19.9 C
Sidlaghatta
Sunday, July 20, 2025

ಕಪ್ಪುಬಟ್ಟೆ ಧರಿಸಿ ವಿರೋಧ

- Advertisement -
- Advertisement -

ಕನ್ನಡ ರಾಜ್ಯೋತ್ಸವದ ಸಂಧರ್ಭದಲ್ಲಿ ಕಪ್ಪುಬಟ್ಟೆಗಳನ್ನು ಧರಿಸಿಕೊಂಡು ಕನ್ನಡರಾಜ್ಯೋತ್ಸವಕ್ಕೆ ವಿರೋಧ ವ್ಯಕ್ತಪಡಿಸಿರುವ ಬೆಳಗಾವಿಯ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಅವರನ್ನು  ಗಡಿಪಾರು ಮಾಡಿ, ಮಹಾನಗರಪಾಲಿಕೆಯನ್ನು ವಿಸರ್ಜನೆ ಮಾಡಬೇಕು ಎಂದು ಒತ್ತಾಯಿಸಿ ಸಮಾನ ಮನಸ್ಕರ ಹೋರಾಟ ಸಮಿತಿಯ ಪದಾಧಿಕಾರಿಗಳು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ನಗರದ ತಾಲ್ಲೂಕು ಕಛೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿದ ಅವರು, ಕರ್ನಾಟಕ ಏಕೀಕರಣ ಆದ ನಂತರ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕೆಂದು, ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಸಾರುವಂತಹ ಸರ್ವರಲ್ಲೂ ಬಾತೃತ್ವವನ್ನು ಹಿಮ್ಮಡಿಗೊಳಿಸುವ ಉದ್ದೇಶದಿಂದ ಮಾಡುವಂತಹ ನಾಡಹಬ್ಬದಂದು ರಾಜ್ಯದಲ್ಲಿದ್ದುಕೊಂಡು ರಾಜ್ಯದ್ರೋಹದ ಕೆಲಸ ಮಾಡಿರುವ ಬೆಳಗಾವಿ ಮಹಾನಗರಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಅವರ ಕ್ರಮವನ್ನು ಸಮಿತಿ ಖಂಡಿಸುತ್ತದೆ.
ಇವರಿಗೆ ಬೆಂಬಲವಾಗಿ ನಿಂತಿರುವ ಎಂ.ಇ.ಎಸ್. ಸಂಘಟನೆಯನ್ನು ವಿಸರ್ಜನೆಗೊಳಿಸಿ ಅದರ ಅಸ್ತಿತ್ವವನ್ನು ಕೊನೆಗಾಣಿಸಬೇಕು. ರಾಜ್ಯದ ನಾಡು, ನುಡಿ, ನೆಲ, ಜಲ, ಸಂಸ್ಕøತಿಗೆ ದಕ್ಕೆಯುಂಟು ಮಾಡುವ ಯಾವುದೇ ವ್ಯಕ್ತಿಯಾಗಲಿ ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅಂತಹವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಪತ್ರವನ್ನು ಸ್ವೀಕರಿಸಿದ ಶಿರಸ್ತೆದಾರ್ ನರೇಂದ್ರಬಾಬು, ಮನವಿಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದರು.
ತಾಲ್ಲೂಕು ಅಧ್ಯಕ್ಷ ಜೆ.ಎಸ್. ವೆಂಕಟಸ್ವಾಮಿ, ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಉಪಾಧ್ಯಕ್ಷ ಜಿ.ಎಸ್.ಅಕ್ರಂಪಾಷಾ, ಸಂಘಟನಾಧ್ಯಕ್ಷ ಜಗದೀಶ್‍ಬಾಬು, ರೈತ ಸಂಘದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕರವೇ ಶಿವರಾಮೇಗೌಡ ಬಣದ ಅಧ್ಯಕ್ಷ ಮೇಲೂರು ಶ್ರೀಧರ್, ಅಂಬರೀಶ್, ಇಮ್ತಿಯಾಜ್‍ಪಾಷ, ಇನ್ನಿತರರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!