ಸನ್ನಡತೆಯನ್ನು ಮೈಗೂಡಿಸಿಕೊಂಡು ಎಲ್ಲರೊಟ್ಟಿಗೆ ಉತ್ತಮ ವಿಶ್ವಾಸವನ್ನು ರೂಢಿಸಿಕೊಂಡು ಬದುಕು ರೂಪಿಸಿಕೊಂಡರೆ ಅಂತಹವರ ಮೇಲಿರುವ ಕೇಸುಗಳಿಂದ ಮುಕ್ತಿಸಿಗಲಿದೆ ಎಂದು ಚಿಂತಾಮಣಿ ವಿಭಾಗದ ಡಿ.ವೈ.ಎಸ್.ಪಿ. ಕೃಷ್ಣಮೂರ್ತಿ ಹೇಳಿದರು.
ನಗರ ಪೊಲೀಸ್ ಠಾಣೆಯ ಆವರಣದಲ್ಲಿ, ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವವರೊಂದಿಗೆ ಸಭೆಯನ್ನು ನಡೆಸಿದ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ಶಾಂತಿ ಕಾಪಾಡುವುದು, ಕಾನೂನು ಸುವ್ಯವಸ್ಥೆಗೆ ದಕ್ಕೆಯುಂಟಾಗದಂತೆ ನಡೆದುಕೊಳ್ಳುವುದು. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದೆ ಇರುವುದು. ಹಾಗೂ ಯಾವುದೇ ಗಲಾಟೆಗಳಿಗೆ ಪ್ರಚೋದನೆ ಮಾಡದೇ ಉತ್ತಮವಾದ ನಡುವಳಿಕೆಯನ್ನು ರೂಢಿಸಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬಾಳುವವರ ಮೇಲೆ ಇರುವ ಕೇಸುಗಳನ್ನು ಸನ್ನಡತೆಯ ಆಧಾರದಲ್ಲಿ ವಜಾಗೊಳಿಸುವಂತಹ ಚಿಂತನೆಗಳು ನಡೆಯುತ್ತಿವೆ. ಎಲ್ಲರೂ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದರು.
ಪೊಲೀಸ್ ವೃತ್ತ ನಿರೀಕ್ಷಕ ವೆಂಕಟೇಶ್ ಮಾತನಾಡಿ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವುದು ಕೆಲವರಿಗೆ ರೂಢಿಯಾಗಿಬಿಟ್ಟಿದೆ. ಆದರೆ ತಂದೆ ತಾಯಿಗಳು ಅಫರಾಧ ಪ್ರಕರಣಗಳಲ್ಲಿ ಭಾಗಿಯಾದರೆ ಅವರ ಜೀವನದುದ್ದಕ್ಕೂ ಜನರು ಕೆಟ್ಟಮನೋಭಾವನೆಯಿಂದ ನೋಡುತ್ತಾರೆ. ಮುಂದೆ ಅಂತಹವರ ಮಕ್ಕಳ ಭವಿಷ್ಯದ ಮೇಲೆ ಹೊಡೆತಬೀಳಲಿದೆ. ಇದರಿಂದ ಮಕ್ಕಳು ಜೀವನ ಪೂರ್ತಿ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಆದ್ದರಿಂದ ಪ್ರತಿಯೊಬ್ಬರು ತಮ್ಮ ಕುಟುಂಬಗಳ ಬಗ್ಗೆ ಚಿಂತನೆ ನಡೆಸಬೇಕು ಎಂದರು.
ಗ್ರಾಮಾಂತರ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಪ್ರದೀಪ್ ಪೂಜಾರಿ, ನಗರಠಾಣೆ ಸಬ್ ಇನ್ಸ್‍ಪೆಕ್ಟರ್ ನವೀನ್, ದಿಬ್ಬೂರಹಳ್ಳಿ ಠಾಣೆ ಸಬ್ ಇನ್ಸ್‍ಪೆಕ್ಟರ್ ಆರ್. ವಿಜಯ್‍ರೆಡ್ಡಿ, ಇನ್ನಿತರರು ಹಾಜರಿದ್ದರು.
- Advertisement -
- Advertisement -
- Advertisement -