ಷಟಲ್‌ಕಾಕ್ ಕ್ರೀಡೆಯಲ್ಲಿ ಹಿರಿಯರ ವಿಭಾಗದಲ್ಲಿ ಜಿಲ್ಲಾ ಚಾಂಪಿಯನ್ ಆಗಿದ್ದ ಹಿರಿಯ ಕ್ರೀಡಾಪಟು ಹೌಸಿಂಗ್ ಬೋರ್ಡ್ ನಿವಾಸಿ ಕೆ.ಎಲ್.ನಾಗರಾಜ್(54) ಅಪಘಾತಕ್ಕೀಡಾಗಿ ಗುರುವಾರ ನಿಧನರಾಗಿದ್ದಾರೆ. ವಿಜಯಪುರದ ಸಮೀಪ ಕಳೆದ ಶನಿವಾರ ದ್ವಿಚಕ್ರ ವಾಹನದಿಂದ ಬಿದ್ದು ಅಪಘಾತಕ್ಕೀಡಾಗಿದ್ದ ಅವರನ್ನು ಬೆಂಗಳೂರಿನ ಸೆಂಟ್‌ಜಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಗುರುವಾರ ನಿಧನರಾದರು. ಮೃತರು ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಕನಕನಗರದ ಬಳಿ ಹಿಂದೂ ರುದ್ರಭೂಮಿಯಲ್ಲಿ ಶುಕ್ರವಾರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಅವರ ಬಂಧುಗಳು ತಿಳಿಸಿದ್ದಾರೆ.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







