Home News ಅಶ್ವತ್ಥಕಟ್ಟೆಯ ಪುನರ್ ಪ್ರತಿಷ್ಠಾಪನೆ

ಅಶ್ವತ್ಥಕಟ್ಟೆಯ ಪುನರ್ ಪ್ರತಿಷ್ಠಾಪನೆ

0
Sidlaghatta Hosapete Temple Rejuvenation

ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಪಕ್ಕ ನಾಗರಕಲ್ಲಿನ ಅಶ್ವತ್ಥಕಟ್ಟೆ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು.

ಬೆಳಗ್ಗೆ ಬ್ರಹ್ಮಣಿ ಮುಹೂರ್ತದಲ್ಲಿ ಗಣಪತಿ ಹೋಮ, ನವಗ್ರಹ ಹೋಮ, ನಾಗದೇವತೆಗಳ ಹೋಮ, ಕಲಾ ಹೋಮ, ಪೂರ್ಣಾವ, ಕುಂಬಾಭಿಷೇಕ, ಪಂಚಾಮೃತ ಅಭಿಷೇಕ, ಅಶ್ವಥ್ ವಿವಾಹ, ಬಲಿಪ್ರಧಾನ, ಮಹಾಮಂಗಳಾರತಿ ಮಾಡಿ ತೀರ್ಥಪ್ರಸಾದ ವಿನಿಯೋಗಿಸಲಾಯಿತು.

ಗ್ರಾಮದ ಪ್ರಮುಖರಾದ ರಾಮರತ್ನಮ್ಮ ಗುಡಿಯಪ್ಪ ಹಾಗೂ ಶೋಭಾ ಶಶಿಕುಮಾರ್ ದಂಪತಿಗಳು ಪೂಜೆಗೆ ಕುಳಿತಿದ್ದರು. ಶಾಸಕ ವಿ.ಮುನಿಯಪ್ಪ. ಜೆಡಿಎಸ್ ಮುಖಂಡ ಮೇಲೂರು ಸಚಿನ್ ಅವರು ದಂಪತಿ ಸಮೇತ ಪೂಜಾ ಕಾರ‍್ಯದಲ್ಲಿ ಭಾಗವಹಿಸಿದ್ದರೆ, ಮಾಜಿ ಶಾಸಕ ಎಂ.ರಾಜಣ್ಣ, ಕಾಂಗ್ರೆಸ್ ಮುಖಂಡ ಆಂಜಿನಪ್ಪ ಪುಟ್ಟು, ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್‌ರಾಮಯ್ಯ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಾಳನಾಯಕನಹಳ್ಳಿ ಭೀಮೇಶ್, ಎಚ್.ಎ.ಎಲ್. ದೇವರಾಜ್ ಭಾಗವಹಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version