Home News ಅಮರಾವತಿ ಗ್ರಾಮದಲ್ಲಿ ಗಂಗಮ್ಮ ದೇವತೆಗೆ ಪೂಜಾ ಕಾರ್ಯಕ್ರಮ

ಅಮರಾವತಿ ಗ್ರಾಮದಲ್ಲಿ ಗಂಗಮ್ಮ ದೇವತೆಗೆ ಪೂಜಾ ಕಾರ್ಯಕ್ರಮ

0
Amaravati Gangamma Devi Temple Pooja

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗ್ರಾಮ ಮತ್ತು ಎಲ್ಲಾ ಕಡೆ ಮಳೆ ಬೆಳೆ ಆಗಿ ಸಮೃದ್ದಿಯಾಗಿಲಿ ಎಂಬ ಉದ್ದೇಶದಿಂದ ಗ್ರಾಮ ದೇವತೆ ಗಂಗಮ್ಮ ತಾಯಿಗೆ ಪೂಜೆ ಕಾರ್ಯ ಕೈಗೊಂಡಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾದ್ಯಕ್ಷ ಭಕ್ತರಹಳ್ಳಿ ಬೈರೆಗೌಡ ತಿಳಿಸಿದರು.

ತಾಲ್ಲೂಕಿನ ಅಮರಾವತಿ ಗ್ರಾಮದಲ್ಲಿ ಗ್ರಾಮ ದೇವತೆ ಗಂಗಮ್ಮ ದೇವತೆಗೆ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಬೆನ್ನೆಲುಬು ರೈತ, ರೈತ ಚೆನ್ನಾಗಿರಬೇಕಾದರೆ ಸಮಯಕ್ಕೆ ಸರಿಯಾಗಿ ಮಳೆ ಬೆಳೆಯಾದಾಗ ಮಾತ್ರ, ರೈತ ಚೆನ್ನಾಗಿದ್ದರೆ ಇಡೀ ದೇಶಕ್ಕೆ ಅನ್ನ ನೀಡುತ್ತಾನೆ. ಈ  ನಿಟ್ಟಿನಲ್ಲಿ ತಾಲ್ಲೂಕಿನ ಅಮರಾವತಿ ಗ್ರಾಮದಲ್ಲಿ ಗ್ರಾಮ ದೇವತೆ ಗಂಗಮ್ಮ ತಾಯಿಗೆ ಗ್ರಾಮಸ್ಥರಿಂದ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಎಸ್.ಎನ್. ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ(ಪುಟ್ಟು) ಮಾತನಾಡಿ, ಗ್ರಾಮಸ್ಥರು ಮತ್ತು ಹಿರಿಯರು ಸೇರಿ ಗ್ರಾಮ ಅಬಿವೃದ್ಧಿಯಾಗಲಿ ಎನ್ನುವ ದೃಷ್ಟಿಯಿಂದ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗ್ರಾಮಸ್ಥರ ಆಸೆ ನೆರವೇರಲಿ ಎಂದು ಆಶಯ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಸರ್ಕಾರದಿಂದ ವಿಶ್ವವಿದ್ಯಾಲಯದ ಆರಂಭವಾಗುತ್ತಿದ್ದು, ಗ್ರಾಮಸ್ಥರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುವ ಆಶಾ ಭಾವನೆಯಿದೆ ಎಂದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version