ನಗರದ ನೆಹರೂ ಕ್ರೀಡಾಂಗಣದಲ್ಲಿ ಇಂದು ಜಿಲ್ಲಾ ದಶಮಾನೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ತಾಲ್ಲೂಕು ಆಡಳಿತ ಹಮ್ಮಿಕೊಂಡಿದೆ. ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 6 ಗಂಟೆಗೆ ಕೋರ್ಟ್ ಮುಂಭಾಗದಿಂದ ಶಾಮಣ್ಣ ಬಾವಿಯವರೆಗೆ ‘ಆರೋಗ್ಯದೆಡೆಗೆ ನಮ್ಮ ನಡಿಗೆ’, ಬೆಳಿಗ್ಗೆ 7 ಗಂಟೆಗೆ ಶಾಮಣ್ಣ ಬಾವಿ ಸ್ವಚ್ಛತಾ ಕಾರ್ಯಕ್ರಮ, ಬಸ್ ನಿಲ್ದಾಣದಿಂದ ನೆಹರು ಕ್ರೀಡಾಂಗಣದವರೆಗೆ ವಿವಿಧ ಕಲಾತಂಡಗಳು ಮತ್ತು ಸ್ತಬ್ದ ಚಿತ್ರಗಳೊಂದಿಗೆ ದಶಮಾನೋತ್ಸವ ತೇರು ಚಾಲನೆ, ಬೆಳಿಗ್ಗೆ 9.30ಕ್ಕೆ ರೆಡ್ ಕ್ರಾಸ್ ಸಂಸ್ಥೆಯ ಶಾಖಾ ಘಟಕದ ಉದ್ಘಾಟನೆ, ಬೆಳಿಗ್ಗೆ 9.45ಕ್ಕೆ ಕಂದಾಯ ಭವನದಲ್ಲಿ ನೇತ್ರ ದಾನಿಗಳ ನೋಂದಣಿ ಕಾರ್ಯಕ್ರಮ, ಬೆಳಿಗ್ಗೆ 10 ಗಂಟೆಗೆ ರಕ್ತದಾನ ಕಾರ್ಯಕ್ರಮದ ಉದ್ಘಾಟನೆ, ಬೆಳಿಗ್ಗೆ 10.15ಕ್ಕೆ ನೆಹರು ಕ್ರೀಡಾಂಗಣದಲ್ಲಿ ವಸ್ತು ಪ್ರದರ್ಶನ ಮತ್ತು ಮಳಿಗೆಗಳ ಉದ್ಘಾಟನೆ, ಸಭಾ ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ, ಕ್ರೀಡಾ ಚಟುವಟಿಕೆ ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ. ಸಂಜೆ 4 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. ಸುಧಾ ಬರಗೂರು ಅವರಿಂದ ನಗೆ ಹಬ್ಬ, ಸಂಗೀತ ರಸಸಂಜೆ, ಮ್ಯಾಜಿಕ್ ಕಾರ್ಯಕ್ರಮ, ರಂಗ ಪಯಣ ಕಲಾವಿದರಿಂದ ನಾಟಕ ‘ಗುಲಾಬಿ ಗ್ಯಾಂಗ್’ ನಡೆಯಲಿದೆ.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







