Sidlaghatta : ಶಿಡ್ಲಘಟ್ಟ ನಗರದ ಅಶೋಕ ರಸ್ತೆಯಲ್ಲಿರುವ ಶ್ರೀ ದ್ವಿಮುಖ ಗಣಪತಿ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟ ಚತುರ್ಥಿ ಅಂಗವಾಗಿ ಮಂಗಳವಾರ ವಿಶೇಷ ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶ್ರೀ ಪ್ರಣವ ಸೇವಾ ಫೌಂಡೇಷನ್ ಹಾಗೂ ಭಕ್ತರ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಂಗಾರಕ ಸಂಕಷ್ಟ ಚತುರ್ಥಿ ಅಂಗವಾಗಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ಲೋಕಕಲ್ಯಾಣ, ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಲಾಯಿತು.
ಯಾವೆಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು?
ದೇವಸ್ಥಾನದಲ್ಲಿ ಬೆಳಿಗ್ಗೆ ದೇವರಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಬೆಳಿಗ್ಗೆ 6 ಗಂಟೆಯಿಂದ ದಶಸಹಸ್ರ ಗಣ ಹೋಮ ಹಾಗೂ 10 ಗಂಟೆಯಿಂದ ವಿಶೇಷ ನವಚಂಡಿ ಯಾಗ ನಡೆಯಿತು. ಮಧ್ಯಾಹ್ನ 1 ಗಂಟೆಗೆ ದೇವರಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಸಂಜೆ 7 ಗಂಟೆಗೆ ಅಂಗಾರಕ ಸಂಕಷ್ಟಹರ ಚತುರ್ಥಿ ವಿಶೇಷ ಪೂಜೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ದ್ವಿಮುಖ ಗಣಪತಿಯ ಮೂಲಮಂತ್ರದ 1 ಲಕ್ಷ ಜಪ, 1 ಲಕ್ಷ ನವಾವರಣ ಜಪ ಹಾಗೂ 108 ಬಾರಿ ದುರ್ಗಾ ಸಪ್ತಶತಿ ಪಾರಾಯಣ ನೆರವೇರಿಸಲಾಯಿತು.
ಗೋವಂಶದ ಅಭಿವೃದ್ಧಿ ಹಾಗೂ ದೇಶದಾದ್ಯಂತ ಶೀಘ್ರವಾಗಿ ಗೋಹತ್ಯೆ ನಿಷೇಧ ಅನುಷ್ಠಾನವಾಗಲಿ ಎಂಬ ಸಂಕಲ್ಪವನ್ನು ಹೋಮದಲ್ಲಿ ಕೈಗೊಳ್ಳಲಾಯಿತು.
ಅರ್ಚಕರಾದ ಕೆ.ವಿ. ಸುಬ್ಬಯ್ಯ ಶಾಸ್ತ್ರಿ ಹಾಗೂ ಮಕ್ಕಳು, ಕೆ.ಎಸ್. ಕೃಷ್ಣಮೂರ್ತಿ, ಎಸ್. ಅನಿಲ್ ಕುಮಾರ್, ಪಿ.ಕೆ.ಎಸ್. ತ್ಯಾಗರಾಜ್, ಸುಮನ್, ರವಿಶಂಕರ್, ನಾರಾಯಣಮೂರ್ತಿ, ರಾಮಚಂದ್ರ, ಬಾಲಕೃಷ್ಣ, ಮುರಳಿ, ಆದರ್ಶ, ವೈಶಾಕ್, ಮಂಜುನಾಥ್ ಸೇರಿದಂತೆ ಹಲವು ಭಕ್ತರು ಭಾಗವಹಿಸಿದ್ದರು.
ಹಿಂದಿನ ಸಂಕಷ್ಟ ಚತುರ್ಥಿ ಆಚರಣೆ ಕುರಿತು ಸಂಕಷ್ಟಹರ ಚತುರ್ಥಿ ಗಣ ಹೋಮ ಹಾಗೂ ನಗರಸಭೆ ಕಚೇರಿ, ನ್ಯಾಯಾಲಯದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿಶೇಷ ಪೂಜೆ ವರದಿಗಳನ್ನೂ ಓದಿ.
In English: Special homas and religious rituals were held on Tuesday at the Sri Dvimukha Ganapati temple on Ashoka Road in Sidlaghatta town to mark Angaraka Sankashti Chaturthi, organised by the Sri Pranava Seva Foundation with the support of devotees. After a special morning abhisheka, a Dashasahasra Gana Homa began at 6 am and a Navachandi Yaga at 10 am, followed by special decoration, Maha Mangalarati and distribution of prasada at 1 pm, and the Angaraka Sankashtahara Chaturthi puja at 7 pm. One lakh japas of the deity’s moola mantra, one lakh Navavarana japas and 108 recitations of the Durga Saptashati were completed. The organisers took a sankalpa during the homa for the development of cattle and early nationwide implementation of a ban on cow slaughter. Priest K.V. Subbaiah Shastri and his sons conducted the rituals.








