21.1 C
Sidlaghatta
Thursday, July 7, 2022

ಚಂದ್ರಶೇಖರ್ ಆಜಾದ್ ಹಾಗೂ ಭಗತ್‌ಸಿಂಗ್‌ರವರ ಜನ್ಮದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರ

- Advertisement -
- Advertisement -

ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಕ್ರಾಂತಿವೀರ ಚಂದ್ರಶೇಖರ್ ಆಜಾದ್ ಹಾಗೂ ಭಗತ್‌ಸಿಂಗ್‌ರವರ ಜನ್ಮದಿನಾಚರಣೆಯ ಅಂಗವಾಗಿ ಬುಧವಾರ ಭಾರತೀಯ ಜನತಾ ಪಾರ್ಟಿ ಶಿಡ್ಲಘಟ್ಟ ಮಂಡಲ, ಯುವಮೋರ್ಚಾ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿಯ ಸಹಯೋಗದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿದರು.
ಯುವಜನತೆಯಲ್ಲಿ ರಾಷ್ಟ್ರ ಪ್ರೇಮವನ್ನು ಬೆಳೆಸುವುದರ ಜೊತೆಗೆ, ರಕ್ತದ ಕೊರತೆಯಿಂದಾಗಿ ಅಪಾಯದಲ್ಲಿರುವ ಜನರನ್ನು ಉಳಿಸಲು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತಹ ಮಾನವೀಯತೆಯನ್ನು ಬೆಳೆಸುವಂತಹ ಅಗತ್ಯವಿದೆ ಎಂದು ಅವರು ತಿಳಿಸಿದರು.
ಕ್ರಾಂತಿವೀರ ಚಂದ್ರಶೇಖರ್ ಆಜಾದ್ ಹಾಗೂ ಭಗತ್‌ಸಿಂಗ್‌ರವರ ಜನ್ಮದಿನಾಚರಣೆಯ ಜೊತೆಯಲ್ಲಿ ಸೆಪ್ಟೆಂಬರ್ ೧೭ರಂದು ನಮ್ಮ ಪ್ರಧಾನಿ ನರೇಂದ್ರ ಮೋದಿರವರ ಜನ್ಮದಿನದ ಪ್ರಯುಕ್ತವಾಗಿ ಸೇವಾ ಸಪ್ತಹ ಆಚರಿಸುವ ಅಂಗವಾಗಿ ಈ ರಕ್ತದಾನ ಶಿಬಿರವನ್ನು ಆಯೋಜಿಸಿದ್ದೇವೆ. ಕಳೆದ ಆರು ವರ್ಷಗಳಿಂದ ನಮ್ಮ ಪಕ್ಷದ ವತಿಯಿಂದ ನಿರಂತರವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಉತ್ತಮವಾದ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ನಗರ ಸಭೆ ಸದಸ್ಯ ನಾರಾಯಣಸ್ವಾಮಿ, ಶ್ರೀಧರ್, ದಾಮೋದರ್, ಸುಜಾತಮ್ಮ, ಮಂಜುಳಮ್ಮ, ಕೆಂಪರೆಡ್ಡಿ, ರವಿಚಂದ್ರ, ಕೃಷ್ಣಾರೆಡ್ಡಿ, ಮುರಳಿ, ಆನಂದ್, ನರೇಶ್, ಮಧು, ನಾಗೇಶ್, ದೇವರಾಜು, ಮುಖೇಶ್, ಪುರುಷೋತಮ್, ವೆಂಕಟೇಶ್, ನಟರಾಜು ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here