ವಚನ ಸಾಹಿತ್ಯವನ್ನು ರಾಗ, ತಾಳ ಮತ್ತು ಸಂಗೀತದ ಮೂಲಕ ಕೇಳಿದಲ್ಲಿ ಹೆಚ್ಚು ಆಪ್ತವಾಗುತ್ತದೆ ಹಾಗೂ ಮನದಲ್ಲಿ ಉಳಿಯುತ್ತದೆ. ಅದರೊಂದಿಗೆ ಸ್ಥಳೀಯ ಕಲಾವಿದರ ಪರಿಚಯವೂ ಆಗುತ್ತದೆ ಎಂಬ ಉದ್ದೇಶದಿಂದ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮ ಪ್ರಾರಂಭ ಮಾಡುತ್ತಿದ್ದೇವೆ ಎಂದು ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಟಿ. ನಾರಾಯಣಸ್ವಾಮಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸಂಜೆ ಬೈಪಾಸ್ ರಸ್ತೆಯಲ್ಲಿರುವ ಶಿಕ್ಷಕ ಚಿಕ್ಕವೆಂಕಟರಾಯಪ್ಪ ಮನೆಯಲ್ಲಿ ತಾಲ್ಲೂಕು ವಚನ ಸಾಹಿತ್ಯ ಪರಿಷತ್ ವತಿಯಿಂದ ಮನೆಅಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನೆಗಳಲ್ಲಿ ಟಿವಿ ಸಂಸ್ಕೃತಿ ಹೆಚ್ಚಾಗಿ ಸಂಗೀತ, ಸಾಹಿತ್ಯ ಮೊದಲಾದ ಕಲೆಗಳ ಬಗ್ಗೆ ವಿಮುಖರಾಗುತ್ತಿದ್ದೇವೆ. ಅದನ್ನು ಹೋಗಲಾಡಿಸಲು ಆಸಕ್ತ ಕಲಾಭಿಮಾನಿಗಳ ಮನೆಯಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಕವನ ವಾಚನ, ವಚನಗಳ ಗಾಯನ, ವಾದ್ಯಗೋಷ್ಠಿ, ಸಾಹಿತ್ಯಿಕ ಚರ್ಚೆಗಳನ್ನು ನಡೆಸಲು ಉದ್ದೇಶಿಸಿದ್ದೇವೆ ಎಂದು ಹೇಳಿದರು.
ಕಲಾವಿದರಾದ ವಿದ್ವಾನ್ ಎಸ್.ವಿ. ರಾಮಮೂರ್ತಿ, ಲಕ್ಷ್ಮೀನಾರಾಯಣ, ಪಿಟೀಲು ವಿದ್ವಾನ್ ಜಿ.ಎನ್.ಶ್ಯಾಮಸುಂದರ್, ಕೆ.ಮಂಜುನಾಥ್ ಸಂಗೀತ ಗೋಷ್ಠಿಯನ್ನು ನಡೆಸಿಕೊಟ್ಟರು.
ವಚನ ಸಾಹಿತ್ಯ ಪರಿಷತ್ ಸದಸ್ಯರಾದ ಎಂ. ದೇವರಾಜ್, ಗಜೇಂದ್ರ, ಕೆಂಪಣ್ಣ, ಬೈರಾರೆಡ್ಡಿ, ವೆಂಕಟೇಶಪ್ಪ, ಸಿ.ಎ.ದೇವರಾಜ್, ವೇಣುಗೋಪಾಲ್, ರೂಪಸಿ ರಮೇಶ್, ರಾಜೇಶ್ವರಿ. ಮೀನಾ, ಮಾಲಾಶ್ರೀ, ಮಂಜುಶ್ರೀ. ಸಿ.ಸಂಧ್ಯಾ. ಕೀರ್ತಿಕ್ ರಾವ್. ಸಿ.ಚಿಕ್ಕ ವೆಂಕಟರಾಯಪ್ಪ. ಮುನಿರತ್ನಮ್ಮ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -