ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಸುಗ್ಗಲಮ್ಮ ದೇವಿಯ ಉತ್ಸವ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವವನ್ನು ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ನಡೆದ ಪೂಜಾ ಮಹೋತ್ಸವದಲ್ಲಿ ಗಣಪತಿ ಪೂಜೆ, ಲಘು ಪುಣ್ಯಾಹ, ಸಪ್ತ ಮಾತೃಕೆ ಆರಾಧನೆ, ಕುಂಭ ಕಳಸಾರಾಧನೆ, ದ್ವಾರಪಾಲಕ ಪೂಜೆ, ನವಗ್ರಹ ಪೂಜೆ, ಮಾತೃಕೆಯ ಹೋಮ, ನವಗ್ರಹ ಹೋಮ, ಅಷ್ಠದಿಕ್ಪಾಲಕ ಹೋಮ, ಸಪ್ತಮಾತೃಕೆಯ ಹೋಮ, ಮೂರ್ತಿ ಹೋಮ, ಮಹಾಮಂಗಳಾರತಿ, ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗುರುವಾರದಂದು ಅಮ್ಮನವರ ಉತ್ಸವವನ್ನು ಮಳ್ಳೂರು, ಮುತ್ತೂರು, ಕಂಬದಹಳ್ಳಿ, ಅಪ್ಪೇಗೌಡನಹಳ್ಳಿ, ಚೌಡಸಂದ್ರ, ಬೆಳ್ಳೂಟಿ ಮತ್ತು ಭಕ್ತರಹಳ್ಳಿ ಗ್ರಾಮಗಳಲ್ಲಿ ನಡೆಸುವುದಾಗಿ ಸುಗ್ಗಲಮ್ಮ ದೇವಿ ಭಕ್ತಮಂಡಳಿಯವರು ತಿಳಿಸಿದ್ದಾರೆ.
- Advertisement -
- Advertisement -
- Advertisement -