ಭಗತ್ ಸಿಂಗ್ ಅವರ ದೇಶಪ್ರೇಮ ಯುವಜನತೆಗೆ ಸ್ಫೂರ್ತಿ: 119ನೇ ಜಯಂತಿ ಆಚರಣೆ

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ಸಿದ್ದಾರ್ಥನಗರ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 119ನೇ ಜಯಂತಿಯನ್ನು ಸೋಮವಾರ ಆಚರಿಸಲಾಯಿತು.

ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ದೇಶಪ್ರೇಮ, ತ್ಯಾಗ ಹಾಗೂ ಸ್ವಾತಂತ್ರ್ಯ ಹೋರಾಟವನ್ನು ಸ್ಮರಿಸಲಾಯಿತು.

ಭಗತ್ ಸಿಂಗ್ ಆದರ್ಶದ ಬಗ್ಗೆ ಏನು ಹೇಳಿದರು?

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ ಮಾತನಾಡಿ, ‘ಭಗತ್ ಸಿಂಗ್ ಅವರ ದೇಶಪ್ರೇಮ, ಅನ್ಯಾಯದ ವಿರುದ್ಧ ಹೋರಾಡುವ ಧೈರ್ಯ ಹಾಗೂ ದೇಶಕ್ಕಾಗಿ ತ್ಯಾಗ ಮಾಡುವ ಮನೋಭಾವ ಇಂದಿನ ಯುವಜನತೆಗೆ ಸ್ಫೂರ್ತಿಯಾಗಿದೆ. ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು” ಎಂದರು.

ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ತಾಲ್ಲೂಕು ಅಧ್ಯಕ್ಷ ಸುರೇಶ್, ಶಿಕ್ಷಕರಾದ ನಗಿನ, ಶ್ರೀನಿವಾಸ್, ಮಧು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಾದ ಮಧುಕುಮಾರ್, ಸುನಿಲ್, ಬೈರಾರೆಡ್ಡಿ, ಗಾಯತ್ರಮ್ಮ, ಟಿ.ಕೆ., SDMC ಅಧ್ಯಕ್ಷ ಗಂಗರಾಜು, ಗಣೇಶ್, ಮುನಿಯಪ್ಪ, ರಾಮಾಂಜನೇಯ, ಶಾಮಣ್ಣ, ವರದರಾಜ್, ತಿರುಮಲೇಶ್ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹಿಂದಿನ ವರ್ಷಗಳ ಆಚರಣೆ ಕುರಿತು ಚಂದ್ರಶೇಖರ್ ಆಜಾದ್ ಹಾಗೂ ಭಗತ್‌ಸಿಂಗ್‌ರವರ ಜನ್ಮದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಸ್ವಾತಂತ್ರ್ಯ ಹೋರಾಟ ಕುರಿತ ಭಾರತದ ಸ್ವಾತಂತ್ರ್ಯಹೋರಾಟದ ಕುರಿತು ಪ್ರಬಂಧ ಸ್ಪರ್ದೆ ವರದಿಗಳನ್ನೂ ಓದಿ.

In English: The 119th birth anniversary of freedom fighter Bhagat Singh was celebrated on Monday at the government school in Siddarthanagar layout, Sidlaghatta town, with floral tributes to his portrait. Taluk Advocates’ Association president A. Narayanaswamy said Bhagat Singh’s patriotism, courage to fight injustice and spirit of sacrifice inspire today’s youth, and urged students to adopt his ideals and contribute to the nation’s development. Suvarna Karnataka Janashakti Vedike taluk president Suresh, teachers, Kannada organisation office-bearers and SDMC (School Development and Monitoring Committee) president Gangaraju were present.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -