Home News ಭೀಮ ಸಮಾವೇಶ ಪೂರ್ವಭಾವಿ ಸಭೆ

ಭೀಮ ಸಮಾವೇಶ ಪೂರ್ವಭಾವಿ ಸಭೆ

0
Bhim Convention Preparation Meet

Sidlaghatta : BJP ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಮುಖಂಡರೆಲ್ಲರೂ ಸೇರಿ ಜನವರಿ 16ರಂದು ಕೋಲಾರದಲ್ಲಿ ಭೀಮ ಸಮಾವೇಶ ಆಯೋಜಿಸಿದ್ದು ಪ್ರತಿಯೊಂದು ಗ್ರಾಮದಿಂದಲೂ ಮುಖಂಡರು ಭಾಗವಹಿಸಬೇಕೆಂದು ಸಂಸದ ಮುನಿಸ್ವಾಮಿ ಕರೆ ನೀಡಿದರು.

ನಗರದ ಮಯೂರ ವೃತ್ತದಲ್ಲಿರುವ ಬಿಜೆಪಿ ಸೇವಾ ಸೌಧದಲ್ಲಿ ಭಾನುವಾರ ಈ ಸಂಬಂಧ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.

‘ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನ, ದಲಿತ ಸಮುದಾಯಕ್ಕೆ ಮಾಡಿರುವ ದ್ರೋಹ ಹಾಗೂ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್ ಅವರನ್ನು ಗೌರವಿಸಿದ ರೀತಿ, ಮತ್ತು ವಿಶ್ವ ನಾಯಕನ್ನಾಗಿ ಬಿಂಬಿಸುವ ಮೂಲಕ ಪ್ರಪಂಚವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ಈ ಎಲ್ಲ ವಿಚಾರಗಳು ನಮ್ಮ ಬಲಗೈ ಸಮುದಾಯಕ್ಕೆ ತಿಳಿಸುವ ಅಗತ್ಯ ಇದೆ. ಇದರ ಬಗ್ಗೆ ಜಾಗೃತಿ ಮೂಡಿಸಲು ಸಲುವಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದರು.

ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಎಲ್ಲರನ್ನೂ ಒಳಗೊಂಡ ಬಿಜೆಪಿ ಪಕ್ಷ ತನ್ನ ಐಕ್ಯತೆಯ ದನಿಯನ್ನು ಜನರಿಗೆ ಮುಟ್ಟಿಸಲು ಭೀಮ ಸಮಾವೇಶವನ್ನು ಆಯೋಜಿಸಿದ್ದು, ಈ ಸಮಾವೇಶವನ್ನು ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸೋಣ ಎಂದರು.

ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ, ಸೀಕಲ್ ಆನಂದಗೌಡ, ನಗರಸಭಾ ಸದಸ್ಯ ನಾರಾಯಣಸ್ವಾಮಿ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version