ಟಿಪ್ಪು ಜಯಂತಿ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಗಟ್ಟಲು ಸಮುದಾಯದ ಮುಖಂಡರು ಹಾಗು ಯುವಕರು ಸಹಕರಿಸಬೇಕು ಎಂದು ಆರಕ್ಷಕ ವೃತ್ತ ನಿರೀಕ್ಷಕ ವೆಂಕಟೇಶ್ ಹೇಳಿದರು.
ನಗರದ ಆರಕ್ಷಕ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಟಿಪ್ಪುಜಯಂತಿ ಅಂಗವಾಗಿ ಸೋಮವಾರ ಆಯೋಜಿಸಲಾಗಿದ್ದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.
ಇದೇ ನ 10 ರಂದು ಆಚರಿಸಲಿರುವ ಟಿಪ್ಪುಜಯಂತಿಯಂದು ಯಾವುದೇ ಮೆರವಣಿಗೆ ನಡೆಸುವಂತಿಲ್ಲ. ಬದಲಿಗೆ ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗುವ ವೇದಿಕೆ ಕಾರ್ಯಕ್ರಮದಲ್ಲಿ ಸಮುದಾಯದವರು ಪಾಲ್ಗೊಂಡು ಶಾಂತಿಯುತವಾಗಿ ಆಚರಿಸಲು ಸಹಕರಿಸಬೇಕು ಎಂದರು.
ಸಮುದಾಯದ ಕೆಲ ಮುಖಂಡರು ಮಾತನಾಡಿ ಸರ್ಕಾರ ಯಾವ ರೀತಿ ಜಯಂತಿ ಆಚರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆಯೋ ಹಾಗೆಯೇ ನಡೆಸಲಿ ನಮಗೆ ಯಾವುದೇ ಅಡಿಯಿಲ್ಲ ಬದಲಿಗೆ ನಾವೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸುವುದಾಗಿ ಸಮ್ಮತಿ ಸೂಚಿಸಿದರು.
ನಗರ ಠಾಣೆ ಪಿಎಸ್ಸೈ ನವೀನ್, ಗ್ರಾಮಾಂತರ ಠಾಣೆಯ ಪಿಎಸ್ಸೈ ಪ್ರದೀಪ್ ಪೂಜಾರಿ, ದಿಬ್ಬೂರಹಳ್ಳಿ ಠಾಣೆಯ ಪಿಎಸ್ಸೈ ವಿಜಯ್, ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.
- Advertisement -
- Advertisement -
- Advertisement -