ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ಬರುವಂತಹ ನಾಗರಿಕರಿಗೆ ನ್ಯಾಯಾಂಗದಲ್ಲಿ ವಿಶ್ವಾಸ ಮೂಡುವಂತೆ ವಕೀಲರು ಕಾರ್ಯನಿರ್ವಹಿಸಬೇಕು ಎಂದು ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ ಅರಸ್ ಹೇಳಿದರು.
ನಗರದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಶನಿವಾರ, ನ್ಯಾಯಾಧೀಶರು ವರ್ಗಾವಣೆಯಾಗಿರುವ ಅಂಗವಾಗಿ ತಾಲ್ಲೂಕು ವಕೀಲರ ಸಂಘ, ಹಾಗೂ ನ್ಯಾಯಾಲಯದ ಸಿಬ್ಬಂದಿಯಿಂದ ಆಯೋಜನೆ ಮಾಡಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆಲವೊಮ್ಮೆ ನ್ಯಾಯಪೀಠದಲ್ಲಿ ಕೊಡುವಂತಹ ಸಲಹೆಗಳನ್ನು ಸ್ವೀಕಾರ ಮಾಡಿಕೊಂಡು ಅಧ್ಯಯನ ಮಾಡಿ, ಕಕ್ಷಿದಾರರಿಗೆ ನ್ಯಾಯವನ್ನು ಒದಗಿಸಿಕೊಡಿ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಏನಾದರೂ ಸಾಧಿಸಬಹುದಾಗಿದೆ, ಕೇವಲ ನ್ಯಾಯಾಲಯದ ಕಲಾಪಗಳಿಗೆ ಮಾತ್ರ ಸೀಮಿತವಾಗದೆ, ಸಮಾಜದಲ್ಲಿ ಪರಿವರ್ತನೆಯನ್ನು ತರುವಂತಹ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವಂತೆ ವಕೀಲರಿಗೆ ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಎಂಬುದು ಸಹಜ, ಆದರೂ ಕಾರ್ಯನಿರ್ವಹಿಸಿದ ಸ್ಥಳದ ಬಾಂಧವ್ಯ ಸದಾ ಹೃದಯದಲ್ಲಿ ಉಳಿದಿರುತ್ತದೆ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ವಕೀಲರಾದ ಎಂ.ಬಿ.ಲೊಕೇಶ್, ಮಂಜುನಾಥ್, ಚಂದ್ರಶೇಖರ್ಗೌಡ, ಶ್ರೀನಿವಾಸ್, ವೇಣುಗೋಪಾಲ್, ಇ,ನಾರಾಯಣಪ್ಪ, ರವೀಂದ್ರನಾಥ್, ರಘು, ಸುಬ್ರಮಣಿ, ಚಂದ್ರಶೇಖರ್, ವೆಂಕಟೇಶ್ಬಾಬು ಮತ್ತಿತರರುಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -