ಶಿಡ್ಲಘಟ್ಟ ತಾಲೂಕು ಬಿಜೆಪಿ ವತಿಯಿಂದ ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಬುಧÀವಾರ ಆಯೋಜಿಸಲಾಗಿದ್ದ ಉಚಿತ ರೇಷನ್ ಕಾರ್ಡ್ ನೋಂದಣಿ ಕಾರ್ಯಾಗಾರದಲ್ಲಿ ನಾಗರೀಕರು ಪಡಿತರ ಚೀಟಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದರು.
ತಾಲೂಕಿನ ಬಹುತೇಕ ಜನತೆಗೆ ಈಗಾಗಲೇ ಪಡಿತರ ಚೀಟಿಗಳಿದ್ದು ಇಲ್ಲದವರಿಗೆ ಹಾಗು ಈ ಹಿಂದೆ ಆದಾರ್ ಸಂಖ್ಯೆ ಲಿಂಕ್ ಮಾಡದ ಪಡಿತರ ಚೀಟಿಗಳು ರದ್ದಾಗಿರುವ ಹಿನ್ನಲೆಯಲ್ಲಿ ನೂತನವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆ ಅವಕಾಶ ಮಾಡಿಕೊಟ್ಟಿದೆ. ನಾಗರೀಕರು ರೇಷನ್ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸಲು ಸ್ಥಳೀಯ ಸೈಬರ್ ಕೇಂದ್ರಗಳಿಗೆ ಹೋಗುವುದು ಹಾಗು ಅಲ್ಲಿ ಪಾವತಿಸಬೇಕಾದ ಸೇವಾ ಶುಲ್ಕವನ್ನು ತಪ್ಪಿಸುವ ಉದ್ದೇಶದಿಂದ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಉಚಿತ ರೇಷನ್ ಕಾರ್ಡ್ ನೋಂದಣಿ ಕೇಂದ್ರ ನಿರ್ಮಿಸಿದ್ದು ನಾಗರೀಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಾಲೂಕು ಬಿಜೆಪಿ ಕಾರ್ಯದರ್ಶಿ ಭಾಸ್ಕರರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಮುಖಂಡರಾದ ದಾಮೋಧರ್, ಮುನಿರಾಜು, ಶ್ರೀನಿವಾಸ್, ಸುಜಾತಮ್ಮ, ಅಶ್ಫಕ್ ಅಹಮ್ಮದ್, ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -