Home Blog Page 503

ತೀರಿಸಬೇಕು ಸಾಧ್ಯವಾದಷ್ಟು ಭಾಷಾ ಋಣ

0

ಯಾವುದೇ ಭಾಷೆಯಾದರೂ ಸರಿ ಅದನ್ನು ದಿನನಿತ್ಯ ಬಳಸದೇ ಹಾಗೇ ಬದಿಗಿಟ್ಟು, ಪುರುಸೊತ್ತಾದಾಗಲಷ್ಟೆ ತೆಗೆದು, ಓದಿ ಮಾಡಿದರೆ ಅದು ಬೆಳೆಯುವುದಿಲ್ಲ. ಇಟ್ಟಲ್ಲೆ ಗೆದ್ದಲು ಹತ್ತಲು ತೊಡಗುತ್ತದೆ. ಬಳಕೆಗೆ ಬಾರದ ಭಾಷೆ ಮಾತೃಭಾಷೆ ಎಂಬ ಪಟ್ಟವನ್ನು ಪಡೆಯುತ್ತದೆ. ನಮ್ಮ ಮಾತೃಭಾಷೆ ನಾಡ ನುಡಿಗೆ ನಾವು ಸಲ್ಲಿಸುವ ನಿಜವಾದ ಗೌರವ ಅದರ ಬಳಕೆಯಲ್ಲಿದೆಯೇ ವಿನಃ ಕೇವಲ ಆ ಕುರಿತಾದ ಭಾಷಣಗಳಲ್ಲಿ ಅಲ್ಲ. ಹಾಗಾಗಿಯೇ ಡಾ. ಹಾ.ಮಾ.ನಾಯಕರು ಹೇಳಿದ್ದು, ನಾವು ತೀರಿಸಬೇಕಾದ ಋಣಗಳಲ್ಲಿ ಮಾತೃಭಾಷಾ ಋಣವೂ ಒಂದು ಎಂದು.
ಇಂದಿನ ಗೋಳಿಕರಣ ವ್ಯವಸ್ಥೆಯೊಳಗೆ ದಿನೇ ದಿನೇ ಕನ್ನಡದ ಕಂಪು ಕಡಿಮೆಯಾಗುತ್ತಿರುವುದು ವಾಸ್ತವ ಸತ್ಯ. ಇಂಗ್ಲೀಷ್ ಇರಲಿ ಆದರೆ ಅದು ಕನ್ನಡದ ಜಾಗೆಗೆ ಪರ್ಯಾಯವಾಗದಿರಲೆಂಬುದೇ ಆಶಯವಾಗಿ, ಅರಿವಾಗಿ, ಆಚರಣೆಗೆ ಬಂದಾಗ, ಮಾತೃಭಾಷಾ ಋಣವನ್ನು ಅಷ್ಟರ ಮಟ್ಟಿಗೆ ತೀರಿಸಿದಂತೆ ಆಗಬಹುದು. ಭಾಷೆ ಇರದೇ ನಾವು ಬದುಕಲು ಸಾಧ್ಯವಿಲ್ಲ. ನಮ್ಮ ಭಾವಾಭಿವ್ಯಕ್ತಿಯ ಮಾಧ್ಯಮ ಅದು. ಪರಸ್ಪರ ವಿಚಾರಗಳ ಲೇವಾದೇವಿಗೆ ಬೇಕೇ ಬೇಕು. ಆ ಮೂಲಕವೇ ಪ್ರಪಂಚವನ್ನು ಅರಿಯುತ್ತ, ಬೆಳೆಯುತ್ತಾ ಸಾಗುತ್ತೇವೆ. ನಿತ್ಯ ಜೀವನದಲ್ಲಿ ವ್ಯವಹರಿಸಲು ಅದು ಅಗತ್ಯ, ಅನಿವಾರ್ಯ ಪ್ರಶ್ನೆ, ಎಂದರೆ ಯಾವ ಭಾಷೆ? ಉತ್ತರ ಸ್ಪಷ್ಟ ಅದು ನಮ್ಮ ಭಾಷೆ ಕನ್ನಡ ಉತ್ತರದಲ್ಲಿ ತಪ್ಪಿದ್ದರೆ ತಿದ್ದಿಕೊಳ್ಳಬೇಕಾಗುತ್ತದೆ, ಕನ್ನಡ ಅಂತ. ಯಾಕೆಂದರೆ ಅದೇ ನಮಗೆ ಸಹಜ ಭಾಷೆ. ಮನುಷ್ಯ ಸಹಜ ವ್ಯವಹಾರಗಳಿಗೆ ಸಹಜವಾಗಿ ಮುನ್ನುಗ್ಗಿ ಬರುವುದೇ ಮಾತೃಭಾಷೆ. ಪ್ರೇಮ, ಸಿಟ್ಟು, ವ್ಯಾಪಾರ ವ್ಯವಹಾರಗಳ ಸಂದರ್ಭಗಳಲ್ಲೆಲ್ಲಾ ನಮ್ಮ ನುಡಿಯೇ ನಮ್ಮ ಉಸಿರಿನಿಂದ ಹೊರ ಬೀಳುತ್ತದೆ. ಅಂದರೆ ನಾವು ಸಹಜವಾಗಿ ಉಸಿರಾಡುತ್ತಿದ್ದೇವೆ ಎಂದು ಅರ್ಥ. ಹಾಗಲ್ಲದಿದರೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಲ್ಪಿಸಿಕೊಳ್ಳಬಹುದು.
ಕುವೆಂಪುರವರು ಹೇಳುತ್ತಾರೆ “ವಿದ್ಯೆಯಿಂದ ಮನುಷ್ಯನಿಗೆ ಮುಖ್ಯವಾಗಿ ಭಾವವಿಕಾಸವಾಗುತ್ತದೆ. ಇದು ಮಾತೃ ಭಾಷೆಯಿಂದ ಆಗುವಂತೆ ಇನ್ನಾವುದರಿಂದಲೂ ಆಗಲಾರದು. ಪರಭಾಷೆಯಿಂದ ಭಾವವಿಕಾಸ ಸಾಧ್ಯವಿಲ್ಲ. ಮನುಷ್ಯನ ಸಹಜ ಬುದ್ದಿ ಕಾಣುವುದು ಮಾತೃಭಾಷೆಯಲ್ಲಿ, ಇಂಗ್ಲೀಷ್ ಹೊಸ ಭಾವನೆ ತರಬಹುದು ಆದರೆ ಮಾತೃಭಾಷೆ ಹುಟ್ಟಿದ ಆವರಣದ ಗಾಳಿ ಇದ್ದ ಹಾಗೆ. ಉಸಿರೆಷ್ಟು ಸಹಜವೋ ಅಷ್ಟೆ ಸಹಜ ಮಾತೃಭಾಷೆ” ಹಾಗೆ ಮುಂದುವರಿದು ಹೇಳುವ ಮಾತೆಂದರೆ ಪರಭಾಷೆಯ ಮೂಲಕದ ಶಿಕ್ಷಣ ಮಕ್ಕಳ ಬುದ್ದಿಶಕ್ತಿಯನ್ನು ಬೆಂಡುಮಾಡಿದೆ. ಅವರ ನರಗಳನ್ನು ದುರ್ಬಲಗೊಳಿಸಿದೆ ಅವರನ್ನು ಬಾಯಿಪಾಠ ಮಾಡುವ ಗಿಳಿಗಳನ್ನಾಗಿ ಮಾಡಿದೆ. ಪ್ರತಿಭಾನ್ವಿತ ಸೃಷ್ಠಿ ಕಾರ್ಯಕ್ಕೆ ಅಡ್ಡಿ ಮಾಡಿದೆ.
ಶಿಕ್ಷಣದ ಮೂಲಕವೇ ಒಂದು ಮಗು ತನ್ನ ಬುದ್ಧಿ ಬೆಳಸಿಕೊಳ್ಳಲು ಸಾಧ್ಯವಾಗುವುದರಿಂದ ಅದಕ್ಕೆ – ತಾಯ್ನುಡಿಯೇ ತಕ್ಕ ಆಯ್ಕೆ. ಅದೇ ಮೊದಲ ಅವಶ್ಯಕತೆ ಆದಾಗ್ಯೂ ನಾವು ಇದನ್ನು ಗಮನಿಸದೇ ದಿನನಿತ್ಯವೂ ಇಂಗ್ಲೀಷ್‍ಗಾಗಿ ಮೊರೆಯಿಡುತ್ತೇವೆ. ಆ ಭಾಷೆಯ ಭಾಗ್ಯವನ್ನು ಪಡೆಯಲು ಏನನ್ನಾದರೂ ಪಣಕ್ಕೀಡಲು ಸಿದ್ದರಾಗುತ್ತೇವೆ. ಅದರಿಂದಲೇ ಬದುಕಿನ ಸರ್ವ ಇಷ್ಟಾರ್ಥಗಳೂ ಪ್ರಾಪ್ತವಾಗುತ್ತದೆಂದು ನಂಬುತ್ತಾ ಪ್ರಾರ್ಥಿಸುತ್ತಾ ಸಾಗುತ್ತಿರುವುದೇ ಸದ್ಯದ ದುರಂತ. ಯಾರಿಗೂ ತಾಯಿ ಋಣದ ಚಿಂತೆ ಬಾಧಿಸದಿರುವುದು ಬದಲಾಗುತ್ತಿರುವ ವ್ಯವಸ್ಥೆಯ ವ್ಯಂಗ್ಯವು ಆಗಿರಬಹುದು.
ಇಂಗ್ಲೀಷ್ ಭಾಷೆ ಪ್ರತಿಷ್ಠೆಯ ಪ್ರಶ್ನೆಯಾಗಿ, ತನ್ಮೂಲಕವಾಗಿಯೇ ತಮ್ಮೆಲ್ಲ ಸಂವಹನ ಪ್ರಕ್ರಿಯೆಗಳಿಗೆ ಚಾಲನೆ ನೀಡಲು, ಅಕ್ಷರಸ್ಥ ಜನ ಸಮುದಾಯ ಮುಂದಾದಾಗ, ಶ್ರೀ ಸಾಮಾನ್ಯರ ಜೊತೆಗಿನ ಸಂಬಂಧ ಕೇವಲ ಬೌದ್ಧಿಕ ಕಸರತ್ತಾಗಿ ಮಾತ್ರ ಉಳಿದುಬಿಡಬಹುದಾಗಿದೆ. ಉದಾಹರಣಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್‍ನಲ್ಲಿ ಓದಿ, ಇಂಗ್ಲೀಷ್‍ನಲ್ಲೆ ಬರೆದು ಡಿಗ್ರಿ ಪಡೆದು ಬಂದ ಅಧಿಕಾರಿ ಇಲ್ಲಿನ ಕೃಷಿಕರಿಗೆ ಹೇಗೆ ಸಮರ್ಥವಾಗಿ ಮಾರ್ಗದರ್ಶನ ಮಾಡಬಲ್ಲ? ಅವನು ಇವರೊಟ್ಟಿಗೆ ಬೆರೆಯುವುದಾದರೂ ಹೇಗೆ? ಸಹಜ ಸಂವಹನ ಸಾಧ್ಯವಾಗದಿದ್ದಲ್ಲಿ, ಪಡೆದ ಪದವಿಯಿಂದ ಯಾರಿಗೆ ಪ್ರಯೋಜನ? ಪ್ರಯೋಜನವು ಲಭಿಸಬೇಕೆಂದಾದರೆ ಪರಸ್ಪರ ಸಂವಹನ ಕನ್ನಡದಲ್ಲಾಗಬೇಕು. ಅದಕ್ಕೆ ತಕ್ಕ ವ್ಯವಸ್ಥೆಯಾಗಬೇಕು. ಇಲ್ಲವಾದರೆ ಪರಸ್ಪರ ವಿರುದ್ಧ ದಿಕ್ಕಿನ ದ್ವೀಪಗಳಾಗಿ ಉಳಿಯುವಂತಾಗಿ ಬಿಡುತ್ತದೆ. ಆಧುನಿಕ ವಿಜ್ಞಾನ, ತಂತ್ರಜ್ಞಾನಗಳು ಸಹಿತ ಜೀವನ ವ್ಯಾಪಿಯಾಗಬೇಕಾದರೆ ಅದು ನಮ್ಮ ಭಾಷೆಯಲ್ಲೆ ಮುಟ್ಟಬೇಕು. ಆದರೆ ಈ ದಿನನಿತ್ಯದ ಅರಿವಾಗದಿರುವುದಕ್ಕೆ “ರಾಷ್ಟ್ರೀಯ ದುರಂತ ಎನ್ನಬಹುದೇ?
ಇನ್ನೂ ನಿತ್ಯ ಜನಸಾಮಾನ್ಯರ ಜೀವನದಲ್ಲಿ ಬೆಳೆದು ಬಂದ ಅವೈಜ್ಞಾನಿಕ ಮೌಡ್ಯ ನಿವಾರಣೆಗೆ ಮಾತೃಭಾಷೆಯಲ್ಲಿ ತಿಳಿ ಹೇಳುವುದೊಂದೆ ಸರಿಯಾದ ಮಾರ್ಗ. ಹಾಗಾಗಿಯೇ ಬಸವಣ್ಣ ಮತ್ತಿತರರ ವಚನಗಳು ಪ್ರಭಾವ ಬೀರಲು ಸಾಧ್ಯವಾದದ್ದು. ನಮ್ಮ ದೇಶದ ಪ್ರತಿಭಾನ್ವಿತ ವಿಜ್ಞಾನಿ ಪದ್ಮ ಪ್ರಶಸ್ತಿ ಪುರಸ್ಕøತ ಪ್ರೋ| ಎಂ.ಜಿ.ಕೆ. ಮೆನನ್ ಹೇಳುತ್ತಾರೆ “ವಿಜ್ಞಾನ ಬೆಳೆಯುವುದು ಅರಿವಿನಿಂದಲೇ ಹೊರತೂ ಬಾಯಿ ಪಾಠದಿಂದಲ್ಲ. ಅರ್ಥವಾಗದೇ ಹೋಗುವ ಮಾಧ್ಯಮದ ಮೂಲಕ ಅರಿವು ಮೂಡುವುದು ಸಾಧ್ಯವಿಲ್ಲ. ವಿಜ್ಞಾನವನ್ನು ಸಹಜ ಮಾರ್ಗದಲ್ಲಿ ಭೋಧಿಸಬೇಕು. ಇದು ಪರಿಚಿತವಾದ ಮಾಧ್ಯಮದ ಮೂಲಕ ಮಾತ್ರವೇ ಸಾಧ್ಯ. ಸಾಮಾನ್ಯವಾಗಿ ಆ ಮಾಧ್ಯಮ ಮಾತೃಭಾಷೆ”.
ಡಾ. ಹಾ.ಮಾ.ನಾ. ಹೇಳುತ್ತಾರೆ “ಭಾಷೆ ರಾಜಭವನದ ತೋಟದಲ್ಲಿ ಬೆಳೆಯುವುದಿಲ್ಲ. ಕಾನೂನು ಕಡತಗಳಲ್ಲಿ ವೃದ್ಧಿಸುವದಿಲ್ಲ. ನಮ್ಮ ಜನ ಜೀವನವನ್ನೆಲ್ಲಾ ನಮ್ಮ ಭಾಷೆ ಆಕ್ರಮಿಸಿಕೊಳ್ಳದಿದ್ದರೆ, ಅದಕ್ಕೂ ನಮಗೂ ನಡುವೆ ಸದಾ ಕಂದರವೊಂದು ಇದ್ದೇ ಇರುತ್ತದೆ” ನಮ್ಮ ಭಾಷೆಯನ್ನು ನಾವೆಷ್ಟರ ಮಟ್ಟಿಗೆ ಪ್ರೀತಿಸುತ್ತೇವೆ, ಅದರ ಬಗ್ಗೆ ನಮಗೆಷ್ಟು ಅಭಿಮಾನವಿದೆ ಎನ್ನುವುದು, ನಾವು ಅದನ್ನು ಬಳಸುವ ವಿಧಾನದಲ್ಲಿ ವ್ಯಕ್ತವಾಗುತ್ತದೆ. ಯಾವುದೇ ಭಾಷೆ ಬೆಳೆಯುವುದು ಜನ ಜೀವನದಿಂದ ಜನಸಾಮಾನ್ಯರಿಂದ. ನಿತ್ಯ ಜೀವನದಲ್ಲಿ ಮಾನವನು ಸಹಜವಾಗಿ ನಿರೀಕ್ಷಿಸಬಹುದಾದ ಕಡೆಗಳಲೆಲ್ಲಾ ಕನ್ನಡ ಬಂದರೆ ಅವನಿಗೆ ಒಳ್ಳೆಯದು.
ಕಛೇರಿ, ಸಂಸ್ಥೆ, ವಿದ್ಯಾಲಯಗಳ ನಾಮಫಲಕವನ್ನು ಕನ್ನಡದಲ್ಲಿ ಅಳವಡಿಸುವುದರಿಂದಲೇ ಪ್ರಾರಂಭಿಸಬೇಕಾಗಿದೆ. ಸಾಮಾನ್ಯರೊಂದಿಗೆ ವ್ಯವಹರಿಸುವಾಗ ಅಧಿಕಾರಿಗಳು ಕನ್ನಡದಲ್ಲೇ ವ್ಯವಹರಿಸಬೇಕು. ಇಂಗ್ಲೀಷ್‍ನಲ್ಲಿ ಬಂದ ಪತ್ರವೊಂದನ್ನು ಒಯ್ದು ಬೇರೆಯವರು ಓದಿ ಹೇಳಿದ್ದನ್ನು ನಂಬುವ ಕೆಲಸ ಮೊದಲು ತಪ್ಪಬೇಕಿದೆ. ನಿತ್ಯ ಜೀವನದ ಬಹುಮುಖ್ಯ ವ್ಯವಹಾರಗಳಲ್ಲಿ ನ್ಯಾಯಾ ವಿಚಾರಣೆಯು ಒಂದು. ವಾದ -ಪ್ರತಿವಾದಗಳು ಕನ್ನಡದಲ್ಲಿ ನಡೆದಾಗ ಕಕ್ಷಿದಾರನಿಗೆ ಅರ್ಥವಾಗುತ್ತದೆ. ತೀರ್ಪು ಕೂಡ ಕನ್ನಡದಲ್ಲಿ ಲಭ್ಯವಾಗಬೇಕಾದದ್ದು ಅಗತ್ಯ. ಪ್ರತಿ ಕಛೇರಿಯಲ್ಲಿನ ಸೂಚನ ಫಲಕ – ಪ್ರಗತಿ ಸೂಚಿ ಇತ್ಯಾದಿಗಳು ಕನ್ನಡದಲ್ಲಿದ್ದರೆ ಜನಕ್ಕೆ ಅರ್ಥವಾಗಬಹುದು. ಹಾಗಿಲ್ಲದಿದ್ದಲ್ಲಿ ಅಲ್ಲಿನ ಗೋಡೆಗಳಿಗೆ ಅವು ಕೇವಲ ಅಲಂಕಾರ ಸಾಮಗ್ರಿಗಳಾಗಬಹುದು. ಉದ್ದೇಶ ಸಾರ್ಥಕವಾಗದ ಯಾವುದೇ ಕ್ರೀಯೆ ಅರ್ಥವಿಲ್ಲದ ಆಚರಣೆ ಅಷ್ಟೆ.
ಇಂಗ್ಲೀಷ್ ವಿಜ್ಞಾನದ ಭಾಷೆ, ಇಂಗ್ಲೀಷ್ ಕಲಿತರೆ ಮಾತ್ರ ಭವಿಷ್ಯ ಎಂಬ ಮೋಹಕ ಮಾತುಗಳಿಗೆ ಮರುಳಾಗದವರಿಲ್ಲ. ಆದರೆ ಇಂಗ್ಲೀಷ್‍ನಲ್ಲಿ ದೊರಕುವಷ್ಟನ್ನು ಕನ್ನಡದಲ್ಲಿ ಪೂರೈಸುವಂತಾದರೆ ಎಂದು ಯಾರು ಚಿಂತಿಸುವುದಿಲ್ಲ. ವಿಷಾದದ ಸಂಗತಿ ಎಂದರೆ ಅದೇ.
ಕನ್ನಡ ಕೂಡ ಇಂಗ್ಲೀಷ್‍ನಂತೆ ಸ್ವೀಕೃತ ಭಾಷೆ. ಉಳಿದ ಭಾಷೆಯ ಪದÀಗಳನ್ನು ತನ್ನದಾಗಿ ಪರಿವರ್ತಿಸಿಕೊಳ್ಳಬಲ್ಲ ಶಕ್ತಿಯನ್ನು ಪಡೆದಿರುವಂತಹದ್ದು. ಇಂದು ಪ್ರಪಂಚ ಕಿರಿದಾಗುತ್ತಿರುವ ಸಂದರ್ಭದಲ್ಲಿ ಎಲ್ಲಿ ಭಾಷೆಯ ಬಳಕೆ ಜನರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಇದೆ. ಉದಾಹರಣೆಗೆ, ಕಾಲೇಜು, ಬಸ್ಸು, ಪೋಲಿಸ್, ಇಂಜಿನಿಯರ್ ಇತ್ಯಾದಿ ಇವಕ್ಕೆಲ್ಲಾ ಕನ್ನಡಾನುವಾದವನ್ನಿತ್ತು, ಅದನ್ನೇ ಬಳಸಬೇಕೆಂಬ ಹಟ ಕೂಡ ಭಾಷಾ ಬೆಳವಣಿಗೆಗೆ ಸಹಕಾರಿಯಾಗದು. ಅವನ್ನೇಲ್ಲಾ ನಮ್ಮದೇ ಭಾಷೆಯ ಅಂಗವೆಂದು ಪರಿಗಣಿಸುವುದು ಸೂಕ್ತ. ಮತ್ತೆ ಡಾ.ಹಾ.ಮಾ.ನಾ. ಹೇಳುವಂತೆ “ಸಿಮೆಂಟ್”ಗೆ ‘ವಜ್ರಚೂರ್ಣ’ ಎನ್ನಬೇಕಿಲ್ಲ. ಸಿಮೆಂಟ್ ಇದು ಸಿಮೆಂಟು ಆದಾಗಲೇ ನಮ್ಮ ಪಾಲಿಗದು ಸೀಮೆಯ ಅಂಟಷ್ಟೆ ಅಲ್ಲ ಸೀಮೆಯ ನಂಟೂ ಆಗಬಲ್ಲದು.
ನಿತ್ಯದ ಬದುಕಿನಲ್ಲಿ ಬೆರಿಕೆಯಾಗುತ್ತಿರುವ ಪರಭಾಷೆಯ ಶಬ್ದಗಳ ಕುರಿತು ನಾವು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಅವು ನಾಳೆ ನಮ್ಮದೇ ಭಾಷೆಯ ಶಬ್ದಗಳಾದಾವು! ಆದರೆ ಅದೇ ಮೋಹವಾಗಬಾರದು. ಅದಕ್ಕೆ ನಮ್ಮ ಮಾತೃಭಾಷೆಯ ಸ್ವರೂಪ ಬಲಿಯಾಗಬಾರದು. ನಮ್ಮ ಭಾಷೆಯ ಕುರಿತು ಮಮತೆ, ಅಭಿಮಾನವಿದ್ದರೆ ಹಾಗಾಗಲೂ ಸಾಧ್ಯವಿಲ್ಲ. ಅದಕ್ಕೆ ಶ್ರೀ ಎ.ಆರ್.ಕೃಷ್ಣಶಾಸ್ತ್ರಿಗಳ ಎಚ್ಚರಿಕೆಯ ಮಾತುಗಳು ನಮ್ಮಗೆ ಸದಾ ಅನುಕರಿಸುತ್ತಿರಬೇಕು. ಅದೆಂದರೆ “ಕನ್ನಡಿಗರೆ ನಿಮ್ಮ ಕನ್ನಡವನ್ನು ಭಾರತ ದೇಶದ ದಕ್ಷಿಣದಲ್ಲಿ ಒಂದು ಅಂಗೈ ಅಗಲ ಬಿಟ್ಟರೆ ಮತ್ತೆಲ್ಲೂ ನೋಡಲಾರಿರಿ. ನೀವು ಅದನ್ನು ಅಂಕ ಮಾಡಿದರೆ ಮಿಕ್ಕ ಯಾವ ದೇಶದ ಯಾವ ಜನರೂ ಅದನ್ನು ಎತ್ತಿ ಹಿಡಿಯಲಾರರು. ಅದು ಹೋದರೆ ಹೋಗಲಿ ಎನ್ನುವ ಹಾಗಿದ್ದರೆ ಈ ಕಡೆ ಬಂಗಾಳ ಕೊಲ್ಲಿಯಿದೆ. ಆ ಕಡೆ ಅರಬ್ಬಿ ಸಮುದ್ರವಿದೆ. ಗುಡಿಸಿಹಾಕಿ ಬಿಡಿ”. ಮಾತೃಭಾಷಾ ಋಣ ಹೊತ್ತಾವರಾರು ಈ ಕೃತ್ಯಕ್ಕೆ ಕೈ ಹಾಕಲಾರರು. ಆದರೂ ದಿನದಿಂದ ದಿನಕ್ಕೆ ಕನ್ನಡದ ಕುರಿತು ಕನ್ನಡದ ಸಾರ್ವಭೌಮತೆ ಕುರಿತು ಕರ್ನಾಟಕದಲ್ಲೆ ಮಾತು ಕತೆಗಳು ನಡೆಯುತ್ತಿರುವುದು ದುರಂತವಾದರೂ ಸತ್ಯ. ಈ ಸಂದರ್ಭದಲ್ಲಿ ಸಾಲಿ ರಾಮಚಂದ್ರರಾಯರ ನುಡಿ “ಕನ್ನಡವನ್ನುಳಿದೆನಗೆ ಅನ್ಯ ಜೀವನವಿಲ್ಲ. ಕನ್ನಡವೇ ಎನ್ನುಸಿರು” ಎಂಬುದು ಎಲ್ಲರ ಉಸಿರಲ್ಲೂ ಇರುವಂತಾದರೆ, ಆ ಕನ್ನಡಮ್ಮ ಖುಷಿಯಿಂದ ಇನ್ನಷ್ಟು ಎತ್ತರಕ್ಕೇರಿ ನಮ್ಮನ್ನು ಸಲಹಬಹುದು.
ರವೀಂದ್ರ ಭಟ್ ಕುಳಿಬೀಡು.

ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ

0

ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಭಾನುವಾರ ಪಟ್ಟಣದ ಟಿ.ಬಿ.ರಸ್ತೆಯಲ್ಲಿರುವ ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ, ಹೋಮ, ಪೂಜೆ ನಡೆಸಲಾಯಿತು. ಯಾದವ ಕುಲಸ್ಥರು ಕುಟುಂಬ ಸಮೇತರಾಗಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಮಹಿಳೆಯರು ತಂಬಿಟ್ಟು ದೀಪಗಳನ್ನು ಮೆರವಣಿಗೆಯಲ್ಲಿ ತಂದು ಪೂಜೆಯನ್ನು ನೆರವೇರಿಸಿದರು.
ತಾಲ್ಲೂಕಿನ ಯಾದವ ಕುಲಸ್ಥರಿಂದ ಮೆರವಣಿಗೆಯನ್ನು ಆಯೋಜಿಸಿದ್ದು, ಶ್ರೀಕೃಷ್ಣ ಮೂರ್ತಿಗಳಿರುವ ಮುತ್ತಿನ ಪಲ್ಲಕ್ಕಿಗಳು, ಸಪ್ತಾಶ್ವದ ರಥಗಳು, ಕೀಲುಕುದುರೆ, ಗಾರ್ಡಿಬೊಂಬೆ, ನವಿಲುಬೊಂಬೆ, ತಮಟೆ ವಾದನ, ನಾದಸ್ವರ, ಶ್ರೀಕೃಷ್ಣ ವೇಷಧಾರಿಗಳಾದ ಮಕ್ಕಳು, ದೀಪಗಳನ್ನು ಹೊತ್ತ ಮಹಿಳೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದ್ದು ಆಕರ್ಷಕವಾಗಿತ್ತು.
ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ಬಾಲಕೃಷ್ಣನ ಮೂರ್ತಿಯನ್ನು ತೊಟ್ಟಿಲಲ್ಲಿರಿಸಿ ಬೆಣ್ಣೆ, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ ಹಾಗೂ ಹಣ್ಣುಗಳಿಂದ ಸಿಂಗರಿಸಲಾಗಿತ್ತು. ದೇವಾಲಯದಲ್ಲಿ ಮಹಾಮಂಗಳಾರತಿಯ ನಂತರ ಪ್ರಸಾದವನ್ನು ವಿನಿಯೋಗಿಸಲಾಯಿತು. ಪಟ್ಟಣದ ಉಲ್ಲೂರುಪೇಟೆಯ ಭಜನೆ ಮಂದಿರದಲ್ಲಿರುವ ಪುರಾತನ ತಂಜಾವೂರು ಚಿತ್ರಕಲೆಯ ಬಾಲಕೃಷ್ಣನ ಚಿತ್ರಪಟಕ್ಕೆ ವಿಶೇಷ ಅಲಂಕಾರವನ್ನು ಮಾಡಿ ಪೂಜೆಯನ್ನು ನೆರವೇರಿಸಲಾಯಿತು. ಪದ್ಮಶ್ರೀ ಘಂಟಸಾಲ ಗಾಲ ಕಲಾವೃಂದದ ಡಿ.ಎನ್.ಲಕ್ಷ್ಮೀಪತಿ ಮತ್ತು ತಂಡದವರಿಂದ ಭಕ್ತಿಗೀತೆಗಳ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಭಾನುವಾರ ತಾಲ್ಲೂಕಿನ ಯಾದವ ಕುಲಸ್ಥರಿಂದ ಮೆರವಣಿಗೆಯನ್ನು ಆಯೋಜಿಸಿದ್ದು, ಶ್ರೀಕೃಷ್ಣ ಮೂರ್ತಿಗಳಿರುವ ಮುತ್ತಿನ ಪಲ್ಲಕ್ಕಿಗಳು, ಕೀಲುಕುದುರೆ, ಗಾರ್ಡಿಬೊಂಬೆ, ನವಿಲುಬೊಂಬೆ, ದೀಪಗಳನ್ನು ಹೊತ್ತ ಮಹಿಳೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದ್ದು ಆಕರ್ಷಕವಾಗಿತ್ತು.
ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಭಾನುವಾರ ತಾಲ್ಲೂಕಿನ ಯಾದವ ಕುಲಸ್ಥರಿಂದ ಮೆರವಣಿಗೆಯನ್ನು ಆಯೋಜಿಸಿದ್ದು, ಶ್ರೀಕೃಷ್ಣ ಮೂರ್ತಿಗಳಿರುವ ಮುತ್ತಿನ ಪಲ್ಲಕ್ಕಿಗಳು, ಕೀಲುಕುದುರೆ, ಗಾರ್ಡಿಬೊಂಬೆ, ನವಿಲುಬೊಂಬೆ, ದೀಪಗಳನ್ನು ಹೊತ್ತ ಮಹಿಳೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದ್ದು ಆಕರ್ಷಕವಾಗಿತ್ತು.
ಕೋಟೆ ವೃತ್ತದಲ್ಲಿ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀಕೃಷ್ಣ ಜಯಂತಿಯನ್ನು ಆಯೋಜಿಸಿದ್ದು, ಶಾಸಕ ಎಂ.ರಾಜಣ್ಣ ಉದ್ಘಾಟಿಸಿ ಮಾತನಾಡಿ, ‘ಶ್ರೀಕೃಷ್ಣ ಭರತಖಂಡದ ಐಕ್ಯತೆಗಾಗಿ ಶ್ರಮಿಸಿದ ಮಹಾನುಭಾವ. ಶ್ರೀಕೃಷ್ಣ ಯಾವುದೇ ರಾಜ್ಯದ ರಾಜನಾಗದಿದ್ದರೂ ದೇಶದಲ್ಲಿದ್ದ ಆಗಿನ ಎಲ್ಲಾ ರಾಜರಿಂದಲೂ ಪೂಜಿಸಿಕೊಂಡಥಹ ಶ್ರೇಷ್ಠ ವ್ಯಕ್ತಿ. ದೇಶದಲ್ಲಿ ಧರ್ಮದ ಸ್ಥಾಪನೆಗಾಗಿ ಅಧರ್ಮದ ಹಾದಿಯಲ್ಲಿದ್ದವರನ್ನೆಲ್ಲಾ ನಾಶ ಮಾಡಿ, ಜಗತ್ತಿಗೆ ಗೀತೆಯನ್ನು ನೀಡಿ ಬದುಕುವ ಮಾರ್ಗವನ್ನು ತಿಳಿಸಿಕೊಟ್ಟಿದ್ದಾರೆ. ಶ್ರೀಕೃಷ್ಣ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಮನುಕುಲಕ್ಕೇ ಸೇರುವಂಥಹ ಶ್ರೇಷ್ಠ ವ್ಯಕ್ತಿತ್ವ. ಗೀತೆಯ ಸಾರವನ್ನು ಜನಸಾಮಾನ್ಯರಿಗೆ ತಲುಪಿಸುವುದು ಮತ್ತು ಅದನ್ನು ಅಳವಡಿಸಿಕೊಳ್ಳುವುದು ಸಮಾಜದ ಏಳಿಗೆಗೆ ಅತ್ಯಗತ್ಯ’ ಎಂದು ಹೇಳಿದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲಾ ಪಲ್ಲಕ್ಕಿಗಳ ತಂಡದವರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು.
ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಭಾನುವಾರ ಶ್ರೀಕೃಷ್ಣ ವೇಷಧಾರಿಗಳಾದ ಮಕ್ಕಳಿಗೆ ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಯೋಗಾನಂದ ಪ್ರಶಸ್ತಿಯನ್ನು ನೀಡಿದರು. ಯಾದವ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಆರ್.ನರಸಿಂಹರಾಜು ಹಾಜರಿದ್ದರು.
ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಭಾನುವಾರ ಶ್ರೀಕೃಷ್ಣ ವೇಷಧಾರಿಗಳಾದ ಮಕ್ಕಳಿಗೆ ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಯೋಗಾನಂದ ಪ್ರಶಸ್ತಿಯನ್ನು ನೀಡಿದರು. ಯಾದವ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಆರ್.ನರಸಿಂಹರಾಜು ಹಾಜರಿದ್ದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಯೋಗಾನಂದ, ಯಾದವ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಆರ್.ನರಸಿಂಹರಾಜು, ಕೆ.ಎಂ.ಎಫ್. ನಿರ್ದೇಶಕ ಬಂಕ್ ಮುನಿಯಪ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಮಾಜಿ ಅಧ್ಯಕ್ಷ ವೇಣುಗೋಪಾಲ್, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಉಪಾಧ್ಯಕ್ಷ ಅಶ್ವತ್ಥಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ

0

ನ್ಯಾಯಾಂಗ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡುತ್ತಿದೆ. ನ್ಯಾಯವಾದಿಗಳು ಸಾಮಾನ್ಯ ಜನರಿಗೆ ನ್ಯಾಯವನ್ನು ತ್ವರಿತವಾಗಿ ಒದಗಿಸಿ ಅವರ ಗೌರವವನ್ನು ಹೊಂದುವಂತೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಗೋಪಾಲಗೌಡ ಅವರು ತಿಳಿಸಿದರು.
ನಗರದ ಹೊರವಲಯದ ದಿಬ್ಬೂರಹಳ್ಳಿ ರಸ್ತೆಯಲ್ಲಿ 9 ಕೋಟಿ 43 ಲಕ್ಷ ರೂಗಳ ವೆಚ್ಚದಲ್ಲಿ 4 ಎಕರೆ 35 ಗುಂಟೆ ಸ್ಥಳದಲ್ಲಿ ನಿರ್ಮಾಣವಾಗಿರುವ ನೂತನ ನ್ಯಾಯಾಲಯ ಸಂಕೀರ್ಣವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
7sep2ಭವ್ಯವಾದ ನ್ಯಾಯಾಲಯ ಸಂಕೀರ್ಣವು ಜನರ ಸ್ವತ್ತು. ಇದನ್ನು ಸ್ವಚ್ಛವಾಗಿ, ಸುಂದರವಾಗಿ, ತ್ವರಿತವಾಗಿ ನ್ಯಾಯ ಸಿಗುವ ತಾಣವಾಗಿಸುವ ಕೆಲಸವಾಗಬೇಕು. ನ್ಯಾಯವಾದಿಗಳು ತಂತ್ರಜ್ಞಾನವನ್ನು ಬಳಸಿಕೊಳ್ಳಿ, ಹೆಚ್ಚೆಚ್ಚು ಓದಿ ಬಡವರಿಗೆ ನ್ಯಾಯ ಒದಗಿಸಿ, ಸಮಾಜಕ್ಕೆ ನಿಮ್ಮ ಸೇವೆ ಸಿಗುವಂತಾಗಲಿ. ಹೆಣ್ಣುಮಕ್ಕಳು, ಕಾರ್ಮಿಕರು, ಅವಿದ್ಯಾವಂತರು, ರೈತರು, ಬಡವರು ನ್ಯಾಯವನ್ನರಸಿ ಬರುವ ಸ್ಥಳವಿದು. ಶೋಷಣೆಗೊಳಗಾದವರಿಗೆ ಸಾಂತ್ವನ ಸಿಗಲಿ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗಲಿ ಎಂದು ತಿಳಿಸಿದರು.
ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ನೂತನ ನ್ಯಾಯಾಲಯ ಕಟ್ಟಡದ ಗ್ರಂಥಾಲಯಕ್ಕೆ 10 ಲಕ್ಷ ರೂಗಳನ್ನು ಹಾಗೂ ನೀರಿನ ಪೈಪ್ಲೈನ್ಗಾಗಿ 5 ಲಕ್ಷ ರೂಗಳನ್ನು ತಮ್ಮ ಅನುದಾನದಿಂದ ನೀಡುವುದಾಗಿ ಘೋಷಿಸಿದರು.
ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಸುಬ್ರೊ ಕಮಲ್ ಮುಖರ್ಜಿ, ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರುಗಳಾದ ಎನ್.ಕುಮಾರ್, ಎನ್.ಕೆ.ಪಾಟಿಲ್, ರಾಘವೇಂದ್ರ ಎಸ್.ಚೌಹಾಣ್, ಜಿಲ್ಲಾ ಸತ್ರ ನ್ಯಾಯಾಧೀಶರಾದ ಎ.ಎಸ್.ಬೆಳ್ಳುಂಕೆ, ಸಿವಿಲ್ ನ್ಯಾಯಾಧಿಶರಾದ ಅನಿತಾ, ಶಾಸಕ ಎಂ.ರಾಜಣ್ಣ, ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಪೊಲೀಸ್ ಎಸ್.ಪಿ. ದಿವ್ಯಾ ಗೋಪಿನಾಥ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾವೇರಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನೀವು(ಜನಪ್ರತಿನಿಧಿಗಳು) ಕೆಲಸ ಮಾಡದಿದ್ದಲ್ಲಿ ನಾವು(ನ್ಯಾಯಾಧೀಶರು) ಮಾಡಿಸುತ್ತೇವೆ
‘ಅವರು (ನ್ಯಾಯಾಧೀಶರು) ಹೇಳುತ್ತಾರಷ್ಟೆ, ಆದರೆ ಕಾರ್ಯರೂಪಕ್ಕೆ ತರುವವರು ನಾವು(ಜನಪ್ರತಿನಿಧಿಗಳು) ಎಂದು ಸಂಸದ ಕೆ.ಎಚ್.ಮುನಿಯಪ್ಪ ಬೃಹತ್ ನ್ಯಾಯಾಲಯ ಸಂಕೀರ್ಣದ ನಿರ್ಮಾಣದ ಕುರಿತಂತೆ ಹಾಗೂ ಅನುದಾನ ನೀಡುವ ಬಗ್ಗೆ ಹೇಳಿದರು. ಅದಕ್ಕೆ ಉತ್ತರಿಸಿದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಗೋಪಾಲಗೌಡ ಅವರು, ‘ನೀವ್ಯಾರು? ನೀವು ಜನಸೇವಕರು. ಯಾರ ಹಣ ನೀವು ನೀಡುತ್ತೀರಿ? ಅದು ಜನರ ತೆರಿಗೆ ಹಣ ಸ್ವಾಮಿ. ಸಂವಿಧಾನಾತ್ಮಕವಾಗಿ ಜನಸೇವೆ ಮಾಡುವುದು ನಿಮ್ಮ ಆದ್ಯ ಕರ್ತವ್ಯ. ನೀವು ಯಾರಿಗೂ ಧರ್ಮ ಮಾಡುತ್ತಿಲ್ಲ. ನೀವು ಕೆಲಸ ಮಾಡದಿದ್ದಲ್ಲಿ ನಾವು(ನ್ಯಾಯಾಧೀಶರು) ಮಾಡಿಸುತ್ತೇವೆ’ ಎಂದು ಹೇಳಿದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಿ
‘ನ್ಯಾಯವಾದಿಗಳೇ ಏನು ಮಾಡುತ್ತಿದ್ದೀರಿ? ಕೈಗಾರಿಕೆಗಳಿಗೆ 16 ಗಂಟೆ ವಿದ್ಯುತ್, ರೈತರಿಗೆ 2 ಗಂಟೆ ವಿದ್ಯುತ್ ನೀಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ. ಸಮಪಾಲು, ಸಮಬಾಳು ಎಂಬುದಿಲ್ಲಿ ಅಕ್ಷರಶಃ ಇಲ್ಲವಾಗಿದೆ. ನೀವು ಕನಿಷ್ಠ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ಕಾರದ ವಿರುದ್ಧ ಏಕೆ ಹಾಕಿಲ್ಲ’ ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಗೋಪಾಲಗೌಡ ಅವರು ನ್ಯಾಯವಾದಿಗಳಿಗೆ ಸಲಹೆ ನೀಡಿದರು.
ವಿದ್ಯುತ್ ಉಚಿತವಾಗಿ ರೈತರಿಗೆ ನೀಡಬೇಡಿ. ಹಣ ಪಡೆಯಿರಿ. ಆದರೆ ಸಮರ್ಪಕ ವಿದ್ಯುತ್ ನೀಡಿ. ಮಳೆಯಿಲ್ಲದಿದ್ದರೆ, ಸೋಲಾರ್ನಿಂದ ಗಾಳಿಯಿಂದ ವಿದ್ಯುತ್ ತಯಾರಿಸಿ. ಎಲ್ಲರಿಗೂ ಸಮಾನತೆಯಿರಲಿ ಎಂದು ಅವರು ಹೇಳಿದರು.

ಶ್ರಾವಣ ಶನಿವಾರದ ವಿಶೇಷ ಪೂಜೆ

0

ನಾಲ್ಕನೇ ಶ್ರಾವಣ ಶನಿವಾರದ ಅಂಗವಾಗಿ ತಾಲ್ಲೂಕಿನ ಕಾಕಚೊಕ್ಕಂಡಹಳ್ಳಿ ಗ್ರಾಮದ ಶ್ರೀವೆಂಕಟರವಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ತಾಲ್ಲೂಕಿನಲ್ಲಿ ಹೆಸರುವಾಸಿಯಾಗಿರುವ ವೆಂಕಟರವಣಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಜೊತೆಗೆ ಹೋಮ, ಹವನ, ದೇವರಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು, ಸುತ್ತಮುತ್ತಲಿನ ಹಳ್ಳಿಗಳಿಂದ ನೂರಾರು ಮಂದಿ ಭಕ್ತಾದಿಗಳು ದೇವಾಲಯದಲ್ಲಿ ಪೂಜೆಗಳನ್ನು ಸಲ್ಲಿಸಿದರು. ನೆರೆದಿದ್ದ ಭಕ್ತರಿಗೆ ತೀರ್ಥಪ್ರಸಾದಗಳನ್ನು ವಿನಿಯೋಗ ಮಾಡಲಾಯಿತು.
ಗ್ರಾಮದ ಮುಖಂಡರಾದ ರಾಜಣ್ಣ, ಎಚ್.ನಾರಾಯಣಸ್ವಾಮಿ, ಪ್ರಕಾಶ್, ನಟರಾಜು, ಪೂಜಾರಿ ನಾರಾಯಣಸ್ವಾಮಿ, ಶ್ರೀನಿವಾಸ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಹಿಪ್ಪುನೇರಳೆ ಸೊಪ್ಪಿನ ಉಪಯೋಗಗಳು

0

ಒಂದೆಡೆ ರೇಷ್ಮೆಗೂಡಿನ ಬೆಲೆ ತೀವ್ರವಾಗಿ ಕುಸಿತದಿಂದ ಕಂಗೆಟ್ಟ ತಾಲ್ಲೂಕಿನ ರೈತರು ಅಲ್ಲಲ್ಲಿ ಹಿಪ್ಪುನೇರಳೆ ಸೊಪ್ಪಿನ ಬೆಳೆಯನ್ನು ಬೇರು ಸಮೇತ ಕಿತ್ತು ಹಾಕುವ ಘಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಉತ್ಸಾಹಿ ಯುವತಿಯರ ತಂಡ ರೇಷ್ಮೆ ಕೃಷಿಯ ಅಧ್ಯಯನದಲ್ಲಿ ತೊಡಗಿದ್ದು ಕೆಲ ಗ್ರಾಮಗಳಲ್ಲಿ ರೇಷ್ಮೆಯ ವಿವಿಧ ಉಪಯುಕ್ತತೆಗಳು ಹಾಗೂ ಆರ್ಥಿಕತೆಯ ಕುರಿತಂತೆ ಅರಿವು ಮೂಡಿಸುತ್ತಿದ್ದಾರೆ.
ಚಿಂತಾಮಣಿಯ ರೇಷ್ಮೆ ಕೃಷಿ ಕಾಲೇಜಿನ ವಿದ್ಯಾರ್ಥಿನಿಯರ ತಂಡ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ತಂಗಿದ್ದು, ರೇಷ್ಮೆ ಕೃಷಿಯ ಕುರಿತಂತೆ ಅಧ್ಯಯನದಲ್ಲಿ ತೊಡಗಿದ್ದಾರೆ. ತೇಜಶ್ರೀ, ಸ್ವಾತಿ, ವಿದ್ಯಾಶ್ರೀ, ಶ್ರೀವಾಣಿ, ವೀಣಾ, ಉಮಾಮಹೇಶ್ವರಿ, ತೇಜಸ್ವಿನಿ, ಕೆ.ಎನ್.ವೀಣಾ ಮತ್ತಿತರರ ವಿದ್ಯಾರ್ಥಿನಿಯರು ಗ್ರಾಮದಲ್ಲಿ ರೇಷ್ಮೆ ಕೃಷಿಯ ವಾಸ್ತವ ಚಿತ್ರಣದ ದಾಖಲಾತಿಯೊಂದಿಗೆ ಹಿಪ್ಪುನೇರಳೆ ಸೊಪ್ಪಿನ ವಿವಿಧ ವಾಣಿಜ್ಯಿಕ ಬಳಕೆಗಳ ಬಗ್ಗೆಯೂ ಸಂಶೋಧನೆ ನಡೆಸುತ್ತಿದ್ದಾರೆ.

ಹಿಪ್ಪುನೇರಳೆ ಸೊಪ್ಪಿನ ಪಕೋಡ
ಹಿಪ್ಪುನೇರಳೆ ಸೊಪ್ಪಿನ ಪಕೋಡ
ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಹಿಪ್ಪುನೇರಳೆ ಸೊಪ್ಪಿನ ಪಕೋಡವನ್ನು ತಯಾರಿಸಿದ್ದಾರೆ. ಗ್ರಾಮದ ಮನೆಗಳಲ್ಲಿ ಪಕೋಡ ತಯಾರಿಕೆ ಬಗ್ಗೆ ವಿವರಿಸಿ ವಿವಿಧ ಮನೆಗಳಲ್ಲಿ ತಾವೂ ಭಾಗವಹಿಸಿ ತಯಾರಿಸಿ ರುಚಿ ತೋರಿಸಿದ್ದಾರೆ.
ರೇಷ್ಮೆ ಕೃಷಿ ಕಾಲೇಜಿನ ವಿದ್ಯಾರ್ಥಿನಿಯರ ತಂಡ ಹಿಪ್ಪುನೇರಳೆ ಸೊಪ್ಪಿನ ಪಕೋಡ ತಯಾರಿಸುತ್ತಿರುವುದು
ರೇಷ್ಮೆ ಕೃಷಿ ಕಾಲೇಜಿನ ವಿದ್ಯಾರ್ಥಿನಿಯರ ತಂಡ ಹಿಪ್ಪುನೇರಳೆ ಸೊಪ್ಪಿನ ಪಕೋಡ ತಯಾರಿಸುತ್ತಿರುವುದು
‘ಮೊದಲಿಗೆ ಈರುಳ್ಳಿಯನ್ನು ಉದ್ದವಾಗಿ ಕತ್ತರಿಸಿಕೊಳ್ಳಿ. ಒಂದು ಪಾತ್ರೆಗೆ ಕಡ್ಲೆಹಿಟ್ಟು, ಕತ್ತರಿಸಿದ ಈರುಳ್ಳಿ, ಹಿಪ್ಪುನೇರಳೆ ಸೊಪ್ಪನ್ನು, ಅಚ್ಚಖಾರದಪುಡಿ, ಸೋಡಾ, ಉಪ್ಪು, ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬೆರಸಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿಕೊಳ್ಳಿ. ಈಗ ಕಲಸಿಟ್ಟ ಮಿಶ್ರಣವನ್ನು ಕಾದ ಎಣ್ಣೆಯಲ್ಲಿ ಕೈಯಲ್ಲಿ ಅಥವಾ ಸ್ಪೂನ್ ನಿಂದ ಹಾಕಿ ಕರಿಯಿರಿ. ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಕರೆದು ಪೆಪರ್ ಟವೆಲ್ ಮೇಲೆ ಹಾಕಿ. ಬಳಿಕ ಪ್ಲೇಟ್ ಗೆ ಹಾಕಿ ಸರ್ವ್ ಮಾಡಿದರೆ ಗರಿಗರಿಯಾದ ಹಿಪ್ಪುನೇರಳೆ ಸೊಪ್ಪಿನ ಪಕೋಡ ಸವಿಯಲು ಸಿದ್ಧ’ ಎಂದು ವಿದ್ಯಾರ್ಥಿನಿ ತೇಜಶ್ರೀ ವಿವರಿಸುತ್ತಾರೆ.
’ಇದಲ್ಲದೆ, ಹಿಪ್ಪುನೇರಳೆ ವೈನ್, ಚಾಕೋಲೇಟ್ಸ್, ಟೀ ಮುಂತಾದವುಗಳನ್ನು ತಯಾರಿಸಬಹುದಾಗಿದೆ. ಗ್ರಾಮೀಣ ಪ್ರವಾಸೋದ್ಯಮವನ್ನು ವ್ಯವಸ್ಥಿತವಾಗಿ ನಡೆಸಿ, ವಿದೇಶೀಯರನ್ನು ನಮ್ಮ ರೇಷ್ಮೆ ಪ್ರವಾಸೋಧ್ಯಮಕ್ಕೆ ಆಹ್ವಾನಿಸಬಹುದಾಗಿದೆ. ಬಂದ ಪ್ರವಾಸಿಗರಿಗೆ ಹಿಪ್ಪುನೇರಳೆಯ ವಿವಿಧ ರುಚಿಗಳನ್ನು ತೋರಿಸಬಹುದು. ರೇಷಷ್ಮೆಯ ವಿವಿಧ ಉತ್ಪನ್ನಗಳನ್ನೂ ಮಾರಾಟ ಮಾಡಬಹುದು’ ಎಂದು ಅವರು ಹೇಳುತ್ತಾರೆ.
–ಡಿ.ಜಿ.ಮಲ್ಲಿಕಾರ್ಜುನ.

ಹಾಪ್ಕಾಮ್ಸ್ನ ವಿವಿಧ ರೈತೋಪಯೋಗಿ ಯೋಜನೆಗಳು ಜಾರಿ

0

ಜಿಲ್ಲೆಯಲ್ಲಿ ಹೆಚ್ಚು ಬೆಳೆಯುವ ತರಕಾರಿ, ತೋಟಗಾರಿಕೆ ಬೆಳೆಗಳನ್ನು ಸಂಗ್ರಹ ಮಾಡಿ ಬೆಂಗಳೂರಿನ ಹಾಪ್ಕಾಮ್ಸ್ಗೆ ರವಾನಿಸಲು ಅನುಕೂಲ ಆಗುವಂತೆ ಜಿಲ್ಲಾ ಕೇಂದ್ರದ ಸಮೀಪ ಸಂಗ್ರಹಣಾ ಕೇಂದ್ರವನ್ನು ನಿರ್ಮಿಸಲಾಗುವುದು ಎಂದು ಹಾಪ್ಕಾಮ್ಸ್ನ ನಿರ್ದೆಶಕ ಮುತ್ತೂರು ಚಂದ್ರೇಗೌಡ ತಿಳಿಸಿದರು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅವರ ನೇತೃತ್ವದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಚಿಕ್ಕಬಳ್ಳಾಪುರದ ನಂದಿ ಬಳಿ ಇರುವ ತೋಟಗಾರಿಕೆ ಫಾರಂನ ಒಂದು ಎಕರೆ ಪ್ರದೇಶದಲ್ಲಿ ಸಂಗ್ರಹಣಾ ಕೇಂದ್ರವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಹೆಚ್ಚು ತರಕಾರಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದು ರೈತರು ಹಾಪ್ಕಾಮ್ಸ್ನ ಬೆಂಗಳೂರು ಮಳಿಗೆಗೆ ಅವುಗಳನ್ನು ಕೊಂಡೊಯ್ದು ಮಾರಾಟ ಮಾಡಲು ಸಾಗಾಣಿಕೆ ವೆಚ್ಚ ಅಧಿಕವಾಗುತ್ತಿದೆಯಲ್ಲದೆ ಸಮಯವೂ ವ್ಯರ್ಥವಾಗುತ್ತಿದೆ. ಹಾಗಾಗಿ ನಂದಿ ಬಳಿ ಸಂಗ್ರಹಣಾ ಕೇಂದ್ರ ತೆರೆದು ಇಲ್ಲಿಯೆ ರೈತರ ಉತ್ಪನ್ನಗಳನ್ನು ಖರೀಸಲಾಗುವುದು ಎಂದು ವಿವರಿಸಿದರು.
ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ದಲ್ಲಾಳಿಗಳನ್ನು ಅವಲಂಬಿಸುವುದು ತಪ್ಪಲಿದೆಯಲ್ಲದೆ ಇನ್ನಷ್ಟು ಹೆಚ್ಚು ಪ್ರದೇಶದಲ್ಲಿ ತರಕಾರಿ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಈಗಾಗಲೆ ಹಾಪ್ಕಾಮ್ಸ್ನಿಂದ ಆನ್ಲೈನ್ನಲ್ಲಿ ಉತ್ಪನ್ನಗಳನ್ನು ಖರೀದಿ ಮಾಡುತ್ತಿದ್ದು ಇದರಿಂದ ರೈತರು ಬೆಂಗಳೂರಿನ ಹಾಪ್ಕಾಮ್ಸ್ ಕಚೇರಿಗೆ ತೆರಳಿ ಇಂಡೆಂಟ್ ಮಾಡುವ ತಾಪತ್ರಯ ತಪ್ಪಿದೆ. ಇನ್ನಷ್ಟು ಸುಧಾರಣೆ ಕ್ರಮಗಳನ್ನು ತೆಗೆದುಕೊಂಡು ರೈತರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಹಾಪ್ಕಾಮ್ಸ್ನಿಂದ ಚನ್ನಪಟ್ಟಣದ ಬಳಿ ಎಳನೀರಿನ ಟೆಟ್ರಾಪ್ಯಾಕ್ ತಯಾರಿಕೆ ಘಟಕಕ್ಕೆ ಎಲ್ಲ ಸಿದ್ದತೆಗಳು ಪೂರ್ಣಗೊಂಡಿದೆ. ಒಂದು ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು ಮಿಷನರಿಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು ಶೀಘ್ರದಲ್ಲೆ ಕಾರ್ಯಾರಂಭವಾಗಲಿದೆ. ಇದರಿಂದ ತೆಂಗಿನ ಕಾಯಿಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆಯಲ್ಲದೆ ಜನರ ಆರೋಗ್ಯ ಮಟ್ಟ ಸುಧಾರಣೆಗೂ ಅನುಕೂಲ ಕಲ್ಪಿಸಿದಂತಾಗುತ್ತದೆ. ಇದರ ಜತೆಗೆ ಬೆಂಗಳೂರು ಹೊರವಲಯದ ಕುಣಿಗಲ್ ರಸ್ತೆಯ ತಿಪ್ಪಸಂದ್ರದ ಬಳಿ ವಾಟರ್ ಪ್ಲಾಂಟ್ ನಿರ್ಮಾಣ ಮಾಡಲು ಸರ್ಕಾರದಿಂದ ಅನುಮತಿ ಪಡೆದಿದ್ದು ಶೀರದಲ್ಲೆ ಘಟಕದ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಹಾಪ್ಕಾಮ್ಸ್ನಿಂದ ಕೈಗೊಳ್ಳಲಾಗುವ ಕ್ರಮಗಳ ಬಗ್ಗೆ ವಿವರಿಸಿದರು.

ಬೀಳ್ಕೊಡುಗೆ ಸಮಾರಂಭ

0

ನಗರದ ಶ್ರೀಸರಸ್ವತಿ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ ಕಳೆದ ೩೨ ವರ್ಷಗಳಿಂದ ಉರ್ದು ಹಾಗೂ ವಿಜ್ಞಾನ ವಿಭಾಗದ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಕೌಸರ್ ಪರ್ವೀನ್ ಅವರಿಗೆ ಆಡಳಿತ ಮಂಡಳಿ, ಪ್ರೌಢಶಾಲಾ ಸಿಬ್ಬಂದಿವರ್ಗ ಹಾಗೂ ಪ್ರಾಥಮಿಕ ಶಾಲಾ ಸಿಬ್ಬಂದಿ ವರ್ಗದವರಿಂದ ಆತ್ಮೀಯ ಬೀಳ್ಕೊಡುಗೆ ಸಮಾರಂಭವನ್ನು ಶನಿವಾರ ಏರ್ಪಡಿಸಲಾಗಿತ್ತು.
ನಿವೃತ್ತ ಶಿಕ್ಷಕಿಯ ಕುರಿತು ಶಿಕ್ಷಕರಾದ ಎನ್. ಸುಂದರನ್ ಹಾಗೂ ಎಂ. ಆರ್. ಬಾಲಗಂಗಾಧರ ತಿಲಕ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾರ್ಗದರ್ಶಕ ಎನ್. ವೆಂಕಟಸುಬ್ಬರಾವ್, ಅಧ್ಯಕ್ಷೆ ವಿ. ಸೀತಾಲಕ್ಷ್ಮಿ, ಕಾರ್ಯದರ್ಶಿ ಎನ್. ಶ್ರೀಕಾಂತ್, ಪ್ರೌಢಶಾಲೆ ಮುಖ್ಯಶಿಕ್ಷಕ ಸೋಮಶೇಖರ್, ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಸ್. ಕೆ. ಗೋಪಿನಾಥ್, ಕೌಸರ್ ಪರ್ವೀನ್ ಹಾಗೂ ಅವರ ಪತಿ ನಿವೃತ್ತ ಕಂದಾಯ ಇಲಾಖೆ ಅಧಿಕಾರಿ ಸಮೀವುಲ್ಲಾ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಮೇಲೂರು ಗ್ರಾಮದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ

0

ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ದ್ರೌಪದಮ್ಮ ಮತ್ತು ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟ ಶ್ರೀಕೃಷ್ಣನ ಉತ್ಸವ ಮೂರ್ತಿಯ ಮೆರವಣಿಗೆ ಭಕ್ತಿ-ಸಂಭ್ರಮಕ್ಕೆ ಸಾಕ್ಷಿಯಾಯಿತು.
ಮೆರವಣಿಗೆಯಲ್ಲಿ ಮಂಗಳ ವಾದ್ಯಗಳೊಂದಿಗೆ ತಮಟೆ ನಾದ ಜೊತೆಯಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶ್ರೀಕೃಷ್ಣ ವೇಷಧಾರಿ ಮುನಿರಾಜು ನಿಜವಾದ ನಾಗರಹಾವನ್ನು ಕೈಯಲ್ಲಿ ಹಿಡಿದು ಜನರ ಆಕರ್ಷಣೆಯ ಕೇಂದ್ರವಾಗಿದ್ದರು.
ಗ್ರಾಮಸ್ಥರು ಉತ್ಸವ ಮೂರ್ತಿಗೆ ಪೂಜೆಯನ್ನು ನೆರವೇರಿಸಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ಭಕ್ತರಿಗೆಲ್ಲಾ ದೇವಾಲಯದ ಬಳಿ ಪ್ರಸಾದವನ್ನು ವಿತರಿಸಲಾಯಿತು.

ನೇತ್ರದಾನ ಮಾಡಿ ಅಂಧರಿಗೆ ಬೆಳಕಾಗಿ

0

ಸತ್ತಮೇಲೆ ಮಣ್ಣಲ್ಲಿ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡಿ ಕತ್ತಲಲ್ಲಿ ಜೀವನ ಸಾಗಿಸುತ್ತಿರುವ ಅಂಧರ ಬಾಳಿಗೆ ಬೆಳಕು ನೀಡಿ ಎಂದು ಸಾರ್ವಜನಿಕ ಆಸ್ಪತ್ರೆಯ ನೇತ್ರಾಧಿಕಾರಿ ಎಂ.ಕೃಷ್ಣಪ್ಪ ತಿಳಿಸಿದರು.
ನಗರದಲ್ಲಿ ಶುಕ್ರವಾರ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸಹಯೋಗದಲ್ಲಿ ನೇತ್ರದಾನ ಕುರಿತಂತೆ ಜನಜಾಗೃತಿ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರವನ್ನು ಬದಿಗಿರಿಸಿ, ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗುವ ಅಗತ್ಯವಿದೆ. ಮಣ್ಣಲ್ಲಿ ಮಣ್ಣಾಗಿ ಕರಗುವ, ಬೂದಿಯಾಗಿ ಹೋಗುವ ದೇಹದ ಬಗ್ಗೆ ವ್ಯಾಮೋಹ ಇರಿಸಿಕೊಳ್ಳದೆ, ನಮ್ಮ ಜೀವನದ ನಂತರ ಈ ದೇಹ ಇತರರಿಗೂ ನೆರವಾಗಲಿ ಎಂಬ ಸದುದ್ದೇಶದಿಂದ ಅವಯವಗಳನ್ನು ದಾನ ನೀಡಬೇಕು ಎಂದು ಹೇಳಿದರು.
ಕಣ್ಣು ಪ್ರತಿಯೊಬ್ಬರ ಜೀವನದ ಅಮೂಲ್ಯವಾದ ಅಂಗವಾಗಿದೆ. ಕಾರಣಾಂತರಗಳಿಂದ ಕಣ್ಣುಗಳನ್ನು ಕಳೆದುಕೊಂಡು ಅಂಧತ್ವದಿಂದ ನರಳುವವರಿಗೆ ಮರಣಾನಂತರ ಕಣ್ಣುಗಳನ್ನು ದಾನ ಮಾಡಿ ಅಂಧತ್ವ ತೊಲಗಿಸಿ ಎಂದು ತಿಳಿಸಿದರು.
ಸರಸ್ವತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ವಾದ್ಯ ವೃಂದದೊಂದಿಗೆ ಕಣ್ಣನ್ನು ದಾನ ಮಾಡುವಂತೆ ಘೋಷಣಾ ಫಲಕಗಳನ್ನು ಹಿಡಿದು ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.
ತಾಲ್ಲುಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್, ಡಾ.ತಿಮ್ಮೇಗೌಡ, ಡಾ.ಅನೂಷಾ, ಡಿ.ಲವಕುಮಾರ್, ಎಂ.ಮೀನಾಕ್ಷಿ, ಮಮತಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸುಸಜ್ಜಿತವಾದ ಪೊಲೀಸ್ ಠಾಣೆ ಆಡಂಬರವಿಲ್ಲದೆ ಉದ್ಘಾಟನೆ

0

ಸುಸಜ್ಜಿತವಾದ ಪೊಲೀಸ್ ಠಾಣೆ ಕಟ್ಟಡವನ್ನು ಶುಕ್ರವಾರ ಯಾವುದೇ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳದೇ ಉದ್ಘಾಟಿಸಲಾಗಿದೆ. ಪೂಜೆ, ಹೋಮ, ಹೂಗಳ ಅಲಂಕಾರವಿಲ್ಲದೆಯೇ ಉದ್ಘಾಟನೆಗೊಂಡ ಹೊಸ ಕಟ್ಟಡದಲ್ಲಿ ಕಾರ್ಯನಿರ್ವಸುವ ಭಾಗ್ಯ ಪೊಲೀಸರದ್ದಾಗಲಿದೆ.
ನಗರದ ದಿಬ್ಬೂರಹಳ್ಳಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ಇರುವ ಪೊಲೀಸ್ ವಸತಿ ಗೃಹಗಳ ಆವರಣದಲ್ಲಿಯೆ ಹೊಸ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣ ಕಾರ್ಯ ನಡೆದಿದ್ದು ಅಲ್ಲಿಗೆ ಪೊಲೀಸ್ ಠಾಣೆ ಸ್ಥಳಾಂತರವಾಗಲಿದೆ.
ಪೊಲೀಸ್ ವಸತಿ ಗೃಹ ನಿರ್ಮಾಣ ಮಂಡಳಿಯಿಂದ 90 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಒಂದಸ್ತಿನ ಸುಸಜ್ಜಿತ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣವಾಗಿದ್ದು, ಆ ಕಟ್ಟಡದಲ್ಲಿ ಗ್ರಾಮಾಂತರ ಠಾಣೆಯು ಕಾರ್ಯನಿರ್ವಹಿಸಲಿದೆ.
‘ಹೊಸ ಪೊಲೀಸ್ ಠಾಣೆ ಕಟ್ಟಡವನ್ನು ಜಿಲ್ಲಾ ಕೇಂದ್ರದಲ್ಲಿ ಶಕ್ರವಾರ ಗೃಹಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಿದರು. ಅಲ್ಲಿಗೆ ಗ್ರಾಮಾಂತರ ಪೊಲೀಸ್ ಠಾಣೆ ಸ್ಥಳಾಂತರವಾಗಲಿದೆ. ಈ ಸುಸಜ್ಜಿತ ಕಟ್ಟಡದಲ್ಲಿ ದೊಡ್ಡ ಹಾಲ್, ಎರಡು ಲಾಕಪ್, ಆಯುಧಗಳಿಗೆ ಕೊಠಡಿ, ಕಂಪ್ಯೂಟರ್ ಕೊಠಡಿ, ರೈಟರ್ಗೆ ಕೊಠಡಿ, ಸಬ್ಇನ್ಸ್ಪೆಕ್ಟರ್ ಹಾಗೂ ಕ್ರೈಂ ಸಬ್ಇನ್ಸ್ಪೆಕ್ಟರ್ಗೆ ಕೊಠಡಿಗಳಿವೆ. ಶೌಚಾಲಗಗಳಿವೆ. ಮಹಡಿಯ ಮೇಲೆ ಎರಡು ರೆಸ್ಟ್ ರೂಮ್ಗಳು ಸಹ ಇವೆ. ಪೊಲೀಸರಿಗೆ ಹಾಗೂ ಠಾಣೆಗೆ ಕೆಲಸ ಕಾರ್ಯ, ಪ್ರಕರಣಗಳ ಸಂಬಂಧ ಬರುವ ನಾಗರಿಕರಿಗೂ ಮೂಲ ಸೌಲಭ್ಯಗಳು ಇಲ್ಲಿ ಸಿಗಲಿವೆ’ ಎಂದು ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ ತಿಳಿಸಿದರು.

ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಪ್ರಥಮರು

0

ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈಚೆಗೆ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಗುಂಪು ಆಟಗಳಾದ ಕಬಡ್ಡಿ ಹಾಗೂ ಖೋಖೋ ಆಟಗಳಲ್ಲಿ ಬಾಲಕಿಯರು ಪ್ರಥಮ ಹಾಗೂ ಬಾಲಕರ ಖೋಖೋ ಪ್ರಥಮ ಸ್ಥಾನ ಗಳಿಸಿದ್ದಾರೆ.
ವೈಯಕ್ತಿಕ ವಿಭಾಗ ಪ್ರಥಮರು:
ಟಿ.ಜಿ.ಲಕ್ಷ್ಮಿ : ಅಥ್ಲೆಟಿಕ್ಸ್ , ೩ಕಿ.ಮೀ ವೇಗದ ನಡಿಗೆ, ೩೦೦೦ ಮೀಟರ್ ಓಟ.
ಎಚ್.ಎಂ.ಸಿಂಧೂ: – ಚಕ್ರ ಎಸೆತ
ಎಂ.ಪಿ.ಬಾಬು: – ೧೫೦೦ ಮೀ ಮತ್ತು ೩೦೦೦ ಮೀ. ಓಟ.
ಟಿ.ಎಸ್.ಪವನ್ಕುಮಾರ್: – ೫ ಕಿ.ಮೀ. ವೇಗದ ನಡಿಗೆ

ಹಾಪ್ಕಾಮ್ಸ್ ನಿರ್ದೇಶಕರಾಗಿ ಆಯ್ಕೆ

0

ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದ ಎ.ಎಸ್.ಚಂದ್ರೇಗೌಡ ಅವರು 2015–20 ಸಾಲಿನ ಹಾಪ್ಕಾಮ್ಸ್ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.

ತಾಲ್ಲೂಕು ಮಟ್ಟದ 2015–16ನೇ ಸಾಲಿನ ಕ್ರೀಡಾಕೂಟದ ಫಲಿತಾಂಶ

0

ಪ್ರೌಢಶಾಲೆ ವಿಭಾಗ(ಬಾಲಕಿಯರು):
100 ಮೀಟರ್ ಓಟ: ಜೆ.ಪಿ.ಸಿಂಧೂ, ಜ್ಞಾನಜ್ಯೋತಿ ಜಂಗಮಕೋಟೆ(ಪ್ರಥಮ), ಮೇಘನಾ, ಸ.ಪ್ರೌ.ಶಾಲೆ ಚೀಮಂಗಲ(ದ್ವಿತೀಯ), ಹರ್ಷಿತಾ, ಬಿ.ಎಂ.ವಿ.ಶಾಲೆ ಭಕ್ತರಹಳ್ಳಿ(ತೃತೀಯ)
200 ಮೀಟರ್ ಓಟ: ಜೆ.ಪಿ.ಸಿಂಧೂ, ಜ್ಞಾನಜ್ಯೋತಿ ಜಂಗಮಕೋಟೆ(ಪ್ರಥಮ), ಲಾವಣ್ಯ, ಜ್ಞಾನಜ್ಯೋತಿ ಜಂಗಮಕೋಟೆ(ದ್ವಿತೀಯ), ಅರ್ಚನಾ, ಸ.ಪ್ರೌ.ಶಾಲೆ ದ್ಯಾವಪ್ಪನಗುಡಿ(ತೃತೀಯ)
800 ಮೀಟರ್ ಓಟ: ಸೌಮ್ಯ, ಸ.ಪ್ರೌ.ಶಾಲೆ ಪಲಿಚೆರ್ಲು(ಪ್ರಥಮ), ಭವಾನಿ, ಸ.ಪ್ರೌ.ಶಾಲೆ ಚೀಮಂಗಲ, ಅನಿತಾ, ಸ.ಪ್ರೌ.ಶಾಲೆ ದ್ಯಾವಪ್ಪನಗುಡಿ(ತೃತೀಯ)
400 ಮೀಟರ್ ಓಟ: ಸೌಮ್ಯ, ಸ.ಪ್ರೌ.ಶಾಲೆ ಪಲಿಚೆರ್ಲು(ಪ್ರಥಮ), ಸಿ.ಎನ್.ಮಂಜುಳ, ಸ.ಪ್ರೌ.ಶಾಲೆ ಆನೆಮಡುಗು(ದ್ವಿತೀಯ), ಶಶಿಕಲಾ, ಸ.ಪ್ರೌ.ಶಾಲೆ ತುಮ್ಮನಹಳ್ಳಿ(ತೃತೀಯ)
1,500 ಮೀಟರ್ ಓಟ: ಸುವರ್ಣ, ಸ.ಪ್ರೌ.ಶಾಲೆ ದ್ಯಾವಪ್ಪನಗುಡಿ(ಪ್ರಥಮ), ಎಚ್.ಕೆ.ಶಿಲ್ಪ, ಸ.ಪ್ರೌ.ಶಾಲೆ ತುಮ್ಮನಹಳ್ಳಿ(ದ್ವಿತೀಯ), ಎಂ.ಚಂದನಾ, ನವೋದಯ ನಡಿಪಿನಾಯಕನಹಳ್ಳಿ(ತೃತೀಯ)
3,000 ಮೀಟರ್ ಓಟ: ಲಕ್ಷ್ಮೀ, ಸ.ಪ್ರೌ.ಶಾಲೆ ತುಮ್ಮನಹಳ್ಳಿ(ಪ್ರಥಮ), ಶಿಲ್ಪ, ಸ.ಪ್ರೌ.ಶಾಲೆ ತುಮ್ಮನಹಳ್ಳಿ(ದ್ವಿತೀಯ), ಚಂದನಾ, ನವೋದಯ ನಡಿಪಿನಾಯಕನಹಳ್ಳಿ(ತೃತೀಯ)
ತ್ರಿವಿಧ ಜಿಗಿತ: ಎಂ.ಎ.ಬಾಂಧವ್ಯ, ಸ.ಪ್ರೌ.ಶಾಲೆ ಮಳಮಾಚನಹಳ್ಳಿ(ಪ್ರಥಮ), ಜಿ.ಎಸ್.ಮಂಜುಳಾ, ಸ.ಪ್ರೌ.ಶಾಲೆ ಗಂಜಿಗುಂಟೆ(ದ್ವಿತೀಯ), ನಾಗಮಣಿ, ಸ.ಪ್ರೌ.ಶಾಲೆ ದ್ಯಾವಪ್ಪನಗುಡಿ(ತೃತೀಯ)
ಗುಂಡು ಎಸೆತ: ಜಿ.ಎಂ.ದಿವ್ಯಾ, ಸ.ಪ್ರೌ.ಶಾಲೆ ಶಿಡ್ಲಘಟ್ಟ(ಪ್ರಥಮ), ಎಸ್.ಎನ್.ಮೌನಿಕ, ಎಸ್.ಎಂ.ಇ ದಿಬ್ಬೂರಹಳ್ಳಿ(ದ್ವಿತೀಯ), ವಿ.ಭವಾನಿ, ಸ.ಪ್ರೌ.ಶಾಲೆ ಜಂಗಮಕೋಟೆ(ತೃತೀಯ)
ಚಕ್ರ ಎಸೆತ: ಜಿ.ಎಂ.ದಿವ್ಯಾ, ಸ.ಪ್ರೌ.ಶಾಲೆ ಶಿಡ್ಲಘಟ್ಟ(ಪ್ರಥಮ), ಎಚ್.ಎಂ.ಸಿಂಧೂ, ಸ.ಪ್ರೌ.ಶಾಲೆ ತುಮ್ಮನಹಳ್ಳಿ(ದ್ವಿತೀಯ), ಕಲ್ಪನಾ, ಸ.ಪ್ರೌ.ಶಾಲೆ ಗಂಜಿಗುಂಟೆ(ತೃತೀಯ)
ಉದ್ದಜಿಗಿತ: ಆರ್.ಮೇಘನಾ, ಸ.ಪ್ರೌ.ಶಾಲೆ ಚೀಮಂಗಲ(ಪ್ರಥಮ), ಎಚ್.ಎಂ.ಮೀನಾ, ಸ.ಪ್ರೌ.ಶಾಲೆ ತುಮ್ಮನಹಳ್ಳಿ(ದ್ವಿತೀಯ), ಮಾನಸ, ಸ.ಪ್ರೌ.ಶಾಲೆ ಬಶೆಟ್ಟಹಳ್ಳಿ(ತೃತೀಯ)
ಎತ್ತರಜಿಗಿತ: ಎಂ.ಎ.ಬಾಂಧವ್ಯ, ಸ.ಪ್ರೌ.ಶಾಲೆ ಮಳಮಾಚನಹಳ್ಳಿ(ಪ್ರಥಮ), ಎಂ.ಗೌತಮಿ, ಸ.ಪ್ರೌ.ಶಾಲೆ ಮಳಮಾಚನಹಳ್ಳಿ(ದ್ವಿತೀಯ), ಎಚ್.ಎಂ.ಚಂದನಾ, ನವೋದಯ ನಡಿಪಿನಾಯಕನಹಳ್ಳಿ(ತೃತೀಯ)
ಜಾವಲಿನ್: ವಿ.ಭವಾನಿ, ಸ.ಪ್ರೌ.ಶಾಲೆ ಜಂಗಮಕೋಟೆ(ಪ್ರಥಮ), ಭಾವನಾ, ಸ.ಪ್ರೌ.ಶಾಲೆ ಮಳಮಾಚನಹಳ್ಳಿ(ದ್ವಿತೀಯ), ಅನುಷಾ, ಸ.ಪ್ರೌ.ಶಾಲೆ ಚೀಮಂಗಲ(ತೃತೀಯ)
400 ಮೀಟರ್ ರಿಲೇ: ಮೇಘನಾ ಮತ್ತು ತಂಡ, ಸ.ಪ್ರೌ.ಶಾಲೆ ಚೀಮಂಗಲ(ಪ್ರಥಮ), ಮಮತಾ ಮತ್ತು ತಂಡ, ಸ.ಪ್ರೌ.ಶಾಲೆ ಆನೆಮಡುಗು(ದ್ವಿತೀಯ)
3 ಕಿಮೀ ನಡಿಗೆ: ಟಿ.ಜಿ.ಲಕ್ಷ್ಮೀ, ಸ.ಪ್ರೌ.ಶಾಲೆ ತುಮ್ಮನಹಳ್ಳಿ(ಪ್ರಥಮ), ವಿನುತಾ, ಯೂನಿವರ್ಸಲ್ ಪಬ್ಲಿಕ್ ಶಾಲೆ(ದ್ವಿತೀಯ), ಪ್ರತಿಭಾ, ಜ್ಞಾನಜ್ಯೋತಿ ಜಂಗಮಕೋಟೆ(ತೃತೀಯ)
ಪ್ರೌಢಶಾಲೆ ವಿಭಾಗ(ಬಾಲಕರು):
100 ಮೀಟರ್ ಓಟ: ಭಾನುಚಂದರ್, ರಾಯಲ್ಪಬ್ಲಿಕ್ ಶಾಲೆ(ಪ್ರಥಮ), ಎಸ್.ಅನಿಲ್, ಸರಸ್ವತಿ ಶಾಲೆ(ದ್ವಿತೀಯ), ಮನೋಜ್ಕುಮಾರ್, ಎಸ್.ವಿ.ಎಚ್.ಎಸ್ ದಿಬ್ಬೂರಹಳ್ಳಿ(ತೃತೀಯ)
200 ಮೀಟರ್ ಓಟ: ಭಾನುಚಂದರ್, ರಾಯಲ್ಪಬ್ಲಿಕ್ ಶಾಲೆ(ಪ್ರಥಮ), ಶ್ರೀಹರಿ, ಡಾಲ್ಫಿನ್ ಶಾಲೆ(ದ್ವಿತೀಯ), ಜಿ.ವಿ.ಗಿರೀಶ್, ಸ.ಪ್ರೌ.ಶಾಲೆ ದ್ಯಾವಪ್ಪನಗುಡಿ(ತೃತೀಯ)
800 ಮೀಟರ್ ಓಟ: ಜಿ.ಮಧು, ಶಾರದಾ ವಿದ್ಯಾಸಂಸ್ಥೆ(ಪ್ರಥಮ), ರವಿಕುಮಾರ್, ಸ.ಪ್ರೌ.ಶಾಲೆ ಪಲಿಚೆರ್ಲು(ದ್ವಿತೀಯ), ಎಸ್.ವಿ.ಮಂಜುನಾಥ, ಸ.ಪ್ರೌ.ಶಾಲೆ ದಿಬ್ಬೂರಹಳ್ಳಿ(ತೃತೀಯ)
400 ಮೀಟರ್ ಓಟ: ಮಾದೇಶ, ಸರಸ್ವತಿ ಶಾಲೆ(ಪ್ರಥಮ), ದಿಲೀಪ್, ಬಿ.ಜಿ.ಎಸ್ ಶಿಡ್ಲಘಟ್ಟ(ದ್ವಿತೀಯ), ತನೋಜ್ಗೌಡ, ನವೋದಯ ಶಾಲೆ(ತೃತೀಯ)
1,500 ಮೀಟರ್ ಓಟ: ಎಂ.ಪಿ.ಬಾಬು, ಸ.ಪ್ರೌ.ಶಾಲೆ ತುಮ್ಮನಹಳ್ಳಿ(ಪ್ರಥಮ), ಎಸ್.ಗೋಪಿ, ಸುಮುಖ(ದ್ವಿತೀಯ), ಆರ್.ಕಾಂತರಾಜು, ಸುಮುಖ(ತೃತೀಯ)
3,000 ಮೀಟರ್ ಓಟ: ಬಾಬು, ಸ.ಪ್ರೌ.ಶಾಲೆ ತುಮ್ಮನಹಳ್ಳಿ(ಪ್ರಥಮ), ಎಸ್.ಗೋಪಿ, ಸುಮುಖ(ದ್ವಿತೀಯ), ಆರ್.ಕಾಂತರಾಜು, ಸುಮುಖ(ತೃತೀಯ)
ಗುಂಡು ಎಸೆತ: ಶ್ರೀಪಾದ್ ಗಣೇಶ್, ವಾಸವಿ ಶಿಡ್ಲಘಟ್ಟ(ಪ್ರಥಮ), ಅಜಯ್, ಸ.ಪ್ರೌ.ಶಾಲೆ ಮೇಲೂರು(ದ್ವಿತೀಯ), ಆದಿಕೇಶವ, ಜೇಸೀಸ್ ಮೇಲೂರು(ತೃತೀಯ)
ಚಕ್ರ ಎಸೆತ: ಅಕ್ಷಯ್ಕುಮಾರ್, ನವೋದಯ(ಪ್ರಥಮ), ಎಸ್.ವೇಣು, ಸರಸ್ವತಿ ಶಾಲೆ(ದ್ವಿತೀಯ), ಅನಿಲ್, ಎಸ್.ಎಂ.ಇ.ದಿಬ್ಬೂರಹಳ್ಳಿ(ತೃತೀಯ)
ಜಾವಲಿನ್: ಧನಂಜಯ, ಸ.ಪ್ರೌ.ಶಾಲೆ ಜಂಗಮಕೋಟೆ(ಪ್ರಥಮ), ಶಶಿಕುಮಾರ್, ಸ.ಪ್ರೌ.ಶಾಲೆ ದ್ಯಾವಪ್ಪನಗುಡಿ(ದ್ವಿತೀಯ), ಎಸ್.ವೇಣು, ಸರಸ್ವತಿ ಶಾಲೆ(ತೃತೀಯ)
ಉದ್ದಜಿಗಿತ: ಎಸ್.ದಿಲೀಪ್, ಬಿ.ಜಿ.ಎಸ್ ಶಿಡ್ಲಘಟ್ಟ(ಪ್ರಥಮ), ಜಿ.ಮಧು,ಶಾರದಾ ಶಾಲೆ(ದ್ವಿತೀಯ), ಎಸ್.ಮಾದೇಶ, ಸರಸ್ವತಿ ಶಾಲೆ(ತೃತೀಯ)
ಎತ್ತರ ಜಿಗಿತ: ವೈ.ಮನೋಜ್ ಕುಮಾರ್, ಎಸ್.ವಿ.ಎಚ್.ಎಸ್ ದಿಬ್ಬೂರಹಳ್ಳಿ(ಪ್ರಥಮ), ಜಿ.ವಿ.ಗಿರೀಶ್, ಸ.ಪ್ರೌ.ಶಾಲೆ ದ್ಯಾವಪ್ಪನಗುಡಿ(ದ್ವಿತೀಯ), ವಿ.ಪಿ.ಸಂಜಯ್, ಸ.ಪ್ರೌ.ಶಾಲೆ ಸಾದಲಿ(ತೃತೀಯ)
ತ್ರಿವಿಧ ಜಿಗಿತ: ಎಸ್.ಪವನ್, ಎಂ.ಡಿ.ಆರ್.ಎಸ್ 11ನೇ ಮೈಲು(ಪ್ರಥಮ), ಹೇಮಂತ್ರೆಡ್ಡಿ, ನವೋದಯ ಶಾಲೆ(ದ್ವಿತೀಯ), ಎಂ.ವಿ.ಹರಿಪ್ರಸಾದ್, ಸ.ಪ್ರೌ.ಶಾಲೆ ಮಳಮಾಚನಹಳ್ಳಿ(ತೃತೀಯ)
400 ಮೀಟರ್ ರಿಲೇ: ಅನಿಲ್ ಮತ್ತು ತಂಡ, ಸರಸ್ವತಿ ಶಾಲೆ(ಪ್ರಥಮ), ತನುಜ್ ಗೌಡ ಮತ್ತು ತಂಡ, ನವೋದಯ ನಡಿಪಿನಾಯಕನಹಳ್ಳಿ(ದ್ವಿತೀಯ)
5 ಕಿಮೀ ನಡಿಗೆ: ಪವನ್ಕುಮಾರ್, ಸ.ಪ್ರೌ.ಶಾಲೆ ತುಮ್ಮನಹಳ್ಳಿ(ಪ್ರಥಮ), ಆರ್.ದಿಲೀಪ್ಕುಮಾರ್, ಸ.ಪ್ರೌ.ಶಾಲೆ ಚೀಮಂಗಲ(ದ್ವಿತೀಯ), ಲೇಖನ್, ನವೋದಯ ನಡಿಪಿನಾಯಕನಹಳ್ಳಿ(ತೃತೀಯ)
ಪ್ರಾಥಮಿಕ ಶಾಲಾ ವಿಭಾಗ(ಬಾಲಕರು):
100 ಮೀಟರ್ ಓಟ: ಬಾಸ್ಕರ್, ಜ್ಞಾನಜ್ಯೋತಿ(ಪ್ರಥಮ), ಮುತ್ತುರಾಜು, ಜಂಗಮಕೋಟೆ ತೋಟಗಳು(ದ್ವಿತೀಯ), ಪವನ್ಕುಮಾರ್, ವಾಸವಿ(ತೃತೀಯ)
200 ಮೀಟರ್ ಓಟ: ಮುಖೇಶ್, ವಾಸವಿ(ಪ್ರಥಮ), ಎಂ.ಡಿ.ಗಿರೀಶ್, ತುಮ್ಮನಹಳ್ಳಿ(ದ್ವಿತೀಯ), ಪವನ್ಕುಮಾರ್, ವಾಸವಿ(ತೃತೀಯ)
400 ಮೀಟರ್ ಓಟ: ಮೋಹನ್, ಡಾಲ್ಫಿನ್(ಪ್ರಥಮ), ಕಿರಣ್, ಸ.ಹಿ.ಪ್ರಾ.ಶಾಲೆ ತುಮ್ಮನಹಳ್ಳಿ(ದ್ವಿತೀಯ), ಶ್ರೇಯಸ್, ಜ್ಞಾನಜ್ಯೋತಿ(ತೃತೀಯ)
600 ಮೀಟರ್ ಓಟ: ಎಂ.ಡಿ.ಗಿರೀಶ್, ಸ.ಹಿ.ಪ್ರಾ.ಶಾಲೆ ತುಮ್ಮನಹಳ್ಳಿ(ಪ್ರಥಮ), ರಂಜಿತ್, ಜ್ಞಾನಜ್ಯೋತಿ ಜಂಗಮಕೋಟೆ(ದ್ವಿತೀಯ), ಕೆ.ಎಂ.ಅಭಿಜಿತ್, ಡಾಲ್ಫಿನ್(ತೃತೀಯ)
ಗುಂಡು ಎಸೆತ: ಕೆ.ಮುಖೇಶ್, ವಾಸವಿ(ಪ್ರಥಮ), ಮುತ್ತುರಾಜ್, ಸ.ಹಿ.ಪ್ರಾ.ಶಾಲೆ ತೋಟಗಳು ಜಂಗಮಕೋಟೆ(ದ್ವಿತೀಯ), ಶ್ರೀಹರಿ, ಸ್ವಾಮಿ ವಿವೇಕಾನಂದ ಮಳ್ಳೂರು(ತೃತೀಯ)
ಚಕ್ರ ಎಸೆತ: ಕೆ.ಮುಖೇಶ್, ವಾಸವಿ(ಪ್ರಥಮ), ಎ.ಎನ್.ಮನೋಜ್ಕುಮಾರ್, ಸ.ಹಿ.ಪ್ರಾ.ಶಾಲೆ ಅಬ್ಲೂಡು(ದ್ವಿತೀಯ), ವಿಜಯ್ಕುಮಾರ್, ಸುಮುಖ ಎಚ್.ಕ್ರಾಸ್(ತೃತೀಯ)
ಉದ್ದ ಜಿಗಿತ: ಅಭಿಲಾಶ್, ಸ.ಹಿ.ಪ್ರಾ.ಶಾಲೆ ಆನೆಮಡುಗು(ಪ್ರಥಮ), ಶ್ರೇಯಸ್ ಕುಮಾರ್, ಜ್ಞಾನಜ್ಯೋತಿ(ದ್ವಿತೀಯ), ಕಿರಣ್, ಕದಿರಿನಾಯಕನಹಳ್ಳಿ(ತೃತೀಯ)
ಎತ್ತರ ಜಿಗಿತ: ಮುತ್ತುರಾಜ್, ಸ.ಹಿ.ಪ್ರಾ.ಶಾಲೆ ಜಂಗಮಕೋಟೆ ತೋಟಗಳು(ಪ್ರಥಮ), ರಂಜಿತ್, ಜ್ಞಾನಜ್ಯೋತಿ(ದ್ವಿತೀಯ), ಆದಿನಾರಾಯಣ, ಸ.ಹಿ.ಪ್ರಾ.ಶಾಲೆ ಬಶೆಟ್ಟಹಳ್ಳಿ(ತೃತೀಯ)
400 ಮೀಟರ್ ರಿಲೇ: ಮುಖೇಶ್ ಮತ್ತು ತಂಡ, ವಾಸವಿ ಶಾಲೆ(ಪ್ರಥಮ), ಗಿರೀಶ್ ಮತ್ತು ತಂಡ, ತುಮ್ಮನಹಳ್ಳಿ(ದ್ವಿತೀಯ)
ಪ್ರಾಥಮಿಕ ಶಾಲಾ ವಿಭಾಗ(ಬಾಲಕಿಯರು):
100 ಮೀಟರ್ ಓಟ: ವಾಣಿ, ಸ.ಹಿ.ಪ್ರಾ.ಶಾಲೆ ತುಮ್ಮನಹಳ್ಳಿ(ಪ್ರಥಮ), ಸಾಕ್ಷಿ, ಜ್ಞಾನಜ್ಯೋತಿ(ದ್ವಿತೀಯ), ಎಸ್.ಆರ್.ಚೈತನ್ಯ, ಬಿ.ಜಿ.ಎಸ್ ಶಿಡ್ಲಘಟ್ಟ(ತೃತೀಯ)
200 ಮೀಟರ್ ಓಟ: ವಾಣಿ, ಸ.ಹಿ.ಪ್ರಾ.ಶಾಲೆ ತುಮ್ಮನಹಳ್ಳಿ(ಪ್ರಥಮ), ಮೇಘನಾ, ಜ್ಞಾನಜ್ಯೋತಿ(ದ್ವಿತೀಯ), ತೇಜಸ್ವಿನಿ, ಎಸ್.ಆರ್.ಈ.ಟಿ ಕದಿರಿನಾಯಕನಹಳ್ಳಿ(ತೃತೀಯ)
400 ಮೀಟರ್ ಓಟ: ಸೌಂದರ್ಯ, ಸ.ಹಿ.ಪ್ರಾ.ಶಾಲೆ ತುಮ್ಮನಹಳ್ಳಿ(ಪ್ರಥಮ), ಗಂಗೋತ್ರಿ, ಸ.ಹಿ.ಪ್ರಾ.ಶಾಲೆ ತುಮ್ಮನಹಳ್ಳಿ(ದ್ವಿತೀಯ), ಜೆ.ಪಿ.ಮೇಘನಾ, ಜ್ಞಾನಜ್ಯೋತಿ(ತೃತೀಯ)
600 ಮೀಟರ್ ಓಟ: ಸೌಂದರ್ಯ, ಸ.ಹಿ.ಪ್ರಾ.ಶಾಲೆ ತುಮ್ಮನಹಳ್ಳಿ(ಪ್ರಥಮ), ಎನ್.ಇಂದು, ಸ.ಹಿ.ಪ್ರಾ.ಶಾಲೆ ದಿಬ್ಬೂರಹಳ್ಳಿ(ದ್ವಿತೀಯ), ಜೆ.ಆರ್.ಸಾಕ್ಷಿ, ಜ್ಞಾನಜ್ಯೋತಿ ಜಂಗಮಕೋಟೆ(ತೃತೀಯ)
ಗುಂಡು ಎಸೆತ: ವಿ.ಮಾನಸ, ಸ್ವಾಮಿ ವಿವೇಕಾನಂದ ಮಳ್ಳೂರು(ಪ್ರಥಮ), ಬಿ.ಆರ್.ಗಾಯತ್ರಿ, ಸ.ಹಿ.ಪ್ರಾ.ಶಾಲೆ ಕೋಟಗಲ್(ದ್ವಿತೀಯ),ಬಿ.ವಿ.ಭವಾನಿ, ಸ.ಹಿ.ಪ್ರಾ.ಶಾಲೆ ಕೋಟಗಲ್(ತೃತೀಯ)
ಚಕ್ರ ಎಸೆತ: ವಿ.ಮಾನಸ, ಎಸ್.ವಿ.ಎಚ್.ಪಿ.ಎಸ್ ಮಳ್ಳೂರು(ಪ್ರಥಮ), ಭವಾನಿ, ಸ.ಹಿ.ಪ್ರಾ.ಶಾಲೆ ಕೋಟಗಲ್(ದ್ವಿತೀಯ), ಬಿಂದುಶ್ರೀ, ಸರಸ್ವತಿ ಶಾಲೆ(ತೃತೀಯ)
ಉದ್ದ ಜಿಗಿತ: ಎನ್.ವೇದಾ, ವಾಸವಿ(ಪ್ರಥಮ), ಶಾರದಾ, ಸ.ಹಿ.ಪ್ರಾ.ಶಾಲೆ ಗಂಜಿಗುಂಟೆ(ದ್ವಿತೀಯ), ಅಂಬಿಕಾ, ಸ.ಹಿ.ಪ್ರಾ.ಶಾಲೆ ಆನೆಮಡುಗು(ತೃತೀಯ)
ಎತ್ತರಜಿಗಿತ: ಜೆ.ಎಂ.ಹೇಮಾವತಿ, ಸ.ಹಿ.ಪ್ರಾ.ಶಾಲೆ ಜಂಗಮಕೋಟೆ(ಪ್ರಥಮ), ಚೈತ್ರ, ಸ.ಹಿ.ಪ್ರಾ.ಶಾಲೆ ದಿಬ್ಬೂರಹಳ್ಳಿ(ದ್ವಿತೀಯ), ರಾಜೇಶ್ವರಿ, ಸ.ಹಿ.ಪ್ರಾ.ಶಾಲೆ ತಿಮ್ಮನಾಯಕನಹಳ್ಳಿ(ತೃತೀಯ)
400 ಮೀಟರ್ ರಿಲೇ: ಸಾಕ್ಷಿ ಮತ್ತು ತಂಡ, ಜ್ಞಾನಜ್ಯೋತಿ(ಪ್ರಥಮ), ಸೌಂದರ್ಯ ಮತ್ತು ತಂಡ, ತುಮ್ಮನಹಳ್ಳಿ(ದ್ವಿತೀಯ)

ಶಾಲಾ ವಿದ್ಯಾರ್ಥಿಗಳಿಗೆ ರೇಷ್ಮೆ ಪಾಠ

0

ಮೊಟ್ಟೆಯಿಂದ ರೇಷ್ಮೆ ಗೂಡು ರೂಪುಗೊಳ್ಳುವ ವಿವಿಧ ಹಂತಗಳ ನಿರ್ವಹಣೆ ಬಲು ಸೂಕ್ಷ್ಮವಾದದ್ದು. ಹವಾಮಾನ, ಸ್ವಚ್ಛತೆ, ಗುಣಮಟ್ಟ, ಸಾವಯವ ಪದ್ಧತಿ, ಹನಿನೀರಾವರಿ, ಮಾನವ ಶ್ರಮ ಮುಂತಾದ ಕಾರ್ಯಚಟುವಟಿಕೆಗಳಿರುತ್ತವೆ ಎಂದು ಪ್ರಗತಿಪರ ರೈತ ಹಿತ್ತಲಹಳ್ಳಿಯ ಗೋಪಾಲಗೌಡ ವಿವರಿಸಿದರು.

ವಿದ್ಯಾರ್ಥಿಗಳು ರೇಷ್ಮೆ ಹುಳು ಚಂದ್ರಂಕಿಯಲ್ಲಿ ಗೂಡು ಕಟ್ಟುವುದನ್ನು ಅಚ್ಚರಿಯಿಂದ ವೀಕ್ಷಿಸಿದರು.
ವಿದ್ಯಾರ್ಥಿಗಳು ರೇಷ್ಮೆ ಹುಳು ಚಂದ್ರಂಕಿಯಲ್ಲಿ ಗೂಡು ಕಟ್ಟುವುದನ್ನು ಅಚ್ಚರಿಯಿಂದ ವೀಕ್ಷಿಸಿದರು.
ಬೆಂಗಳೂರಿನ ಕೆ.ಆರ್.ಪುರಂ ಅಮರಜ್ಯೋತಿ ಶಾಲೆಯ 108 ವಿದ್ಯಾರ್ಥಿಗಳು ಗುರುವಾರ ಹಿತ್ತಲಹಳ್ಳಿಯ ರೈತ ಗೋಪಾಲಗೌಡ ಅವರ ಹಿಪ್ಪುನೇರಳೆ ತೋಟ, ಹುಳುಮನೆಯನ್ನು ವೀಕ್ಷಿಸಿ ಅವರಿಂದ ರೇಷ್ಮೆಗೂಡು ಕಟ್ಟುವ ವಿವಿಧ ಹಂತಗಳ ಬಗ್ಗೆ ಮಾಹಿತಿ ಪಡೆದರು.
ಪ್ರಪಂಚದಲ್ಲಿ ಆಗುತ್ತಿರುವ ರೇಷ್ಮೆ ಉತ್ಪಾದನೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ. ದೇಶದಲ್ಲಿ ಉತ್ಪನ್ನವಾಗುವ ರೇಷ್ಮೆಯಲ್ಲಿ, ಕರ್ನಾಟಕದ ಕೊಡುಗೆ ಶೇಕಡಾ ೬೦ರಷ್ಟು ಇದೆ. ಹಿಪ್ಪುನೇರಳೆ ಬೇಸಾಯ ಮತ್ತು ಇದನ್ನು ಅವಲಂಬಿಸಿರುವ ಕೈಗಾರಿಕೆ ಹೆಚ್ಚು ಶ್ರಮದಾಯಕ, ವಿವಿಧ ಹಂತಗಳುಳ್ಳ ಒಂದು ಉದ್ಯಮ. ವಿವಿಧ ಹಂತಗಳ ಕಾರ್ಯಚಟುವಟಿಕೆಗಳಲ್ಲಿ ಶೇಕಡಾ ೬೦ರಷ್ಟು ಮಹಿಳೆಯರು ಭಾಗವಹಿಸುತ್ತಾರೆ ಎಂದು ವಿವರಿಸಿ ಚಾಕಿ ಹಂತದಿಂದ ಗೂಡಿನ ನಿರ್ಮಾಣದವರೆಗೂ ವಿವರಿಸಿದರು.
‘ಮಕ್ಕಳು ಪಠ್ಯದಲ್ಲಿ ಪುಸ್ತಕದಲ್ಲಿನ ಚಿತ್ರಗಳಲ್ಲಿ ಮಾತ್ರ ರೇಷ್ಮೆ ಹುಳು ಹಾಗೂ ಅದು ತಿನ್ನುವ ಹಿಪ್ಪುನೇರಳೆ ಸೊಪ್ಪನ್ನು ನೋಡಿರುತ್ತಾರೆ. ಆದರೆ ರೇಷ್ಮೆ ಹುಳು ಹಾಗೂ ಹಿಪ್ಪುನೇರಳೆ ಸೊಪ್ಪನ್ನು ಕೈಯಲ್ಲಿ ಮುಟ್ಟಿ ನೋಡಿ, ಅವುಗಳ ಜೀವನಕ್ರಮವನ್ನು ಕಣ್ಣಾರೆ ನೋಡಿದಾಗ ಮನಸ್ಸಿನಲ್ಲಿ ದಾಖಲಾಗುತ್ತದೆ. ಇದರೊಂದಿಗೆ ಮಕ್ಕಳಿಗೆ ರೈತ ಸಂಘರ್ಷ, ನೀರಿಗಾಗಿ ಹೋರಾಟ, ನೀರಿನ ಸದ್ಭಳಕೆ, ಸಾವಯವ ಮುಂತಾದ ವಿಷಯಗಳ ಬಗ್ಗೆಯೂ ತಿಳಿಸಿಕೊಟ್ಟು ಅವರನ್ನು ಮಣ್ಣಿನ ಮಕ್ಕಳ ಬಗ್ಗೆ ತಿಳುವಳಿಕೆ ಮೂಡಿಸುವುದು ನಮ್ಮ ಉದ್ದೇಶ’ ಎಂದು ಅಮರಜ್ಯೋತಿ ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ತಿಳಿಸಿದರು.
ರೇಷ್ಮೆ ಬೆಳೆಗಾರ ಹಾಗೂ ರೀಲರ್ ರಾಮಕೃಷ್ಣಪ್ಪ, ಹಿತ್ತಲಹಳ್ಳಿಯ ವೆಂಕಟೇಶ್, ಎಚ್.ಜಿ.ಪುಟ್ಟೇಗೌಡ, ಮುನಿಕೃಷ್ಣ, ಅಮರಜ್ಯೋತಿ ಶಾಲೆಯ ಶಿಕ್ಷಕರಾದ ಶಾರದಾ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತರಗತಿಯೊಳಗಿನ ಭಾಷೆ

0

ಭಾಷೆ ಶೂನ್ಯದಲ್ಲಿ ಉದ್ಭವವಾಗುವಂತಹದ್ದಲ್ಲ ಶೂನ್ಯದಲ್ಲಿ ವ್ಯವಹರಿಸುವಂತದ್ದಲ್ಲ. ಶೂನ್ಯ ಸಾಧನೆಯು ಅದರ ಉದ್ದೇಶವಲ್ಲ, ಗುರಿಯಲ್ಲ ನಮ್ಮೊಳಗೊಳಗೇ ಅಂದುಕೊಳ್ಳುವುದಕ್ಕೆ ಯಾರ ಹಂಗೂ ಇಲ್ಲ, ಅದಕ್ಕೆ ಬೇರೆ ಪ್ರಕ್ರಿಯೆಗಳೂ ಇರುವುದಿಲ್ಲ, ಹಾಗಂತ ಹೆರವರೊಂದಿಗೆ ವ್ಯವಹರಿಸುವ ಸಂದರ್ಭದಲ್ಲೆಲ್ಲ ಪರಸ್ಪರ ಪ್ರತಿಕ್ರಿಯೆ – ಪ್ರತಿಸ್ಪಂದನಗಳಿರುವುದು ನಿಜ.
ಭಾಷೆಯಿರದ ಪ್ರಪಂಚದ ಕಲ್ಪನೆಯೇ ಅಸಾಧ್ಯ. ಪ್ರಪಂಚದ ಪ್ರತಿಯೊಂದರ ಗುರುತಿಸುವಿಕೆಯೂ ಪ್ರಾರಂಭವಾಗುವುದೇ ಭಾಷೆಯ ಮೂಲಕ ಪ್ರತಿಯಂದು ಭಾವಾಭಿವ್ಯಕ್ತಿಗೂ, ಚಿಂತನೆಯ ಸಂವಹನಕ್ಕೂ ಅನಿವಾರ್ಯವಿದು. ಪ್ರತಿಯೊಂದು ಜ್ಞಾನದ ಶಾಖೆಗೂ ಅದರದ್ದೇ ಆದ ನಿರ್ದಿಷ್ಟ ಭಾಷಾ ಲೋಕವಿದೆ. ಹಾಗೇ ವೃತ್ತಿಗೆ ಭಾಷಾ ಬಳಕೆಯಲ್ಲಿ ಭಿನ್ನತೆಯೂ ಇದೆ. ಭಾಷಾ ಬಳಕೆಯ ಕ್ರಮ ಕೂಡ ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆಯಾಗಿರುತ್ತದೆ ಸ್ಥಳ, ವ್ಯಕ್ತಿ, ಸಂದರ್ಭಕ್ಕನುಗುಣವಾಗಿ ಕೂಡ ಭಾಷಾ ಬಳಕೆಯಲ್ಲಿ ವ್ಯತ್ಯಯವುಂಟಾಗುವುದನ್ನು ಗಮನಿಸಬಹುದು. ಅಂದರೆ ಭಾಷೆ ಒಟ್ಟಾರೆಯಾಗಿ ತನ್ನ ಅರ್ಥವನ್ನು ಬಿಚ್ಚಿಡುವುದು ಸಂದರ್ಭಕ್ಕೆ ಅನುಗುಣವಾಗಿಯೇ ವಿನಃ ನಿಘಂಟಿಗನುವಾಗಿಯಲ್ಲ.
ಪ್ರತಿವ್ಯಕ್ತಿಯೂ ಭಾಷೆಯನ್ನು ಬಳಸುತ್ತಾನೆ. ಆದರೆ ಬಳಸುವ ಕ್ರಮ ಬೇರೆ ಬೇರೆ ಜಾಗಯಲ್ಲಿ ಬೇರೆ ಬೇರೆ ತೆರನಾಗಿರುತ್ತದೆ. ಮನೆಯ ಒಳಗಡೆಯ ಸಂಭಾಷಣಾ ಕ್ರಮಕ್ಕೂ, ಹೊರಗಡೆಯ ಸಂಭಾಷಣಾ ಕ್ರಮಕ್ಕೂ ಸಾಕಷ್ಟು ಅಂತರವಿರುವುದನ್ನು ನಾವು ಗಮನಿಸಬಹುದು. ಅಷ್ಟೇ ಅಲ್ಲ ಅಡುಗೆಮನೆಯೊಳಗಿನ ಮಾತಿನ ಧಾಟಿಗೂ, ಜಗುಲಿಯಲ್ಲಿನ ಮಾತಿನ ಧಾಟಿಗೂ ವ್ಯತ್ಯಾಸವಿರುತ್ತದೆ. ನಾವು ನಾವೇ ಇದ್ದಾಗ ಒಂದು ಬಗೆಯಾದರೆ ಹೊರಗಿನವರು ಯಾರಾದರೂ ಬಂದು ಕುಳಿತಿದ್ದರೆ ಅದು ಇನ್ನೊಂದು ಬಗೆಯಾಗಿ ಮಾರ್ಪಡುತ್ತದೆ.
ಆಡುನುಡಿಯಿಂದ, ಗ್ರಂಥಸ್ಥದತ್ತ ತಿರುಗಿ ಬಿಡುತ್ತದೆ. ಪ್ರಜ್ಞಾ, ಪೂರ್ವಕವಾಗಲ್ಲ. ಅವೆಲ್ಲ ಸಹಜವಾಗಿಯೇ ಜರುಗುವ ಕ್ರಿಯೆ, ಇಲ್ಲಿ ಮನೆಯೊಳಗಣ ಮಾತಿಗೂ, ಹೊರ ಪ್ರಪಂಚದ ಸಮಾಜದೊಂದಿಗಿನ ಮಾತಿಗೂ ಅಂತರವಿದೆ. ನಾವು ಆ ಕ್ಷಣದಲ್ಲಿ ಏನಾಗಿದ್ದೇವೆ ಎಂಬುದರ ಮೇಲೆ ನಮ್ಮ ಮಾತು ನಿರ್ಧರಿತವಾಗುತ್ತದೆ. ಪ್ರಾಯಾಣಿಕರಾಗಿದ್ದರೆ ಒಂದು ರೀತಿ ಕಛೇರಿ ಸಿಬ್ಬಂದಿಯಾಗಿದ್ದರೆ ಇನ್ನೊಂದು ರೀತಿ ಕಛೇರಿಯ ಅಧಿಕಾರಿಯಾಗಿದ್ದಲ್ಲಿ ಒಂದು ರೀತಿ ಸಾಮಾನ್ಯ ನೌಕರನಾಗಿದ್ದಲ್ಲಿ ಇನ್ನೊಂದು ರೀತಿ ಹೇಗೆಂದರೆ ರಾಜನಾದವನು ನಮ್ಮ ಭೋಜನದ ವ್ಯವಸ್ಥೆ ಆಗಿದೆಯೇ? ಎಂದು ಪ್ರಶ್ನಿಸಿದರೆ ಸಾಮಾನ್ಯ ವ್ಯಕ್ತಿ ಅಡುಗೆ ಆಯ್ತಾ? ಅಥವಾ ಊಟಕ್ಕೆ ಆಯ್ತಾ? ಎಂದು ಕೇಳುತ್ತಾನೆ ಹೀಗೆ ಸಂದರ್ಭ ಮತ್ತು ವ್ಯಕ್ತಿಗಳ ಸ್ಥಾನ, ಮಾನಕ್ಕೆ ಹೊಂದಿಕೊಂಡಂತೆ ಭಾಷೆಯ ಬಳಕೆಯ ಕ್ರಮದಲ್ಲಿ ಏರುಪೇರಾಗುವದನ್ನು, ನಾವೇ ಗಮನಿಸಬಹುದು ರಂಗ ಪ್ರಯೋಗಗಳ ಮುಲಕವೂ ಸ್ಪಷ್ಟವಾಗಿ ಅರಿಯಲು ಅಧ್ಯಯನ ಮಾಡಲು ಸಾಧ್ಯ.
ವಸ್ತುಸ್ಥಿತಿ ಹೀಗಿರುವ ಸಂದರ್ಭದಲ್ಲಿ ಶಿಕ್ಷಕನೊಬ್ಬನ ತರಗತಿಯೊಳಗಿನ ಭಾಷೆ ಕೂಡ ಹೇಗಿದ್ದರೆ ಸೂಕ್ತವೆಂದು ತಿಳಿದುಕೊಳ್ಳುವುದು, ಆ ಕುರಿತು ಲಕ್ಷವಹಿಸುವುದು ಇಂದಿನ ಅಗತ್ಯ. ಯಾಕೆಂದರೆ ತರಗತಿಯೊಳಗಿನ ಮಾತುಗಳೇ ಬಹಳ ಬೆಲೆಯುಳ್ಳದ್ದು ಪ್ರಭಾವ ಬೀರುವಂತದ್ದು ಯಾಕೆಂದರೆ ಅಲ್ಲಿ ಒಂದೆಡೆ ಶಿಕ್ಷಕ ಇನ್ನೊಂದೆಡೆ ವಿದ್ಯಾರ್ಥಿ ಪರಸ್ಪರ ಮುಖಾಮುಖಿಯಾಗಿ ಮಾತುಗಳ ಮುಖಾಂತರ ತಿಳುವಳಿಕೆಯನ್ನು ಯಾ ಜ್ಞಾನವನ್ನು ನೀಡುವುದು ಅಥವಾ ವಿನಿಮಯ ಮಾಡಿಕೊಳ್ಳುವುದು ಜರುಗುತ್ತಿರುತ್ತದೆ. ಇದು ಒಮ್ಮುಖದ ಕ್ರಿಯೆಯಲ್ಲಿ ಒಮ್ಮುಖದ ಕ್ರಿಯೆಯಾದಲ್ಲಿ, ಒಬ್ಬನೇ ಹೇಳುತ್ತಿರುವುದು, ಉಳಿದವರು ಸುಮ್ಮನೆ ಒಪ್ಪಿಕೊಳ್ಳುತ್ತಿರುವುದು ಆದಲ್ಲಿ, ಹೇಳುವವನ ಮಾತುಗಳು ಪ್ರಶ್ನಾತೀತ ಎಂದು ಪರಿಗಣಿಸುವುದಾದರೆ ಆತ ಧಾರ್ಮಿಕ ಗುರು, Preacher ಅದೇ ಪರಸ್ಪರ ಮಾತುಗಾಳಾದರೆ, ಪ್ರಶ್ನಾಪೇಕ್ಷಿತವಾದಲ್ಲಿ ಅದಕ್ಕೆ ಅವಕಾಶವಿತ್ತೇ ವ್ಯವಹರಿಸುವ ವ್ಯಕ್ತಿಯಾದಲ್ಲಿ ಆತ ಶಿಕ್ಷಕ teacher ಹೀಗೆ ವಿದ್ಯಾರ್ಥಿಗಳಿಂದ ಪ್ರಶ್ನೆಗಳನ್ನು ಅಪೇಕ್ಷಿಸುವ, ಉತ್ತರಿಸುವ ಸಂಗತಿಗಳೆಲ್ಲ ಜರುಗುವ ಸಂದರ್ಭದಲ್ಲಿ ಬಳಸುವ ಭಾಷೆ ಸರಳ, ಶುದ್ದ ವ್ಯಾಕರಣ ಬದ್ಧ, ಪಠ್ಯದ ಶಿಸ್ತಿಗೆ ಒಳಪಟ್ಟಿದ್ದಾಗಿರಬೇಕು ಹಾಗಲ್ಲದಿದ್ದಲ್ಲಿ ತರಗತಿಯ ಘನತೆ ಕ್ಷಣಾರ್ಧದಲ್ಲಿ ಛಿದ್ರಗೊಳ್ಳಬಹುದು.
ಕನ್ನಡದ ಸಂಧರ್ಭವನ್ನೇ ಗಮನಿಸುವುದಾದರೆ, ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಬಳಸುವ ಕನ್ನಡದ ಕ್ರಮ ಬೇರೆ ಬೇರೆಯಾಗಿದ್ದಾಗ್ಯೂ, ತರಗತಿಯೊಳಗೆ ಸಾಮಾನ್ಯವಾಗಿ ಏಕಪ್ರಕಾರವಾದ ಗ್ರಂಥಸ್ಥವಾದ ಭಾಷಾ ಬಳಕೆಯಿರುವುದು ಅನಿವಾರ್ಯ. ಯಾಕೆಂದರೆ ಎಲ್ಲಾ ಭಾಗದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳಲ್ಲೂ ಏಕರೂಪದ ಶಿಸ್ತುಬದ್ಧ ಭಾಷಾ ಬಳಕೆಯನ್ನು ಮೌಲ್ಯಮಾಪಕರು ನಿರೀಕ್ಷಿಸುತ್ತಾರೆ. ಅಲ್ಲಿ ತಮ್ಮ ತಮ್ಮ ಜಾಗೆಯದೆಂದು, ಭಾಷಾ ಬಳಕೆ ನಡೆದರೆ ಹೊರಗಿನವರಿಂದ ಶ್ಯೂನ್ಯಸಂಪಾದನೆ ಸಾಧ್ಯವಾಗಿಬಿಡಬಹುದು.
ಇಂಗ್ಲೀಷ್‍ನಲ್ಲಿದ್ದಂತೆ ಕನ್ನಡದಲ್ಲಿ Received pronounciation ಪದ್ದತಿ ಇಲ್ಲ ನಿಜ. ಆದರೆ ಆಕಾಶವಾಣಿಯ ವಾರ್ತೆ ಮತ್ತು ಪ್ರದೇಶ ಸಮಾಚಾರದ ಓದು ಕಾಲಕಾಲಕ್ಕೆ ಸಾಣೆ ಹಿಡಿಯಲ್ಪಡುತ್ತದೆ ಒಂದು ನಿರ್ದಿಷ್ಠ, ಸ್ಪಷ್ಟ ಭಾಷಾ ಪ್ರಯೋಗವನ್ನು ನೀಡಲು ಸಾಧ್ಯ ತರಗತಿಯೊಳಗೆ ಭಾಷೆ ಹಾಗೆ ಸ್ಪಷ್ಟವಾಗಿರಬೇಕಾದದ್ದು ಅಪೇಕ್ಷಣಿಯ. ಯಾವುದೇ ವಿಷಯದ ಮೇಲಾಗಲಿ, ಮಾತನಾಡುವ ಸಂದರ್ಭದಲ್ಲಿ ಒಂದು ಹಂತದ ಭಾಷಾಪ್ರೌಢಿಮೆ ಅಗತ್ಯ ಇಂಥ ಭಾಷಾ ಪ್ರೌಢಿಮೆ ತರಗತಿಯಿಂದ ತರಗತಿಗೆ ಏರುತ್ತಾ ಸಾಗಬೇಕು. ಜ್ಞಾನದ ಮಟ್ಟ ಅಧಿಕವಾಗುತ್ತಾ ಸಾಗಿದಂತೆ, ಭಾಷಾ ಬಳಕೆಯ ಗುಣಮಟ್ಟವೂ ಸುಧಾರಿಸುತ್ತಾ ಸಾಗಬೇಕು. ಶಿಕ್ಷಕನ ಜ್ಞ್ಞಾನದ ಮೊದಲ ಅಳತೆಗೋಲೇ ಆತನ ಭಾಷಾ ಬಳಕೆಯಿಂದ ಪ್ರಾರಂಭವಾಗುತ್ತದೆ. ಹಾಗಾಗಿ ಇಲ್ಲಿನ ಭಾಷಾ ಬಳಕೆಯಲ್ಲಿ ಗೊಂದಲಕ್ಕೆ, ಅಸ್ಪಷ್ಟತೆಗೆ ಅವಕಾಶವಿಲ್ಲ. ದತ್ತ ಕಾಲಾವಕಾಶದ ಸದ್ಬಳಕೆಯಾಗಬೇಕಾದದ್ದು ಅವಶ್ಯಕ, ಅದಕ್ಕೆ ಸಾಕಷ್ಟು ಸಿದ್ಧತೆ, ಬದ್ಧತೆ ಬೇಕು. ಹಾಗಲ್ಲದಿದ್ದ ಪಕ್ಷದಲ್ಲಿ ಆಂ, ಊಂ, ಅಂತಲೋ ಠ ಅದ್ನೋಡಿ, ಇತ್ಕೋಳಿ, ಇತ್ಯಾದಿ ಪದಗಳ, ಧ್ವನಿಗಳ ಮೂಲಕವೇ ಹೊತ್ತನ್ನು ಹಾಳುಮಾಡುವುದಾಗುತ್ತದೆ. ಒಂದೇ ಶಬ್ದ, ಶಬ್ದ ಗುಚ್ಚವನ್ನು ನೂರೆಂಟು ಬಾರಿ ಒಂದೇ ತರಗತಿಯಲ್ಲಿ ಬಳಸುವುದು ಕೂಡ ಯೋಗ್ಯ ಕ್ರಮವಲ್ಲ, class, classic, classicism ಏರ್ಪಡಬೇಕು. ಇದು ಸಾಧ್ಯವಾಗುವುದು ಕಲಿಸುವ ವಸ್ತು, ಕಲಿಸುವ ವ್ಯಕ್ತಿಗೆ ಸಂಪೂರ್ಣವಾಗಿ ಜೀರ್ಣವಾದಾಗ ಮಾತ್ರ. ವಿಷಯವನ್ನು ಜೀರ್ಣಿಸಿಕೊಂಡವನು ಅದನ್ನು ಸರಳವಾಗಿ, ಸ್ಪಷ್ಟವಾಗಿ, ಅರ್ಥವಾಗುವಂತೆ ಹೇಳಲು ಸಾಧ್ಯ. ತನಗೆ ಅರ್ಥವಾಗದ್ದನ್ನು, ಬೇರೆಯವರಿಗೆ ಅರ್ಥಮಾಡಿಸುತ್ತೇನೆನ್ನುವುದು ಅಹಂಕಾರದ ಮಾತು, ಹಾಗಾಗಿ ತರಗತಿಯೊಳಗಣ ಭಾಷೆ ಪರಿಪಕ್ವವಾಗಿ ಹೊರಗಡೆ ಬರುವುದು ಒಂದು ಜ್ಞಾನದ ಜೀರ್ಣ ಕ್ರಿಯೆಯಿಂದ, ಇನ್ನೊಂದು, ಭಾಷಾ ಮಸೆತದಿಂದ. ವಿಷಯದ ಸರಳತೆ ಮತ್ತು ಸಂಕೀರ್ಣತೆ ರೂಪಗೊಳ್ಳುವುದು ನಿಜವೇ ಆದರೂ, ಅಲ್ಲಿ ಅಸ್ಪಷ್ಟತೆಗೆ ಅವಕಾಶದ ಎಚ್ಚರ ಅಗತ್ಯ.
ಭಾಷಾ ಶುದ್ಧಿಯ ಜೊತೆಗೆ ಉಚ್ಛಾರದ ಶುದ್ಧಿಯ ಕಡೆಗೂ ಗಮನವಿರಬೇಕಾಗುತ್ತದೆ. ವಿದಾರ್ಥಿಗಳು ಪ್ರತಿಯೊಂದನ್ನು ಗಮನಿಸುತ್ತಾರೆ. ತರಗತಿಯ ಪ್ರತಿಯೊಂದು ಅಂಶವೂ, ತರಗತಿಯ ಹೊರಗಡೆ ಕೂಡ ಚರ್ಚೆಗೆ ಒಳಪಡುತ್ತಿರುತ್ತದೆ. ಅಪಭ್ರಂಶ ಭಾಷಾ ಬಳಕೆ ಅವರಿಗೆ ಕಿರಿ, ಕಿರಿಯ ಜೊತೆಗೆ ತರಗತಿಯೇ ಬೇಡವೆಂಬಂತಾಗಬಹುದು. ಹಾಗಾಗಿ ‘ಧ್ವನಿ’ಯನ್ನು ಹದಗೊಳಿಸಿಕೊಂಡು, ಅಗತ್ಯ ಏರಿಳಿತಗಳೊಂದಿಗೆ ಪಾಠಮಾಡಬೇಕಲ್ಲದೆ, ಏಕತಾನತೆಯಿಂದ ಕೂಡಿದ್ದ ಪಕ್ಷದಲ್ಲಿ ಕೇಳುಗರಲ್ಲಿ ಆಸಕ್ತಿಗೆ ಬದಲಾಗಿ, ನಿದ್ದೆ ಒತ್ತರಿಸಿ ಬರುವ ಸಾಧ್ಯತೆಯೇ ಹೆಚ್ಚು.
ಮಕ್ಕಳ ಮನಸ್ಸು ತುಂಬ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಶಿಕ್ಷಕರ ಭಾಷಾ ಬಳಕೆ ಎಚ್ಚರಿಕೆಯಿಂದ ಕೂಡಿದ್ದಿರಬೇಕಾಗುತ್ತದೆ ಯಾವುದೇ ಸಂದರ್ಭದಲ್ಲೂ ತಾಳ್ಮೆಗೆಡದೆ ಇರುವುದು ಒಳ್ಳೆಯದು. ಬೇಡದ ಮಾತು, ತುಟಿಮೀರಿ ಬಂದದ್ದೇ ಆದ ಪಕ್ಷದಲ್ಲಿ ಅದರ ಪರಿಣಾಮ ಏನಾಗುತ್ತದೆ ಎಂದು ಹೇಳಲಾಗುವುದಿಲ್ಲ. ಸೂಕ್ಷ್ಮ ಮನಸ್ಸುಗಳು ಕಮರಬಹುದು, ತರಗತಿಯಲ್ಲಿ ಒಂದು ಏಟು ನೀಡಿದರೂ ಅದು ಅಷ್ಟು ಅಪರಾಧವಾಗಿರಲಿಕ್ಕಿಲ್ಲ. ಬೆನ್ನಿನ ಮೇಲಿನ ಪೆಟ್ಟು, ದೈಹಿಕ, ಅದನ್ನು ಅವರು ಮರೆಯುವುದು ಸಾದ್ಯ. ಮನಸ್ಸಿನ ಮೇಲೆ ಪೆಟ್ಟಾದರೆ ಕಷ್ಟ ಅದರಲ್ಲೂ ಸಹ, ಶಿಕ್ಷಣ ವ್ಯವಸ್ಥೆ ಇದ್ದ ಕಡೆ ಮತ್ತು ಕೇವಲ ವಿದ್ಯಾರ್ಥಿನಿಯರಷ್ಟೇ ಇದ್ದ ಕಡೆ ಆದಷ್ಟು ತೂಕದ ಮಾತು ಮತ್ತು ವರ್ತನೆ ಬಹಳ ಮುಖ್ಯ. ಶಿಕ್ಷಣ ವ್ಯವಸ್ಥೆಯೊಳಗೆ, ವಿದ್ಯಾರ್ಥಿಗಳ ಅಧ್ಯಯನಕ್ಕೆ ನಿಗದಿ ಪಡಿಸುವ ಪಠ್ಯ ಸಾಮಾನ್ಯವಾಗಿ ಮೇಲ್ಮಟ್ಟದ್ದೇ ಆಗಿರುತ್ತದೆ. ಪಠ್ಯರಚನಾ ಮಂಡಳಿ ಆ ಕುರಿತು ನಿಗಾವಹಿಸುತ್ತದೆ. (ಅಪವಾದಗಳು ಬೇರೆ) ಪ್ರಪಂಚದ ಉತ್ತಮ, ಮೇಲ್ದರ್ಜೆಯ ಪುಸ್ತಕಗಳನ್ನೇ ಅಧ್ಯಯನಕ್ಕೆ ಆಯ್ಕೆ ಮಾಡಿರುತ್ತದೆ. ಹಾಗೆ ಆಯ್ಕೆಗೆ ಯೋಗ್ಯವಾದವುಗಳನ್ನೇ ನಾವು classic ಎಂದು ಹೇಳಬಹುದು. ಹಾಗೆ ಇಟ್ಟ ಪಠ್ಯಗಳ ಘನತೆಗೆ ಮುಕ್ಕು ಬಾರದ ರೀತಿಯಲ್ಲಿ ಭಾಷಾ ಬಳಕೆ ಇರಬೇಕು. ಮನೆಯ ಮಾತು ಬೇರೆ, ತರಗತಿಯಲ್ಲಿನ ಮಾತು ಬೇರೆ. ಈ ಎಚ್ಚರ ತರಗತಿಯೊಳಗೆ ಇರದಿದ್ದಲ್ಲಿ, ಅಲ್ಲಿ ಮನೆಯ ಆಡು ನುಡಿಯನ್ನು ಅಥವಾ ಗ್ರಾಮ್ಯ ನುಡಿಗಟ್ಟನ್ನೇ ಅನಗತ್ಯವಾಗಿ ಬಳಸಿದಾಗ, ಅದಕ್ಕೆ ಒಗ್ಗಿಕೊಂಡಿರುವ ಕೆಲವರಿಗೆ ತತ್ಕಾಲದಲ್ಲಿ ಖುಷಿ ನೀಡಿದರೂ, ಉಳಿದವರಿಗೆ ಕಿರಿ, ಕಿರಿ ಆದೀತು. ಅವರು ಆ ಶಿಕ್ಷಕರನ್ನು ನೋಡುವ ದೃಷ್ಟಿಕೋನವೇ ಬದಲಾಗಲಿಕ್ಕೂ ಸಾಕು. ಹಾಗಾಗಿ ತರಗತಿಯೊಳಗಿನ ಭಾಷೇ ಪ್ರಭುದ್ಧವಾಗಿ, ಆದರೆ ಸರಳವಾಗಿ, ಶಾಸನ ಬದ್ಧವಾಗಿ [parliamentary language] ಆದರೆ ಕ್ಲಿಷ್ಟವಾಗಿರದೆ, ಶಿಕ್ಷಕನ ಪಂಗಡ, ಒಳಪಂಗಡಗಳ ಆಡು ನುಡಿಗಳನ್ನು ಮೀರಿ, ಜಾತ್ಯಾತೀತವಾದ ಸರ್ವರಿಗೂ ಸಲ್ಲಬಹುದಾದ ಹದವಾದ ಭಾಷೇಯ ಪ್ರಯೋಗ ಹೆಚ್ಚು ಪ್ರಯೋಜನಾಕಾರಿಯಾದೀತು.
ರವೀಂದ್ರ ಭಟ್ ಕುಳಿಬೀಡು

ಕನ್ನಮಂಗಲ ದೇವರಾಜ್ ಅವರಿಗೆ ರಾಜ್ಯಪ್ರಶಸ್ತಿ

0

ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಂ.ದೇವರಾಜ್ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಳೆದ 25 ವರ್ಷಗಳಿಂದ ಹೊಸ ಬಗೆಯ ಶಿಕ್ಷಣದ ಕೈಂಕರ್ಯವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿರುವ ಇವರು ಸ್ವಗ್ರಾಮ ಕಾಚಹಳ್ಳಿಯಾದರೂ ತಾಲ್ಲೂಕಿನಾದ್ಯಂತ ಕನ್ನಮಂಗಲ ದೇವರಾಜ್ ಎಂದೇ ಹೆಸರಾಗಿದ್ದಾರೆ. ಸುಮಾರು 20 ವರ್ಷಗಳ ಕಾಲ ತಮ್ಮ ಕರ್ಮಭೂಮಿಯಂತೆ ತಾಲ್ಲೂಕಿನ ಕನ್ನಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು.
ಶಾಲೆಯಲ್ಲಿ ಗಮನವಿಟ್ಟು ಕಲಿಯದ, ಹೋಮ್ ವರ್ಕ್ ಮಾಡಿಕೊಂಡು ಬರದ, ಪರೀಕ್ಷೆಯಲ್ಲಿ ಸಾಕಷ್ಟು ಅಂಕ ಗಳಿಸದ ವಿದ್ಯಾರ್ಥಿಗೂ ಕ್ರಿಯಾಶೀಲತೆಯಿಂದ ಅವರಿಂದಲೂ ಸಂವೇದನಾಶೀಲ ಆಪ್ತ ಬರಹಗಳನ್ನು ಬರೆಸಿದರು. ತಮ್ಮ ಪರಿಸರದಲ್ಲಿ ಕಂಡುದರ ಬಗ್ಗೆ ಮಕ್ಕಳು ಬರೆಯತೊಡಗಿದರು. ಈಗಲೂ ಬರೆಯುತ್ತಲೇ ಇದ್ದಾರೆ.

ಶಿಕ್ಷಕ ಎಂ.ದೇವರಾಜ್ ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಅವರೊಂದಿಗೆ.
ಶಿಕ್ಷಕ ಎಂ.ದೇವರಾಜ್ ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಅವರೊಂದಿಗೆ.
ಎಂ.ದೇವರಾಜ್ ಅವರು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಕೆಲಸ ಮಾಡಿದರು. ಕನ್ನಮಂಗಲಕ್ಕೆ ಪತ್ರಿಕೆಗಳು ಬರುವುದಿಲ್ಲ. ತಮ್ಮ ಮನೆಗೆ ತರಿಸುವ ‘ಪ್ರಜಾವಾಣಿ’ ಪತ್ರಿಕೆಯನ್ನೇ ಶಾಲೆಗೆ ತೆಗೆದುಕೊಂಡು ಹೋಗಿ ಮಕ್ಕಳಿಗೆ ಓದಲು ಕೊಡುತ್ತಿದ್ದರು. ಮುಖಪುಟದ ಮುಖ್ಯಸುದ್ದಿಗಳು ಮಾತ್ರವಲ್ಲದೇ ಅಂಕಣಗಳು, ಸುಭಾಷಿತ, ಕರುಣಾಳು ಬಾ ಬೆಳಕೆ, ಸಾಪ್ತಾಹಿಕ ಪುರವಣಿಯಲ್ಲಿನ ಮಕ್ಕಳ ಪುಟ, ಕರ್ನಾಟಕ ದರ್ಶನ, ಕ್ರೀಡೆ, ಶಿಕ್ಷಣ ಪುರವಣಿಯ ಲೇಖನಗಳನ್ನೆಲ್ಲ ಕತ್ತರಿಸಿ ಪುಸ್ತಕ ರೂಪದಲ್ಲಿ ತಯಾರಿಸಿದ್ದಾರೆ. ಹೊರಗಿನ ಜಗತ್ತಿಗೆ ಮಕ್ಕಳು ತೆರೆದುಕೊಳ್ಳುವ ದಾರಿಯಂತೆ ಪತ್ರಿಕೆಯ ಲೇಖನಗಳನ್ನು ಬಳಸಿಕೊಂಡಿರುವರು. ಈ ಸಂಗ್ರಹವನ್ನು ಹಲವೆಡೆ ಪ್ರದರ್ಶನ ಕೂಡ ಮಾಡಿದ್ದಾರೆ.
ಮಕ್ಕಳಿಗೆ ಸ್ವರಚಿತ ನಾಟಕಗಳನ್ನು ಕಲಿಸಿ, ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಲಿಕೆಗೆ ಪೂರಕವಾದ ಹಲವಾರು ಕಲಿಕೋಪಕರಣಗಳನ್ನು ತಯಾರಿಸಿದ್ದಾರೆ. ಶಾಲೆ ಮತ್ತು ಇಲಾಖೆಯ ವತಿಯಿಂದ ವಿವಿಧ ಸಭೆ-ಸಮಾರಂಭಗಳಿಗೆ ವಿಶೇಷ ರೀತಿಯಲ್ಲಿ ವೇದಿಕೆ ಹಾಗೂ ಉದ್ಘಾಟನಾ ಜ್ಯೋತಿಯನ್ನು ಸಿದ್ಧಗೊಳಿಸುವರು.
ಇವರಿಗೆ ೨೦೦೧–-೦೨ ನೇ ಸಾಲಿನಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿಯನ್ನು ಶಿಕ್ಷಣ ಇಲಾಖೆ ನೀಡಿ ಗೌರವಿಸಿದೆ. ೨೦೦೩–-೨೦೦೪ ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಕೊಡಲಾಗಿದೆ.
ಶಿಕ್ಷಕ ಎಂ.ದೇವರಾಜ್ ಸಾಹಿತಿ ದೇವನೂರು ಮಹದೇವ ಅವರೊಂದಿಗೆ
ಶಿಕ್ಷಕ ಎಂ.ದೇವರಾಜ್ ಸಾಹಿತಿ ದೇವನೂರು ಮಹದೇವ ಅವರೊಂದಿಗೆ
ಕನ್ನಮಂಗಲ ಸರ್ಕಾರಿ ಶಾಲೆಯು ಕಿರಿಯ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತೀಕರಣಗೊಂಡಾದ ನಂತರ ಇಲಾಖೆ ಮತ್ತು ವಿವಿಧ ಮೂಲಗಳಿಂದ ೨೦೦೦ ಕ್ಕೂ ಮೇಲ್ಪಟ್ಟ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಸಂಗ್ರಹಿಸಿ, ಮಕ್ಕಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಲು ಪ್ರೇರೇಪಿಸಿದ್ದಾರೆ. ಇದರಿಂದ ಪ್ರಭಾವಿತರಾದ ಅನೇಕ ಮಕ್ಕಳು ತಾವೇ ಲೇಖನಗಳನ್ನು ಬರೆಯುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ. ಇಂಥಹ ಲೇಖನಗಳನ್ನು ಒಂದೆಡೆ ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಆ ಪುಸ್ತಕಕ್ಕೆ ‘ಕಲರವ’ ಎಂದು ಹೆಸರಿಟ್ಟು, ಆ ಪುಷ್ತಕವನ್ನು ಕೋಲಾರದ ಆದಿಮ ಕೇಂದ್ರದ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಸಾಹಿತಿಗಳಾದ ಸ.ರಘುನಾಥ್ ರವರು ಲೋಕಾರ್ಪಣೆ ಮಾಡಿ ಶಾಲೆಯ ಸಾಧನೆಯನ್ನು ಮೆಚ್ಚಿದ್ದಾರೆ. ಪ್ರವಾಸ, ಹೊರಸಂಚಾರಗಳ ಮೂಲಕ ಪರಿಸರದ ಅಗಾಧತೆಯನ್ನು ಪರಿಚಯ ಮಾಡಿಸುವುದರ ಜೊತೆಗೆ, ಪರಿಸರದ ಬಗ್ಗೆ ಮಕ್ಕಳಲ್ಲಿ ಪ್ರೀತಿಯನ್ನು ಮೂಡಿಸಿದ್ದಾರೆ. ಅಷ್ಟೇ ಅಲ್ಲದೇ ಬೀಜ ನೆಡುವ ಕಾರ್ಯಕ್ರಮದಂತಹ ಅತಿ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
‘ನನ್ನ ಅದೃಷ್ಟ ಎಂದರೆ ನನ್ನೊಂದಿಗೆ ಕೆಲಸ ಮಾಡಿದ ಮತ್ತು ಮಾಡುವ ಶಾಲೆಯ ಎಲ್ಲ ಶಿಕ್ಷಕರು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಕನ್ನಮಂಗಲ ಊರಿನ ಜನ ನಮ್ಮ ಬೆನ್ನಿಗೆ ನಿಂತರು. ಊರಿನ ಯುವಕರೆಲ್ಲ ಸೇರಿಕೊಂಡು ಕಟ್ಟಿರುವ ಸ್ನೇಹ ಯುವಕರ ಸಂಘ ಸಹಾಯ ಮಾಡಿತು. ಹೀಗಾಗಿ ಮಕ್ಕಳಿಗಾಗಿ ನಾನೊಂದಿಷ್ಟು ಕೆಲಸ ಮಾಡಲು ಸಾಧ್ಯವಾಯಿತು’ ಎನ್ನುತ್ತಾರೆ ಶಿಕ್ಷಕ ಎಂ.ದೇವರಾಜ್.

ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ

0

ತಾಲ್ಲೂಕಿನಲ್ಲಿ ಬುಧವಾರ ವಿವಿಧ ಸಂಘಟನೆಗಳ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಡೆಸಿದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಸಿಯಟಿಯು ಸಂಯೋಜಿತ ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯತಿ ನೌಕರರ ಸಂಘ, ಡಿವೈಎಫ್ಐ, ರೈತ ಸಂಘ, ಸಮಾನ ಮನಸ್ಕರ ಹೋರಾಟ ಸಮಿತಿ ಮುಂತಾದ ಸಂಘಟನೆಗಳ ಮುಖಂಡರು ನಗರದಲ್ಲಿ ಬೈಕ್ ರ್ಯಾಲಿ ನಡೆಸಿದರು.

ತಾಲ್ಲೂಕಿನಾದ್ಯಂತ ಮುಷ್ಕರ ಶಾಂತಿಯುತವಾಗಿ ನಡೆದಿದ್ದು, ನಗರದಲ್ಲಿ  ಕೆ.ಎಸ್.ಆರ್.ಟಿ.ಸಿ ಬಸ್ಗೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ನಡೆದಿದೆ. ಬಸ್ನ ಮುಂದಿನ ಗಾಜು ಒಡೆದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನಾದ್ಯಂತ ಮುಷ್ಕರ ಶಾಂತಿಯುತವಾಗಿ ನಡೆದಿದ್ದು, ನಗರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಗೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ನಡೆದಿದೆ. ಬಸ್ನ ಮುಂದಿನ ಗಾಜು ಒಡೆದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೋಟೆಲ್, ಅಂಗಡಿ ಮುಂಗಟ್ಟುಗಳು, ಥಿಯೇಟರ್, ಬ್ಯಾಂಕುಗಳು, ಶಾಲಾ ಕಾಲೇಜುಗಳು ಬಂದ್ ಆದ್ದರಿಂದಾಗಿ ನಗರದ ರಸ್ತೆಗಳು ಬಿಕೋ ಎನ್ನುತ್ತಿತ್ತು.
ಶಿಡ್ಲಘಟ್ಟದಲ್ಲಿ ಬುಧವಾರ ವಿವಿಧ ಸಂಘಟನೆಗಳ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.
ಶಿಡ್ಲಘಟ್ಟದಲ್ಲಿ ಬುಧವಾರ ವಿವಿಧ ಸಂಘಟನೆಗಳ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.
ಬಸ್, ಆಟೋ ಸಂಚಾರವಿಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಬಸ್ ನಿಲ್ದಾಣದ ಬಳಿ ರಸ್ತೆ ತಡೆ ನಡೆಸಿದ ವಿವಿಧ ಸಂಘಟನೆಗಳ ಸದಸ್ಯರು ರಸ್ತೆಯಲ್ಲೇ ಅಡುಗೆ ತಯಾರಿಸಿದರು. ಖಾಸಗಿ ವಾಹನಗಳನ್ನು ಈ ಮಾರ್ಗದಲ್ಲಿ ತಡೆಯಲಾಗಿತ್ತು.
‘ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮದ್ಯಾಹ್ನ ಬಿಸಿಯೂಟ ತಯಾರಿಸುವ ಅಡುಗೆ ನೌಕರರ ಹಲವು ಸಮಸ್ಯೆಗಳನ್ನು ಕಳೆದ ಹಲವಾರು ವರ್ಷಗಳಿಂದಲೂ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ.
ಶಿಡ್ಲಘಟ್ಟ ಬಸ್ನಿಲ್ದಾಣದ ಬಳಿ ಬುಧವಾರ ವಿವಿಧ ಸಂಘಟನೆಗಳ ಸದಸ್ಯರು ರಸ್ತೆ ತಡೆ ನಡೆಸಿ ರಸ್ತೆಯಲ್ಲೇ ಅಡುಗೆ ತಯಾರಿಸಿದರು.
ಶಿಡ್ಲಘಟ್ಟ ಬಸ್ನಿಲ್ದಾಣದ ಬಳಿ ಬುಧವಾರ ವಿವಿಧ ಸಂಘಟನೆಗಳ ಸದಸ್ಯರು ರಸ್ತೆ ತಡೆ ನಡೆಸಿ ರಸ್ತೆಯಲ್ಲೇ ಅಡುಗೆ ತಯಾರಿಸಿದರು.
ಎಲ್ಲ ಗ್ರಾಮ ಪಂಚಾಯಿತಿ ನೌಕರರನ್ನು ಷರತ್ತು ಇಲ್ಲದೆ ನೇಮಕಾತಿಗೆ ಅನುಮೋದನೆ ನೀಡುವುದು ಹಾಗೂ ಈಗಾಗಲೆ ಕೆಲವು ನೌಕರರನ್ನು ಕೈಬಿಟ್ಟಿದ್ದು ಅವರನ್ನು ಪುನಃ ಸೇರಿಸಿಕೊಳ್ಳುವುದು, ನ್ಯಾಯಾಲಯದ ತೀರ್ಪಿನಂತೆ ಕನಿಷ್ಠ ವೇತನ ೧೫ ಸಾವಿರ ರೂಪಾಯಿಗಳನ್ನು ಕೊಡುವುದು. ಸಾಕಷ್ಟು ನೌಕರರಿಗೆ ವರ್ಷಗಳಿಂದಲೂ ಬಾಕಿ ವೇತನ ನೀಡಬೇಕಿದ್ದು ಕೂಡಲೆ ಬಾಕಿ ವೇತನವನ್ನು ಬಿಡುಗಡೆ ಮಾಡಬೇಕು. ಮುಂತಾದ ಹಲವು ಬೇಡಿಕೆಗಳ ಜೊತೆಗೆ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಮುಷ್ಕರ ನಡೆಸುತ್ತಿದ್ದೇವೆ’ ಎಂದು ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿಯ ನೌಕರರು ಬುಧವಾರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿಯ ನೌಕರರು ಬುಧವಾರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿದರು.
ಸಮಾನ ಮನಸ್ಕರ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಕಾರ್ಯದರ್ಶಿ ಪ್ರತೀಶ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಗ್ರಾಮ ಪಂಚಾಯತಿ ನೌಕರರ ಸಂಘದ ಅಧ್ಯಕ್ಷ ಸುದರ್ಶನ್, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅಶ್ವತ್ಥಮ್ಮ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಆಶಾ ನೌಕರರ ಸಂಘದ ಕಾರ್ಯದರ್ಶಿ ಕಲಾವತಿ, ಪುರುಷೋತ್ತಮ್, ಡಿ.ವೈ.ಎಫ್.ಐ ರಾಜ್ಯ ಮುಖಂಡ ಮುನೀಂದ್ರ, ಸುರೇಶ್, ಪಾಪಣ್ಣ ಮತ್ತಿತರರು ಪ್ರತಿಭಟನಾ ರ್ಯಾಲಿಯಲ್ಲಿ ಹಾಜರಿದ್ದರು.

ಸೈನಿಕನ ಆತ್ಮತೃಪ್ತಿ

0

ಸೇನೆಯಲ್ಲಿದ್ದು ದೇಶ ಸೇವೆ ಮಾಡುವಾಗ ಸಿಗುವ ಆತ್ಮತೃಪ್ತಿ ಬೇರೆಲ್ಲಾ ವೃತ್ತಿಗಳಿಗಿಂತ ಉನ್ನತವಾದದ್ದು ಎಂದು ತಾಲ್ಲೂಕಿನ ಮುತ್ತೂರು ಮೂಲದ ಮೇಜರ್ ಸುನಿಲ್ಕುಮಾರ್ ತಿಳಿಸಿದರು.
ತಾಲ್ಲೂಕಿನ ಮೇಲೂರು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಸಮುದಾಯ ಭವನದಲ್ಲಿ ಮಂಗಳವಾರ ‘ಭಾರತೀಯ ಸೈನ್ಯ ಮತ್ತು ನಾಗರಿಕ ಕರ್ತವ್ಯಗಳು’ ಎಂಬ ವಿಷಯದ ಕುರಿತಂತೆ ಮೇಲೂರು, ಮಳ್ಳೂರು, ಮುತ್ತೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅವರು ಪ್ರಾತ್ಯಕ್ಷಿಕೆಯ ಮೂಲಕ ನೀಡಿದ ಉಪನ್ಯಾಸದಲ್ಲಿ ಮಾತನಾಡಿದರು.
ನಮ್ಮ ದೇಶದ ಸಮಸ್ಯೆ ಬಡತನ ಅಥವಾ ನಿರುದ್ಯೋಗವಲ್ಲ, ಮೂಲಭೂತ ಕರ್ತವ್ಯಗಳನ್ನು ಪಾಲಿಸದಿರುವುದೇ ಅತಿ ದೊಡ್ಡ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳು ಉನ್ನತ ಗುರಿಯನ್ನು ಹೊಂದಬೇಕು. ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಸಾಧನೆ ಮಾಡಬೇಕು. ಇತರರಿಗೆ ಸಹಾಯ ಮಾಡುತ್ತಾ, ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವವರಿಗೆ ಆ ದೇವರೂ ಕೆಟ್ಟದ್ದು ಮಾಡುವುದಿಲ್ಲ. ದೇಶ ಸೇವೆಗಾಗಿ ಸೇನೆಯನ್ನು ಸೇರಬಯಸುವವರಿಗೆ ಗಂಡು ಹೆಣ್ಣು ಬೇಧವಿಲ್ಲದೆ ಮುಕ್ತ ಅವಕಾಶವಿದ್ದು, ಈಗಿಂದಲೇ ಅದರತ್ತ ಸಾಧನೆ ಮಾಡಲು ಪ್ರಾರಂಭಿಸಿ. ಉತ್ತಮ ನಾಗರಿಕರಾಗಿ ಜವಾಬ್ದಾರಿಯುತ ಜೀವನ ನಡೆಸುವುದು ಕೂಡ ದೇಶ ಸೇವೆಯೇ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಸೇನೆಯ ಕುರಿತಂತೆ, ಕನಸನ್ನು ಸಾಕಾರಗೊಳಿಸುವುದು, ಸಹಾಯ ಹಸ್ತ, ಪ್ರಯತ್ನಶೀಲತೆ, ನಾಯಕತ್ವ ಗುಣ ಮುಂತಾದ ವಿಷಯಗಳ ಕುರಿತಂತೆ ವೀಡಿಯೋ ಚಿತ್ರಣಗಳ ಮೂಲಕ ವಿವರಿಸಿದರು.
ತಾಲ್ಲೂಕು ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ನಮ್ಮ ನೆರೆಯ ಗ್ರಾಮದ ವ್ಯಕ್ತಿಯೊಬ್ಬರು ಸೇನೆಯ ಮೇಜರ್ ಹುದ್ದೆಯಲ್ಲಿರುವುದರಿಂದ ಅವರನ್ನು ಪರಿಚಯಿಸಿ ಮಕ್ಕಳಿಗೆ ಸೇನೆಯ ಬಗ್ಗೆ ಆಸಕ್ತಿ ಹುಟ್ಟಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.
ಮೇಲೂರಿನ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಸದಸ್ಯರು ಮುತ್ತೂರು ಮೂಲದ ಮೇಜರ್ ಸುನಿಲ್ಕುಮಾರ್ ಅವರನ್ನು ಸನ್ಮಾನಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಧರ್ಮೇಂದ್ರ, ಸುಧೀರ್, ಸುದರ್ಶನ್, ಶ್ರೀನಿವಾಸ್, ಆನಂದ್, ಶಿವ, ತಾಲ್ಲೂಕು ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಮುತ್ತೂರು ಪ್ರೌಢಶಾಲೆಯ ಮುಖ್ಯಶಿಕ್ಷಕ ಆಂಜನೇಯ, ಶಿಕ್ಷಕರಾದ ಶಿವಕುಮಾರ್ ಪಟ್ಟೇದಾರ್, ಶ್ರೀನಿವಾಸ್, ಮೇಲೂರು, ಮಳ್ಳೂರು, ಮುತ್ತೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

0

ನಗರದ ವಾಸವಿ ವಿದ್ಯಾಸಂಸ್ಥೆಯ 67 ವಿದ್ಯಾರ್ಥಿಗಳು ಹೋಬಳಿ ಮತ್ತು ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ 40 ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆದಿದ್ದಾರೆ.
ಶಾಲೆಯ ಕಾರ್ಯದರ್ಶಿ ಬದ್ರಿನಾಥ್ ಅವರು ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆರ್ಯ ವೈಶ್ಯ ಮಂಡಳಿಯಿಂದ ಟ್ರಾಕ್ಸೂಟ್ ಸಮವಸ್ತ್ರವನ್ನು ಉಚಿತವಾಗಿ ವಿತರಿಸಲಾಗುವುದೆಂದು ತಿಳಿಸಿದರು.
ಮುಖ್ಯ ಶಿಕ್ಷಕ ಗೋಪಿನಾಥ್, ಕೆ.ವಿ.ಲಕ್ಷ್ಮೀಪ್ರಸಾದ್, ಸತ್ಯನಾರಾಯಣ ಶೆಟ್ಟಿ, ದೈಹಿಕ ಶಿಕ್ಷಕ ರವಿ, ಅಮರನಾಥ್ ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.

ಜನಪರ ಹಾಗೂ ಕಾರ್ಮಿಕಪರ ರೈತರ ಹಕ್ಕೊತ್ತಾಯ

0

ಸೆಪ್ಟೆಂಬರ್ 1 ರ ಹೋರಾಟದ ದಿನದ ಪ್ರಯುಕ್ತ ಸಮಾನ ಮನಸ್ಕರ ಹೋರಾಟ ಸಮಿತಿ ಸದಸ್ಯರು ಮಂಗಳವಾರ ಜನಪರ ಹಾಗೂ ಕಾರ್ಮಿಕಪರ ರೈತರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಹೋರಾಟ ಮಾಡಬಾರದೆಂದು ಹೇಳಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ತೀರ್ಮಾನವನ್ನು ಕೈಬಿಡಬೇಕು. ಹೋರಾಟಗಾರರ ಮೇಲೆ ಸರ್ಕಾರಗಳು ಹಾಕಿರುವ ಮೊಕದ್ದಮೆಗಳನ್ನು ವಾಪಸ್ಸು ಪಡೆಯಬೇಕು. ಡಾ.ಪರಮಶಿವಯ್ಯನವರ ವರದಿ ಪ್ರಕಾರ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ತಕ್ಷಣ ಜಾರಿಗೊಳಿಸಬೇಕು. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ತಕ್ಷಣ ಮೃತರ ಕುಟುಂಬಗಳಿಗೆ ಪರಿಹಾರ ಕೊಡಬೇಕು. ರೈತರ ಕೃಷಿ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಮನ್ನಾ ಮಾಡಬೇಕು. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಜಾರಿ ಮಾಡಬೇಕು. ದ್ರಾಕ್ಷಿ, ಕೆಂಪು ಈರುಳ್ಳಿ ಮುಂತಾದ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಆಗಬೇಕು. ಚೀನಾ ರೇಷ್ಮೆ ಆಮದು ಸುಂಕವನ್ನು ಹೆಚ್ಚಿಸಬೇಕು. ಹಾಲಿನ ಬೆಲೆ ಹೆಚ್ಚಿಸಬೇಕು. ವಿದ್ಯುತ್ ಸಮಸ್ಯೆ ಸರಿಪಡಿಸಬೇಕು ಮುಂತಾದ ಬೇಡಿಕೆಗಳ ಮನವಿ ಪತ್ರವನ್ನು ಶಿರಸ್ತೆದಾರರಿಗೆ ನೀಡಿದರು.
ಸಿ.ಪಿ.ಎಂ. ಮುಖಂಡ ಕೆ.ಎಂ.ವೆಂಕಟೇಶ್, ಸಮಾನ ಮನಸ್ಕರ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಕಾರ್ಯದರ್ಶಿ ಪ್ರತೀಶ್, ಉಪಾಧ್ಯಕ್ಷ ಜಿ.ಎಸ್.ಅಕ್ರಂಪಾಷ, ಜಗದೀಶ್ಬಾಬು, ಪುರುಷೋತ್ತಮ್, ಮುನೀಂದ್ರ, ರವಿಪ್ರಕಾಶ್, ಪ್ರಕಾಶ್, ಅಸಾದ್, ಇಮ್ತಿಯಾಜ್ಪಾಷ, ಶಫೀವುಲ್ಲಾ, ಮುರಳಿ, ಮಾರಪ್ಪ, ದೇವರಾಜ್, ವೆಂಕಟಾಚಲಪತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.