24.1 C
Sidlaghatta
Saturday, July 27, 2024

ವಸತಿಪ್ರದೇಶದ ನಡುವೆ ಬಾರ್ ಮತ್ತು ರೆಸ್ಟೋರೆಂಟ್‌

ರೈತ ಸಂಘದ ಸದಸ್ಯರು ಹಾಗೂ ಕನಕನಗರ ವಾಸಿಗಳ ಧರಣಿ

- Advertisement -
- Advertisement -

Jangamakote, Sidlaghatta : ವಸತಿ ಗೃಹಗಳ ನಡುವೆ ಯಾವುದೆ ಕಾರಣಕ್ಕೂ ಬಾರ್ ಮತ್ತು ರೆಸ್ಟೋರೆಂಟ್(ಸಿಎಲ್-7) ತೆರೆಯಲು ಅವಕಾಶ ಮಾಡಿಕೊಡಬಾರದು, ಎನ್‌.ಒ.ಸಿ ಕೊಡಬಾರದು ಎಂದು ಹತ್ತಾರು ಬಾರಿ ಒತ್ತಾಯಿಸಿ ಮನವಿ ನೀಡಿದ್ದರೂ ಅಧಿಕಾರಿಗಳು ಲೈಸೆನ್ಸ್ ಕೊಟ್ಟಿದ್ದಾರೆ. ಈ ಕೂಡಲೇ ಅದನ್ನು ರದ್ದುಪಡಿಸಿ ಎಂದು ಜಂಗಮಕೋಟೆ ಹೋಬಳಿಯ ದೇವಗಾನಹಳ್ಳಿಯ ಕನಕನಗರ ವಾಸಿಗಳು ಆಗ್ರಹಿಸಿದರು.

ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ದೇವಗಾನಹಳ್ಳಿ ಬಳಿ ಇರುವ ಕನಕನಗರ ಬಡಾವಣೆಯಲ್ಲಿ ಬೃಹತ್ ಕಟ್ಟಡವೊಂದು ನಿರ್ಮಾಣವಾಗಿದ್ದು ಅಲ್ಲಿ ನಿಹಾಲ್ ಬಿಗ್ ಪಂಚ ಬಾರ್ ಮತ್ತು ರೆಸ್ಟೋರೆಂಟ್(ಸಿ.ಎಲ್-7) ಗೆ ಅಬಕಾರಿ ಇಲಾಖೆಯಿಂದ ಪರವಾನಗಿ ದೊರೆತಿದೆ. ಇದನ್ನು ಕೂಡಲೇ ರದ್ದು ಮಾಡಬೇಕೆಂದು ರೈತ ಸಂಘದವರು, ರೈತ ಮಹಿಳೆಯರು, ಕನಕನಗರದ ನಿವಾಸಿಗಳು ಮತ್ತು ಕಾರ್ತಿ ಲೇಔಟ್ ನಿವಾಸಿಗಳು ಸೋಮವಾರ ಸ್ಥಳದಲ್ಲಿಯೇ ಕುಳಿತು ಪ್ರತಿಭಟಿಸಿದರು.

ಹತ್ತು ಹಲವು ನಿಯಮಗಳನ್ನು ಉಲ್ಲಂಘಿಸಿ ವಸತಿ ಪ್ರದೇಶದ ನಡುವೆ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅಬಕಾರಿ ಇಲಾಖೆ ಲೈಸೆನ್ಸ್ ನೀಡಿದ್ದಾರೆ. ಈ ಬಗ್ಗೆ ಈ ಹಿಂದೆಯೂ ನಾವು ಹಲವು ಮನವಿ ಸಲ್ಲಿಸಿದ್ದೆವು. ಪಂಚಾಯಿತಿ ಅಥವಾ ಇನ್ನಾವುದೆ ಇಲಾಖೆಯವರಾಗಲಿ ಅನುಮತಿಯನ್ನು ನೀಡಬಾರದೆಂದು ಕೂಡ ತಿಳಿಸಿದ್ದೆವು. ಆದರೆ ಎಲ್ಲವೂ ಗೌಪ್ಯವಾಗಿ ಅಕ್ರಮವಾಗಿ ಪರವಾನಗಿಯನ್ನು ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಿದರು.

ಬಾರ್ ಆರಂಭಕ್ಕೆ ಸ್ಥಳೀಯರ ಪ್ರತಿರೋಧಕ್ಕೆ ರೈತ ಸಂಘವು ಬೆಂಬಲ ವ್ಯಕ್ತಪಡಿಸಿದ್ದು ಸ್ಥಳೀಯರು ಹಾಗೂ ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ಉದ್ದೇಶಿತ ಬಾರ್ ಮತ್ತು ರೆಸ್ಟೋರೆಂಟ್ ಕಟ್ಟಡ ನಿರ್ಮಾಣವಾಗುತ್ತಿರುವ ಜಾಗವು ವಸತಿ ಪ್ರದೇಶವಾಗಿದ್ದು ಯಾವುದೆ ಕಾರಣಕ್ಕೂ ವಸತಿ ಪ್ರದೇಶದಲ್ಲಿ ಬಾರ್ ಆರಂಭಿಸಲು ಬಿಡುವುದಿಲ್ಲ. ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲವಾಗುತ್ತದೆ. ನಿಯಮಗಳನ್ನು ಉಲ್ಲಂಘಿಸಿ ಆರಂಭಿಸಲು ಉದ್ದೇಶಿಸಿರುವ ಬಾರ್‌ ಗೆ ತೆರೆಯಲು ಅವಕಾಶಕೊಟ್ಟರೆ ಪ್ರತಿಭಟನೆಯನ್ನು ಮಾಡಬೇಕಾದೀತೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಅಬಕಾರಿ ಇಲಾಖೆಯ ಚಿಂತಾಮಣಿ ವಿಭಾಗದ ಉಪ ಅಧೀಕ್ಷಕ ಸುರೇಶ್ ಮತ್ತು ಅಬಕಾರಿ ನಿರೀಕ್ಷಕಿ ನೇತ್ರಾವತಿ ಅವರು ಪ್ರತಿಭಟನಾಕಾರರಿಗೆ, ಅವರ ಹವಾಲನ್ನು ಮೇಲಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಸುಂಡ್ರಹಳ್ಳಿ ಬೀರಪ್ಪ, ಆಂಜನೇಯರೆಡ್ಡಿ, ಎಂ.ವೆಂಕಟರಮಣಸ್ವಾಮಿ, ಕೃಷ್ಣಪ್ಪ, ಬಸವರಾಜಪ್ಪ, ಕನಕನಗರ ವಾಸಿಗಳಾದ ಲಲಿತಮ್ಮ, ಪುಷ್ಪ, ರುಕ್ಮಿಣಿ, ಲಕ್ಷ್ಮಿ, ಮಂಜುಳಮ್ಮ, ಲಕ್ಷ್ಮಮ್ಮ, ಶೈಲಾ ಸೇರಿದಂತೆ ಸ್ಥಳೀಯರು ಹಾಜರಿದ್ದರು.

For Daily Updates WhatsApp ‘HI’ to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!