23.1 C
Sidlaghatta
Sunday, July 20, 2025

ಪುಟಾಣಿ ಮಕ್ಕಳ ವೇಷಭೂಷಣ

- Advertisement -
- Advertisement -

ಪುಟಾಣಿ ಮಕ್ಕಳ ಆಟವನ್ನು ಕಣ್ತುಂಬಾ ನೋಡುತ್ತಾ, ಅವುಗಳ ಚೇಷ್ಟೆ, ಮುದ್ದು ಮಾತುಗಳಿಗೆ ಸ್ಪಂದಿಸುತ್ತಾ, ಅದರ ಜತೆ ಜತೆಗೇ ನಮ್ಮ ಜೀವನವನ್ನೂ ಸಿಹಿಸಿಹಿಯಾಗಿಸಿಕೊಳ್ಳುವ ಮೂಲಕ ಜೀವನೋತ್ಸಾಹವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಡಾಲ್ಫಿನ್‌ ವಿದ್ಯಾಸಂಸ್ಥೆ ಅಧ್ಯಕ್ಷ ನಾಗರಾಜ್‌ ತಿಳಿಸಿದರು.
ನಗರದ ಡಾಲ್ಫಿನ್‌ ವಿದ್ಯಾಸಂಸ್ಥೆಯಲ್ಲಿ ನರ್ಸರಿ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಆಟವಾಡುತ್ತಿರುವುದನ್ನು ನೋಡುವುದನ್ನೇ ಈಗ ಮರೆತುಬಿಟ್ಟಿದ್ದೇವೆ. ಮಕ್ಕಳ ಆಟವನ್ನೊಂದು ಬಿಟ್ಟು ಬೇರೆಲ್ಲಾ ನಮಗೆ ಬೇಕಿದೆ, ಟೀವಿ ಧಾರಾವಾಹಿಗಳು, ಕ್ರಿಕೆಟ್ ಪಂದ್ಯ, ಸಿನೆಮಾ ಇತ್ಯಾದಿಗಳೆಲ್ಲವನ್ನೂ ನಾವು ತಪ್ಪದೆ ನೋಡುತ್ತೇವೆ. ಆದರೆ ಮಕ್ಕಳಾಟ, ಮಕ್ಕಳೊಂದಿಗೆ ಮಕ್ಕಳಾಗಿ ಆಡಲು ಸಮಯವಿಲ್ಲದಂತಾಗಿದೆ. ಜಗತ್ತಿನ ಆಗು ಹೋಗುಗಳು, ಅನ್ಯಾಯ ಅಕ್ರಮಗಳು, ಅಸತ್ಯ, ವಂಚನೆ ಇತ್ಯಾದಿ ಏನೂ ಅರಿಯದ ಮುಗ್ಧ ಮನಸ್ಸು ಅವುಗಳದು. ಮಕ್ಕಳೊಂದಿಗೆ ಮಗುವಾದಾಗ ನಮ್ಮ ಮನಸ್ಸುಗಳು ತಿಳಿಯಾಗುತ್ತವೆ ಎಂದು ಹೇಳಿದರು.
ಪುಟ್ಟ ಪುಟ್ಟ ಮಕ್ಕಳು ಒನಕೆ ಓಬವ್ವ, ಸ್ವಾಮಿ ವಿವೇಕಾನಂದ, ಟಿಪ್ಪುಸುಲ್ತಾನ್‌, ಅಕ್ಕಮಹಾದೇವಿ, ನೆಹರು, ಸೈನಿಕ, ಸಂಗೊಳ್ಳಿ ರಾಯಣ್ಣ ಮೊದಲಾದ ವೇಷಗಳನ್ನು ಧರಿಸಿ ತೊದಲು ಮಾತುಗಳಿಂದ ತಮ್ಮ ವೇಷಗಳ ಬಗ್ಗೆ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಸಿಹಿ ಹಂಚಲಾಯಿತು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!