ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲ್ಲೂಕಿನ ಶೇ.87.51 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಯ 1,220, ಅನುದಾನಿತ ಶಾಲೆಗಳ 869, ಅನುದಾನ ರಹಿತ ಶಾಲೆಗಳ 602 ವಿದ್ಯಾರ್ಥಿಗಳು ಸೇರಿದಂತೆ ಒಟ್ಟಾರೆ 2,691 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2,355 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂಕವನ್ನು ಜಂಗಮಕೋಟೆ ಕ್ರಾಸ್ನ ಜ್ಞಾನಜ್ಯೋತಿ ಶಾಲೆಯ ಟಿ.ಆರ್.ಬೃಂದಾ, 614(98.24%) ಪಡೆದು ಮೊದಲಿಗರಾಗಿದ್ದರೆ, ಜಂಗಮಕೋಟೆ ಕ್ರಾಸ್ನ ಜ್ಞಾನಜ್ಯೋತಿ ಶಾಲೆಯ ಜೆ.ಶ್ರೇಯಸ್ ಮತ್ತು ಮಳ್ಳೂರು ಗ್ರಾಮದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಇಂದುಶ್ರೀ 613(98.08%) ಪಡೆದು ದ್ವಿತೀಯರಾಗಿದ್ದಾರೆ. ಕ್ರೆಸೆಂಟ್ ಶಾಲೆಯ ನುಸೈಬಾ ಫರ್ಹೀನ್ 612(97.92%) ಪಡೆದು ತೃತೀಯರಾಗಿದ್ದಾರೆ.
ಶೇಕಡಾ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು:
ಸರ್ಕಾರಿ ಶಾಲೆಗಳು: ಸರ್ಕಾರಿ ಪ್ರೌಢಶಾಲೆ ಕುಂದಲಗುರ್ಕಿ, ಸರ್ಕಾರಿ ಪ್ರೌಢಶಾಲೆ ದೊಡ್ಡತೇಕಹಳ್ಳಿ, ಸರ್ಕಾರಿ ಪ್ರೌಢಶಾಲೆ ಆನೆಮಡುಗು, ಸರ್ಕಾರಿ ಪ್ರೌಢಶಾಲೆ ತುಮ್ಮನಹಳ್ಳಿ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಪುರಬೈನಹಳ್ಳಿ, ಮೊರಾರ್ಜಿ ದೇಸಾಯಿ ಶಾಲೆ ಹನ್ನೊಂದನೇ ಮೈಲಿ,.
ಅನುದಾನಿತ ಶಾಲೆ: ನವೋದಯ ಪ್ರೌಢಶಾಲೆ, ನಡಿಪಿನಾಯಕನಹಳ್ಳಿ
ಅನುದಾನರಹಿತ ಶಾಲೆಗಳು: ಶಿಡ್ಲಘಟ್ಟದ ಶಾರದಾ ಇಂಗ್ಲಿಷ್ ಪ್ರೌಢಶಾಲೆ, ವಾಸವಿ ಪ್ರೌಢಶಾಲೆ, ದಿ.ಕ್ರೆಸೆಂಟ್ ಶಾಲೆ, ಜಂಗಮಕೋಟೆ ಕ್ರಾಸ್ನ ಜ್ಞಾನಜ್ಯೋತಿ ಶಾಲೆ, ಶಿಡ್ಲಘಟ್ಟದ ಆಶಾಕಿರಣ ಅಂಧಮಕ್ಕಳ ಶಾಲೆ, ಬೂದಾಳದ ರಾಯಲ್ ಶಾಲೆ, ತುಮ್ಮನಹಳ್ಳಿಯ ಚೇತನ ಶಾಲೆ.
- ಟಿ.ಆರ್.ಬೃಂದಾ, 614(98.24%), ಜ್ಞಾನಜ್ಯೋತಿ ಶಾಲೆ, ಜಂಗಮಕೋಟೆ ಕ್ರಾಸ್.
- ಜೆ.ಶ್ರೇಯಸ್, 613(98.08%), ಜ್ಞಾನಜ್ಯೋತಿ ಶಾಲೆ, ಜಂಗಮಕೋಟೆ ಕ್ರಾಸ್.
- ಬಿ.ವಿ.ಹರ್ಷಿತಾ ಗೌಡ, 605(96.8%), ಜ್ಞಾನಜ್ಯೋತಿ ಶಾಲೆ, ಜಂಗಮಕೋಟೆ ಕ್ರಾಸ್.
- ಕೆ.ಯಶಸ್ವಿನಿ, 596(95.36%), ನವೋದಯ ಪ್ರೌಢಶಾಲೆ, ನಡಿಪಿನಾಯಕನಹಳ್ಳಿ.
- ಎನ್.ಪಿ.ಬೃಂದಾ, 595(95.20%), ನವೋದಯ ಪ್ರೌಢಶಾಲೆ, ನಡಿಪಿನಾಯಕನಹಳ್ಳಿ.
- ಟಿ.ಎಂ.ಕಲ್ಪನಾ, 595(95.20%), ನವೋದಯ ಪ್ರೌಢಶಾಲೆ, ನಡಿಪಿನಾಯಕನಹಳ್ಳಿ.
- ಎ.ಅಶ್ವತ್ಥ್, 600(96%), ಡಾಲ್ಫಿನ್ ವಿದ್ಯಾಸಂಸ್ಥೆ, ಶಿಡ್ಲಘಟ್ಟ.
- ವಿ.ಜಿ.ಭಾವನಾ, 594(95%), ಶ್ರೀಶಾರದಾ ಆಂಗ್ಲ ಪ್ರೌಢಶಾಲೆ,ಶಿಡ್ಲಘಟ್ಟ.
- ಇಂದುಶ್ರೀ, ೬೧೩ (95.20%), ನವೋದಯ ಪ್ರೌಢಶಾಲೆ, ನಡಿಪಿನಾಯಕನಹಳ್ಳಿ.
- ಹರ್ಷಿಕಾ, ೬೧೧(97.76%), ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಮಳ್ಳೂರು.
- ಸೌರವ್, ೬೦೨(96.32%), ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಮಳ್ಳೂರು.
- ಜಿ.ಕೆ.ತೇಜಸ್, ೬೦೦(96%), ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಮಳ್ಳೂರು.
- ಎಂ.ಸಂತೋಷ್ಕುಮಾರ್, ೬೦೦(96%), ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಮಳ್ಳೂರು.