23.1 C
Sidlaghatta
Monday, October 27, 2025

ರಾಷ್ಟ್ರೀಯ ತೋಟಗಾರಿಕಾ ಮಿಷನ್, ಫಲಾನುಭವಿಗಳ ಆಯ್ಕೆ

- Advertisement -
- Advertisement -

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿಯಲ್ಲಿ ಆಯ್ಕೆಯಾಗುವಂತಹ ಫಲಾನುಭವಿಗಳು ತ್ವರಿತವಾಗಿ ಕಾಮಗಾರಿಗಳನ್ನು ಪ್ರಾರಂಭ ಮಾಡಿ, ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಹೇಳಿದರು.
ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್ ನಡಿಯಲ್ಲಿ ಸೌಲಭ್ಯಗಳನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಿದ್ದ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಅವರು ಮಾತನಾಡಿದರು.
ಯೋಜನೆಯಡಿಯಲ್ಲಿ ಪಾಲಿಹೌಸ್, ಪ್ಯಾಕಿಂಗ್ ಹಾಲ್, ಮಿನಿಟ್ರ್ಯಾಕ್ಟರ್, ಬಯೋಡೈಜೆಸ್ಟರ್, ಪ್ರೀಕೂಲಿಂಗ್ ಯೂನಿಟ್, ಮಾವು, ಸೀಬೆ, ಈರುಳ್ಳಿ ಶೇಖರಣಾಘಟಕ ನಿರ್ಮಾಣದ ಯೋಜನೆಗಳಿಗೆ ಸಹಾಯಧನವನ್ನು ಪಡೆಯಲು ಅವಕಾಶಗಳಿದ್ದು, ರೈತರು ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಗುಣಮಟ್ಟದ ಬೆಳೆಗಳನ್ನು ಬೆಳೆಯಬೇಕು ಎಂದರು.
ಪಾಲಿಹೌಸ್: ೨ ಎಕರೆ ಪ್ರದೇಶದ ಗುರಿಯಿದ್ದು, ನಾಲ್ಕು ಹೋಬಳಿಗೆ ಅರ್ಧ ಎಕರೆಯಂತೆ ನಿಗದಿ ಮಾಡಿ, ಫಲಾನುಭವಿಗಳನ್ನು ಆಯ್ಕೆಮಾಡಲಾಗಿದೆ, ಒಂದು ಪಾಲಿಹೌಸ್ನ ಘಟಕವೆಚ್ಚ ೧೬.೮೮ ಲಕ್ಷ, ಸರ್ಕಾರದಿಂದ ೮.೪೪ ಲಕ್ಷ ಸಹಾಯಧನ ರೈತರಿಗೆ ಸಿಗಲಿದೆ, ಒಟ್ಟು ೧೩೮ ಅರ್ಜಿಗಳು ಸಲ್ಲಿಕೆಯಾಗಿದ್ದು, ಲಾಟರಿಯಲ್ಲಿ ೪ ಮಂದಿಯನ್ನು ಆಯ್ಕೆಮಾಡಲಾಗಿದೆ.
ಪ್ಯಾಕಿಂಗ್ಹೌಸ್: ೨ ಲಕ್ಷ ಸಹಾಯಧನ, ೩೫ ಅರ್ಜಿಗಳು ಬಂದಿದ್ದು, ೨ ಮಂದಿಯನ್ನು ಆಯ್ಕೆಮಾಡಲಾಗಿದೆ, ಹಣ್ಣು ತರಕಾರಿಗಳನ್ನು ಬೆಳೆದು ತಂದ ನಂತರ ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಸಾಗಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಾಗಿದೆ.
ಈರುಳ್ಳಿ ಶೇಖರಣಾ ಘಟಕ: ೮೬.೫೦೦ ಸಹಾಯಧನ, ೧೩೧ ಅರ್ಜಿಗಳು ಸಲ್ಲಿಕೆಯಾಗಿದ್ದು, ಎಸ್.ಸಿ. ೨, ಎಸ್.ಟಿ.೧ ಇತರೆ ೦೪, ಮಂದಿ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ.
ಮಿನಿಟ್ರ್ಯಾಕ್ಟರ್: ೭೫.೦೦೦ ಸಹಾಯಧನ, ೭೭ ಅರ್ಜಿಗಳು ಸಲ್ಲಿಕೆಯಾಗಿದ್ದು, ಎಸ್.ಸಿ.೧, ಎಸ್.ಟಿ.೧, ಇತರೆ ೫, ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
ಫ್ರೀ ಕೂಲಿಂಗ್ ಯೂನಿಟ್: ೫ಲಕ್ಷ ೩ ಅರ್ಜಿಗಳು ಬಂದಿದ್ದು, ಮೂರು ಅರ್ಜಿಗಳನ್ನು ಪರಿಗಣಿಸಲಾಗಿದೆ.
ಲಾಟರಿಯಲ್ಲಿ ಆಯ್ಕೆಯಾದ ಫಲಾನುಭವಿಗಳು ಮುಂದಿನ ಹತ್ತು ದಿನಗಳಲ್ಲಿ ಕಾಮಗಾರಿಯನ್ನು ಪ್ರಾರಂಭ ಮಾಡದಿದ್ದಲ್ಲಿ ಆಯ್ಕೆ ರದ್ದುಗೊಂಡು, ನಂತರದ ಫಲಾನುಭವಿಗಳು ಆಯ್ಕೆಗೊಳ್ಳಲಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ತಿಳಿಸಿದ್ದಾರೆ.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾರಘು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಿ.ಟಿ.ದೇವೇಗೌಡ ಮತ್ತಿತರರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!