ದಿನಕ್ಕೆ 750 ಲೀಟರ್ ಹಾಲು: ಹಾಲು ಉತ್ಪಾದಕರ ಸಂಘಕ್ಕೆ ಹೊಸ ಮೇಲಂತಸ್ತಿನ ಕಟ್ಟಡ

Extended first-floor building of the Arikere Milk Producers Cooperative Society, decorated for its inauguration, Sidlaghatta taluk

Sidlaghatta : ತಾಲ್ಲೂಕಿನ ಅರಿಕೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನವಾಗಿ ವಿಸ್ತರಿಸಲಾದ ಮೇಲಂತಸ್ತಿನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ (ಚಿಮುಲ್) ನಿರ್ದೇಶಕ ಹುಜುಗೂರು ರಾಮಯ್ಯ, ಗ್ರಾಮದ ರೈತರು ಪ್ರತಿದಿನ ಸುಮಾರು 750 ಲೀಟರ್ ಹಾಲು ಉತ್ಪಾದಿಸುತ್ತಿರುವುದು ಸಂತಸದ ಸಂಗತಿ. ಹಾಲಿನ ಉತ್ಪಾದನೆ ಹೆಚ್ಚಿಸುವುದರ ಜತೆಗೆ ಗುಣಮಟ್ಟ ಕಾಪಾಡಿಕೊಳ್ಳುವುದಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

CHIMUL director Hujugur Ramayya speaking at the inauguration of the milk producers society building

ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ ₹7 ಪ್ರೋತ್ಸಾಹಧನ ಹೆಚ್ಚಿಸಿರುವುದು ರೈತಪರ ನಿರ್ಧಾರವಾಗಿದೆ. ಇದರಿಂದ ಸಂಕಷ್ಟದಲ್ಲಿರುವ ಹೈನುಗಾರರಿಗೆ ನೆರವು ದೊರೆತಂತಾಗಿದೆ. ರೈತರ ಹಿತದೃಷ್ಟಿಯಿಂದ ಇಂತಹ ನಿರ್ಧಾರ ಕೈಗೊಂಡಿರುವ ಸರ್ಕಾರವನ್ನು ಅಭಿನಂದಿಸಬೇಕು ಎಂದರು.

ಹೈನುಗಾರರು ಕೇವಲ ಹಾಲಿನ ಪ್ರಮಾಣ ಹೆಚ್ಚಿಸುವುದಕ್ಕೆ ಸೀಮಿತವಾಗದೆ, ಗುಣಮಟ್ಟದ ಹಾಲು ಪೂರೈಕೆಗೆ ಒತ್ತು ನೀಡಬೇಕು. ಗುಣಮಟ್ಟದ ಹಾಲು ಉತ್ಪಾದನೆಯಿಂದ ರೈತರಿಗೆ ಹೆಚ್ಚಿನ ಲಾಭ ದೊರೆಯುವುದರ ಜತೆಗೆ ಹೈನುಗಾರಿಕೆ ಮತ್ತಷ್ಟು ಲಾಭದಾಯಕವಾಗಲಿದೆ ಎಂದು ಸಲಹೆ ನೀಡಿದರು.

ಚಿಮುಲ್ ಶಿಡ್ಲಘಟ್ಟ ಶಿಬಿರದ ಡಾ. ರವಿಕಿರಣ್ ಬಿ.ಆರ್., ವಿಸ್ತರಣಾಧಿಕಾರಿ ಎನ್.ಜಿ. ಜಯಚಂದ್ರ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್, ಗ್ರಾಮದ ಮುಖಂಡರಾದ ಸೋಣ್ಣಪ್ಪ, ಸಂಘದ ಉಪಾಧ್ಯಕ್ಷ ಎಂ. ಆಂಜನೇಯರೆಡ್ಡಿ, ನಿರ್ದೇಶಕರಾದ ಮುರಳಿ ಎನ್., ಸೊಣ್ಣಪ್ಪ, ಮುನಿನರಸಪ್ಪ, ಎಂ. ರಮೇಶ್, ಮುನಿನಾರಾಯಣಪ್ಪ, ರಮೇಶ್, ದೊಡ್ಡಮುನಿಯಪ್ಪ, ರಾಜಪ್ಪ ಕೆ., ನಾರಾಯಣಮ್ಮ, ವೆಂಕಟಮ್ಮ, ಮುಖ್ಯ ಕಾರ್ಯನಿರ್ವಾಹಕ ಶರಣ್ ಎ.ಎನ್., ಹಾಲು ಪರೀಕ್ಷಕ ಸಿ.ಆರ್. ಪದ್ಮನಾಭಾಚಾರ್, ಸಹಾಯಕ ಎಂ. ಶಿವಕುಮಾರ್, ಸ್ವಚ್ಛತಾ ಸಿಬ್ಬಂದಿ ನಾಗರತ್ನಮ್ಮ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Inauguration plaque listing the chief guests, society president, directors and staff

ಸಂಬಂಧಿತ ಸುದ್ದಿ: ಹೈನುಗಾರರೇ ರಾಸು ವಿಮೆ ಮಾಡಿಸಿ, ನಷ್ಟದಿಂದ ಪಾರಾಗಿ: ಚೀಮುಲ್ ನಿರ್ದೇಶಕ ಬಂಕ್ ಮುನಿಯಪ್ಪ | ಗುಣಮಟ್ಟದ ಹಾಲು ಪೂರೈಸಿದರೆ ಹಾಲು ಉತ್ಪಾದಕರ ಸಂಘಗಳ ಅಭಿವೃದ್ಧಿ ಸಾಧ್ಯ

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ