೇ ಬೇರೆಯ ಲೆಕ್ಕ.
ಬಯೋ ಪೆಟ್ರೋ-ಡೀಸೆಲ್‍ಗಳನ್ನು ಉತ್ತೇಜಿಸಬೇಕಿರುವುದು ಖರೆ. ಅಷ್ಟು ಮಾತ್ರಕ್ಕೆ ಜತ್ರೋಫಾವನ್ನು ಪರ್ಯಾಯ ಪೆಟ್ರೋಲ್, ಪುನಃ ಸೃಷ್ಟಿಸಬಲ್ಲ ಶಕ್ತಿಮೂಲ, ಗ್ರಾಮೀಣ ಕೃಷಿಯಲ್ಲಿ ಕ್ರ್ರಾಂತಿಕಾರಕ ಹೆಜ್ಜೆ, ಶುಷ್ಕ ಭೂಮಿ ಬೆಳೆ, ಅಭಿವೃದ್ಧಿ ತಂತ್ರ, ವಿದೇಶಿ ವಿನಿಮಯ ಉಳಿತಾಯ ಕ್ರಮ…. ಈ ಪ್ರಮಾಣದಲ್ಲಿ ವಿಶೇಷಣಗಳನ್ನು ಬಳಸಿದರೆ ಅತಿರಂಜಿತ ಎನ್ನಿಸೀತು. ವಾಸ್ತವ ಅದಲ್ಲ. ಸಾಕ್ಷಿ ಎಂಬಂತೆ, ಕೃಷಿಕರ ಬಾಯಲ್ಲಿ ನಲಿದ ಮೂರು ವರ್ಷಗಳ ನಂತರ ಜತ್ರೋಫಾ ಈಗೆಲ್ಲಿದೆ?
ಆಗಿದ್ದೇನು? ಇದ್ದಕ್ಕಿದ್ದಂತೆ ಸರ್ಕಾರಕ್ಕೆ ಪರ್ಯಾಯ ಪೆಟ್ರೋಲ್‍ನ ಚಿಂತನೆ ಮೂಡಿತು. ಬಯೋ ಇಂಧನದ ಕೃಷಿಯನ್ನು ಉತ್ತೇಜಿಸಲು ಕೋಟಿಗಳ ಲೆಕ್ಕದಲ್ಲಿ ಹಣ ತೆಗೆದಿಟ್ಟಿತು. ವಿದೇಶಿ ಸಹಾಯಧನ ಹಾಗೂ ಸರ್ಕಾರದ ಬಜೆಟ್‍ನ್ನು ನುಂಗಿ ಹಾಕುವ ಏಕೈಕ ಉದ್ದೇಶದಿಂದ ಕೆಲವು ಸರ್ಕಾರೇತರ ಸಂಘಟನೆಗಳು ಜತ್ರೋಫಾ ಕೃಷಿಯ ಮುಂಚೂಣಿಯಲ್ಲಿ ನಿಂತವು. ಉಚಿತ ಬೀಜ ಹಂಚಿದವು. ದುಡ್ಡು ತಾವೆಣಿಸಿದವು. ಅವುಗಳ ಪ್ರಚಾರದಿಂದ ರೈತರು ಮತ್ತೆ ದಿಕ್ಕು ತಪ್ಪಿದರು. ಇತ್ತ ಮೀಸಲಿಟ್ಟ ಹಣ ಖರ್ಚಾಗುತ್ತಿದ್ದಂತೆ ಎನ್‍ಜಿಓಗಳು ಮಾಯವಾಗಿಬಿಟ್ಟಿವೆ!
ಸಸ್ಯಜನ್ಯ ಇಂಧನ ಪಡೆಯುವುದು ಸುಲಭದ ಮಾತಲ್ಲ. ಜತ್ರೋಫಾದಂತೆಯೇ ಪ್ರಚಾರದಲ್ಲಿರುವ ಹೊಂಗೆ ತಟಕ್ಕನೆ ತೈಲವಿರುವ ಬೀಜ ಕೊಡುವುದಿಲ್ಲ. ಇದು ಬಹು ವಾರ್ಷಿಕ ಬೆಳೆ. ಬೆಳವಣಿಗೆ ನಿಧಾನ. ಈ ಮಧ್ಯೆ ಜನ, ಸರ್ಕಾರ ಸೇರಿ ಯಾವ ಪರಿ ಅರಣ್ಯನಾಶ ಮಾಡಿದ್ದೇವೆಂದರೆ ಕಾಡುಪ್ರಾಣಿಗಳು ಊರಲ್ಲಿಯೇ ವಾಸಿಸುವ ಅನಿವಾರ್ಯತೆ. ಇಂತಹ ವೇಳೆ ಪ್ರಾಣಿಗಳ ಕಾಟ ತಪ್ಪಿಸಿ ಎಕರೆಗಟ್ಟಲೆ ಜತ್ರೋಫಾ, ಹೊಂಗೆ ಕೃಷಿ ದಕ್ಕೀತೆ? ಸಾಗರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಹೊಂಗೆ ಬೆಳೆಯಲು ಮಾಡಿದ ಪ್ರಯತ್ನ ಕಾಡೆಮ್ಮೆ, ಕೋಣಗಳ ಲೂಟಿಗೆ ತುತ್ತಾಗಿರುವುದು ನೆನಪಾಗುತ್ತದೆ.
ನಾಲ್ಕು ವರ್ಷಗಳ ನಂತರವೂ ಪರಿಸ್ಥಿತಿ ಬದಲಾಗಿಲ್ಲ. ಇನ್ನು 20 ವರ್ಷ ಹೋದರೂ ಇದೇ ಪರಿಸ್ಥಿತಿಯೇ. ಜತ್ರೋಫಾ ಕೆ.ಜಿ. ಬೀಜಕ್ಕೆಷ್ಟು ದರ ಎಂಬುದು ನಿಗದಿಯಾಗಿಲ್ಲ. ಖರೀದಿಸುವ ಕಂಪನಿಗಳು ಹುಟ್ಟಿದಂತಿಲ್ಲ. ತೈಲ ತೆಗೆಯುವ ತಂತ್ರಜ್ಞಾನ, ಯಾಂತ್ರಿಕತೆ, ಪೆಟ್ರೋಲ್ ಜೊತೆ ಬೆರೆಸುವ ವ್ಯವಸ್ಥೆಗಳು ಸಿದ್ಧಗೊಂಡಿರುವುದು ಅನುಮಾನ. ಹಿಂದೊಮ್ಮೆ ಕೋಕೋ ಬೆಳೆಯ ವಿಚಾರದಲ್ಲೂ ಇಂತದ್ದೇ ಘಟಿಸಿತ್ತು. ಸರ್ಕಾರೀ ವ್ಯವಸ್ಥೆಯ ಪ್ರಚಾರಕ್ಕೆ ಮರುಳಾದ ರೈತರು ಕೃಷಿ ಇಲಾಖೆ ಒದಗಿಸಿದ ಕೋಕೋ ಗಿಡ ನೆಟ್ಟರು. ಬೀಜ ಕೊಳ್ಳುವವರಾರು? ನಿಕ್ಕಿಯಾಗಲೇ ಇಲ್ಲ. ಅದೃಷ್ಟಕ್ಕೆ ಕ್ಯಾಂಪ್ಕೋ ಖರೀದಿಸುತ್ತಿರುವುದರಿಂದ ಕೋಕೋ ಉಳಿದಿದೆ. ಆದರೆ ಕ್ಯಾಂಪ್ಕೋ ಒಂದೇ ಖರೀದಿದಾರ ಎಂಬುದು ಯಾವತ್ತೂ ರೈತನ ತಲೆ ಮೇಲೆ ತೂಗುತ್ತಿರುವ ಕತ್ತಿ ಎಂಬುದೂ ನಿಜ. ಹಾಗೆ ನೋಡಿದರೆ ತಾಳೆ ಕೃಷಿಯದ್ದೂ ಯಥಾವತ್ ಇದೇ ಕತೆ. ಸರ್ಕಾರವೂ ಬದಲಿಸಿಲ್ಲ, ರೈತರೂ!
ಜತ್ರೋಫಾ ವಾಣಿಜ್ಯ ಬೆಳೆಯಾಗಿ ಅಭಿವೃದ್ಧಿಗೊಳ್ಳುವುದು ಕಷ್ಟ. ಒಂದು ಹೆಕ್ಟೇರ್‍ಗಿಂತ ಕಡಿಮೆ ಭೂಮಿಯ ಒಡೆಯ ಜತ್ರೋಫಾ ಬೆಳೆದು ಲಾಭ ಮಾಡಲಿಕ್ಕಾಗದು. ಸಾಮೂಹಿಕವಾಗಿ ಬೆಳೆ ಬೆಳೆದಲ್ಲಿ ಮಾತ್ರ ಮಾರುಕಟ್ಟೆ ಸುಲಭವಾದೀತು. ಈ ಕ್ಷಣದಲ್ಲಂತೂ ಅದಕ್ಕೊದಗಬಹುದಾದ ರೋಗಗಳು ಗೊತ್ತಾಗಿಲ್ಲ. ರೈತನ ಗೊಂದಲ ಅಕ್ಷರಶಃ ಹೆಚ್ಚುತ್ತಿದೆ.
ನಿಜಕ್ಕೂ ಆ ಕಳ್ಳೀ ಗಿಡ ಜೀವಂತ ಬೇಲಿಯ ವಿಧಾನವಾಗಿ ನಿರುಮ್ಮಳವಾಗಿತ್ತು. ಒಮ್ಮೆ ಬದುಕಿಸಿ, ಬೆಳೆಸಿ ಬಿಟ್ಟರೆ ವರ್ಷಕ್ಕೊಮ್ಮೆ ಟ್ರಿಮ್ ಮಾಡಿದರೆ ಸಾಕು. ಅಂತಹ ಕಳ್ಳಿಯನ್ನು ಜತ್ರೋಫಾವಾಗಿ ಪುನರ್ನಾಮಕರಣ ಮಾಡಿ ಬೇಲಿಯ ಒಳಗೆ ಕರೆಸಿದ್ದು ವ್ಯರ್ಥ. ಮತ್ತೆ ಕಳ್ಳಿ ಬೇಲಿಯ ಸದಸ್ಯನಾಗಿ ತನ್ನ ಗಾರ್ಡ್ ಕೆಲಸ ಮುಂದುವರೆಸಿದೆ. ಇನ್ನೇನು ಆದೀತು?
– ಮಾ.ವೆಂ.ಸ.ಪ್ರಸಾದ್

ಒತ್ತಡದ ಜೀವನದಿಂದ ಅನಾರೋಗ್ಯ

0

ಒತ್ತಡದ ಜೀವನ ಕ್ರಮ ಹಾಗು ಆಹಾರ ಪದ್ಧತಿಯಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು ಎಲ್ಲರೂ ಜೀವನಕ್ರಮವನ್ನು ಬದಲಾಯಿಸಿಕೊಳ್ಳಬೇಕು ಎಂದು ನಗರದ ಮಾನಸ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮೋಹನ್ಭಾರ್ಗವ್ ಹೇಳಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾನುವಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ, ಟಿಪ್ಪು ಸುಲ್ತಾನ್ ಸಂಘ ಹಾಗು ಮಾನಸ ಆಸ್ಪತ್ರೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರು ಅವರ ಆಹಾರ ಪದ್ಧತಿಯಲ್ಲಿ ತರಕಾರಿ, ಸೊಪ್ಪು, ಹಣ್ಣು ಹಂಪಲುಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಇದರಿಂದ ಆವರು ಶಾರೀರಕವಾಗಿ ಸದೃಢರಾಗಿರುವುದರೊಂದಿಗೆ ಉತ್ತಮ ಆರೋಗ್ಯದಿಂದ ದೀರ್ಘಕಾಲ ಜೀವಿಸುತ್ತಿದ್ದರು. ಆದರೆ ಇಂದು ಬಹಳಷ್ಟು ಫಾಸ್ಟ್ಫುಡ್, ಜಂಕ್ಫುಡ್ ಸೇವಿಸುವುದರಿಂದ ದೇಹಕ್ಕೆ ಅವಶ್ಯಕವಾಗಿರುವ ಪೌಷ್ಠಿಕಾಂಶಗಳು ಸಿಗದೇ ಅನಾರೋಗ್ಯದಿಂದ ಬಳಲುತ್ತಿದ್ದೇವೆ.
ಹೆಚ್ಚು ಸೊಪ್ಪು, ಹಸಿ ತರಕಾರಿ ಹಣ್ಣು ಹಂಪಲು ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ನಗರದ ಬಹುತೇಕ ಜನತೆ ರೇಷ್ಮೆಯನ್ನೇ ನಂಬಿ ಜೀವಿಸಬೇಕಾದ ಅನಿವಾರ್ಯವಿರುವುದರಿಂದ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ನೀಡುವುದಿಲ್ಲ. ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸುವ ಇಂತಹ ಉಚಿತ ಆರೋಗ್ಯ ಶಿಬಿರಗಳ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಎಂ.ವಿ.ಶಿವಪ್ರಕಾಶ್, ಕರ್ನಾಟಕ ಟಿಪ್ಪು ಸುಲ್ತಾನ್ ಸಂಘದ ತಾಲ್ಲೂಕು ಅಧ್ಯಕ್ಷ ಅಫ್ಜಲ್ಪಾಷ, ಆರ್.ಸುರೇಶ್ ಮತ್ತಿತರರು ಹಾಜರಿದ್ದರು.

ಮಂಗಳನ ಅಂಗಳದಲ್ಲಿ ಅವಳಿ ರೊಬಾಟುಗಳು – ಭಾಗ 2

0

ಮಂಗಳ ವಾಸಕ್ಕೆ ಯೋಗ್ಯವೆ?
ಮಂಗಳನಲ್ಲಿ ವಾಸ ಯೋಗ್ಯ ವ್ಯವಸ್ಥೆ ಏನಿದೆ ಮೊದಲು ನೋಡೋಣ: ಭೂಮಿಗಿಂತ ಕಡಿಮೆ ಪ್ರಮಾಣದಲ್ಲಾದರೂ ಸರಿ, ಅಲ್ಲಿ ಸೂರ್ಯರಶ್ಮಿ ಬೀಳುತ್ತದೆ, ಬಾಹ್ಯ ವಿಕಿರಣಗಳಿಂದ ಸಾಧಾರಣ ಮಟ್ಟಿಗೆ ರಕ್ಷಣೆ ಕೊಡುವ ವಾಯುಮಂಡಲ ಇದೆ, ಮಾನವದೇಹ ಹೊಂದಿಕೊಳ್ಳುವಷ್ಟು ಅಲ್ಪ ಗುರುತ್ವ ಇದೆ. ತನ್ನ ಅಕ್ಷದಲ್ಲಿ ಹೆಚ್ಚುಕಡಿಮೆ ಭೂಮಿಯಷ್ಟೇ ವೇಗವಾಗಿ ಸುತ್ತು ಹಾಕುವ ಮಂಗಳನಲ್ಲಿ ಹಗಲು ಮತ್ತು ರಾತ್ರಿ ಹೆಚ್ಚೂಕಡಿಮೆ ಭೂಮಿಯಷ್ಟೇ ಇದ್ದು ಮಾನವನ ಜೈವಿಕ ಗಡಿಯಾರಕ್ಕೆ ಏನೂ ತೊಂದರೆಯಾಗದು. ಅಲ್ಲಿಯೂ ನಮ್ಮಲ್ಲಿಯಂತೆ ವರ್ಷಕ್ಕೆ ನಾಲ್ಕು ಋತುಗಳಿವೆ.
ಇನ್ನು, ಇದೊಂದು ದುಸ್ಸಾಹಸವೇ, ಏಕೆಂದರೆ,
* ಮಂಗಳನ ವಾಯುಮಂಡಲ ನೂರಕ್ಕ್ಕೆ ತೊಂಭತ್ತಾರು ಪಾಲು ಇಂಗಾಲದ ಡೈಆಕ್ಸೈಡಿನಿಂದ ತುಂಬಿದೆ. ಉಸಿರಾಡಲು ಸದಾಕಾಲ ಆಕ್ಸಿಜನ್ ವ್ಯವಸ್ಥೆ ಬೇಕೇಬೇಕು. ವಾತಾವರಣ ಭೂಮಿಗಿಂತ ನೂರು ಪಟ್ಟು ತೆಳು ಕೂಡ. ಆದ್ದರಿಂದ ಮೇಲ್ಮೈ ಮೇಲೆ ಬಿದ್ದ ಸೂರ್ಯಶಕ್ತಿಯನ್ನು ಹಿಡಿದಿಡುವ ವ್ಯವಸ್ಥೆ ಮಾನವ ಸ್ನೇಹಿಯಾಗಿಲ್ಲ.
* ಮಂಗಳ ಬರೀ ಒಣ ಮತ್ತು ಬರಡು ನೆಲವಷ್ಟೇ ಅಲ್ಲ, ಸೂರ್ಯನಿಂದ ದೂರವಿರುವುದರಿಂದ ತಣ್ಣಗಿನ ಚೆಂಡೂ ಕೂಡ. ಮಂಗಳ ಅಂಡಾಕಾರದ ಕಕ್ಷೆಯಲ್ಲಿ ತಿರುಗುತ್ತಿರುವುದರಿಂದ ಸೂರ್ಯನಿಂದ ದೂರವಿದ್ದಾಗ ಮತ್ತೂ ತಣ್ಣಗಾಗುತ್ತದೆ. ಬಿರುಬೇಸಿಗೆಯಲ್ಲಿ, ಅದೂ ಸಮಭಾಜಕ ರೇಖೆಯ ಆಜೂಬಾಜು ಹಗಲುಹೊತ್ತು 230 ಸೆಂಟಿಗ್ರೇಡ್ ಮಾತ್ರ ಇರುತ್ತದೆ. ಧ್ರುವಪ್ರದೇಶಗಳಲ್ಲಿ ಬಿರುಚಳಿಗಾಲದಲ್ಲಿ -1250 ಸೆ.ಗೆ ಇಳಿಯುವುದೂ ಉಂಟು! ಸರಾಸರಿ ತಾಪಮಾನ -630 ಸೆಂಟಿಗ್ರೇಡ್ ಎನ್ನಲಾಗುತ್ತಿದೆ.
* ಮಂಗಳನ ದಪ್ಪನೆಯ ನೆಲಹಾಸಿನಡಿ ನೀರಿನ ಸೆಲೆ ಸಿಕ್ಕಿತೆನ್ನಿ, ಅದನ್ನು ಮೇಲೆ ತಂದರೆ ಜತನವಾಗಿ ಕಾಪಾಡಬೇಕಾದೀತು! ಏಕೆಂದರೆ ವಾಯು ಒತ್ತಡ ಇಲ್ಲದಿರುವುದರಿಂದ ಹಾಗೂ ಗುರುತ್ವಾಕರ್ಷಣೆಯೂ ಕೂಡ ಕಡಿಮೆ ಇರುವುದರಿಂದ ಮೇಲೆ ಬಂದ ದ್ರವರೂಪದ ನೀರು ಕ್ಷಣಮಾತ್ರದಲ್ಲಿ ಆವಿಯಾಗಿ ಹಾರಿಹೋಗುತ್ತದೆ!
* ಮಂಗಳನ ವಿರಳ ವಾತಾವರಣದಲ್ಲಿ ಮಾನವ ದೇಹದ ಮೇಲೆ ಬೀಳಬೇಕಾದ ವಾಯುವಿನ ಒತ್ತಡವೂ ಬಹಳ ಕಡಿಮೆ ಇದೆ. ಕನಿಷ್ಟ 700 ಮಿಲಿಬಾರ್‍ನಷ್ಟು ಒತ್ತಡ ನಮಗೆ ಬೇಕೇಬೇಕು. ಮಂಗಳನಲ್ಲಿ ವಾಯುಒತ್ತಡ ಬರೀ 7.5 ಮಿಲಿಬಾರಿದೆ. ಭೂಮಿಯಲ್ಲಿ ಎವರೆಸ್ಟ್ ಏರಿ ಆಮ್ಲಜನಕದ ಚೀಲವಿಲ್ಲದೆ ಕೆಲಕಾಲ ಕಳೆದವರಿದ್ದಾರೆ, ಆದರೆ ಅಲ್ಲೂ ಕೂಡ 300ಮಿಲಿಬಾರಿನ ವಾಯುಒಜ್ಜೆ ಇದ್ದೇ ಇದೆ. ಹಾಗಾಗಿ ಮಂಗಳನಲ್ಲಿ ವಿಶೇಷ ಹಸಿರುಮನೆಯಲ್ಲೇ ವಾಸಿಸಬೇಕು, ಹೊರಗೆ ಬರುವುದಾದಲ್ಲಿ ಒತ್ತಡ ತುಂಬಿದ ವಿಶೇಷ ದಿರಿಸು (ಸ್ಪೇಸ್‍ಸೂಟ್) ಹಾಕಿಕೊಳ್ಳಲೇ ಬೇಕಾಗುತ್ತದೆ. ಅಲ್ಲದೆ ಅಲ್ಲಿಯ ಆಕಾಶದಲ್ಲಿ ಒಝೋನ್ ವಲಯ ಕೂಡ ಇಲ್ಲದಿರುವುದರಿಂದ ಸೂರ್ಯನ ಅತಿನೇರಳೆ ಕಿರಣಗಳು ನೇರವಾಗಿ ದಾಳಿಯಿಡುತ್ತವೆ.
* ಅಂಡಾಕಾರದ ಕಕ್ಷೆಯ ಮಂಗಳ ಸೂರ್ಯನಿಗೆ ಹತ್ತಿರವಾದಾಗ ಒಮ್ಮೊಮ್ಮೆ ಎದ್ದೇಳುವ ದೂಳಿನ ಹೆಗ್ಗಾಳಿ ಇನ್ನೊಂದು ಸಮಸ್ಯೆ. ಇಡೀಗ್ರಹವೂ ಬರಡುಗುಂಡಾದ್ದರಿಂದ ಎದ್ದ ದೂಳು ಕೆಲವು ಸಲ ಅತಿ ವೇಗವಾಗಿ ಹಾಗೂ ಅತಿ ಶೀಘ್ರವಾಗಿ ಎಲ್ಲೆಡೆ ಪಸರಿಸಿಬಿಡುತ್ತದೆ, ದೂಳು ಅಡಗಲು ತಿಂಗಳುಗಟ್ಟಲೆ ಸಮಯ ಬೇಕು. ಭೂಮಿಯ ಮೇಲಾದರೆ, ನೀರಾವಿಯನ್ನು ಹೊತ್ತ ವಾಯುಮಂಡಲ ದೂಳೆದ್ದರೆ ಅದನ್ನು ಹೀರಿಕೊಳ್ಳುತ್ತದೆ. ಮಂಗಳನಲ್ಲಿ ಹಾಗಲ್ಲ, ಮೇಲೆ ಹಾರಿದ ದೂಳಿನ ಕಣಗಳು ಬಿಸಿಲನ್ನು ಹೀರಿ ಇಡೀ ವಾತಾವರಣದ ತಾಪಮಾನವನ್ನೇ ಏರಿಸುತ್ತವೆ. 2001 ರಲ್ಲಿ ಹಾಗೂ 2007 ರಲ್ಲಿ ಮಂಗಳನಲ್ಲಿ ಅಂಥ ದೂಳುಗಾಳಿ ಎದ್ದು ಹರಡಿತ್ತು.
* ಮಂಗಳನಲ್ಲಿ ಹಸಿರಿಲ್ಲ, ಅಂದರೆ ಅಲ್ಲ್ಲಿ ನಮ್ಮ ಹೊಟ್ಟೆಯ ಪಾಡನ್ನು ನಾವೇ ನೋಡಿಕೊಳ್ಳಬೇಕು.
* ಇನ್ನೊಂದು ಅತಿ ಮುಖ್ಯವಾದ ವಿಷಯವೆಂದರೆ, ಮಂಗಳನಿಂದ ಮರಳಿ ಭೂಮಿಗೆ ಬರುವ ತಂತ್ರಜ್ಞಾನ ಇನ್ನೂ ತಯಾರಾಗಿಲ್ಲ!
ಇಷ್ಟಾಗಿಯೂ ಮಂಗಳಯಾನಕ್ಕೆ ಯೋಜನೆ ಹಾಕಿದವರ ತುಸು ವಿವರ ಇಲ್ಲಿದೆ, ನೋಡೋಣ ಬನ್ನಿ:
1. ಇನ್ಸ್‍ಪಿರೇಶನ್ ಮಾರ್ಸ್: ಈ ಸಂಸ್ಥೆ ಲಕ್ಷಾಧೀಶ ಟೆನಿಸ್ ಟಿಟೊ ಅವರದ್ದು, ಈತ 2001 ರಲ್ಲಿ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ಅಟ್ಟಣಿಗೆ’ ಗೆ ಹಾರಿಹೋಗಿ 7 ದಿನಗಳ ಕಾಲ ಭೂ ಪ್ರದಕ್ಷಿಣೆ ಹಾಕಿ ಬಂದವನು. 2018ರಲ್ಲಿ ನವದಂಪತಿಯೊಂದಕ್ಕೆ ಮಂಗಳದರ್ಶನ ಮಾಡಿಸುವ ಯೋಜನೆ ಈತನದ್ದು. ಅವರು ಮಂಗಳನಲ್ಲಿ ಇಳಿಯುವುದಿಲ್ಲ, ಮಂಗಳನಿಂದ 160 ಕಿ.ಮೀ. ಎತ್ತರದವರೆಗೆ ಹೋಗಿ ಅಲ್ಲಿಯ ದೃಶ್ಯ ನೋಡಿ ವಾಪಸ್ ಭೂಮಿಗೆ ಬರುತ್ತಾರೆ.
2. ಮಾರ್ಸ್ ಒನ್: ನೆದರ್‍ಲ್ಯಾಂಡಿನ ಸಂಸ್ಥೆ ಇದು. ಕೆಂಪುಗ್ರಹದಲ್ಲಿ 2023 ರಲ್ಲಿ 6 ಶತಕೋಟಿ ಡಾಲರ್ ಬಂಡವಾಳ ಹೂಡಿ ಮೊದಲು ನಾಲ್ವರು ಆಮೇಲೆ ಎರಡು ವರ್ಷಕ್ಕೊಮ್ಮೆ ಇಬ್ಬಿಬ್ಬರ್ರನ್ನು ಕಳಿಸಿ ಮಾನವರ ಕಾಲನಿ ಮಾಡುವ ಇರಾದೆಯ ಈ ಸಂಸ್ಥೆಗೆ ಅವರನ್ನು ಮರಳಿ ಭೂಮಿಗೆ ಕರೆತರುವ ಯೋಚನೆಯೇನೂ ಇಲ್ಲವಂತೆ! ಆದರೂ ಈಗಾಗಲೇ ಮಂಗಳನಲ್ಲಿಗೆ ಹೋಗಲು ಎರಡು ಲಕ್ಷ ಜನರು ಅರ್ಜಿ ಹಾಕಿದ್ದಾರಂತೆ!
3. ಎಲನ್ ಮಸ್ಕ್ ಮಾರ್ಸ್ ಕಾಲನಿ: ಕೋಟ್ಯಾಧೀಶ ಎಲನ್ ಮಸ್ಕ್ ಸ್ಪೇಸ್ ಎಕ್ಸ್ ಸಂಸ್ಥೆಯ ಸಿಇಒ, ಈತನದ್ದು ದ್ರವರೂಪದ ಆಮ್ಲಜನಕ ಮತ್ತು ಮಿಥೇನ್ ತುಂಬಿದ ಮರುಬಳಕೆಯ ರಾಕೆಟ್ಟಿನಲ್ಲಿ ಹತ್ತತ್ತು ಜನರ ಹಾಗೆ ಸುಮಾರು 80 ಸಾವಿರ ಜನರನ್ನು ಮಂಗಳನಲ್ಲಿಗೆ ಕಳಿಸಿ ವಸಾಹತು ಸ್ಥಾಪಿಸಿ ಮಾನವರನ್ನು ಬಹುಗ್ರಹವಾಸಿಗಳನ್ನಾಗಿಸುವ ಯೋಜನೆ. ಒಂದು ಸೀಟಿಗೆ ಬೆಲೆ 5 ಲಕ್ಷ ಡಾಲರ್ ಅಂದರೆ 3 ಕೋಟಿ ರೂ.!
4. ಮಾರ್ಸ್ ಡೈರೆಕ್ಟ್: ಮಾರ್ಸ್ ಸೊಸೈಟಿಯ ಮುಖ್ಯಸ್ಥ, ರಾಬರ್ಟ್ ಝುಬಿನ್ ಅವರ ಕನಸು ಇದು. ಈಗಿರುವ ತಂತ್ರಜ್ಞಾನ ಬಳಸಿ ಗಗನಯಾನಿಗಳು ಮಂಗಳನ ಅಂಗಳದಲ್ಲಿ ಇಳಿದು ಅಲ್ಲಿಯ ವಿರಳ ವಾತಾವರಣದಿಂದ ಆಮ್ಲಜನಕ ಉತ್ಪಾದಿಸಿಕೊಳ್ಳುತ್ತಾರೆ, ನೆಲದಡಿಯ ನೀರು, ಮತ್ತು ಖನಿಜಗಳನ್ನು ಬಳಸಿಕೊಂಡು ನಿರ್ಮಾಣ ಕಾರ್ಯ ಹಾಗೂ ಅಣುಸ್ಥಾವರ ಕಟ್ಟಿ ವಿದ್ಯುತ್ ಪಡೆಯುತ್ತ್ತ ಮುಂದಿನ ದಿನಗಳಲ್ಲಿ ಅಲ್ಲಿಯೇ ಸುಸ್ಥಿರ, ಸ್ವಸ್ಥಿರ ಬದುಕು ಕಟ್ಟಿಕೊಳ್ಳಬಹುದು, ಭೂಮಿಯ ಅವಲಂಬನೆಯನ್ನು ಕಡಿಮೆಗೊಳಿಸಬಹುದು.
5. ನಾಸಾ: ಮಾನವಸಹಿತ ನೌಕೆಗಳನ್ನು ಬಾಹ್ಯಾಕಾಶಕ್ಕೆ ಕಳಿಸಬೇಕೆನ್ನುವುದು ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ನಾಸಾ ಸಂಸ್ಥೆಯ ಬಹುದಿನಗಳ ಯೋಜನೆ. 2025 ಒಳಗೆ ಭೂಸಮೀಪದ ಕ್ಷುದ್ರಗ್ರಹಕ್ಕೆ ಮಾನವ ಸಹಿತ ನೌಕೆಯ ರವಾನೆ, ಆನಂತರ 2030 ರೊಳಗೆ ಮಂಗಳನಲ್ಲಿಗೆ ಮಾನವ ಎಂದು ನಾಸಾ ಗುರಿ ಹೊಂದಿದೆ.
ಮುಗಿಯಿತು.
– ಸರೋಜಾ ಪ್ರಕಾಶ.

ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ನಾಮಫಲಕ ಉದ್ಘಾಟನೆ

0

ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ ಗ್ರಾಮದಲ್ಲಿ ಭಾನುವಾರ ಕಾಲೋನಿಯಲ್ಲಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ನಾಮಫಲಕವನ್ನು ಉದ್ಘಾಟಿಸಲಾಯಿತು. ಗ್ರಾಮದ ಮುನಿರೆಡ್ಡಿ, ಮುನಿರಾಜು(ಕುಟ್ಟಿ), ಶ್ರೀನಿವಾಸ್, ನಾರಾಯಣಸ್ವಾಮಿ, ಶಶಿಕುಮಾರ್, ಬಸಪ್ಪ, ಪ್ರಕಾಶ್, ಚನ್ನಕೇಶವ, ನವೀನ್, ಶಂಕರ್, ಮುರಳಿ ಹಾಜರಿದ್ದರು.

ತಂದೆ ತಾಯಿ ಗುರು ಹಿರಿಯರಂತೆ ಕನ್ನಡ ಭಾಷೆಯನ್ನು ಪ್ರೀತಿಸಬೇಕು

0

ಎಲ್ಲಿಯ ತನಕ ನಾವು ಕನ್ನಡವನ್ನು ಉಪಯೋಗಿಸುತ್ತೇವೊ, ಅಲ್ಲಿಯ ತನಕ ಉಳಿಯುತ್ತದೆ. ತಂದೆ ತಾಯಿ ಗುರು ಹಿರಿಯರಂತೆ ಕನ್ನಡ ಭಾಷೆಯನ್ನು ಪ್ರೀತಿಸಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಾಡ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ೬೦ ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕದ ಗತಕಾಲದ ವೈಭವವನ್ನು ಸ್ಮರಿಸುವುದರೊಂದಿಗೆ ನಮ್ಮ ಮಾತೃ ಭಾಷೆಯ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಐತಿಹ್ಯವಿದೆ. ಅನೇಕ ಮಂದಿ ಸಾಧಕರನ್ನು ನೀಡಿರುವಂತಹ ನಾಡಿನಲ್ಲಿ ಕನ್ನಡವನ್ನು ನಮ್ಮ ರಾಜ್ಯದಲ್ಲಿ ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿದಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಮಹಮ್ಮದ್ಖಾಸಿಂ ಮಾತನಾಡಿ, ವರ್ಷಕ್ಕೊಮ್ಮೆ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಮಂತ್ರ ಜಪಿಸುವ ನಾವುಗಳು ನಮ್ಮ ಮಕ್ಕಳನ್ನು ಕನ್ನಡ ಭಾಷೆಯಿಂದ ದೂರವಿಡುವುದಷ್ಟೇ ಅಲ್ಲದೇ ಇಂಗ್ಲಿಷ್ ವ್ಯಾಮೋಹ ಬೆಳೆಸಿಕೊಂಡಿದ್ದೇವೆ. ನಮ್ಮ ನುಡಿಗಟ್ಟಿನಲ್ಲಿರುವ ಭಾವನಾತ್ಮಕ ಸಂಬಂಧವನ್ನು ಮಕ್ಕಳಿಂದ ದೂರಮಾಡುತ್ತಿದ್ದೇವೆ. ಕನ್ನಡ ಹೃದಯದ ಭಾಷೆಯಾಗಬೇಕು. ಹಲವಾರು ಭಾಷೆಗಳನ್ನು ಕಲಿಯಬೇಕು. ಅದರಿಂದ ನಮ್ಮ ಜ್ಞಾನ ವಿಸ್ತರಿಸುತ್ತದೆ. ಆದರೆ ಕನ್ನಡ ಮಾತ್ರ ನಮ್ಮ ಉಸಿರಿನಂತಿರಬೇಕು. ಕನ್ನಡದ ಸಾಹಿತ್ಯ ಮಕ್ಕಳಿಗೆ ಪರಿಚಯವಾಗಬೇಕು. ಓದುವ ಹವ್ಯಾಸ ಬೆಳೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯಲ್ಲಿ ಶೇ. ೧೦೦ ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕಸಾಪ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್, ಕಸಾಪ ತಾಲ್ಲೂಕು ಅಧ್ಯಕ್ಷ ಕೃ.ನಾ.ಶ್ರೀನಿವಾಸಮೂರ್ತಿ, ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಅನಂತಕೃಷ್ಣ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ತಾದೂರು ಮಂಜುನಾಥ್, ರೇಷ್ಮೆ ಸಹಾಯಕ ನಿರ್ದೇಶಕ ಚಂದ್ರಪ್ಪ, ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ, ಪಶುಇಲಾಖೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಡಾ.ಅನಿಲ್ ಕುಮಾರ್ ಮತ್ತಿತರರು ಹಾಜರಿದ್ದರು.

ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಶಿಡ್ಲಘಟ್ಟದ ಕ್ರೀಡಾಪಟುಗಳು

0

ನಗರದ ಆರು ಮಂದಿ ಕ್ರೀಡಾಪಟುಗಳು ಬೀದರ್ನಲ್ಲಿ ನಡೆಯಲಿರುವ ರಾಜ್ಯಮಟ್ಟದ ಎರಡನೇ ಅಮೆಚ್ಯೂರ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಹದಿನಾಲ್ಕು ವರ್ಷದೊಳಗಿನವರಲ್ಲಿ ಚೈತನ್ಯ(100, 200 ಮತ್ತು 400 ಮೀಟರ್ ಓಟ), ಎಸ್.ಮೋಹಿತ್ನಾಯಕ್(200, 400 ಮೀಟರ್ ಓಟ), ಮುಖೇಶ್(ಶಾಟ್ಪುಟ್ ಮತ್ತು ಡಿಸ್ಕಸ್ ಥ್ರೋ), ಮನೋಜ್(200, 400 ಮೀಟರ್ ಓಟ), ಭಾನುಚಂದರ್(100, 200 ಮೀಟರ್ ಓಟ); ಹದಿನಾರು ವರ್ಷದೊಳಗಿನವರಲ್ಲಿ ಮಾದೇಶ(200, 400 ಮೀಟರ್ ಓಟ, ಲಾಂಗ್ಜಂಪ್) ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡೆಯಲ್ಲಿ ಆಸಕ್ತಿಯಿರುವ ಮಕ್ಕಳನ್ನು ಗುರುತಿಸಿ ಉಚಿತವಾಗಿ ಅವರಿಗೆ ಪ್ರತಿ ದಿನ ನಗರದ ನೆಹರೂ ಕ್ರೀಡಾಂಗಣದಲ್ಲಿ ತರಬೇತಿ ನೀಡುತ್ತಿರುವ ಕ್ರೀಡಾ ತರಬೇತುದಾರ ಎಂ.ಮುನಿರಾಜು, ‘ನವೆಂಬರ್ 5,6 ಮತ್ತು 7 ರಂದು ಬೀದರ್ನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಮಕ್ಕಳು ಆಯ್ಕೆಯಾಗಿರುವುದು ಖುಷಿ ತಂದಿದೆ. ನಮ್ಮಲ್ಲಿನ ಪ್ರತಿಭೆಗಳು ರಾಷ್ಟ್ರಮಟ್ಟಕ್ಕೂ ಹೋಗಬೇಕೆಂಬ ಅಭಿಲಾಷೆಯಿದೆ. ಮಕ್ಕಳೊಂದಿಗೆ ಜಿಲ್ಲಾ ವ್ಯವಸ್ಥಾಪಕ ರಾಜಶೇಖರ್ ತೆರಳುತ್ತಿದ್ದಾರೆ’ ಎಂದು ಹೇಳಿದರು.

ಆನೂರು ಗ್ರಾಮಸ್ಥರ ಪ್ರತಿಭಟನೆ

0

ತಾಲ್ಲೂಕಿನ ಆನೂರು ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸುವ ಪಂಚಾಯತಿಯ ಕೊಳವೆಬಾವಿ ಕಾರ್ಯನಿರ್ವಹಿಸಲು ಸಮರ್ಪಕವಾಗಿ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತ ಸಂಘದ ಸದಸ್ಯರು ಹಾಗೂ ಆನೂರು ಗ್ರಾಮಸ್ಥರು ಬೆಸ್ಕಾಂ ಮುಂದೆ ಗುರುವಾರ ಪ್ರತಿಭಟಿಸಿದರು.
ಆನೂರು ಗ್ರಾಮದಲ್ಲಿ ಪಂಚಾಯತಿಯ ಕೊಳವೆ ಬಾವಿಯಿಂದ ಶುದ್ಧ ನೀರಿನ ಘಟಕಕ್ಕೆ ಸಂಪರ್ಕವನ್ನು ಕಲ್ಪಿಸಲಾಗಿದೆ. ಶುದ್ಧೀಕರಣವಾದ ನೀರನ್ನು ಗ್ರಾಮಸ್ಥರು ಕುಡಿಯಲು ತೆಗೆದುಕೊಂಡು ಹೋಗುತ್ತಾರೆ. ಆದರೆ, ಸಮರ್ಪಕವಾಗಿ ವಿದ್ಯುತ್ ನೀಡದ ಕಾರಣ ಅತ್ತ ಕೊಳವೆ ಬಾವಿಯಿಂದ ನೀರನ್ನು ಮೇಲೆತ್ತಲೂ ಆಗದೆ, ಇತ್ತ ಸಂಗ್ರಹವಾದ ನೀರನ್ನು ಶುದ್ಧೀಕರಿಸಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಶುದ್ಧೀಕರಣ ಘಟಕವಿದ್ದರೂ ಶುದ್ಧ ನೀರನ್ನು ಕುಡಿಯಲು ಆಗದಂತಾಗಿದೆ. ಆದ್ದರಿಂದ ಗ್ರಾಮಕ್ಕೆ ಸಮರ್ಪಕವಾಗಿ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಮನವಿ ಪತ್ರವನ್ನು ಬೆಸ್ಕಾಂ ಎ.ಇ.ಇ ಪರಮೇಶ್ ಅವರಿಗೆ ನೀಡಿದರು.
ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಪ್ರಧಾನ ಕಾರ್ಯದರ್ಶಿ ಬಾಲಮುರಳಿಕೃಷ್ಣ, ಭಕ್ತರಹಳ್ಳಿ ಪ್ರತೀಶ್, ವಿಜಯಕುಮಾರ್, ಶಶಿಕುಮಾರ್, ಮುನಿರಾಜು, ನಾಗರಾಜ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅವರ ನೇತೃತ್ವದಲ್ಲಿ ಬೈಕ್ ರ್ಯಾಲಿ

0

ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅವರ ನೇತೃತ್ವದಲ್ಲಿ ಶಾಶ್ವತ ನೀರಾವರಿ ಹೋರಾಟವನ್ನು ಬೆಂಬಲಿಸಲು ಗುರುವಾರ ನಗರದಿಂದ ಸಾವಿರಾರು ಬೈಕ್ಗಳಲ್ಲಿ ಜನರು ಚಿಕ್ಕಬಳ್ಳಾಪುರದ ಕಡೆಗೆ ತೆರಳಿದರು.
30oct3ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿ ಜಮಾಯಿಸಿದ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಬೈಕ್ ಸವಾರರು, ಅಲ್ಲಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದರು. ದಾರಿಯುದ್ದಕ್ಕೂ ಅಲ್ಲಲ್ಲಿ ನೀರಾವರಿ ಹೋರಾಟಗಾರರನ್ನು ಹೂಗಳನ್ನು ಚೆಲ್ಲಿ ಸ್ವಾಗತಿಸಲಾಯಿತು. ವಿ.ಮುನಿಯಪ್ಪ ಅವರ ಅಭಿಮಾನಿಗಳ ಬಳಗ ಎಂದು ಬರೆದಿದ್ದ ಹಾಗೂ ವಿ.ಮುನಿಯಪ್ಪ ಅವರ ಭಾವಚಿತ್ರವಿದ್ದ ಟಿ.ಶರ್ಟ್ ಧರಿಸಿದ್ದ ಜನರು ಬೈಕ್ಗಳಲ್ಲಿ ಸಾಗುತ್ತಾ ಶಾಶ್ವತ ನೀರಾವರಿ ಜಾರಿಯಾಗುವವರೆಗೂ ಹೋರಾಟ ನಿಲ್ಲದು ಎಂದು ಘೋಷಣೆಗಳನ್ನು ಕೂಗಿದರು.
30oct1ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಬಜೆಟ್ನಲ್ಲಿ ನೀರಾವರಿ ಯೋಜನೆಗೆ ಹಣವನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ನೀರಾವರಿ ಅಗತ್ಯತೆಯನ್ನು ವಿವರಿಸಿ ಮನವಿಯನ್ನು ಜಿಲ್ಲಾಧಿಕಾರಿಗಲಿಗೆ ಸಲ್ಲಿಸುವುದಾಗಿ ಬೈಕ್ ರ್ಯಾಲಿಗೆ ಚಾಲನೆ ನೀಡಿದ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಿಂದ, ಟಿ.ಬಿ.ರಸ್ತೆ, ಕಾಂಗ್ರೆಸ್ ಭವನ ರಸ್ತೆ, ಉಲ್ಲೂರುಪೇಟೆ, ಬೈಪಾಸ್ ರಸ್ತೆಯನ್ನು ಹಾದು ಚಿಕ್ಕಬಳ್ಳಾಪುರದ ರಸ್ತೆಯಲ್ಲಿ ಬೈಕ್ ರ್ಯಾಲಿಯನ್ನು ಮುನ್ನಡೆಸಲಾಯಿತು. ಹಂಡಿಗನಾಳ ಗ್ರಾಮದಲ್ಲಿ ಬೈಕ್ ರ್ಯಾಲಿಗೆ ವಿಶೇಷ ಸ್ವಾಗತವನ್ನು ಏರ್ಪಡಿಸಲಾಗಿತ್ತು.

ಗ್ರಾಮೀಣ ಯುವಕರು ಸ್ವಾವಲಂಬಿಗಳಾಗಿ

0

ಗ್ರಾಮೀಣ ಯುವಕರು ಸ್ವಂತ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ಸ್ವಾವಲಂಬಿಗಳಾಗಬಹುದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯತಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಅಡಿಕೆ ಪಟ್ಟೆಗಳಿಂದ ತಟ್ಟೆ, ಲೋಟಗಳನ್ನು ತಯಾರಿಸುವ ಘಟಕವನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
29oct3ಗ್ರಾಮೀಣ ಭಾಗದಲ್ಲಿನ ವಿದ್ಯಾವಂತ ಯುವಕರು ನಗರಗಳಿಗೆ ಹೋಗುವುದರ ಬದಲಾಗಿ ಗ್ರಾಮೀಣ ಭಾಗದಲ್ಲಿ ಸಿಗುವ ಕಚ್ಛಾಪದಾರ್ಥಗಳಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ನಗರದ ಮಾರುಕಟ್ಟೆಗೆ ಕಳುಹಿಸಬೇಕು. ಇದರಿಂದ ಗ್ರಾಮೀಣ ಭಾಗದಲ್ಲಿ ಆರ್ಥಿಕತೆ ಹೆಚ್ಚುತ್ತದೆ, ನಿರುದ್ಯೋಗ ನಿವಾರಣೆಯಾಗುತ್ತದೆ ಹಾಗೂ ಗ್ರಾಮಗಳಲ್ಲಿನ ಕಚ್ಛಾ ವಸ್ತುಗಳಿಗೆ ಬೆಲೆ ಬರುತ್ತದೆ ಎಂದು ಹೇಳಿದರು.
ಶ್ರೀ ಲಕ್ಷ್ಮೀ ಅಡಿಕೆ ತಟ್ಟೆಗಳ ಘಟಕದ ಬಿ.ಎನ್.ಕುಮಾರ್ ಮಾತನಾಡಿ, ಈ ಘಟಕಕ್ಕೆ ಬೇಕಾಗುವ ಅಡಿಕೆ ಪಟ್ಟೆಗಳನ್ನು ತುಮಕೂರು, ಶಿರಾ ಹಾಗೂ ಗುಬ್ಬಿಗಳಿಂದ ತಂದು ಸುಮಾರು ಎಂಟು ವಿಧದ ಗುಣಮಟ್ಟದ ತಟ್ಟೆ ಲೋಟಗಳನ್ನು ತಯಾರಿಸಲಾಗುವುದು. ಇದು ಪರಿಸರಸ್ನೇಹಿಯಾಗಿದೆ ಎಂದರು.
ಮಳ್ಳೂರಯ್ಯ, ವೀರಾಪುರ ಮುನಿಯಪ್ಪ, ಮುನಿರಾಜು, ಸೊಣ್ಣೇನಹಳ್ಳಿ ವೆಂಕಟೇಶ್, ವೀರಾಪುರ ಮುನಿರೆಡ್ಡಿ, ಎಂ.ಆರ್.ನಂಜುಂಡಮೂರ್ತಿ ಈ ಸಂದರ್ಭದಲ್ಲಿ ಹಾಜರಿದ್ದರು.

ಸರ್ಕಾರದ ಮೇಲೆ ಒತ್ತಡ ಹೇರಲು ಬೈಕ್ ರ್ಯಾಲಿ

0

ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಹತ್ತರಿಂದ ಹದಿನೈದು ಸಾವಿರ ಮಂದಿ ತಾಲ್ಲೂಕಿನಿಂದ ಚಿಕ್ಕಬಳ್ಳಾಪುರಕ್ಕೆ ಗುರುವಾರ ಬೈಕ್ ರ್ಯಾಲಿಯ ಮೂಲಕ ಹೋಗುವುದಾಗಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರತಿಯೊಂದು ಗ್ರಾಮ ಪಂಚಾಯತಿಗೂ ತೆರಳಿ ಕೇವಲ ನೀರಿಗಾಗಿ ನಡೆಸುವ ಹೋರಾಟಕ್ಕೆ ಬೆಂಬಲವಾಗಿ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸುವಂತೆ ಕೋರಿದ್ದೇವೆ. ಈಗಾಗಲೇ ಸುಮಾರು 7 ರಿಂದ 8 ಸಾವಿರ ಬೈಕ್ಗಳನ್ನು ಸ್ವಯಂಪ್ರೇರಣೆಯಿಂದ ನೋಂದಾಯಿಸಿದ್ದಾರೆ. ಪ್ರಜಾತಂತ್ರದಲ್ಲಿ ಜನರೇ ಶಕ್ತಿ. ಸರ್ಕಾರಕ್ಕೆ ಜನರ ಮೂಲಕ ಒತ್ತಡ ಹೇರದೆ ಈಗ ಬೇರೆ ಮಾರ್ಗವಿಲ್ಲ ಎಂದು ಹೇಳಿದರು.
ಚಿಕ್ಕಬಳ್ಳಾಪುರದ ಹೊರವಲಯದ ಚದಲಪುರದ ಬಳಿ ನಡೆಯುತ್ತಿರುವ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲಿಸಿ ತಾಲ್ಲೂಕಿನಿಂದ ನಡೆಸುವ ಬೈಕ್ ರ್ಯಾಲಿಯ ಉದ್ದೇಶ ಬಯಲು ಸೀಮೆಗೆ ಶಾಶ್ವತ ನೀರು ಎಂಬುದಷ್ಟೇ ಆಗಿದೆ. ದಿವಂಗತ ದೇವರಾಜ ಅರಸು ಅವರ ಸರ್ಕಾರದಿಂದ, ನಂತರದ ಎಸ್.ಎಂ.ಕೃಷ್ಣ ಅವರ ಸರ್ಕಾರ ಹಾಗೂ ಬಂಗಾರಪ್ಪ ಅವರ ಸರ್ಕಾರದ ಕಾಲದಲ್ಲಿ ನಡೆದಿರುವ ನೀರಾವರಿ ಯೋಜನೆಗಳು, ಇದುವರೆಗಿನ ಸಮಸ್ಯೆ ಹಾಗೂ ಪರಿಹಾರ ಕುರಿತಂತೆ ವಿವರವಾದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗುತ್ತದೆ. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಅವರಿಗೂ ಖುದ್ದಾಗಿ ನೀರಿನ ಅವಶ್ಯಕತೆಯನ್ನು ತಿಳಿಸಲಾಗುವುದು. ಬಜೆಟ್ನಲ್ಲಿ ನೀರಾವರಿ ಯೋಜನೆಗೆ ಹಣವನ್ನು ನಿಗದಿಪಡಿಸಿದಲ್ಲಿ ಚಾಲನೆ ಸಿಗಲು ಸಾಧ್ಯ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಡಿ.ಎಸ್.ಎನ್.ರಾಜು, ಆರ್.ಶ್ರೀನಿವಾಸ್, ಮೌಲಾ, ಕೃಷ್ಣಪ್ಪ, ವೆಂಕಟೇಶ್, ಅಬ್ದುಲ್ ಅಜೀಜ್, ಸಂತೋಷ್, ಶಂಕರ್, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸ್ವಯಂಸೇವಕರ ತರಬೇತಿ ಕಾರ್ಯಾಗಾರ

0

ಬಹುಸಂಖ್ಯಾತ ಅನಕ್ಷರಸ್ಥರಿಂದಾಗಿ ಗ್ರಾಮಗಳು ಹಿಂದುಳಿದಿವೆ. ದೇಶದ ಅಭಿವೃದ್ಧಿಯಲ್ಲಿ ಸಾಕ್ಷರತೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕುಂಭಿಗಾನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಬಾಬು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹಾರಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಲೋಕಶಿಕ್ಷಣ ನಿರ್ದೇಶನಾಲಯ, ಕುಂಭಿಗಾನಹಳ್ಳಿ ಗ್ರಾಮಪಂಚಾಯತಿಗಳ ಆಶ್ರಯದಲ್ಲಿ ಸಾಕ್ಷರಭಾರತ್ ಯೋಜನೆಯಡಿ ಹಮ್ಮಿಕೊಂಡಿದ್ದ ಸ್ವಯಂಸೇವಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಾಜರಿದ್ದ ಸ್ವಯಂಸೇವಕರು.
ಹಾಜರಿದ್ದ ಸ್ವಯಂಸೇವಕರು.
aಸಾಕ್ಷರಭಾರತ್ ತಾಲ್ಲೂಕು ಸಂಯೋಜಕ ಟಿ.ವಿ.ಶ್ರೀನಿವಾಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಲಿಕಾರ್ಥಿಗಳಿಗೆ ನೀಡಲಾಗುವ ಬಾಳಿಗೆ ಬೆಳಕು ಪ್ರಾಥಮಿಕೆಯನ್ನು ಬೋಧಿಸುವ ಸರಳವಿಧಾನಗಳನ್ನು ಈ ತರಬೇತಿ ವೇಳೆ ತಿಳಿಸಿಕೊಡಲಾಗುವುದು. ಕಲಿಕಾರ್ಥಿಗಳನ್ನು ಸಾಕ್ಷರರನ್ನಾಗಿಸುವಲ್ಲಿ ಸ್ವಯಂಸೇವಕರ ಪಾತ್ರ ಹಿರಿದು ಎಂದರು.
ಗ್ರಾಮಪಂಚಾಯತಿ ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯ ರಾಮಸ್ವಾಮಿ, ಮುಖಂಡ ಚನ್ನರಾಯಪ್ಪ, ಎಸ್ಡಿಎಂಸಿ ಅಧ್ಯಕ್ಷ ಚನ್ನಕೃಷ್ಣಪ್ಪ, ಮುಖ್ಯತರಬೇತುದಾರ ರಮೇಶ್ಕುಮಾರ್, ಜೆ.ಬಿ.ಅಶೋಕ್ಕುಮಾರ್, ಎಚ್.ಎಸ್.ರುದ್ರೇಶಮೂರ್ತಿ, ಪ್ರೇರಕಿ ಅನುಷಾ, ಕೆ.ಎಂ.ಬೇಬಿ ಮತ್ತಿತರರು ಇದ್ದರು.

ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ

0

ವಾಲ್ಮೀಕಿ ಸಮುದಾಯದವರು ತಮ್ಮ ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಅತ್ಯತ್ತಮವಾದ ವ್ಯಕ್ತಿಗಳನ್ನಾಗಿ ರೂಪುಗೊಳಿಸುವಂತಹ ಕೆಲಸವನ್ನು ಮಾಡಬೇಕು ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಮಂಗಳವಾರ ಸುಮಾರು ೫೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಶ್ರೀರಾಮನ ಜೀವನ ಚರಿತ್ರೆಯನ್ನು ಸಂಪೂರ್ಣವಾಗಿ ಬಿಡಿಸಿಟ್ಟು, ಶ್ರೀರಾಮನ ಮಕ್ಕಳಾದ ಲವಕುಶರನ್ನು ಶ್ರೀರಾಮರಿಗೆ ಸರಿಸಮಾನವಾಗಿ ಬೆಳೆಸಿದ ವಾಲ್ಮೀಕಿ ಮಹರ್ಷಿಯ ಅನುಯಾಯಿಗಳಾಗಿ ಹುಟ್ಟಿರುವ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜಕ್ಕೆ ಪ್ರಾಯೋಜಕರಾಗಬೇಕು. ಮಹರ್ಷಿ ವಾಲ್ಮೀಕಿಯವರ ದೂರದೃಷ್ಟಿ, ಇಡೀ ಮನಕುಲಕ್ಕೆ ಮಾರ್ಗದರ್ಶನವಾಗಿದೆ. ಅವರ ಕಲ್ಪನೆಯಂತೆ ಸಮಾಜದಲ್ಲಿನ ಬಡವರು, ಶೋಷಿತವರ್ಗದವರು, ಅಲ್ಪಸಂಖ್ಯಾತರು ಒಟ್ಟಾರೆ ಎಲ್ಲರೂ ಕೂಡಾ ಒಗ್ಗಟ್ಟಿನಿಂದ ಜೀವಿಸಬೇಕಾಗಿದೆ. ಅದ್ದರಿಂದ ಮಕ್ಕಳಿಗೆ ಯಾರೂ ಕದಿಯಲಾಗದಂತಹ ಸಂಪತ್ತಾದ ಶಿಕ್ಷಣವನ್ನು ನೀಡಿದರೆ, ಅವರು ಸಮಾಜದಲ್ಲಿ ಸಂಸ್ಕಾರವಂತರಾಗಿ ಬೆಳೆಯುತ್ತಾರೆ.
ತಾಲ್ಲೂಕಿನ ಸುಂಡ್ರಹಳ್ಳಿಯಲ್ಲಿ ಸುಮಾರು ೧೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಾಲ್ಮೀಕಿ ಆಶ್ರಮಶಾಲೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಶಿಡ್ಲಘಟ್ಟ ನಗರದಲ್ಲಿ ೧ ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಾಲ್ಮೀಕಿ ಭವನ, ಹಾಗೂ ತಲಕಾಯಲಬೆಟ್ಟದಲ್ಲಿ ೫೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಭವನ ನಿರ್ಮಾಣ ಮಾಡಲಾಗುತ್ತಿದ್ದು, ಈ ಭವನವನ್ನು ಸ್ಥಳೀಯ ಗ್ರಾಮ ಪಂಚಾಯತಿ ಆಡಳಿತ ನಿರ್ವಹಣೆ ಮಾಡಬೇಕು. ಕಟ್ಟಡದ ಕಾಮಗಾರಿಯ ಮೇಲ್ಛಾವಣಿ ಸಂಪೂರ್ಣವಾಗಿ ಆರ್.ಸಿ.ಸಿ.ಆಗಿರಬೇಕು. ನಿಗದಿತ ಸಮಯದಲ್ಲಿ ಗುಣಮಟ್ಟದಿಂದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕಟ್ಟಡ ಕಾಮಗಾರಿಯ ಗುಣಮಟ್ಟವನ್ನು ತಹಶೀಲ್ದಾರ್ ಅವರು ನೋಡಿಕೊಳ್ಳಬೇಕು. ಸ್ಥಳೀಯರೂ ಕೂಡಾ ಕಾಮಗಾರಿಗಳ ಬಗ್ಗೆ ಗಮನಹರಿಸಬೇಕು. ವಾಲ್ಮೀಕಿ ಜನಾಂಗದವರಷ್ಟೆ ಅಲ್ಲದೆ, ಎಲ್ಲಾ ವರ್ಗದ ಜನಾಂಗದವರು ಈ ಭವನವನ್ನು ಉಪಯೋಗ ಮಾಡಿಕೊಳ್ಳಬಹುದಾಗಿದೆ. ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ ಜನಾಂಗದವರ ಜೀವನೋಪಾಯಕ್ಕಾಗಿ ಈಗಾಗಲೇ ಹಸುಗಳನ್ನು ವಿತರಣೆ ಮಾಡುವಂತಹ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಮುಂದಿನ ಒಂದು ತಿಂಗಳಿನಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಎಲ್ಲಾ ವರ್ಗದ ಜನರು ಶಿಕ್ಷಣವನ್ನು ಪಡೆಯುವುದರ ಮೂಲಕ ಸಮಾಜದಲ್ಲಿ ಪರಿವರ್ತನೆಯನ್ನು ಕಾಣಲು ಸಾಧ್ಯವಾಗುತ್ತದೆ. ಸರ್ಕಾರದಿಂದಲೂ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಶಿಕ್ಷಣಕ್ಕೆ ಅಗತ್ಯವಾಗಿರುವಂತಹ ಎಲ್ಲಾ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿಯತ್ತ ಸಾಗಬೇಕು ಎಂದರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಜಿಲ್ಲಾ ಮುಖಂಡ ಬಂಕ್ಮುನಿಯಪ್ಪ ಮಾತನಾಡಿ, ತೀರಾ ಹಿಂದುಳಿದಿದ್ದ ವಾಲ್ಮೀಕಿ ಸಮುದಾಯವನ್ನು ಗುರ್ತಿಸಿದಂತಹ ಸರ್ಕಾರಗಳು ಸಮುದಾಯದ ಅಭಿವೃದ್ಧಿಗೆ ಪೂರಕವಾಗುವಂತಹ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ತಾಲ್ಲೂಕಿನ ಬಹುತೇಕ ಭಾಗಗಳು ಅಭಿವೃದ್ಧಿಯಿಂದ ವಂಚಿತವಾಗಿದೆ, ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಆರ್ಥಿಕವಾಗಿ ಸಬಲರಾಗಿದ್ದು, ಶೇ. ೯೦ ರಷ್ಟು ಮಂದಿ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ತಾಲ್ಲೂಕಿನಲ್ಲಿ ಸಮುದಾಯದ ಮಕ್ಕಳು ಉನ್ನತ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ಏಕಲವ್ಯ ಶಾಲೆಯನ್ನು ಮಂಜೂರು ಮಾಡಿಸಬೇಕು ಎಂದು ಸಂಸದ ಕೆ.ಹೆಚ್.ಮುನಿಯಪ್ಪ ಅವರಲ್ಲಿ ಮನವಿ ಮಾಡಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್, ಎನ್.ಮುನಿಯಪ್ಪ, ಯರ್ರಬಚ್ಚಪ್ಪ, ಶ್ರೀರಾಮರೆಡ್ಡಿ, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಅಶ್ವಥ್ಥರೆಡ್ಡಿ, ತಲಕಾಯಲಬೆಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷೆ ಗಾಯಿತ್ರಿ, ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ, ಶಿವಮೊಗ್ಗ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎಂ.ನಾರಾಯಣಪ್ಪ, ಪ್ರಸನ್ನ, ಭೂ ಅಭಿವೃದ್ಧಿ ನ್ಯಾಯ ಮಂಡಳಿ ಮಾಜಿ ಸದಸ್ಯ ನಾರಾಯಣಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಎರೆಗೊಬ್ಬರ ಖರೀದಿಸುವ ರೈತರಿಗಾಗಿ…..

0

ಸಾಮಾನ್ಯವಾಗಿ ಇದು ತೋಟದ ಬೆಳೆ ಬೆಳೆಯುವವರು ಗೊಬ್ಬರ ಉಣಿಸುವ ಕಾಲ. ರೈತರಲ್ಲಿ ಪ್ರಸ್ತುತ ರಾಸಾಯನಿಕ ಗೊಬ್ಬರದ ಹುಚ್ಚು ಕಡಿಮೆಯಾಗಿದೆ. ಅದರ ಅಪಾಯಗಳ ವಾಸ್ತವ ಅರ್ಥವಾಗಿದೆ. ಇದೇ ಕಾಲದಲ್ಲಿ ಸಾವಯವ ಗೊಬ್ಬರ ಬಳಸುವ ಒಲವು ಕಾಣಿಸುತ್ತದೆ. ಅಪಾಯ ಅಲ್ಲೂ ಇದೆ! ಸಾವಯವದತ್ತ ಕೃಷಿಕರ ಆಸಕ್ತಿಯನ್ನು ನಗದೀಕರಿಸಲು ಹೊರಟಿರುವ ಹಲವು ಗೊಬ್ಬರ ತಯಾರಿಕಾ ಕಂಪನಿಗಳು ಈಗ ಸಾವಯವದ ಹೆಸರಿನಲ್ಲಿ ಮತ್ತದೇ ರಾಸಾಯನಿಕ ಮಿಶ್ರಿತ ಅಥವಾ ಕಳಪೆ ಗುಣಮಟ್ಟದ ಗೊಬ್ಬರಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಕೃಷಿಕ ಜಾಗೃತನಾಗಲೇಬೇಕಾದ ದಿನಗಳಿವು.
ಸಾವಯವ ಗೊಬ್ಬರಗಳಲ್ಲಿ ಅತಿ ಮುಖ್ಯವಾದುದು ಎರೆಗೊಬ್ಬರ (ವರ್ಮಿ ಕಾಂಪೋಸ್ಟ್). ಎರೆಹುಳುಗಳು ಕಾಂಪೋಸ್ಟ್‍ನ್ನು ತಿಂದು ಇನ್ನೊಂದು ಹಂತದಲ್ಲಿ ಗೊಬ್ಬರದ ಫಲವತ್ತತೆಯನ್ನು ಹೆಚ್ಚಿಸಿರುತ್ತವೆ ಎಂಬುದು ಎರೆಗೊಬ್ಬರದ ಹೆಗ್ಗಳಿಕೆ. ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾವಯವ ಗೊಬ್ಬರದಲ್ಲಿ ಎರೆಗೊಬ್ಬರದ ಪ್ರಮಾಣವೇ ದೊಡ್ಡದು. ಹಾಗಾಗಿ ಈ ಕ್ಷೇತ್ರದಲ್ಲಿ ನಕಲಿಗಳೂ ಒಂದು ತೂಕ ಹೆಚ್ಚು! ಈ ಕೆಳಗೆ ಸಾಧ್ಯವಾದಷ್ಟು ಯುಕ್ತ ಎರೆಗೊಬ್ಬರದ ಖರೀದಿಗೆ ಬೇಕಾದ ಸಲಹೆಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಸ್ವತಃ ಈ ಲೇಖಕ ಎರೆಗೊಬ್ಬರ ತಯಾರಕನಾಗಿರುವುದರಿಂದ ಇಲ್ಲಿನ ಮಾತು ಅನುಭವದ ಹಿನ್ನೆಲೆಯಲ್ಲಿ ಬಂದಿರುವುದು ಎಂಬುದು ನಿಮ್ಮ ಗಮನದಲ್ಲಿರಲಿ.
* ಎರೆಗೊಬ್ಬರಕ್ಕೆ ನಿಶ್ಚಿತವಾದ ಬಣ್ಣ ಕಪ್ಪು. ಆದರೆ ಕಪ್ಪಿನ ಗಾಢತೆಯಲ್ಲಿ ವ್ಯತ್ಯಾಸ ಕಾಣಿಸಬಹುದು. ಸಾಮಾನ್ಯವಾಗಿ ಗೊಬ್ಬರ ತಯಾರಿಕೆಗೆ ಬಳಸಿದ ಕಚ್ಚಾಪದಾರ್ಥದ ಆಧಾರದಲ್ಲಿ ಇದು ನಿಗದಿಯಾಗುತ್ತದೆ. ದರಕು, ಅಡಿಕೆ ಸಿಪ್ಪೆ, ರದ್ದಿಪೇಪರ್‍ಗಳನ್ನು ಬಳಸಿದಲ್ಲಿ ಸ್ವಲ್ಪ ಬಿಳಿ ಮಿಶ್ರಿತ ಕಪ್ಪು ಗೊಬ್ಬರ ಸೃಷ್ಟಿಯಾಗುತ್ತದೆ. ಬಹುಪಾಲು ಸಗಣಿ, ಕಳಿತ ಕಾಂಪೋಸ್ಟ್ ಬಳಸಿದಲ್ಲಿ ಕಡು ಕಪ್ಪನೆಯ ಎರೆಗೊಬ್ಬರ ಉತ್ಪತ್ತಿಯಾಗುತ್ತದೆ.
* ಗೊಬ್ಬರ ಟೀ ಪುಡಿಯಂತೆ ಹಿಕ್ಕೆ ಹಿಕ್ಕೆಯ ರೂಪದಲ್ಲಿರುತ್ತದೆ. ಖರೀದಿಸುವ ಎರೆಗೊಬ್ಬರ ಚೀಲದಲ್ಲಿ ಪ್ಯಾಕಿಂಗ್ ಆಗಿರುತ್ತದಾದ್ದರಿಂದ ಮುದ್ದೆ ಮುದ್ದೆಯಾಗಿರುವಂತೆ ಕಾಣಿಸುತ್ತದಾದರೂ ಮುಷ್ಟಿಯಲ್ಲಿ ಹಿಡಿದು ಗೊಬ್ಬರದ ಉಂಡೆಯನ್ನು ಒತ್ತಿದರೆ ಅದು ಸುಲಭವಾಗಿ ಮತ್ತೆ ಪುಡಿಪುಡಿಯಾಗುತ್ತದೆ. ಹಾಗಾಗಿಲ್ಲವೆಂದರೆ ಮಣ್ಣು ಬೆರೆತಿರುವ ಸಂಭಾವ್ಯತೆ ಜಾಸ್ತಿ.
* ಹಳ್ಳಿಗಳಲ್ಲಿ ಎರೆಗೊಬ್ಬರ ಮಾರಾಟ ಮಾಡುವ ತಯಾರಕರು ಅದಕ್ಕೆ ಕಾಡಿನ ಕಪ್ಪು ಮಣ್ಣನ್ನು ಬೆರೆಸಿರುವ ಸಾಧ್ಯತೆ ಇದ್ದೀತು. ಕಾಡಿನ ಮೇಲು ಮಣ್ಣು ಕಪ್ಪು ಬಣ್ಣದಲ್ಲಿಯೇ ಇರುತ್ತದೆ. ಇದು ನೋಡಲು ಎರೆಗೊಒಬ್ಬರದಂತೆಯೂ ಇರುತ್ತದೆ. ಆದರೆ ಇದರ ಗುಣಮಟ್ಟದ ಪತ್ತೆಗೆ ಒಂದು ಸರಳ ಉಪಾಯವಿದೆ. ಅಂಗೈಯಲ್ಲಿ ಇಟ್ಟು ತಿಕ್ಕಿದಾಗ ಅರಿಸಿನ ಬಣ್ಣದ ಅಂಶ ಕಾಣಿಸಿದರೆ ಅದು ಕಾಡಿನ ಕಾನುಗೋಡು. ಅಸಲಿ ಎರೆಗೊಬ್ಬರವಾಗಿದ್ದಲ್ಲಿ ಅದು ಕಪ್ಪಾಗಿ ಕೈಯಲ್ಲಿಯೇ ಅಂಟಿಕೊಂಡಿರುತ್ತದೆ.
* ಕಾಡು ಮಣ್ಣಿನ ತೂಕ ಎರೆಗೊಬ್ಬರದಕ್ಕಿಂತ ಸಾಕಷ್ಟು ಹೆಚ್ಚು. ಇದು ಅರ್ಥವಾಗಲು ಒಂದು ಚಾಲಾಕಿ ಕ್ರಮವಿದೆ. 50 ಕೆಜಿಯ ಒಂದು ಸಿಮೆಂಟ್ ಚೀಲದಲ್ಲಿ ಎರೆಗೊಬ್ಬರ ಸರಾಸರಿ 20ರಿಂದ 22 ಕೆಜಿಯಷ್ಟು ಮಾತ್ರ ಹಿಡಿಸುತ್ತದೆ. ಅದೇ ಕಾಡುಮಣ್ಣಾಗಿದ್ದರೆ 25 ಕೆಜಿಗಿಂತ ಹೆಚ್ಚಿನ ಪ್ರಮಾಣವನ್ನು ಸುಲಭವಾಗಿಯೇ ತುಂಬಿಸಬಹುದು. ತೂಕದ ಈ ವ್ಯತ್ಯಾಸ ಅಸಲಿ-ನಕಲಿಗಳ ಪರೀಕ್ಷೆಯ ಮಾನದಂಡ.
* ಎರೆಗೊಬ್ಬರದ ಬಳಕೆಯ ಫಲಿತಾಂಶ ಒಮ್ಮೆಗೇ ಗೊತ್ತಾಗುವುದಿಲ್ಲ. ಉದಾ. ಪುಟ್ಟ ಸಸಿ ತುಸು ಹಸಿರಾಗಿ ಕಾಣಬಹುದು. ಅದೇ ಇಳುವರಿ ದಿಡೀರ್ ಏರುವುದು ಅಸಂಭವ. ಹಾಗಾಗುತ್ತಿದ್ದರೆ ನೀವು ಖರೀದಿಸಿದ ಗೊಬ್ಬರದಲ್ಲಿ ರಾಸಾಯನಿಕ ಗೊಬ್ಬರದ ಬೆರೆಕೆ ಆಗಿರಲೇಬೇಕು. ಕೆಲವು ತಯಾರಕರು ಯೂರಿಯಾ ಅಥವಾ ಪೊಟ್ಯಾಷ್‍ನ ಅಂಶ ಬೆರೆಸಿ ಮಾರುತ್ತಾರೆ ಎಂಬ ಅನುಮಾನಗಳಿವೆ. ಒಳ್ಳೆಯ ಫಲಿತಾಂಶ ಪಡೆಯಲು ಮೂರು ನಾಲ್ಕು ವರ್ಷ ಎರೆಗೊಬ್ಬರವನ್ನು ಸತತವಾಗಿ ಹಾಕಿದ ನಂತರವಷ್ಟೇ ಸಾಧ್ಯ.
* ಇತ್ತೀಚೆಗೆ ಕೃಷಿಕರೇ ಎರೆಗೊಬ್ಬರ ತಯಾರಿಸಿ ಮಾರುವ ಉದ್ಯಮವನ್ನೂ ನಡೆಸುತ್ತಿದ್ದಾರೆ. ಅವರಿಂದ ಖರೀದಿಸುವಿರಾದರೆ ಅದಕ್ಕೂ ಮುನ್ನ ಅವರ ಎರೆ ಪ್ಲಾಂಟ್‍ಗಳಿರುವ ಕಾರ್ಯಕ್ಷೇತ್ರಕ್ಕೆ ಭೇಟಿ ಕೊಡಿ. ಅವರ ಪ್ಲಾಂಟ್‍ಗಳ ಸಂಖ್ಯೆ, ವಾರ್ಷಿಕವಾಗಿ ಆತ ನಡೆಸುವ ವ್ಯಾಪಾರ ಅಂಕಿಅಂಶ, ಕಚ್ಚಾಗೊಬ್ಬರ ಸಿದ್ಧಗೊಳಿಸಲು ಅವ ಮಾಡಿಕೊಂಡಿರುವ ವ್ಯವಸ್ಥೆ ವಿವರ…. ಇವನ್ನೆಲ್ಲ ಪರಿಶೀಲಿಸಿ. ತುಂಬ ಕಡಿಮೆ ಸಂಖ್ಯೆಯ ಪ್ಲಾಂಟ್ ಸಂಖ್ಯೆ, ಹೆಚ್ಚಿನ ಗೊಬ್ಬರ ಮಾರಾಟ… ಹೀಗೆ ಅನುಮಾನಾಸ್ಪದ ಹಿನ್ನೆಲೆ ಕಂಡರೆ ಗೊಬ್ಬರ ಖರೀದಿಗೆ ಮುನ್ನ ಸಾವಿರ ಪಾಲು ಯೋಚಿಸಿ!
* ಇನ್ನೊಂದು ಅಂಶಕ್ಕೆ ವಿಪರೀತ ಮಹತ್ವವಿದೆ. ತಯಾರಕ ಉಪಯೋಗಿಸುವ ಕಚ್ಚಾ ಗೊಬ್ಬರದ ಗುಣಮಟ್ಟವೇ ಲಭ್ಯವಾಗುವ ಎರೆಗೊಬ್ಬರದ ದರ್ಜೆಯನ್ನು ರೂಪಿಸುತ್ತದೆ. ಅಂದರೆ ರದ್ದಿ ಪೇಪರ್, ತೆಂಗು-ಅಡಿಕೆಯ ನಾರು ಸಿಪ್ಪೆಗಳ ಕಾಂಪೋಸ್ಟ್, ಬರೀ ಒಣ ಎಲೆಯ ಕಾಂಪೋಸ್ಟ್ ಬಳಸಿ ಎರೆಗೊಬ್ಬರ ತಯಾರಿಸಿದಲ್ಲಿ ಅದರ ಗುಣಮಟ್ಟ ಸ್ವಲ್ಪ ಕಡಿಮೆ. ಗೊಬ್ಬರದ ಉಳ್ಳೆ, ಸೆಣಬಿನ ಚೀಲ, ಹಸಿ ಸೊಪ್ಪು ಹಾಗೂ ಸ್ಲರಿ ಬಳಸಿ ತಯಾರಿಸಿದ ಎರೆಗೊಬ್ಬರದ ಸಾರ ಅತ್ಯುತ್ತಮ. ರೈತರ ಪ್ಲಾಂಟ್‍ನಿಂದಲೇ ಖರೀದಿಸುವವರು ಈ ಅಂಶವನ್ನು ಗಮನಿಸಿಕೊಳ್ಳಲು ನಿರ್ಧರಿಸಬಹುದು. ಕಂಪನಿ ತಯಾರಿಕೆಗಳಲ್ಲಿ ಈ ಅವಕಾಶವಿಲ್ಲ.
* ಇಂದಿನ ಮಾರುಕಟ್ಟೆಯ ಸನ್ನಿವೇಶದಲ್ಲಿ ಕೆಜಿಗೆ ನಾಲ್ಕರಿಂದ ನಾಲ್ಕೂವರೆ ರೂಪಾಯಿ ಬೆಲೆಗೆ ಎರೆಗೊಬ್ಬರ ಖರೀದಿಸುವುದು ಸರಿಯಾದ ಕ್ರಮ. ಇದಕ್ಕಿಂತ ಕಡಿಮೆ ಬೆಲೆಗೆ ವಿಕ್ರಯಿಸುವ ಗೊಬ್ಬರದ ಬಗ್ಗೆಯೂ ಅನುಮಾನ ಪಡಬೇಕು. ಹಾಗೆಯೇ ಹೆಚ್ಚು ಬೆಲೆ ನೀಡುವುದು ವ್ಯಾವಹಾರಿಕವಾಗಿ ಬುದ್ಧಿವಂತಿಕೆಯಲ್ಲ.
* ಸಾಮಾನ್ಯವಾಗಿ ಎರೆಗೊಬ್ಬರದಲ್ಲಿ ಕಲಬೆರೆಕೆಯಾಗುವ ಇನ್ನೊಂದು ಪದಾರ್ಥ ಫ್ಯಾಕ್ಟರಿಗಳ ಕಪ್ಪು ಬೂದಿ. ಪತ್ತೆ ಮಾಡಬೇಕೆಂದರೆ, ಅಂತಹ ಗೊಬ್ಬರವನ್ನು ಕೈಯಲ್ಲಿ ಹಿಡಿದು ತೊಳೆದರೆ ಅಂತಿಮವಾಗಿ ಕೆಲವು ಹೊಟ್ಟಿನ ಅಂಶಗಳು ಕೈಯಲ್ಲಿ ಉಳಿಯುತ್ತದೆ. ಮಣ್ಣು ಮಿಶ್ರಣ ಪತ್ತೆಗೂ ಈ ವಿಧಾನ ಬಳಸಬಹುದು. ಮಣ್ಣಿನಲ್ಲಿ ಪುಟ್ಟ ಪುಟ್ಟ ಕಲ್ಲು ಇದ್ದಲ್ಲಿ ಈ ವೇಳೆ ಸಿಕ್ಕಿಬೀಳುತ್ತದೆ.
* ನೀವು ಖರೀದಿಸುವ ಎರೆಗೊಬ್ಬರದ ಚೀಲದ ಮಾದರಿಗೂ ಆದ್ಯತೆ ನೀಡಬೇಕು. ಜಾಳು ಪ್ಲಾಸ್ಟಿಕ್ ಚೀಲದೊಳಗಿನ ಗೊಬ್ಬರದ ಖರೀದಿ ಬೇಡ. ಪ್ಲಾಸ್ಟಿಕ್‍ನ ಪದರಗಳಿರುವ (plastic coated) ಚೀಲದಲ್ಲಿ ಹಾಕಿರುವ ಗೊಬ್ಬರವನ್ನು ವಿಕ್ರಯಿಸುವುದೇ ಲಾಭಕರ. ಇಂತಹ ಚೀಲದಲ್ಲಿ ಹಾಕಿರುವ ಗೊಬ್ಬರ ತಿಂಗಳುಗಳು ಕಳೆದರೂ ತೂಕದಲ್ಲಿ ನಷ್ಟವಾಗುವುದಿಲ್ಲ. ನಮ್ಮಲ್ಲಿನ ದೃಷ್ಟಾಂತದ ಪ್ರಕಾರ ಆರು ತಿಂಗಳ ದಾಸ್ತಾನಿನ ನಂತರ ಒಂದು – ಎರಡು ಕೆಜಿ ಕಡಿಮೆಯಾಗುತ್ತದಷ್ಟೇ. ಆದರೆ ಸಂಗ್ರಹಿಸಿಡುವವರು ಯಾವುದೇ ಕಾರಣಕ್ಕೆ ಗೊಬ್ಬರದ ಮೇಲೆ ಸೂರ್ಯರಶ್ಮಿ ಬೀಳದಂತೆ ಎಚ್ಚರಿಕೆ ವಹಿಸಲೇಬೇಕು.
ಎರೆಗೊಬ್ಬರ ಉತ್ತಮವಾದ ಸಾವಯವ ಗೊಬ್ಬರ ಎನ್ನುವುದರಲ್ಲಿ ಅನುಮಾನಗಳಿಲ್ಲ. ಆದರೆ ಒಂದು ಗಮನೀಯ ಸಲಹೆಯೆಂದರೆ, ನೀವೇ ಸ್ವಯಂ ಎರೆಗೊಬ್ಬರ ತಯಾರಿಸಿಕೊಳ್ಳಿ. ಖರ್ಚಿನ ಮಾತಿಗಿಂತ ಗುಣಮಟ್ಟದಲ್ಲಿ ರಾಜಿಯಾಗದ ಆಯ್ಕೆಯಿದು. ಆಗ ಬೇಸ್ತು ಬೀಳುತ್ತಿರುವ ರೈತರ ಮೊತ್ತದಲ್ಲಿ ಒಬ್ಬ ಕಡಿಮೆಯಾದಂತೆ!
-ಮಾ.ವೆಂ.ಸ.ಪ್ರಸಾದ್

ಆರನೇ ವರ್ಷದ ಮಹರ್ಷಿವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ

0

ಜೀವನ ಮೌಲ್ಯಗಳನ್ನೊಳಗೊಂಡ ಮಹಾಕಾವ್ಯ ರಾಮಾಯಣ ಕೃತಿಯ ಮೂಲಕ ಸಮಾಜದಲ್ಲಿನ ಪ್ರತಿಯೊಬ್ಬ ಮಾನವನು ಸನ್ಮಾರ್ಗವನ್ನು ಕಾಣುವಂತಹ ಅವಕಾಶವನ್ನು ಮಹರ್ಷಿ ವಾಲ್ಮೀಕಿ ಅವರು ಒದಗಿಸಿಕೊಟ್ಟಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಸಾಹಿತ್ಯ ಆಕಾಡೆಮಿ ಸದಸ್ಯ ಬಿ.ಎಂ.ಪಟೇಲ್ಪಾಂಡು ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಮಂಗಳವಾರ ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜನೆ ಮಾಡಲಾಗಿದ್ದ ಆರನೇ ವರ್ಷದ ಮಹರ್ಷಿವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು.

ಶಿಡ್ಲಘಟ್ಟದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಮಂಗಳವಾರ ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜನೆ ಮಾಡಲಾಗಿದ್ದ ಆರನೇ ವರ್ಷದ ಮಹರ್ಷಿವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಆಕಾಡೆಮಿ ಸದಸ್ಯ ಬಿ.ಎಂ.ಪಟೇಲ್ಪಾಂಡು ಮಾತನಾಡಿದರು. ಶಾಸಕ ಎಂ.ರಾಜಣ್ಣ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ಬಂಕ್ಮುನಿಯಪ್ಪ, ಎನ್.ಮುನಿಯಪ್ಪ, ಯರ್ರಬಚ್ಚಪ್ಪ ಉಪಸ್ಥಿತರಿದ್ದರು.
ಶಿಡ್ಲಘಟ್ಟದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಮಂಗಳವಾರ ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜನೆ ಮಾಡಲಾಗಿದ್ದ ಆರನೇ ವರ್ಷದ ಮಹರ್ಷಿವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಆಕಾಡೆಮಿ ಸದಸ್ಯ ಬಿ.ಎಂ.ಪಟೇಲ್ಪಾಂಡು ಮಾತನಾಡಿದರು. ಶಾಸಕ ಎಂ.ರಾಜಣ್ಣ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ಬಂಕ್ಮುನಿಯಪ್ಪ, ಎನ್.ಮುನಿಯಪ್ಪ, ಯರ್ರಬಚ್ಚಪ್ಪ ಉಪಸ್ಥಿತರಿದ್ದರು.
ಪ್ರಪಂಚದ ಎಲ್ಲಾ ಕಾವ್ಯಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಮಹಾಕಾವ್ಯ ರಾಮಾಯಣ ವಿಜ್ಞಾನಿಯ ಮನಸ್ಸಿಗೂ ನಿಲುಕದಂತಹ ಕೃತಿಯಾಗಿದ್ದು, ಎಲ್ಲಾ ಕಾಲಘಟ್ಟಗಳಲ್ಲಿಯೂ ಸಲ್ಲುವಂತಹದ್ದಾಗಿದೆ. ಒಂದು ಆದರ್ಶ ಕುಟುಂಬದಲ್ಲಿನ ಉತ್ತಮವಾದ ಸಂಬಂಧಗಳನ್ನು ಕುರಿತು, ಆದರ್ಶ ರಾಜನ ನಡುವಳಿಕೆ, ಹಾಗೂ ಆದರ್ಶ ಪತ್ನಿಯ ಕರ್ತವ್ಯಗಳನ್ನು ಸಮಾಜಕ್ಕೆ ಸಾರಿ ಹೇಳುವ ರೀತಿಯಲ್ಲಿ ರಚನೆ ಮಾಡಿದ್ದಾರೆ. ಬಹಳ ಮುಖ್ಯವಾಗಿ ಶ್ರೀರಾಮನ ಮಕ್ಕಳಾದ ಲವ-ಕುಶರನ್ನು ಶ್ರೀರಾಮನಷ್ಟೆ ಸಮರ್ಥರನ್ನಾಗಿ ಮಾಡುವ ಮೂಲಕ ಮಹರ್ಷಿ ವಾಲ್ಮೀಕಿಯವರ, ಆದರ್ಶ, ದೂರದೃಷ್ಟಿ ಪ್ರತಿಯೊಬ್ಬ ಮಾನವನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸಮಾಜದಲ್ಲಿನ ಮೌಡ್ಯತೆಯನ್ನು ತೊಲಗಿಸಿ, ಜನರ ಮನದಾಳದ ಅಂಧಕಾರವನ್ನು ತೊಲಗಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡುವಂತಹ ರೀತಿಯಲ್ಲಿ ಸಂತರಾಗಿ, ದಾರ್ಶನಿಕ ಕವಿಗಳಾದ ವಾಲ್ಮೀಕಿ ಮಹಾಋಷಿಯನ್ನು ಪ್ರತಿನಿತ್ಯವೂ ನೆನೆಯಬೇಕು. ಪ್ರತಿಯೊಂದು ಮನೆಯಲ್ಲಿ ರಾಮಾಯಣ ಕೃತಿಯನ್ನು ಧ್ಯಾನಿಸುವಂತಾಗಬೇಕು. ಯುವಜನತೆ ಹೆಚ್ಚು ವ್ಯಸನಗಳಿಂದ ದೂರವಾಗಿ ಇಂತಹ ಕಾವ್ಯಗಳನ್ನು ಓದುವುದರಿಂದ ಉತ್ತಮವಾದ ಸಂಬಂಧಗಳ ಪರಿಚಯವಾಗುತ್ತದೆ ಎಂದರು.
ವಾಲ್ಮೀಕಿ ಸಮುದಾಯದ ಮುಖಂಡರಾದ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ಬಂಕ್ಮುನಿಯಪ್ಪ ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎನ್.ಮುನಿಯಪ್ಪ ಅವರನ್ನು ಸನ್ಮಾನಿಸಲಾಯಿತು
ವಾಲ್ಮೀಕಿ ಸಮುದಾಯದ ಮುಖಂಡರಾದ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ಬಂಕ್ಮುನಿಯಪ್ಪ ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎನ್.ಮುನಿಯಪ್ಪ ಅವರನ್ನು ಸನ್ಮಾನಿಸಲಾಯಿತು
ಇದೇ ವೇಳೆ ವಾಲ್ಮೀಕಿ ಸಮುದಾಯದ ಮುಖಂಡರಾದ ಬಂಕ್ಮುನಿಯಪ್ಪ ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎನ್.ಮುನಿಯಪ್ಪ ಅವರನ್ನು ಸನ್ಮಾನಿಸಲಾಯಿತು, ಎಸ್.ಎಸ್.ಎಲ್.ಸಿ.ಮತ್ತು ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶಿಡ್ಲಘಟ್ಟದ ಚಿಂತಾಮಣಿ ರಸ್ತೆಯಲ್ಲಿರುವ ವಾಲ್ಮೀಕಿ ದೇವಾಲಯದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ  ಪಲ್ಲಕ್ಕಿಗಳೊಂದಿಗೆ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು ಪಾಲ್ಗೊಂಡಿದ್ದರು. ಮಹಿಳೆಯರಿಂದ ಡೊಳ್ಳುಕುಣಿತ, ವೀರಗಾಸೆ ಕುಣಿತ, ಕೀಲುಕುದುರೆಗಳು ಮುಂತಾದ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದಿದ್ದವು.
ಶಿಡ್ಲಘಟ್ಟದ ಚಿಂತಾಮಣಿ ರಸ್ತೆಯಲ್ಲಿರುವ ವಾಲ್ಮೀಕಿ ದೇವಾಲಯದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಪಲ್ಲಕ್ಕಿಗಳೊಂದಿಗೆ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು ಪಾಲ್ಗೊಂಡಿದ್ದರು. ಮಹಿಳೆಯರಿಂದ ಡೊಳ್ಳುಕುಣಿತ, ವೀರಗಾಸೆ ಕುಣಿತ, ಕೀಲುಕುದುರೆಗಳು ಮುಂತಾದ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದಿದ್ದವು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ವಾಲ್ಮೀಕಿ ದೇವಾಲಯದಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು, ಹಲವಾರು ಪಲ್ಲಕ್ಕಿಗಳಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಬಹು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರಿಂದ ಡೊಳ್ಳುಕುಣಿತ, ವೀರಗಾಸೆ ಕುಣಿತ, ಕೀಲುಕುದುರೆಗಳು ಮುಂತಾದ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದಿದ್ದವು.
ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ಬಂಕ್ಮುನಿಯಪ್ಪ, ಎನ್.ಮುನಿಯಪ್ಪ, ಯರ್ರಬಚ್ಚಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಮಾಜ ಕಲ್ಯಾಣಾಧಿಕಾರಿ ಪುರುಷೋತ್ತಮ್, ನಗರಸಭಾ ಆಯುಕ್ತ ಹರೀಶ್, ಸದಸ್ಯ ಅಪ್ಸರ್ಪಾಷಾ, ಎನ್.ಕೆ.ಗುರುರಾಜರಾವ್, ವೆಂಕಟಪ್ಪ, ಜೆ.ಎಂ.ವೆಂಕಟೇಶ್, ತ್ಯಾಗರಾಜು, ನಾರಾಯಣಸ್ವಾಮಿ, ಮುನಿರಾಜು, ಚಿಕ್ಕಆಂಜಿನಪ್ಪ, ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವಿದ್ಯುತ್ ಸಮಸ್ಯೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ರಸ್ತೆ ತಡೆ

0

ಶಿಡ್ಲಘಟ್ಟ ತಾಲ್ಲೂಕಿನ ಹುಣಸೇನಹಳ್ಳಿ ಸ್ಟೇಷನ್ ಕೆ.ಪಿ.ಟಿ.ಸಿ.ಎಲ್ ಕಚೇರಿ ಹತ್ತಿರ ಸೋಮವಾರ ರಾಜ್ಯ ರೈತ ವಿದ್ಯಾರ್ಥಿ ಒಕ್ಕೂಟ, ರೈತ ಸಂಘ ಹಾಗೂ ಹಸಿರು ಸೇನೆ, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ನವೆಂಬರ್ ಒಂದರಂದು ಸರಳವಾಗಿ ನಾಡಹಬ್ಬ

0

ನವೆಂಬರ್ ಒಂದರಂದು ತಾಲ್ಲೂಕು ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಾಂಕೇತಿಕವಾಗಿ ಆಚರಣೆ ಮಾಡಲಾಗುವುದು ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನವೆಂಬರ್ 1ನೇ ತಾರೀಖಿನಂದು ಎಲ್ಲಾ ಕಚೇರಿಗಳಿಗೂ ದೀಪಾಲಂಕಾರಗಳನ್ನು ಮಾಡಿ ಸರ್ಕಾರಿ ಆದೇಶದಂತೆ ಎಲ್ಲಾ ಅಧಿಕಾರಿಗಳೂ ಹಾಜರಿದ್ದು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಸರಳವಾಗಿ ನಾಡ ಹಬ್ಬವನ್ನು ಆಚರಿಸೋಣ. ಸಮಾನ ಮನಸ್ಕರ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿದೆ 60ನೇ ಕನ್ನಡ ರಾಜ್ಯೋತ್ಸವವನ್ನು ತಾಲ್ಲೂಕು ನಾಡಹಬ್ಬಗಳ ಆಚರಣಾ ಸಮಿತಿ ಸಹಯೋಗದೊಂದಿಗೆ ವಿಜೃಂಭಣೆಯಿಂದ ನವೆಂಬರ್ 16 ರ ಸೋಮವಾರದಂದು ಆಚರಿಸುವುದಾಗಿ ಸಭೆಯ ತೀರ್ಮಾನದಂತೆ ಪ್ರಕಟಿಸಿದರು.
ತಾಲ್ಲೂಕಿನ ವಿವಿಧ ಇಲಾಖೆಗಳು ತಮ್ಮ ಇಲಾಖೆಯ ಕುರಿತಂತೆ ಮಾಹಿತಿ ನೀಡುವ ಸ್ತಬ್ದಚಿತ್ರಗಳನ್ನು ವಾಹನಗಳಿಗೆ ಅಳವಡಿಸಿ ನಾಡದೇವಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಾಂಸ್ಕೃತಿಕ ಕಲಾ ತಂಡಗಳು, ಜಾನಪದ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ಕ.ಸಾ.ಪ ತಾಲ್ಲೂಕು ಘಟಕದ ಅಧ್ಯಕ್ಷ ಕೃ.ನಾ.ಶ್ರೀನಿವಾಸ ಮೂರ್ತಿ, ರೇಷ್ಮೆ ಇಲಾಖೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಯಕ್, ಸಮಾನ ಮನಸ್ಕರ ಹೋರಾಟ ಸಮಿತಿ ಸದಸ್ಯರು, ಕನ್ನಡಪರ ಸಂಘಟನೆಯ ಸದಸ್ಯರು, ವಿವಿಧ ಇಲಾಖೆಗಳ ಅಧಕಾರಿಗಳು ಸಭೆಯಲ್ಲಿ ಹಾಜರಿದ್ದರು.