ನಗರದಲ್ಲಿ ವಾಹನ ಸಂಚಾರ ಸುರಕ್ಷತೆ ದೃಷ್ಠಿಯಿಂದ ಮಂಗಳವಾರ ಆರಕ್ಷಕ ವೃತ್ತ ನಿರೀಕ್ಷಕ ಎಂ.ವೆಂಕಟೇಶ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸಿ ಸುಮಾರು 100 ಕ್ಕೂ ಹೆಚ್ಚು ದ್ವಿಚಕ್ರ ವಾಹನ ಮಾಲೀಕರಿಗೆ ದಂಡ ವಿಧಿಸುವ ಜೊತೆಗೆ ಇನ್ಶೂರೆನ್ಸ್ ಇಲ್ಲದ ವಾಹನಗಳಿಗೆ ಸ್ಥಳದಲ್ಲೇ ಇನ್ಶೂರೆನ್ಸ್ ಮಾಡಿಸಲಾಯಿತು.
ನಗರದ ಹಳೆಯ ಪುರ ಠಾಣೆ ಮುಂಭಾಗದಲ್ಲಿ ಮಂಗಳವಾರ ಆರಕ್ಷಕ ವೃತ್ತ ನಿರೀಕ್ಷಕ ವೆಂಕಟೇಶ್ ಸೇರಿದಂತೆ ನಗರ ಠಾಣೆ ಪಿಎಸ್ಸೈ ನವೀನ್ ಹಾಗು ದಿಬ್ಬೂರಹಳ್ಳಿ ಪಿಎಸ್ಸೈ ವಿಜಯ್‍ರೆಡ್ಡಿ ಹಾಗು ಸಿಬ್ಬಂದಿ ತಪಾಸಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ರಸ್ತೆಯಲ್ಲಿ ಸಾಗುವ ಪ್ರತಿಯೊಂದು ವಾಹನವನ್ನು ತಡೆದು ವಾಹನದ ದಾಖಲೆ ಪರಿಶೀಲನೆ ನಡೆಸಿದರು. ವಾಹನದ ದಾಖಲೆ ಸರಿಯಿಲ್ಲದ ಸುಮಾರು 100 ಕ್ಕೂ ಹೆಚ್ಚು ದ್ವಿ ಚಕ್ರ ವಾಹನಗಳಿಗೆ ನಿಗಧಿತ ನಮೂನೆಯಲ್ಲಿ ದಂಡ ವಿಧಿಸಲಾಯಿತು.
ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾರೆ ಎಂಬ ವಿಷಯ ತಿಳಿದ ಕೆಲವರು ಬೇರೆ ದಾರಿಗಳಲ್ಲಿ ಸಂಚರಿಸಬೇಕಾಯಿತು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







