ಯಶವಂತಪುರ-ಚಿಕ್ಕಬಳ್ಳಾಪುರ-ಕೋಲಾರ-ದೆಹಲಿಗೆ ಹೋಗುವ ಈ ಹೊಸ ವಿಶೇಷ ರೈಲು ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್ ಮಂಗಳವಾರ ನಗರಕ್ಕೆ ಮಧ್ಯಾಹ್ನ ಆಗಮಿಸಿದಾಗ ನೂರಾರು ಜನರು ಸ್ವಾಗತಿಸಿದರು.
ರೈಲಿನಲ್ಲಿ ಬಂದ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಅವರ ಬೆಂಬಲಿಗರು ಹಾರವನ್ನು ತೊಡಿಸಿ, ಜಯಘೋಷ ಮಾಡುವ ಮೂಲಕ ಸ್ವಾಗತಿಸಿದರು.
ರೈಲು, ಯಲಹಂಕ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಬಂಗಾರಪೇಟೆ, ಕಾಟ್‌ಪಾಡಿ, ರೇಣುಕುಂಟ, ವಿಜಯವಾಡ, ನಾಗಪುರ್, ಆಗ್ರಾ, ನಿಜಾಮುದ್ದೀನ್ ಮಾರ್ಗವಾಗಿ ದೆಹಲಿ ತಲುಪುತ್ತದೆ. ವಾರದಲ್ಲಿ ೨ ದಿನಗಳ ಕಾಲ ಸಂಚರಿಸುವ ಈ ಹೊಸ ಎಕ್ಸ್‌ಪ್ರೆಸ್ ರೈಲು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಸಂಚರಿಸಲಿದೆ. ಯಶವಂತಪುರದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಹೊರಟು, ೧.೩೮ಕ್ಕೆ ಚಿಕ್ಕಬಳ್ಳಾಪುರ ಮಾರ್ಗವಾಗಿ ಶಿಡ್ಲಘಟ್ಟದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಲಿದೆ.
“ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಿನಿಂದ ಶಿಡ್ಲಘಟ್ಟ ರೈಲ್ವೆ ನಿಲ್ದಾಣದಿಂದ ನೇರವಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಮಾತ್ರವಲ್ಲದೆ. ತಿರುಪತಿ ತಿರುಮಲ ದೇವಸ್ಥಾನ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಿಗೆ ಹೋಗಬಹುದು. ಆದ್ದರಿಂದ ಈ ಹೊಸ ರೈಲು ಸೇವೆಯು ಜಿಲ್ಲೆಯ ಜನರ ಪಾಲಿಗೆ ವರದಾನವಾಗಲಿದೆ.” ಎಂದು ಲಕ್ಷ್ಮೀನಾರಾಯಣ(ಲಚ್ಚಿ) ತಿಳಿಸಿದರು.
- Advertisement -
- Advertisement -
- Advertisement -







