24.6 C
Sidlaghatta
Monday, October 13, 2025

ರೂಬಿಕ್ಸ್ ಕ್ಯೂಬ್ ಮೂಲಕ ಮಕ್ಕಳಿಗೆ ಕಲಿಕೆ

- Advertisement -
- Advertisement -

Yannur, Sidlaghatta : ಗಣಿತ ಮತ್ತು ತಾರ್ಕಿಕ ಆಲೋಚನೆಗಳು ಒಂದೇ ನಾಣ್ಯದ ಎರಡು ಮುಖಗಳು. ಆದ್ದರಿಂದಲೇ ತಾರ್ಕಿಕ ಆಲೋಚನೆ ಬೆಳೆಸುವ ರೂಬಿಕ್ಸ್ ಕ್ಯೂಬ್ ಅನ್ನು ಎಲ್ಲ ಮಕ್ಕಳೂ ಕಲಿಯಬೇಕು ಎಂದು ಪ್ರಜ್ಞಾ ಗಣಿತ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಮತ್ತು ಗಣಿತ ಮಾರ್ಗದರ್ಶಿ ಎಂ.ಮಹೇಶ್ ತಿಳಿಸಿದರು.

ತಾಲ್ಲೂಕಿನ ಯಣ್ಣೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲೆಯ ಮಕ್ಕಳಿಗೆ ರೂಬಿಕ್ಸ್ ಕ್ಯೂಬ್ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಕ್ಕಳು ರೂಬಿಕ್ಸ್ ಕ್ಯೂಬ್ ಅನ್ನು ಹೇಗೆ ಪರಿಹರಿಸಬೇಕೆಂದು ಕಲಿಯುವುದರಿಂದ ಹಲವು ಪ್ರಯೋಜನಗಳಿವೆ. ಮುಖ್ಯವಾಗಿ ಅವರಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳು ವೃದ್ಧಿಯಾಗುತ್ತವೆ.

ರೂಬಿಕ್ಸ್ ಕ್ಯೂಬ್ ಗಳು ಮಗುವಿನಲ್ಲಿ ಸ್ಪಂದನಾ ಶಕ್ತಿಯನ್ನು ಹೆಚ್ಚಿಸುತ್ತದೆ, ವೀಕ್ಷಣಾ ಕೌಶಲ್ಯಗಳನ್ನು ಹೆಚ್ಚಿಸುತ್ತದೆ, ಏಕಾಗ್ರತೆ ಮತ್ತು ಸಂರಚನೆಯನ್ನು ಸುಧಾರಿಸುತ್ತದೆ, ಮನಸ್ಸನ್ನು ಕ್ರಿಯಾಶೀಲವಾಗಿರಿಸುತ್ತದೆ, ವೇಗ ಮತ್ತು ಚುರುಕುತನವನ್ನು ಹೆಚ್ಚಿಸುತ್ತದೆ, ತಾರ್ಕಿಕ ಚಿಂತನೆ, ಸಮಯದ ಸದುಪಯೋಗ, ಮನಸ್ಸು ಮತ್ತು ಬೆರಳಿನ ಸಂಯೋಜನೆ ಬೆಳೆಯುತ್ತದೆ ಮತ್ತು ಒಟ್ಟಾರೆಯಾಗಿ ಮಗಿವಿನ ಮನಸ್ಸು ವಿಕಾಸವಾಗುತ್ತದೆ ಎಂದರು.

ಗ್ರಾಮದ ನಿವೃತ್ತ ಶಿಕ್ಷಕ ಬಿ. ನಾರಾಯಣ್ ಮಾತನಾಡಿ, ಈ ರೂಬಿಕ್ಸ್ ಕ್ಯೂಬ್ ನಿಂದ ಮಕ್ಕಳ ಆಲೋಚನಾ ಶಕ್ತಿ, ತಾರ್ಕಿಕ ಶಕ್ತಿ ವೃದ್ಧಿಸುವುದರಿಂದ ಆದು ಅವರ ಭವಿಷ್ಯವನ್ನು ಧೃಡವಾಗಿ ರೂಪಿಸುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಹೇಳಿದರು.

Children Learning by rubik's Cube

ಮೂಲತಃ ಸಾಫ್ಟ್ ವೇರ್ ಎಂಜಿನಿಯರ್ ಆದ ಹೆಬ್ಬಾಳದ ಮಹೇಶ್ ಅವರು ಗಣಿತವನ್ನು ಸರಳವಾಗಿ ಕಲಿಸಲು ಹಲವು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಗಣಿತ ಮತ್ತು ವಿಜ್ಙಾನವನ್ನು ಕಲಿಸಲು ಇವರು ಹೆಬ್ಬಾಳದ ಸುತ್ತಮುತ್ತಲಿನ ಹಲವು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ದುಡಿಯುತ್ತಿದ್ದಾರೆ. ಪ್ರಜ್ಙಾ ಮ್ಯಾಥ್ಮೆಟಿಕ್ಸ್ ಸಂಸ್ಥೆಯ ಅಡಿಯಲ್ಲಿ ಇವರು ಹಲವು ಗಣಿತ ಕಲಿಕಾ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದಾರೆ. ಇವರು ನಾಡಿನೆಲ್ಲೆಡೆ ರೂಬಿಕ್ಸ್ ಕ್ಯೂಬ್ ತರಬೇತಿಗಳನ್ನು ಆಯೋಜಿಸುತ್ತಿರುತ್ತಾರೆ. ಇವರು ನಮ್ಮ ಶಾಲೆಗೆ ಬಂದು ನಮ್ಮ ಮಕ್ಕಳೊಂದಿಗೆ ಬೆರೆತಿರುವುದು ನಮ್ಮ ಮಕ್ಕಳ ಪುಣ್ಯ ಎಂದರು.

2021 ರಲ್ಲಿ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯವರು ಆರಂಭಿಸಿದ ವರ್ಷದ ಸಾಧಕರನ್ನು ಗುರುತಿಸಿ ಗೌರವಿಸುವ ಸಂಪ್ರದಾಯದಲ್ಲಿ ಆ ವರ್ಷ ಕರ್ನಾಟಕದಾದ್ಯಂತ ಗುರುತಿಸಲ್ಪಟ್ಟ 21 ಸಾಧಕರಲ್ಲಿ ಇವರೂ ಒಬ್ಬರಾಗಿದ್ದರು ಎಂಬುದು ನಮಗೆಲ್ಲಾ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಶಾಲೆಯ ಶಿಕ್ಷಕರಾದ ಮಂಜುನಾಥ್, ಕೋಮಲ, ಗ್ರಾಮದ ಹಿರಿಯರು, ಪೋಷಕರು ಮತ್ತು ಚೀಮಂಗಲ ಕ್ಲಸ್ಟರಿನ ಸಿ.ಆರ್.ಪಿ ಹೇಮಲತ ಹಾಜರಿದ್ದರು.

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!